• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು ಸ್ಟ್ರಾಬೆರಿ ಚಂದ್ರಗ್ರಹಣ: ಏನಿದರ ಸ್ಪೆಷಲ್?

|

2020ರ ಎರಡನೇ ಚಂದ್ರಗಹಣ ಇಂದು (ಜೂನ್ 5) ಸಂಭವಿಸಲಿದೆ, ಈ ವರ್ಷ ಒಟ್ಟು ನಾಲ್ಕು ಚಂದ್ರಗಹಣ ಸಂಭವಿಸಲಿದ್ದು, ಮೊದಲನೆಯದು ಜನವರಿ 10ರಂದು ಗೋಚರವಾಯಿತು.

   ಪೆನಂಬ್ರಲ್ ಚಂದ್ರಗ್ರಹಣದಿಂದ ಯಾವ ರಾಶಿಗಳಿಗೆ ಶುಭ..?ಅಶುಭ..? | Lunar Eclipse | Oneindia Kannada

   ಜೂನ್ 5 ಮತ್ತು 6ರ ನಡುವೆ ಸಂಭವಿಸಲಿರುವ ಈ ಚಂದ್ರಗ್ರಹಣ ಈ ಹಿಂದಿನದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಏಷ್ಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾ ಜನರು ಮುಂಬರುವ ಭಾಗಶಃ ಚಂದ್ರ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಭಾಗಶಃ ಚಂದ್ರ ಗ್ರಹಣ ಪೂರ್ಣ ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿದೆ.

   ಸ್ಟ್ರಾಬೆರಿ ಚಂದ್ರ ಗ್ರಹಣ ಎಂದು ಏಕೆ ಕರೆಯಲಾಗುತ್ತೆ?

   ಸ್ಟ್ರಾಬೆರಿ ಚಂದ್ರ ಗ್ರಹಣ ಎಂದು ಏಕೆ ಕರೆಯಲಾಗುತ್ತೆ?

   ಪ್ರಪಂಚದಾದ್ಯಂತದ ಖಗೋಳಶಾಸ್ತ್ರಜ್ಞರು ಜೂನ್ 5 ರ ಚಂದ್ರ ಗ್ರಹಣವನ್ನು "ಸ್ಟ್ರಾಬೆರಿ ಚಂದ್ರ ಗ್ರಹಣ" ಎಂದು ಕರೆಯುತ್ತಾರೆ, ಏಕೆಂದರೆ ಜೂನ್ ಹುಣ್ಣಿಮೆಯನ್ನು ಸ್ಟ್ರಾಬೆರಿ ಚಂದ್ರ ಎಂದು ಕರೆಯಲಾಗುತ್ತದೆ.

   2020ರ ಸ್ಟ್ರಾಬೆರಿ ಚಂದ್ರಗ್ರಹಣ ನೋಡಲು ಸಜ್ಜಾಗಿ

   1930 ರ ದಶಕದಲ್ಲಿ, ಫಾರ್ಮರ್ಸ್ ಅಲ್ಮಾನಾಕ್ ಪೂರ್ಣ ಚಂದ್ರರಿಗಾಗಿ ಭಾರತೀಯ ಹೆಸರುಗಳನ್ನು ಪ್ರಕಟಿಸಿತು. ಅವರ ಪ್ರಕಾರ, ಈಶಾನ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜೂನ್‌ನಲ್ಲಿ ಸಣ್ಣ ಸ್ಟ್ರಾಬೆರಿ ಋತುವಿನ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ, ಜೂನ್ ತಿಂಗಳಲ್ಲಿ ಹುಣ್ಣಿಮೆಯನ್ನು 'ಸ್ಟ್ರಾಬೆರಿ ಚಂದ್ರ' ಎಂದು ಹೆಸರಿಸಲಾಗಿದೆ.

   ಯಾವ ರೀತಿ ಇರಲಿದೆ ಈ ಸ್ಟ್ರಾಬೆರಿ ಮೂನ್?

   ಯಾವ ರೀತಿ ಇರಲಿದೆ ಈ ಸ್ಟ್ರಾಬೆರಿ ಮೂನ್?

   ಈ ವಿದ್ಯಮಾನದಲ್ಲಿ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ತನ್ನನ್ನು ತಾನೇ ಇರಿಸುತ್ತದೆ ಮತ್ತು ಒಂದು ರೇಖೆಯನ್ನು ರೂಪಿಸುತ್ತದೆ, ಅದು ನೇರವಾಗಿರುವುದಿಲ್ಲ. ಈ ಜೋಡಣೆಯಿಂದಾಗಿ, ಭೂಮಿಯು ಸೂರ್ಯನ ಬೆಳಕನ್ನು ನೇರವಾಗಿ ಚಂದ್ರನ ಮೇಲ್ಮೈಗೆ ತಲುಪದಂತೆ ತಡೆಯುತ್ತದೆ, ಹೀಗಾಗಿ ಪೆನಂಬ್ರಾ ಎಂದು ಕರೆಯಲ್ಪಡುವ ನೆರಳು ರೂಪಿಸುತ್ತದೆ.ಈ ರಚನೆ ಅಡಿಯಲ್ಲಿ, ಚಂದ್ರನ 57 ಪರ್ಸೆಂಟ್‌ರಷ್ಟು ಮಾತ್ರ ಭೂಮಿಯ ಪೆನಂಬ್ರಾ ಮೂಲಕ ಹಾದುಹೋಗುತ್ತದೆ. ಆದ್ದರಿಂದ ಪೆನಂಬ್ರಲ್ ಗ್ರಹಣವು/ಸ್ಟ್ರಾಬೆರಿ ಚಂದ್ರಗ್ರಹಣ ಸಾಮಾನ್ಯ ಹುಣ್ಣಿಮೆಗೆ ಹೋಲುತ್ತದೆ.

