ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ : ಪುರಾತನ ಬಾಂಬ್ ಪತ್ತೆ, ವಿಮಾನ ನಿಲ್ದಾಣ ಬಂದ್

By Mahesh
|
Google Oneindia Kannada News

ಲಂಡನ್, ಫೆಬ್ರವರಿ 12: ಲಂಡನ್ನಿನ ಸಿಟಿ ವಿಮಾನ ನಿಲ್ದಾಣವನ್ನು ಭಾನುವಾರದಂದು ಬಂದ್ ಮಾಡಲಾಗಿತ್ತು.

ಥೇಮ್ಸ್ ನದಿ ತೀರದಲ್ಲಿ ಎರಡನೇ ವಿಶ್ವ ಮಹಾ ಯುದ್ಧ ಕಾಲದ ಬಾಂಬ್ ಪತ್ತೆಯಾದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಕೂಡಾ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಐದನೇ ಕಿಂಗ್ ಜಾರ್ಜ್ ಡಾಕ್ ಬಳಿ ಬಾಂಬ್ ಪತ್ತೆಯಾಗಿದ್ದು, 214 ಮೀಟರ್ ವಲಯವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಮೆಟ್ ಪೊಲೀಸ್ ಪ್ರಕಟಿಸಿದ್ದಾರೆ.

London City Airport Closed After World War II Bomb Found

ಲಂಡನ್ ಸಿಟಿ ಏರ್ ಪೋರ್ಟ್ ಬಂದ್ ಆಗಿದ್ದು, ಸೋಮವಾರದಂದು ಪ್ರಯಾಣ ನಿಗದಿಯಾಗಿದ್ದ ಪ್ರಯಾಣಿಕರಿಗೆ ಆಯಾ ವಿಮಾನ ಏಜೆನ್ಸಿಗಳು ಮುಂದಿನ ನಿರ್ದೇಶನ ನೀಡಲಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.

ಕ್ಯಾನರಿ ವಾರ್ಫ್ ಬಿಸಿನೆಸ್ ಜಿಲ್ಲೆಯ ಪೂರ್ವ ಲಂಡನ್ ಭಾಗದಲ್ಲಿರುವ ಈ ವಿಮಾನ ನಿಲ್ದಾಣದ ಬಳಿ ಪತ್ತೆಯಾದ ಬಾಂಬ್ ಗಳು 1940 ರಿಂದ 1941ರ ಅವಧಿಗೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಜರ್ಮನಿಯ ವಾಯುಸೇನೆಯಿಂದ ಹಾಕಿದ ಬಾಂಬ್ ಗಳು ಎಂದು ಗುರುತಿಸಲಾಗಿದೆ.

English summary
London City Airport announced its closure on Sunday after a World War Two bomb was discovered in the nearby River Thames.Travellers were told to avoid the airport: "All passengers due to travel from London City on Monday are advised to contact their airline for further information."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X