ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋದರರ ಸರ್ಕಾರ: ಅಣ್ಣ ಮಹೀಂದಾ ಪ್ರಧಾನಿ, ತಮ್ಮ ರಾಷ್ಟ್ರಪತಿ

|
Google Oneindia Kannada News

ಕೊಲಂಬೋ, ಆ.9: ಏಷ್ಯಾದಲ್ಲಿ ದೀರ್ಘಾವಧಿಗೆ ಆಡಳಿತ ನಡೆಸಿದ ಖ್ಯಾತಿ ಹೊಂದಿರುವ ರಾಜಪಕ್ಸೆ ಮತ್ತೆ ಅಧಿಕಾರಕ್ಕೆ ಮರಳಿದ್ದಾರೆ. ಭಾನುವಾರದಂದು ಶ್ರೀಲಂಕಾದ ಪ್ರಧಾನಮಂತ್ರಿಯಾಗಿ ರಾಜಪಕ್ಸೆ ಪ್ರಮಾಣ ವಚನ ಸ್ವೀಕರಿಸಿದರು. ಲಂಕಾದ ರಾಷ್ಟ್ರಪತಿ, ಮಹೀಂದ್ರಾ ಅವರ ಕಿರಿಯ ಸೋದರ ಗೋಟಬಯ ರಾಜಪಕ್ಸೆ ಅವರು ಮಹೀಂದ್ರಾಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕೊಲಂಬೋದಾ ಬೌದ್ಧ ದೇಗುಲದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಮಹೀಂದಾ ಪ್ರಮಾಣ ವಚನ ಸ್ವೀಕರಿಸಿದರು. 2004, 2018 ಹಾಗೂ 2019ರಲ್ಲಿ ಪ್ರಧಾನಿಯಾಗಿದ್ದರು.

ಮಹಿಂದ ರಾಜಪಕ್ಸೆ ಎದುರು ವಿಪಕ್ಷಗಳು ಧೂಳ್ ಧೂಳ್..!ಮಹಿಂದ ರಾಜಪಕ್ಸೆ ಎದುರು ವಿಪಕ್ಷಗಳು ಧೂಳ್ ಧೂಳ್..!

ರಾಜಕೀಯದಲ್ಲಿ ರಾಜಪಕ್ಸೆ ಕುಟುಂಬ:
ರಾಜಪಕ್ಸೆ ಕುಟುಂಬದ ಐದು ಮಂದಿ ಸಂಸದರಾಗಿದ್ದಾರೆ. ಪ್ರಧಾನಿ ಮಹೀಂದಾ ಅವರ ಪುತ್ರ ನಮಲ್, ಸೋದರ ಚಮಲ್ ಹಾಗೂ ಅವರ ಮಗ ಸಶೀಂದ್ರ, ಸೋದರ ಸಂಬಂಧಿ ನಿಪುಣ ರಣವಾಕ ಎಲ್ಲರೂ ಸಂಸದರಾಗಿದ್ದಾರೆ.

Mahinda Rajapaksa sworn in as Sri Lankas PM

ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ ಪಕ್ಷವಾದ ಎಸ್‌ಎಲ್‌ಪಿಪಿ ಭಾರಿ ಅಂತರದಲ್ಲಿ ಜಯಭೇರಿ ಬಾರಿಸಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. 225 ಸದಸ್ಯ ಬಲದ ಶ್ರೀಲಂಕಾ ಸಂಸತ್‌ಗೆ ಆಗಸ್ಟ್‌ 5 ರಂದು ಚುನಾವಣೆ ನಡೆದಿತ್ತು. ಕೊರೊನಾ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ 2 ಬಾರಿ ಮತದಾನ ಮುಂದೂಡಲಾಗಿತ್ತು.

ಆದರೂ ಆಗಸ್ಟ್‌ 5 ರಂದು ಚುನಾವಣೆ ನಡೆಸಲಾಗಿತ್ತು. ಚುನಾವಣೆ ನಡೆದಿದ್ದ 225 ಸ್ಥಾನಗಳ ಪೈಕಿ ರಾಜಪಕ್ಸೆ ಪಕ್ಷ ಎಸ್‌ಎಲ್‌ಪಿಪಿ 146 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಲಂಕಾದ ಪ್ರಮುಖ ವಿರೋಧ ಪಕ್ಷವಾಗಿರುವ ಸಜಿತ್‌ ಪ್ರೇಮದಾಸರ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಕೇವಲ 53 ಸ್ಥಾನ ಪಡೆದಿದೆ.

ತಮಿಳು ಪಕ್ಷಗಳು 16 ಸ್ಥಾನ ಗೆದ್ದಿದ್ದರೆ, ಎಡಪಕ್ಷಗಳ ಮೈತ್ರಿಕೂಟ 10 ಸ್ಥಾನಗಳನ್ನು ಪಡೆದಿದೆ. ಈ ಮೂಲಕ ರಾಜಪಕ್ಸೆ ತಮ್ಮ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಒಟ್ಟು 1.5 ಕೋಟಿ ಮತದಾರರು ಇದ್ದಾರೆ. ಇವರಲ್ಲಿ ರಾಜಪಕ್ಸೆಗೆ 60.8 ಲಕ್ಷ ಜನರು ಮತ ನೀಡಿದ್ದಾರೆ. ಎಸ್‌ಎಲ್‌ಪಿಪಿ ಶೇಕಡ 60 ರಷ್ಟು ಮತ ಪಡೆದರೆ, ಯುಎನ್‌ಪಿ ಶೇಕಡ 20ರಷ್ಟು ವೋಟ್ ಪಡೆದಿದೆ. ಈ ಮೂಲಕ ಬೃಹತ್ ಅಂತರದಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ.

English summary
Former president sworn in by his brother Gotabaya, who currently holds the presidential seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X