ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಇಮ್ರಾನ್ ಖಾನ್

|
Google Oneindia Kannada News

ಕರಾಚಿ, ಫೆಬ್ರವರಿ 01 : ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಮರುಭೂಮಿ ಮಿಡತೆಗಳ ಕಾಟದಿಂದಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ನಲುಗಿ ಹೋಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯನ್ನು ಉಂಟು ಮಾಡಿರುವ ಮಿಡತೆಗಳನ್ನು ನಾಶ ಮಾಡಲು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಕೆಟ್ಟ ಮೇಲೆ ಬುದ್ಧಿ ಕಲಿತ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ಕೆಟ್ಟ ಮೇಲೆ ಬುದ್ಧಿ ಕಲಿತ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್

ಪಾಕಿಸ್ತಾನದ ಸಿಂಧ್, ಬಲೂಚಿಸ್ತಾನ್ ಸೇರಿದಂತೆ ನಾಲ್ಕು ಪ್ರಾಂತ್ಯಗಳಲ್ಲಿ ಮರುಭೂಮಿ ಮಿಡತೆಗಳ ಕಾಟ ಹೆಚ್ಚಾಗಿದೆ. ನಾಲ್ಕೂ ಪ್ರಾಂತ್ಯದ ಸಚಿವರು, ಅಧಿಕಾರಿಗಳ ಜೊತೆ ಪ್ರಧಾನಿ ಇಮ್ರಾನ್ ಖಾನ್ ಮಹತ್ವದ ಸಭೆ ನಡೆಸಿದರು.

ಮೋದಿ ಮೆಚ್ಚಿ ಗುಡಿ ಕಟ್ಟಿದ ತಮಿಳುನಾಡು ರೈತಮೋದಿ ಮೆಚ್ಚಿ ಗುಡಿ ಕಟ್ಟಿದ ತಮಿಳುನಾಡು ರೈತ

Locust Attack Pakistan Declares National Emergency

ಮಿಡತೆ ಹಾವಳಿಯನ್ನು ನಿಯಂತ್ರಿಸಬೇಕು, ರೈತರ ಬೆಳೆಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಿಡತೆಗಳ ನಾಶಕ್ಕೆ 300 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಜಮ್ಮು-ಕಾಶ್ಮೀರದ ಗಡಿಯಲ್ಲಿ ಮತ್ತೊಮ್ಮೆ ಬಾಲ ಬಿಚ್ಚಿದ ಪಾಕಿಸ್ತಾನ ಜಮ್ಮು-ಕಾಶ್ಮೀರದ ಗಡಿಯಲ್ಲಿ ಮತ್ತೊಮ್ಮೆ ಬಾಲ ಬಿಚ್ಚಿದ ಪಾಕಿಸ್ತಾನ

2019ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಮರುಭೂಮಿ ಮಿಡತೆಗಳು ಕಾಣಿಸಿಕೊಂಡಿದ್ದವು. ಸಿಂಧ್, ಬಲೂಚಿಸ್ತಾನ್, ದಕ್ಷಿಣ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದವು.

ಕಟಾವಿಗೆ ಬಂದಿದ್ದ ಫಸಲು, ಮರಗಳ ಎಲೆಗಳನ್ನು ತಿಂದು ನಾಶ ಮಾಡಿದ್ದವು. ಈಗ ಪುನಃ ಮಿಡತೆಗಳ ಕಾಟ ಹೆಚ್ಚಾಗಿದ್ದು, ಅದನ್ನು ನಾಶ ಪಡಿಸಲು ಪಾಕಿಸ್ತಾನ ಸರ್ಕಾರ ಹರಸಾಹಸ ಪಡುತ್ತಿದೆ.

English summary
Pakistan government has declared a national emergency. Locusts are destroying crops on a large scale in Punjab. To control locust attack emergency declared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X