ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃದಯದ ಆರೋಗ್ಯಕ್ಕೆ ಅಕ್ಕಪಕ್ಕದವರನ್ನು ಪ್ರೀತಿಸಿ

By Prasad
|
Google Oneindia Kannada News

ಬೆಂಗಳೂರು, ಆ. 19 : ನೆರೆಹೊರೆಯವರ ಜೊತೆ ನಿಮ್ಮ ಸಂಬಂಧ ಹೇಗಿದೆ? ಬೆಳಗಿನ ಜಾವ ಒಂದು ವಾಕ್ ಮಾಡಿಕೊಂಡು, ಸಮಯ ಸಿಕ್ಕಾಗ ಪಕ್ಕದ ಮನೆಯವರ ಕಷ್ಟಸುಖ ವಿಚಾರಿಸಿಕೊಂಡು, ಅವರ ಸಂತಸಗಳಲ್ಲಿ ನೀವೂ ಭಾಗಿಯಾಗಿರುವಿರಾದರೆ ನಿಮ್ಮ ಹೃದಯ ಕೂಡ ಅಷ್ಟೇ ಸುಸ್ಥಿತಿಯಲ್ಲಿರುತ್ತದೆ.

ಆಕಡೆ ಮನೆಯವಳು ಯಾವನ್ಜೊತೆಯೋ ಓಡಿಹೋದಳಂತೆ, ಹಿಂದಿನ ಮನೆಯವನ ವ್ಯಾಪಾರ ಗೋತಾ ಹೊಡೀತಂತೆ, ಕಡೇಮನಿ ಮುದುಕಿಯದು ಮಹಾ ಹರಕುಬಾಯಿ... ಎಂಬಂತಹ ಮಾತುಕತೆಯಲ್ಲಿ ಸುಖ ಕಾಣದೆ, ಅಕ್ಕಪಕ್ಕದವರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ನಮ್ಮ ಹೃದಯವೂ ಉತ್ತಮವಾಗಿ ಮಿಡಿಯುತ್ತದೆ ಎಂದು ಅಮೆರಿಕ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಮಿಷಿಗನ್ ವಿಶ್ವವಿದ್ಯಾಲಯದ ತಂಡವೊಂದು ಸತತ ನಾಲ್ಕು ವರ್ಷಗಳ ಕಾಲ ಐದು ಸಾವಿರಕ್ಕೂ ಹೆಚ್ಚು ಜನರನ್ನು ಪ್ರಯೋಗಕ್ಕೆ ಗುರಿಪಡಿಸಿ, ಅವರ ಜೀವನಶೈಲಿಯನ್ನು ಅಧ್ಯಯನ ಮಾಡಿ, ತನ್ನ ವರದಿಯನ್ನು ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕದಲ್ಲಿ ಪ್ರಕಟಿಸಿದೆ. ಇದಕ್ಕಾಗಿ ಹೃದಯ ಬೇನೆಯ ಇತಿಹಾಸವಿರುವ ಮತ್ತು ಇಲ್ಲದಿರುವ ಜನರನ್ನು ಒಳಪಡಿಸಿತ್ತು.

ವಿಜ್ಞಾನಿಗಳಿಂದ ಇದೊಂದು ಹೊಸ ಪ್ರಯೋಗ

ವಿಜ್ಞಾನಿಗಳಿಂದ ಇದೊಂದು ಹೊಸ ಪ್ರಯೋಗ

ಈಗ ಹೊಸದಾಗಿ ನಡೆಸಲಾಗಿರುವ ಪ್ರಯೋಗದಲ್ಲಿ, ನೆರೆಹೊರೆಯವರೊಡನೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವ ಬಗ್ಗೆ, ಕಷ್ಟಕಾಲದಲ್ಲಿ ಅವರನ್ನು ನಂಬುವ ಬಗ್ಗೆ, ಅವರೊಂದಿಗೆ ಸ್ನೇಹದಿಂದಿರುವ ಬಗ್ಗೆ ಕೇಳಿ, ಏಳರಲ್ಲಿ ಅಂಕ ನೀಡುವಂತೆ ಕೇಳಲಾಗಿತ್ತು.

ವಯಸ್ಸಾದವರೇ ಅಧ್ಯಯನದ ವಸ್ತು

ವಯಸ್ಸಾದವರೇ ಅಧ್ಯಯನದ ವಸ್ತು

ಎಪ್ಪತ್ತು ವಯಸ್ಸು ದಾಟಿದ, ಪ್ರಮುಖವಾಗಿ ಮದುವೆಯಾಗಿರುವ ಮಹಿಳೆಯರನ್ನು ಈ ಅಧ್ಯಯನಕ್ಕೆ ಗುರಿಪಡಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸತತವಾಗಿ ನಿಗಾವಹಿಸಲಾಗಿತ್ತು. ಅಧ್ಯಯನದ ವಿಷಯ ತಿಳಿಸಿ, ನೆರೆಹೊರೆಯವರೊಡನೆ ಸ್ನೇಹದಿಂದ ಇರುವಂತೆ ಸೂಚಿಸಲಾಗಿತ್ತು.

