ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ದೇವರು ಶ್ರೀರಾಮನ ಮೂಲ ಭಾರತವೋ ನೇಪಾಳವೋ?

|
Google Oneindia Kannada News

ಕಠ್ಮಂಡು, ಜುಲೈ.14: ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಎಂದೇ ನಂಬಲಾಗಿರುವ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಅದು ಭಾರತದಲ್ಲಿರುವ ಅಯೋಧ್ಯೆಯೋ ಅಥವಾ ನೇಪಾಳದಲ್ಲಿರುವ ಅಯೋಧ್ಯೆಯೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Recommended Video

Constable Sunita Yadaw had to Quit for questioning Minister Son | Oneindia kannada

ಶ್ರೀರಾಮನ ಜನ್ಮಸ್ಥಳದ ಕುರಿತು ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರು ನೀಡಿರುವ ಹೇಳಿಕೆ ಇಂಥದೊಂದು ಗಂಭೀರ ಚರ್ಚೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಶ್ರೀರಾಮನು ಮೂಲ ಭಾರತವಲ್ಲ ಬದಲಿಗೆ ನೇಪಾಳ ಎನ್ನುವ ಮೂಲಕ ಹೊಸ ವಿವಾದವನ್ನೇ ಸೃಷ್ಟಿಸಿದ್ದಾರೆ.

ಅಯ್ಯೋ, ಇದೇನಾಯ್ತು? ಚೀನಾಗಿಂತ ಭಾರತವೇ ಡೇಂಜರ್ ಎಂದ ನೇಪಾಳ!ಅಯ್ಯೋ, ಇದೇನಾಯ್ತು? ಚೀನಾಗಿಂತ ಭಾರತವೇ ಡೇಂಜರ್ ಎಂದ ನೇಪಾಳ!

ತಮ್ಮ ನಿವಾಸದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ, ಶ್ರೀರಾಮನು ಮೂಲತಃ ನೇಪಾಳಿ ಎಂದಿರುವ ಬಗ್ಗೆ ನೇಪಾಳಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. "ನಿಜವಾದ ಅಯೋಧ್ಯೆ ನೇಪಾಳದಲ್ಲೇ ಇದ್ದು, ಶ್ರೀರಾಮನು ನೇಪಾಳಿಯೇ ಹೊರತೂ ಭಾರತೀಯನಲ್ಲ" ಎಂದು ಓಲಿ ಹೇಳಿಕೆ ನೀಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತ ವಿರುದ್ಧ ನೇಪಾಳ ಪ್ರಧಾನಮಂತ್ರಿ ಓಲಿ ಆರೋಪ

ಭಾರತ ವಿರುದ್ಧ ನೇಪಾಳ ಪ್ರಧಾನಮಂತ್ರಿ ಓಲಿ ಆರೋಪ

ನೇಪಾಳದ ಮೇಲೆ ಭಾರತವು ಸಾಂಸ್ಕೃತಿಕ ದಬ್ಬಾಳಿಕೆ ನಡೆಸುತ್ತಿದ್ದು ಅತಿಕ್ರಮಣ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಆರೋಪಿಸಿದ್ದಾರೆ. ನಾವು ಸಾಂಸ್ಕೃತಿಕವಾಗಿ ಸ್ವಲ್ಪ ತುಳಿತಕ್ಕೊಳಗಾಗಿದ್ದೇವೆ. ಸತ್ಯಗಳನ್ನು ಅತಿಕ್ರಮಿಸಲಾಗಿದೆ "ಎಂದು ಅವರು ಘೋಷಿಸಿದರು. ವಿಜ್ಞಾನ ವಲಯದಲ್ಲಿ ನೇಪಾಳದ ಕೊಡುಗೆಯನ್ನು ತಗ್ಗಿಸುವುದಕ್ಕೆ ಭಾರತವೇ ಕಾರಣ ಎಂಬ ಅರ್ಥದಲ್ಲಿ ಪ್ರಧಾನಿ ಓಲಿ ಹೇಳಿಕೆ ನೀಡಿದ್ದಾರೆ.

ನೇಪಾಳದ ಅಯೋಧ್ಯೆಯೇ ಶ್ರೀರಾಮನ ಮೂಲ ಊರು!

ನೇಪಾಳದ ಅಯೋಧ್ಯೆಯೇ ಶ್ರೀರಾಮನ ಮೂಲ ಊರು!

"ನಾವು ಸೀತೆಯನ್ನು ರಾಜಕುಮಾರ ರಾಮ್‌ನಿಗೆ ಕೊಟ್ಟಿದ್ದೇವೆ ಎಂದು ನಾವು ಈಗಲೂ ನಂಬುತ್ತೇವೆ. ಆದರೆ ನಾವು ರಾಜಕುಮಾರನನ್ನು ಅಯೋಧ್ಯೆಯಿಂದ ನೀಡಿದ್ದೇವೆ. ಅದು ಭಾರತದಲ್ಲಿರುವ ಅಯೋಧ್ಯೆಯಲ್ಲ. ಬದಲಿಗೆ ನೇಪಾಳದ ಪಶ್ಚಿಮ ಬಿರಗುಂಜ್ ಜಿಲ್ಲೆಯಲ್ಲಿರುವ ಹಾಗೂ ರಾಜಧಾನಿ ಕಠ್ಮಂಡುವಿನಿಂದ 135 ಕಿಲೋ ಮೀಟರ್ ದೂರದಲ್ಲಿರುವ ಪುಟ್ಟ ಗ್ರಾಮವೇ ಅಯೋಧ್ಯೆ" ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಹೊಸಬಾಂಬ್ ಸಿಡಿಸಿದ್ದಾರೆ.

