ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಏಳರಷ್ಟು ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

|
Google Oneindia Kannada News

ಇಂಡೋನೇಷ್ಯಾದ ಲಂಬೋಕ್ ದ್ವೀಪದಲ್ಲಿ ಭಾನುವಾರ ಭಾರೀ ಭೂಕಂಪ ಆಗಿದೆ. ವಾರದ ಹಿಂದಷ್ಟೇ ಇಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಹನ್ನೆರಡಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈಗಾಗಲೇ ಸುನಾಮಿ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದ್ದು, ಇಲ್ಲಿನ ಸ್ಥಳೀಯರನ್ನು ದೂರಕ್ಕೆ ಕಳುಹಿಸಲಾಗುತ್ತಿದೆ. ಭಾನುವಾರ ಸಂಭವಿಸಿದ ಭೂಕಂಪದ ತೀವ್ರತೆ ಏಳರಷ್ಟು ದಾಖಲಾಗಿದೆ.

ಈಗಾಗಲೇ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನು ನೀಡಿರುವುದರಿಂದ ಸಾಗರ ಪ್ರದೇಶದಿಂದ ದೂರಕ್ಕೆ ತೆರಳುವಂತೆ ಸೂಚಿಸಲಾಗುತ್ತಿದೆ. ಎತ್ತರದ ಪ್ರದೇಶಗಳಿಗೆ ತೆರಳಿ. ಹೆದರಬೇಡಿ, ಪ್ರಶಾಂತವಾಗಿರಿ ಎಂದು ಸ್ಥಳೀಯ ಟಿವಿ ಚಾನೆಲ್ ಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಇಂಡೋನೇಷಿಯಾ ಪ್ರವಾಸಿ ತಾಣದಲ್ಲಿ ಭೂಕಂಪ, 13 ಮಂದಿ ಸಾವುಇಂಡೋನೇಷಿಯಾ ಪ್ರವಾಸಿ ತಾಣದಲ್ಲಿ ಭೂಕಂಪ, 13 ಮಂದಿ ಸಾವು

ಲಂಬೋಕ್ ಮುಖ್ಯ ನಗರದ ಮಟರಮ್ ನ ನಿವಾಸಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಭಾರಿ ಪ್ರಮಾಣದಲ್ಲಿ ಕಟ್ಟಡಗಳು ಅಲುಗಾಡಿದ ಅನುಭವವಾಯಿತು. ಕೂಡಲೇ ಎಲ್ಲರೂ ಮನೆಗಳಿಂದ ಆಚೆ ಬಂದೆವು. ಸಹಜವಾಗಿಯೇ ನಾವೆಲ್ಲರೂ ಗಾಬರಿ ಆಗಿದ್ದೆವು ಎಂದು ಹೇಳಿಕೊಂಡಿದ್ದಾರೆ.

Indonesia

ಇಂಡೋನೇಷ್ಯಾವು ಅತಿ ಹೆಚ್ಚು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವ ದೇಶ. ಇಲ್ಲಿ ಜ್ವಾಲಾಮುಖಿ ಹಾಗೂ ಭೂಕಂಪನ ಸಂಭವಿಸುವುದು ತೀರಾ ಮಾಮೂಲು ಎಂಬಂತಾಗಿದೆ. 2004ರಲ್ಲಿ ಪಶ್ಚಿಮ ಇಂದೋನೇಷ್ಯಾದ ಸುಮಾತ್ರಾ ದ್ವೀಪದ ಸಮುದ್ರದ ಆಳದಲ್ಲಿ ಸಂಭವಿಸಿದ 9.3 ತೀವ್ರತೆ ಭೂಕಂಪದಲ್ಲಿ ಹಿಂದೂ ಮಹಾಸಾಗರದ ಸುತ್ತಮುತ್ತಲ ದೇಶದ 2,20,000 ಮಂದಿ ಮೃತಪಟ್ಟಿದ್ದರು. ಇಂಡೋನೇಷ್ಯಾವೊಂದರಲ್ಲೇ 1,68,000 ಮಂದಿ ಸಾವಿಗೀಡಾಗಿದ್ದರು.

English summary
A major earthquake rocked Indonesia’s Lombok island on August 5, just a week after a quake had killed more than a dozen people on the holiday island, sending people running from their homes and triggering a tsunami alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X