ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಯ್ಲೆಂಡ್ ಗುಹೆ ಸಾಹಸ: ಕೊಂಚ ತಡವಾಗಿದ್ದರೂ ಎದುರಾಗುತ್ತಿತ್ತು ಅಪಾಯ

|
Google Oneindia Kannada News

ಬೆಂಗಳೂರು, ಜುಲೈ, 11: ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿದ್ದ ಮಕ್ಕಳನ್ನು ಮತ್ತು ಕೋಚ್‌ಅನ್ನು ಹೊರತಂದ ಕೆಲವೇ ಗಂಟೆಯಲ್ಲಿ ನೀರನ್ನು ಹೊರಹಾಕುವ ಪಂಪ್ ಕೈಕೊಟ್ಟಿತ್ತು.

ಒಂದು ವೇಳೆ ಇದು ಬಾಲಕರನ್ನು ರಕ್ಷಿಸುವ ಸಂದರ್ಭದಲ್ಲಿ ಆಗಿದ್ದರೆ, ಭಾರಿ ಅಪಾಯ ಎದುರಾಗುವ ಸಾಧ್ಯತೆ ಇತ್ತು.

ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?

ಗುಹೆಯಲ್ಲಿ ತುಂಬಿಕೊಳ್ಳುತ್ತಿದ್ದ ಕೆಸರು ನೀರನ್ನು ಹೊರಹಾಕುವ ಕಾರ್ಯವನ್ನು ರಕ್ಷಣಾ ಕಾರ್ಯತಂಡ ನಡೆಸುತ್ತಿತ್ತು. ಬಾಲಕರನ್ನು ಯಶಸ್ವಿಯಾಗಿ ಹೊರಕ್ಕೆ ರವಾನಿಸಿದ ಬಳಿಕವೂ ಗುಹೆಯಲ್ಲಿನ ನೀರನ್ನು ಹೊರಹಾಕಿ ಸ್ವಚ್ಛಗೊಳಿಸುವ ಕಾರ್ಯವನ್ನು ಮುಂದುವರಿಸಲಾಗಿತ್ತು.

ಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯ

ಆಗ, ನೀರು ಹೊರಹಾಕುವ ಮುಖ್ಯ ಪಂಪ್ ಕೈಕೊಟ್ಟಿದ್ದರಿಂದ ಗುಹೆಯೊಳಗೆ ಮತ್ತೆ ನೀರಿನ ಮಟ್ಟ ವೇಗವಾಗಿ ಹೆಚ್ಚತೊಡಗಿತು. ಆಗ ಈ ತಂಡ ಗುಹೆಯ 1.5 ಕಿ.ಮೀ,ಯಷ್ಟು ಒಳಭಾಗದಲ್ಲಿತ್ತು.

Array

'ಚೇಂಬರ್ ಥ್ರೀ' ಎಂಬ ನೆಲೆ

ಗುಹೆಯಲ್ಲಿನ ನೆಲೆ 'ಚೇಂಬರ್ ಥ್ರೀ'ನಲ್ಲಿದ್ದ ಮುಳುಗುತಜ್ಞರಿಗೆ ಗುಹೆಯ ಒಳಗಿನಿಂದ ಜೋರಾಗಿ ಕಿರುಚುವ ಸದ್ದು ಕೇಳಿಸಿತು. ಜತೆಗೆ, ತಲೆಗೆ ಕಟ್ಟಿಕೊಂಡ ಚಾರ್ಟ್ ಬೆಳಕು ಹೊತ್ತ ದೇಹಗಳು ಒಣಪ್ರದೇಶದತ್ತ ನುಗ್ಗಲು ಓಡುತ್ತಿರುವುದು ಕಾಣಿಸಿತು.

ಒಳಗೆ ಸಿಲುಕಿದ್ದ ಬಾಲಕರಿಗೆ ಒಂದು ವಾರದಿಂದ ನೆರವು ನೀಡುತ್ತಿದ್ದ ಥಾಯ್ ನೌಕಾಪಡೆಯ ಮೂವರು ಸಿಬ್ಬಂದಿ ಮತ್ತು ಒಬ್ಬ ವೈದ್ಯರನ್ನು ಕೂಡಲೇ ಗುಹೆಯಿಂದ ಹೊರಕ್ಕೆ ಕರೆತರಲಾಯಿತು.

'ವೈಲ್ಡ್ ಬೋರ್' ಫುಟ್ಬಾಲ್ ತಂಡದ ಬಾಲಕರನ್ನು ರಕ್ಷಿಸಲು ಮೂರು ಮಹಾಧೈರ್ಯಶಾಲಿ ರಕ್ಷಣಾ ಕಾರ್ಯಪಡೆಗಳು ಭಾನುವಾರ ಬೆಳಗಿನಿಂದ ಕಾರ್ಯನಿರತವಾಗಿದ್ದವು.

19 ಮುಳುಗುತಜ್ಞರ ತಂಡ ಸುಮಾರು 3.2 ಕಿ.ಮೀ ದೂರದವರೆಗೆ ಕೆಸರು ಮಿಶ್ರಿತ ನೀರಿನೊಳಗೆ ಸಾಗಿ ಮಕ್ಕಳು ಹಾಗೂ ಕೋಚ್‌ಅನ್ನು ರಕ್ಷಿಸಿತ್ತು.

