ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವ್ಯಕ್ತಿ ಅಮೆರಿಕದ ಮುಂದಿನ ಅಧ್ಯಕ್ಷರಾ?

By Srinath
|
Google Oneindia Kannada News

Governor of Louisiana Indian origin Bobby Jindal may contest US President in 2016
ವಾಷಿಂಗ್ಟನ್, ಡಿ.23: ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ಮುಂದಿನ ಅಧ್ಯಕ್ಷರಾಗುತ್ತಾರಾ? ಹೌದು, ಭಾರತ ಮತ್ತು ಅಮೆರಿಕ ನಡುವಣ ರಾಜಕೀಯ ಮುಸುಕಿನ ಗುದ್ದಾಟ ಎಂದೆಂದಿಗೂ ಮುಗಿಯದ ಕಥೆಯಾಗಿರುವಾಗ ಹೊಸ ಆಶಾಕಿರಣವಾಗಿ ಭಾರತೀಯ ಮೂಲದ ಪಿಯೂಶ್ ಬಾಬಿ ಜಿಂದಾಲ್ ಅವರು ಅಮೆರಿಕದ ಮುಂದಿನ ಅಧ್ಯಕ್ಷರಾಗಲು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಂಡುಬಂದಿದೆ.

2 ಬಾರಿ ಲೂಸಿಯಾನಾ ರಾಜ್ಯದ ಗವರ್ನರ್ ಆಗಿ ಯಶಸ್ವಿಯಾಗಿ ತಮ್ಮ ಕಾರ್ಯನಿರ್ವಹಿಸಿರುವ 42 ವರ್ಷದ ಬಾಬಿ ಜಿಂದಾಲ್ ಅವರು ಅಮೆರಿಕದಲ್ಲಿ ಈಗಾಗಲೇ ಮನೆಮಾತಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಹೊಸ ವರ್ಷದ ಆರಂಭದಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಅಂದಹಾಗೆ ಹಾಲಿ ಅಧ್ಯಕ್ಷ ಬಬಾಮಾ ಸೇರಿದಂತೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಲರಿ ಕ್ಲಿಂಟನ್ ಅವರೂ ಸಹ 2016ರಲ್ಲಿ ನಡೆಯಲಿರುವ ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಅದೆಲ್ಲಾ ಸರಿ, ಈಗೇಕೆ ಇದ್ದಕ್ಕಿದ್ದ ಹಾಗೆ ಭಾರತೀಯ ಮೂಲದ ವ್ಯಕ್ತಿ ಅಮೆರಿಕದ ಅಧ್ಯಕ್ಷರಾಗುವ ಮಾತು ಎಂದು ಕೇಳಿದರೆ ... (ಬಾಬಿ ಜಿಂದಾಲ್ ಯಾರು?)

ರಿಪಬ್ಲಿಕನ್ ಪಕ್ಷದ ನಾಯಕರಾಗಿರುವ ಬಾಬಿ ಜಿಂದಾಲ್ ಅವರು ಗವರ್ನರ್ ಆಗಿರುವ ಲೂಸಿಯಾನಾದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಜಿಂದಾಲ್ ಪರ 50 ಮತ ಬಿದ್ದಿದ್ದರೆ ಹಾಲಿ ಅಧ್ಯಕ್ಷ ಬರಾಕ್ ಒಬಾಮಾ ಪರ ಕೇವಲ 33 ಮತ ಬಿದ್ದಿದ್ದವು.

'ಅವರು (ಬಾಬಿ ಜಿಂದಾಲ್) ಬಹುಶಃ ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸೂಚನೆಗಳಿವೆ. ಅವರು ನಿಜಕ್ಕೂ ಒಬ್ಬ ಮಹತ್ವದ ಅಭ್ಯರ್ಥಿಯಾಗಬಲ್ಲರು. ಅವರು ಸ್ಪರ್ಧಿಸಿದರೆ ನಾವು ಬೆಂಬಲಿಸುತ್ತೇವೆ' ಎಂದು ಸೆನೆಟರ್ ಡೇವಿಡ್ ವಿಟ್ಟರ್ ಅವರು ಖಾಸಗಿ ಟಿವಿ ಚಾನೆಲಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಅವರ (ಬಾಬಿ ಜಿಂದಾಲ್) ನಾಯಕತ್ವದ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ರಾಜಕೀಯ ಮೌಲ್ಯಗಳು, ಒಲವು ನಿಲುವುಗಳ ಬಗ್ಗೆ ನಮ್ಮ ಸಹಮಯವಿದೆ. ಹಾಗಾಗಿ ನಾವು ಅವರನ್ನು ಬೆಂಬಲಿಸುತ್ತೇವೆ' ಎಂದು ಸೆನೆಟರ್ ವಿಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

2015ರ ವೇಳೆಗೆ ಲೂಸಿಯಾನಾ ರಾಜ್ಯದ ಗವರ್ನರ್ ಆಗಿ ಬಾಬಿ ಜಿಂದಾಲ್ ಅವರ ಅಧಿಕಾರವಾಧಿ ಮುಗಿಯಲಿದೆ. ಮೂರನೆಯ ಬಾರಿಗೆ ಅವರು ಸ್ಪರ್ಧಿಸುವಂತಿಲ್ಲ.

English summary
Governor of Louisiana Indian origin Bobby Jindal may contest US President in 2016. Top Republican leader and current Governor of Louisiana Bobby Jindal is planning to run for President in 2016, David Vitter, a top US Senator from his home State has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X