ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ಅತಿ ಕೆಟ್ಟ ಪರಿಸ್ಥಿತಿ ಎದುರು ನೋಡಲಿದೆ; ಮೇಯರ್ ವಾರ್ನಿಂಗ್

|
Google Oneindia Kannada News

ಲಂಡನ್, ಜನವರಿ 08: ಕೊರೊನಾ ಸೋಂಕಿನ ಪ್ರಕರಣಗಳಿಂದ ಲಂಡನ್ ನಲ್ಲಿನ ಆಸ್ಪತ್ರೆಗಳು ಅತಿ ಶೀಘ್ರವೇ ಭರ್ತಿಯಾಗಲಿವೆ. ಈ ಸಂಗತಿ ದೇಶದಲ್ಲಿ ಅತಿ ದೊಡ್ಡ ಘಟನೆಯಾಗಲಿದೆ ಎಂದು ಲಂಡನ್ ಮೇಯರ್ ಸಾದಿಖ್ ಖಾನ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕು ತಗ್ಗದೇ ಹೋದ ಪಕ್ಷದಲ್ಲಿ ಮುಂದಿನ ಎರಡು ವಾರಗಳಲ್ಲೇ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಕೂಡ ಇಲ್ಲದಂಥ ಪರಿಸ್ಥಿತಿ ಉಂಟಾಗಲಿದೆ. ಸರ್ಕಾರ ಈ ಪರಿಸ್ಥಿತಿಯನ್ನು ಹತೋಟಿಗೆ ತರಲೇಬೇಕಿದೆ ಎಂದು ಕೇಳಿಕೊಂಡಿದ್ದಾರೆ.

ಮೂರನೇ ಲಸಿಕೆಗೆ ಅನುಮತಿ ನೀಡಿದ ಬ್ರಿಟನ್; ಮಾಡರ್ನಾಗೆ ಬೇಡಿಕೆಮೂರನೇ ಲಸಿಕೆಗೆ ಅನುಮತಿ ನೀಡಿದ ಬ್ರಿಟನ್; ಮಾಡರ್ನಾಗೆ ಬೇಡಿಕೆ

"ರೂಪಾಂತರ ಸೋಂಕು ಲಂಡನ್ ಅನ್ನು ಕಠಿಣ ಪರಿಸ್ಥಿತಿಗೆ ದೂಡಿದೆ. ಪ್ರಸ್ತುತ ಈ ಪರಿಸ್ಥಿತಿಯನ್ನು ಪ್ರಮುಖ ಘಟನೆ ಎಂದು ಬ್ರಿಟನ್ ಸರ್ಕಾರ ಪರಿಗಣಿಸಬೇಕಿದೆ. ಶೀಘ್ರವೇ ಕ್ರಮ ಕೈಗೊಳ್ಳದೇ ಇದ್ದರೆ, ಇನ್ನಷ್ಟು ಜನರು ಸಾವನ್ನಪ್ಪುವುದು ಖಚಿತ" ಎಂದು ಎಚ್ಚರಿಕೆ ನೀಡಿದ್ದಾರೆ.

London Mayor Warns And Declares Major Incident

ಲಂಡನ್ ನಲ್ಲಿ ಪ್ರತಿ 30 ಜನರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಲಂಡನ್ ಆಸ್ಪತ್ರೆಗಳಲ್ಲಿ ಕಳೆದ ಒಂದು ವಾರದಿಂದ ಕೊರೊನಾ ರೋಗಿಗಳ ಸಂಖ್ಯೆಯು ಶೇ. 27ರಷ್ಟು ಏರಿಕೆಯಾಗಿದ್ದು, ವೆಂಟಿಲೇಟರ್ ಅವಶ್ಯಕತೆಯಿರುವ ರೋಗಿಗಳ ಸಂಖ್ಯೆ ಶೇ. 42ರಷ್ಟು ಏರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಕೊರೊನಾ ಹರಡುವಿಕೆಯನ್ನು ನಿಯಂತ್ರಣಕ್ಕೆ ತರುವ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿರುವ ಅವರು, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

English summary
London mayor Sadiq Khan on Friday declared a major incident, warning hospitals in the British capital could soon be overwhelmed with patients
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X