• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಲಂಕಾದಲ್ಲಿ ಅಣ್ಣ-ತಮ್ಮನ ದರ್ಬಾರ್

|

ಕೊಲಂಬೊ, ನವೆಂಬರ್ 21:ಶ್ರೀಲಂಕಾದ ನೂತನ ಅಧ್ಯಕ್ಷ ಘೋಟಬಯಾ ರಾಜಪಕ್ಸೆ ಅವರು ಸ್ವಂತ ತಮ್ಮನನ್ನೇ ಪ್ರಧಾನಿಯನ್ನಾಗಿ ನೇಮಿಸಿದ್ದಾರೆ.

ಸೋಮವಾರ ಅಧಿಕಾರವಹಿಸಿಕೊಂಡ ಘೋಟಬಯಾ ಮಹಿಂದಾ ರಾಜಪಕ್ಸೆಯ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿ ಆಶ್ಚರ್ಯ ಮೂಡಿಸಿದ್ದಾರೆ. ಈ ಮೂಲಕ ದ್ವಿಪರಾಷ್ಟ್ರ ಶ್ರೀಲಂಕಾದಲ್ಲಿ ಅಣ್ಣ-ತಮ್ಮನ ದರ್ಬಾರ್ ಆರಂಭವಾಗಿದೆ.

ಶ್ರೀಲಂಕಾದಲ್ಲಿ ಮತ್ತೆ ಮಹೀಂದಾ ರಾಜಪಕ್ಸೆ ಅಧಿಕಾರ ಶುರು

ಈ ಹಿಂದೆ ಮಹಿಂದಾ ರಾಜಪಕ್ಸೆ ಅಧ್ಯಕ್ಷರಾಗಿದ್ದಾಗ ಪ್ರಭಾವಿ ರಕ್ಷಣಾ ಸಚಿವರಾಗಿದ್ದರು.ಆಗ ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಯಲ್ಲಿ ಅಣ್ಣ-ತಮ್ಮಂದಿರಿಬ್ಬರು ಪ್ರಮುಖ ಪಾತ್ರವಹಿಸಿದ್ದರು. ಈಗ ಇತಿಹಾಸದಲ್ಲಿ ಅತ್ಯಂತ ಕ್ರೂರ ಭಯೋತ್ಪಾದನ ದಾಳಿಯಿಂದ ನಲುಗಿರುವ ಲಂಕಾಕ್ಕೆ ಮತ್ತೆ ಅಣ್ಣ-ತಮ್ಮನ ರಾಜ್ಯಭಾರ ದೊರೆತಂತಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಕಾರಣದಿಂದ ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಖಾಲಿ ಇರುವ ಪ್ರಧಾನಿ ಹುದ್ದೆಗೆ ಮಹಿಂದಾ ಅವರನ್ನು ನೇಮಿಸಲಾಗಿದೆ.

ಮಹಿಂದಾ ಈ ಹಿಂದೆ ಎರಡು ಬಾರಿ ದೇಶದ ಅಧ್ಯಕ್ಷರಾಗಿದ್ದರು. ಮುಂದಿನ ವರ್ಷ ಶ್ರೀಲಂಕಾದಲ್ಲಿ ಸಂಸತ್‌ಗೆ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಬಹುಮತವಿಲ್ಲದ ಸರ್ಕಾರವನ್ನು ರಾಜಪಕ್ಸೆ ಮುನ್ನಡೆಸಲಿದ್ದಾರೆ.

ಕಳೆದ ಈಸ್ಟರ್ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ದೇಶಾದ್ಯಂತ ಸರಣಿ ಬಾಂಬ್ ಸ್ಪೋಟಗಳು ಸಂಭವಿಸಿದ್ದವು. ಇದರಿದ ದೇಶದ ಜನತೆ ನಲುಗಿ ಹೋಗಿತ್ತು.

ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ವಿಚಾರವೇ ಪ್ರಾಮುಖ್ಯತೆ ಪಡೆದಿತ್ತು. ಹೀಗಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಭದ್ರತೆಯ ವಿಚಾರದಲ್ಲಿಯೇ ನಡೆಸಲಾಗಿತ್ತು. ಎಲ್‌ಟಿಟಿಇ ಈ ಉಗ್ರ ಪಡೆಯನ್ನು ಹೊಸಕಿ ಹಾಕಿದ ರಾಜಪಕ್ಸೆಗೆ ದೇಶದ ಜನ ಮನ್ನಣೆ ನೀಡಿದ್ದರು.

English summary
Sri Lanka's New president picks his brother Mahinda Rajapaksa as Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X