ಇದಪ್ಪಾ ವರಸೆ! ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?ಇದಪ್ಪಾ ವರಸೆ! ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?

ಉತ್ತರಪ್ರದೇಶದ ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ

ಉತ್ತರಪ್ರದೇಶದ ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ

ಭಾರತೀಯರ ಆರಾಧ್ಯ ದೈವ ಎಂದು ಕೋಟ್ಯಂತರ ಜನರು ನಂಬಿರುವ ಶ್ರೀರಾಮನ ಜನ್ಮಸ್ಥಳವು ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ಎಂತಲೇ ನಂಬಲಾಗಿದೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ 135 ಕಿಲೋ ಮೀಟರ್ ದೂರದಲ್ಲಿರುವ ಅಯೋಧ್ಯೆಯನ್ನೇ ಶ್ರೀರಾಮನದ ಮೂಲ ಎಂದು ಭಾರತೀಯರು ನಂಬಿಕೊಂಡಿದ್ದಾರೆ.

ಭಾರತಕ್ಕೆ ಉಲ್ಟಾ ಹೊಡೆಯುತ್ತಿರುವ ನೇಪಾಳ ಪ್ರಧಾನಿ

ಭಾರತಕ್ಕೆ ಉಲ್ಟಾ ಹೊಡೆಯುತ್ತಿರುವ ನೇಪಾಳ ಪ್ರಧಾನಿ

ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಬಿಡುಗಡೆ ಮಾಡಿರುವ ಹೊಸ ನಕ್ಷೆಗೆ ಸಂಸತ್ ನಲ್ಲಿ ಸರ್ವಾನುಮತಗಳಿಂದ ಅನುಮೋದನೆ ಸಿಕ್ಕಿದೆ. ಪರಿಷ್ಕರಿಸದ ನೇಪಾಳದ ಹೊಸ ನಕ್ಷೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಭಾರತವು ಖಡಕ್ ಆಗಿ ತಿಳಿಸಿದೆ. ಭಾರತದ ಗಡಿಯಲ್ಲಿರುವ ಭೂಪ್ರದೇಶ ಒಳಗೊಂಡಂತೆ ನೇಪಾಳದ ಹೊಸ ನಕ್ಷೆ ರೂಪಿಸಿದೆ. ನೇಪಾಳ ಜನಪ್ರತಿನಿಧಿಗಳ ಸದನದಲ್ಲಿ ಅನುಮೋದನೆ ಪಡೆದ ಸಾಂವಿಧಾನಿಕ ತಿದ್ದುಪಡಿಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.

ಗಡಿಯಲ್ಲಿ ವಿವಾದ ಸೃಷ್ಟಿಸುತ್ತಿರುವುದೇಕೆ ನೇಪಾಳ?

ಗಡಿಯಲ್ಲಿ ವಿವಾದ ಸೃಷ್ಟಿಸುತ್ತಿರುವುದೇಕೆ ನೇಪಾಳ?

ಉಭಯ ರಾಷ್ಟ್ರಗಳ ಗಡಿಯಲ್ಲಿರುವ ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಹೊಸ ಭೂನಕ್ಷೆ ಬಿಡುಗಡೆ ಮಾಡಿದೆ. ಇದಕ್ಕೆ ಭಾರತವು ವಿರೋಧ ವ್ಯಕ್ತಪಡಿಸಿತ್ತು. ಗಡಿ ವಿಚಾರವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಕೂಡಾ ಹೇಳಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಾಖಂಡದ ಪಿಥೋರಗರ್‌ ಹಾಗೂ ಕೈಲಾಶ್ ಮಾನಸರೋವರ್ ಮಾರ್ಗದಲ್ಲಿ ಲಿಪುಲೆಖ್ ಬಳಿ ಲಿಂಕ್ ರಸ್ತೆಯನ್ನು ಉದ್ಘಾಟಿಸಿದ್ದರು. ಅದಾದ ನಂತರ 10 ದಿನಗಳ ನಂತರ ನೇಪಾಳದ ವಿದೇಶಾಂಗ ಸಚಿವಾಲಯವು ಲಿಂಕ್ ರಸ್ತೆಯನ್ನು ಆಕ್ಷೇಪಿಸಿ ಪತ್ರಿಕಾ ಪ್ರಕಟಣೆ ನೀಡಿತ್ತು. ಭಾರತವು ನೇಪಾಳದ ವಾದವನ್ನು ತಿರಸ್ಕರಿಸಿದೆ, ಅದು ಸಂಪೂರ್ಣವಾಗಿ ಭಾರತದ ಭೂಪ್ರದೇಶದಲ್ಲಿದೆ ಎಂದು ಹೇಳಿತ್ತು.

English summary
"Lord Shree Ram Is Nepali Not Indian", Says Nepal Prime Minister KP Sharma Oli. Look Here For Reason Behind The Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X