   ಇನ್ನು, ಬಹುತೇಕರಿಗೆ ಗ್ರಹಣ ಸರಿಯಾಗಿ ಗೋಚರಿಸದೇ ಹೋಗಬಹುದು. ಪೆನಂಬ್ರಲ್‌ ಚಂದ್ರ ಗ್ರಹಣವು ಸಾಮಾನ್ಯವಾಗಿ ಸ್ವಲ್ಪ ಗಾಢವಾಗಿದ್ದರೂ, ಹುಣ್ಣಿಮೆಯ ದಿನ ವೀಕ್ಷಿಸಲು ಸಾಧ್ಯವಿಲ್ಲ, ಆದರೆ ಆಕಾಶವು ಸ್ಪಷ್ಟವಾಗಿದ್ದರೆ ಮಾತ್ರ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಲು ಸಾಧ್ಯವಾದರೆ ಖಂಡಿತವಾಗಿಯೂ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು.

   ಸ್ಟ್ರಾಬೆರಿ ಚಂದ್ರಗ್ರಹಣದ ಭಾರತೀಯ ಸಮಯ

   ಸ್ಟ್ರಾಬೆರಿ ಚಂದ್ರಗ್ರಹಣದ ಭಾರತೀಯ ಸಮಯ

   ಜೂನ್ 5 ಹಾಗೂ ಜೂನ್ 6 ರ ರಾತ್ರಿ ವೇಳೆ ನಡೆಯುವ ಈ ವಿದ್ಯಾಮಾನವು ಭಾರತೀಯ ಕಾಲಮಾಣ ಜೂನ್ 5ರ ರಾತ್ರಿ 11.15 ಕ್ಕೆ ಆರಂಭವಾಗಿ ಜೂನ್ 6ರಂದು 2:34 AMರಂದು ಅಂತ್ಯಗೊಳ್ಳಲಿದೆ. ಜೂನ್ 6 ರಂದು ಬೆಳಿಗ್ಗೆ 12:54 ಕ್ಕೆ ಗ್ರಹಣವು ಅದರ ಪೂರ್ಣ ಹಂತದಲ್ಲಿ ಗೋಚರಿಸುತ್ತದೆ. ಈ ಎರಡನೇ ಮೇಲ್ಮೈ ಚಂದ್ರಗ್ರಹಣದ ಅವಧಿ 18 ನಿಮಿಷ ಎನ್ನಬಹುದು. ಆದರೆ ಒಟ್ಟಾರೆ ಚಂದ್ರಗ್ರಹಣದ ಸಮಯ ಮೂರು ಗಂಟೆ 19 ನಿಮಿಷ

   ಬರಿಗಣ್ಣಿನಲ್ಲಿ ಸ್ಟ್ರಾಬೆರಿ ಚಂದ್ರಗ್ರಹಣ ನೋಡಬಹುದೇ?

   ಬರಿಗಣ್ಣಿನಲ್ಲಿ ಸ್ಟ್ರಾಬೆರಿ ಚಂದ್ರಗ್ರಹಣ ನೋಡಬಹುದೇ?

   ಸೂರ್ಯಗ್ರಹಣಕ್ಕಿಂತ ಭಿನ್ನವಾಗಿ, ನೀವು ಚಂದ್ರ ಗ್ರಹಣವನ್ನು ಬರಿ ಕಣ್ಣುಗಳಿಂದ ವೀಕ್ಷಿಸಬಹುದು. ಚಂದ್ರ ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು, ದೇವಾಲಯದಲ್ಲಿ ಪೂಜಿಸಬಾರದು ಎಂದು ಭಾರತದಲ್ಲಿ ಅನೇಕರು ನಂಬಿದ್ದಾರೆ. ವರ್ಷದ ಮುಂದಿನ ಪೆನಂಬ್ರಲ್ ಚಂದ್ರ ಗ್ರಹಣಗಳು ಜುಲೈ 5 ಮತ್ತು ನವೆಂಬರ್ 30 ರಂದು ನಡೆಯಲಿವೆ.

   English summary
   Today's lunar eclipse is also called Strawberry Moon Eclipse as the moon will appear a shade darker during the penumbral lunar eclipse phase.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X