ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ಬ್ರಿಡ್ಜ್ ದಾಳಿ: 2012ರಲ್ಲೂ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದ ಆರೋಪಿ

|
Google Oneindia Kannada News

ಲಂಡನ್, ನವೆಂಬರ್ 30: ಲಂಡನ್ ಬ್ರಿಡ್ಜ್ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪಿಯು ಏಳು ವರ್ಷಗಳ ಹಿಂದೆ ಭಯೋತ್ಪಾದನಾ ಪ್ರಕರಣವೊಂದರಲ್ಲಿ ಅಪರಾಧಿಯಾಗಿರುವುದು ಬೆಳಕಿಗೆ ಬಂದಿದೆ.

2012ರಲ್ಲಿ ಈತನನ್ನು ಲಂಡನ್ ಪೊಲೀಸರು ಬಂಧಿಸಿ, ಭಯೋತ್ಪಾದನಾ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿ ಮಾಡಿದ್ದರು.ಈತನು ಸುಮಾರು ಆರು ವರ್ಷಗಳ ಜೈಲು ಶಿಕ್ಷೆ ಪೂರೈಸಿ 2018ರ ಡಿಸೆಂಬರ್ ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.

london

ಈಗ ಮತ್ತೆ ಆತ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಆಶ್ಚರ್ಯ ಮೂಡಿಸಿದೆ. 28 ವರ್ಷದ ಉಸ್ಮಾನ್ ಖಾನ್ ಎನ್ನುವ ಈತ ಶುಕ್ರವಾರ ಸಂಜೆ ಲಂಡನ್ ಬ್ರಿಡ್ಜ್ ಬಳಿ ಚೂರಿಯಿಂದ ಇರಿದು ಇಬ್ಬರನ್ನು ಹತ್ಯೆ ಮಾಡಿದ್ದ.

ಅಲ್ಲದೆ ಹುಸಿಬಾಂಬ್ ದಾಳಿಯ ಬೆದರಿಕೆಯನ್ನೂ ಹಾಕಿದ್ದ ಹೀಗಾಗಿ ಆತನ್ನು ಪೊಲೀಸರು ಸ್ಥಳದಲ್ಲೇ ಗುಂಡಿಕ್ಕಿ ಎನ್‌ಕೌಂಟರ್ ಮಾಡಿದ್ದರು.ಲಂಡನ್ ಬ್ರಿಡ್ಜ್ ಸಮೀಪ ವ್ಯಕ್ತಿಯೊಬ್ಬನ ಇರಿತಕ್ಕೆ ಹಲವು ಮಂದಿ ಗಾಯಗೊಂಡಿದ್ದಾರೆ.

ದಾಳಿ ನಡೆಸಿದ ವ್ಯಕ್ತಿಯನ್ನು ಗುಂಡಿಕ್ಕಿ ಹೊಡೆದುರುಳಿಸಲಾಗಿದ್ದು, ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೆಟ್ರೋಪೊಲಿಟನ್ ಪೊಲೀಸರುತಿಳಿಸಿದ್ದಾರೆ.

ಥೇಮ್ಸ್ ನದಿ ಮೇಲಿರುವ ಲಂಡನ್​ ಬ್ರಿಡ್ಜ್ ಸಮೀಪ ಮಧ್ಯಾಹ್ನ 1:58ರ ಸಮಯದಲ್ಲಿ ಜನರಿಗೆ ಚಾಕುವಿನಿಂದ ಇರಿದಿದ್ದಾನೆ. ಇದೇ ಜಾಗದಲ್ಲಿ 2017ರ ಜೂನ್​ನಲ್ಲಿ ಭಯೋತ್ಪಾದಕ ದಾಳಿ ನಡೆದು, ಎಂಟು ಮಂದಿ ಮೃತಪಟ್ಟಿದ್ದರು.

English summary
London's police commissioner says two injured in London Bridge incident have died, as well as the suspect who was shot dead; three others being treated in the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X