Array

ಕೆಸರು ತೆಗೆಯಲೇ ಒಂದು ವಾರ

ಆರಂಭದಲ್ಲಿ ಗುಹೆಯ ದ್ವಾರದಿಂದ ಒಳಭಾಗಕ್ಕೆ ತೆರಳುವುದಕ್ಕಾಗಿಯೇ ನಿತ್ಯ ನಾಲ್ಕೈದು ಗಂಟೆ ಬೇಕಾಗುತ್ತಿತ್ತು. ಆದರೆ, ಸಲಿಕೆ, ಗುದ್ದಲಿಗಳನ್ನು ಬಳಸಿ ಕೆಸರು ತೆಗೆದು ಹೊರಹಾಕುವ ಒಂದು ವಾರದ ಕೆಲಸದ ಬಳಿಕ ಒಂದು ಗಂಟೆಯೊಳಗೇ ಅಲ್ಲಿಗೆ ತಲುಪುವಂತೆ ಮಾಡಲಾಗಿತ್ತು.

ಆಸ್ಟ್ರೇಲಿಯಾದ ಮುಳುಗುತಜ್ಞರು ತಮ್ಮ ಜತೆ 46 ಕೆ.ಜಿ. ತೂಕದ ಡೈವಿಂಗ್ ಗೇರ್ಅನ್ನು ಕೊಂಡೊಯ್ದಿದ್ದರು. ಅದರಲ್ಲಿ ರೇಡಿಯೋ, ಆಮ್ಲಜನಕದ ಸಿಲಿಂಡರ್‌ಗಳು ಮತ್ತು ಇತರೆ ಉಪಕರಣಗಳು ಇದ್ದವು. ಆದರೆ, ಅವುಗಳು ತುಂಬಾ ದೊಡ್ಡದಾಗಿದ್ದರಿಂದ ಮೂರನೇ ಚೇಂಬರ್‌ನಾಚೆ ಸಾಗಿಸಲು ಸಾಧ್ಯವಾಗಲಿಲ್ಲ.

ಥಾಯ್ಲೆಂಡ್ ಗುಹೆಯಿಂದ ಸುರಕ್ಷಿತವಾಗಿ ಹೊರಬಂದ ಬಾಲಕರುಥಾಯ್ಲೆಂಡ್ ಗುಹೆಯಿಂದ ಸುರಕ್ಷಿತವಾಗಿ ಹೊರಬಂದ ಬಾಲಕರು

Array

ಮೀಟರ್‌ಗೂ ಚಿಕ್ಕ ಗಾತ್ರದ ಕಿಂಡಿ

ಒಂದು ಮೀಟರ್‌ಗೂ ಚಿಕ್ಕ ಗಾತ್ರದ ಕಿಂಡಿಯೊಳಗಿನಿಂದ ಆ ಸಾಧನಗಳನ್ನು ಹೊತ್ತುಕೊಂಡು ಮೂವರು ಒಳಗೆ ಪ್ರವೇಶಿಸುವುದು ಸಾಧ್ಯವಿರಲಿಲ್ಲ.

ಪರಿಣತ ಮುಳುಗುತಜ್ಞರು ಮತ್ತು ಬಾಲಕರು ಉಸಿರಾಟದ ಸಿಲಿಂಡರ್‌ಗಳು ಮತ್ತು ಇತರೆ ಸಾಧನಗಳನ್ನು ಬೆನ್ನಿನ ಬದಲು ದೇಹದ ಪಕ್ಕಕ್ಕೆ ಕಟ್ಟಿಕೊಂಡು ಸಾಗಬೇಕಾಗಿತ್ತು.

ನಾಲ್ಕು ಭಾಷೆ ಬಲ್ಲ ಬಾಲಕ

ಥಾಯ್ ಗುಹೆಯೊಳಗೆ ಸಿಲುಕಿದ್ದ ಹದಿಮೂರು ಮಂದಿಯ ಪೈಕಿ ಅದುಲ್ ಎಂಬ 14 ವರ್ಷ ಬಾಲಕನಿಗೆ ಒಟ್ಟು ನಾಲ್ಕು ಭಾಷೆಗಳು ತಿಳಿದಿವೆ. ಗುಹೆಯಲ್ಲಿ ಸಿಲುಕಿದ್ದವರ ಪೈಕಿ ನಾಲ್ಕು ಭಾಷೆಗಳನ್ನು ಬಲ್ಲ ಏಕೈಕ ಬಾಲಕ ಆತ. ತಮ್ಮನ್ನು ರಕ್ಷಿಸಲು ಬಂದ ತಂಡದೊಂದಿಗೆ ಇಂಗ್ಲಿಷ್‌ನಲ್ಲಿ ಸಂವಹಿಸುವ ಮೂಲಕ ಆತ ಎಲ್ಲರಿಗೂ ನೆರವಾಗಿದ್ದ.

English summary
Soon after the rescue operation was successful, the water pumps draining the area got failed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X