ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಫೈನ್ಸ್‌ನಲ್ಲಿ ಪ್ರಬಲ ಭೂಕಂಪ, 6.3 ತೀವ್ರತೆ ದಾಖಲು

|
Google Oneindia Kannada News

ಮನಿಲಾ, ಡಿಸೆಂಬರ್ 25: ಫಿಲಿಫೈನ್ಸ್‌ನ ದಕ್ಷಿಣ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. ಬೆಳಿಗ್ಗೆ 5.13ರ ವೇಳೆಗೆ ಭೂಕಂಪ ಸಂಭವಿಸಿದ್ದು ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಫಿಲಿಪೈನ್ಸ್‌ನ ಮಿಂಡೊರೊ ಪ್ರದೇಶದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ಶುಕ್ರವಾರ ತಿಳಿಸಿದೆ. ಭೂಕಂಪನವು 144 ಕಿ.ಮೀ (89 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಇಎಂಎಸ್ಸಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 3.7 ತೀವ್ರತೆಯ ಭೂಕಂಪನಜಮ್ಮು ಮತ್ತು ಕಾಶ್ಮೀರದಲ್ಲಿ 3.7 ತೀವ್ರತೆಯ ಭೂಕಂಪನ

ರಾಜಧಾನಿ ಮನಿಲಾದ ಪ್ರದೇಶದಲ್ಲಿಯೂ ಸಹ 6.3ರಷ್ಟು ತೀವ್ರತೆ ದಾಖಲಾಗಿರುವುದರಿಂದ ಕೆಲವು ಕಟ್ಟಡಗಳು ನೆಲಸಮಗೊಂಡಿದ್ದು, ರಸ್ತೆಗಳು ಮತ್ತು ಸೇತುವೆಗಳಿಗೂ ಹಾನಿಯಾಗಿದೆ.

Magnitude 6.3 Earthquake Strikes Philippines

ಫಿಲಿಪೈನ್ ಇನ್ಸ್ಟಿಟ್ಯೂಟ್ ಆಫ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ (ಫಿವೊಲ್ಕ್ಸ್) ನಲ್ಲಿ 6.3 ರ ಪ್ರಮಾಣದಲ್ಲಿ ತೀವ್ರತೆ ನೋಂದಾಯಿಸಲಾಗಿದೆ. ಫಿವೊಲ್ಕ್ಸ್‌ನ ಆರಂಭಿಕ ವರದಿಯ ಪ್ರಕಾರ, ಬಟಂಗಾಸ್ ಪ್ರಾಂತ್ಯದ ಕ್ಯಾಲಟಗನ್‌ನಲ್ಲಿ ಈ ಕೇಂದ್ರವನ್ನು ಪತ್ತೆಹಚ್ಚಲಾಗಿದೆ.

ಇನ್ನು ಹಾನಿಗೊಳಗಾದ ಪ್ರದೇಶಗಳಿಗೆ ರಕ್ಷಣಾ ತಂಡಗಳು ಭೇಟಿ ನೀಡಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

English summary
An earthquake of magnitude 6.3 struck the Mindoro region of the Philippines, the European Mediterranean Seismological Centre (EMSC) said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X