ಸುಧಾರಿಸಿದ ಹೃದಯದ ಆರೋಗ್ಯ

ಸುಧಾರಿಸಿದ ಹೃದಯದ ಆರೋಗ್ಯ

ಭಾಗಿಯಾಗಿರುವವರು ನೀಡಿದ ಅಂಕ ಮತ್ತು ಅವರ ಆರೋಗ್ಯ ಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ, ಅವರ ಹೃದಯ ಹೆಚ್ಚು ಆರೋಗ್ಯದಿಂದಿರುವ ಬಗ್ಗೆ ತಿಳಿದುಬಂದಿತ್ತು. ಕೇವಲ ಒಂದು ಅಥವಾ ಎರಡು ಅಂಕ ಕೊಟ್ಟವರಿಗಿಂತ ಹೆಚ್ಚು ಅಂಕ ಕೊಟ್ಟವರ ಆರೋಗ್ಯ ಸ್ಥಿತಿ ಉತ್ತಮವಾಗಿತ್ತು.

ಅಕ್ಕಪಕ್ಕದವರೊಡನೆ ಹೆಚ್ಚು ಬೆರೆಯಿರಿ

ಅಕ್ಕಪಕ್ಕದವರೊಡನೆ ಹೆಚ್ಚು ಬೆರೆಯಿರಿ

ಅಧ್ಯಯನಕ್ಕೊಳಪಟ್ಟವರ ವಯಸ್ಸು, ಸಾಮಾಜಿಕ ಆರ್ಥಿಕ ಸ್ಥಿತಿಗತಿ, ಮಾನಸಿಕ ಆರೋಗ್ಯ, ಮಧುಮೇಹ ಮುಂತಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ, ಅಕ್ಕಪಕ್ಕದವರ ಜೊತೆ ನಾವು ಸಂತಸದಿಂದಿದ್ದರೆ ನಮ್ಮ ಆರೋಗ್ಯ ಕೂಡ ಸುಧಾರಿಸುತ್ತದೆ ಮತ್ತು ಹೃದಯ ಇನ್ನಷ್ಟು ಸುಸ್ಥಿತಿಯಲ್ಲಿರುತ್ತದೆ ಎಂದು ವಿಜ್ಞಾನಿಗಳು ಷರಾ ಬರೆದಿದ್ದಾರೆ.

ಕಷ್ಟಸುಖ ವಿಚಾರಿಸಿ, ಧನಾತ್ಮಕವಾಗಿ ಚಿಂತಿಸಿ

ಕಷ್ಟಸುಖ ವಿಚಾರಿಸಿ, ಧನಾತ್ಮಕವಾಗಿ ಚಿಂತಿಸಿ

ಈ ಅಧ್ಯಯನ ಮತ್ತು ಅವರ ನಡೆಸಿರುವ ಪ್ರಯೋಗ ಏನೇ ಇರಲಿ, ನೆರೆಹೊರೆಯವರೊಡನೆ ಸ್ನೇಹದಿಂದ ಇರುವುದು, ಅವರ ಕಷ್ಟಸುಖಗಳನ್ನು ಹಂಚಿಕೊಳ್ಳುವುದು, ಹುಟ್ಟುಹಬ್ಬ, ನಾಮಕರಣ ಇತ್ಯಾದಿ ಸಮಾರಂಭಗಳಲ್ಲಿ ಭಾಗಿಯಾಗಿವುದು, ಸಾಧ್ಯವಾದಷ್ಟು ಧನಾತ್ಮಕವಾಗಿ ಚಿಂತಿಸುವುದರಲ್ಲಿ ತಪ್ಪೇನೂ ಇಲ್ಲವಲ್ಲ?

ಇದು ಕೇವಲ ಅಧ್ಯಯನ ಮಾತ್ರ

ಇದು ಕೇವಲ ಅಧ್ಯಯನ ಮಾತ್ರ

ಇದು ಕೇವಲ ಅಧ್ಯಯನ ಮಾತ್ರವಾಗಿದ್ದು, ಯಾವುದೇ ನಿಖರವಾದ ನಿರ್ಧಾರಕ್ಕೆ ಬಂದಿರುವುದಿಲ್ಲ ಎಂದು ಕೂಡ ವರದಿಯಲ್ಲಿ ನಮೂದಿಸಲಾಗಿದೆ.

ಅನಾರೋಗ್ಯಕರ ಜೀವನಶೈಲಿಯಿಂದ ಅಪಾಯಕ್ಕೆ ಅಹ್ವಾನ

ಅನಾರೋಗ್ಯಕರ ಜೀವನಶೈಲಿಯಿಂದ ಅಪಾಯಕ್ಕೆ ಅಹ್ವಾನ

ಹೃದಯಕ್ಕೆ ಮತ್ತು ರಕ್ತನಾಳಕ್ಕೆ ಸಂಬಂಧಿಸಿದ ರೋಗಗಳು ವಿಶ್ವದಲ್ಲಿ ಅತಿಹೆಚ್ಚು ಜನರನ್ನು ಬಲಿಪಡೆಯುತ್ತಿವೆ. ಇದರ ಕಾರಣ ತಿಳಿಯಲು ಹಲವಾರು ಸಂಶೋಧನೆಗಳನ್ನು ಕೂಡ ಮಾಡಲಾಗಿದೆ. ಜಂಕ್ ಫುಡ್ ತಿನ್ನುವುದು, ಕೆಟ್ಟ ಜೀವನಪದ್ಧತಿ, ಮಾದಕವಸ್ತುಗಳ ಬಳಕೆ, ವಾಯುಮಾಲಿನ್ಯ, ತೀವ್ರ ಒತ್ತಡ ಮುಂತಾದವು ಹೃದಯ ಕಾಯಿಲೆಗೆ ಕಾರಣ ಎಂದು ಕೂಡ ತಿಳಿದುಬಂದಿದೆ.

English summary
If you want your heart to be healthy, love your neighbour, be friendly with others in your locality. A study conducted by University of Michigan has conducted this study and published a report in Journal of Epidemiology and Community Health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X