ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಔಷಧಿ ಸಿಗುವವರೆಗೂ ಲೌಕ್ ಡೌನ್ ಮುಗಿಯಲ್ಲ!

|
Google Oneindia Kannada News

ವುಹಾನ್, ಏಪ್ರಿಲ್.10: ಲಾಕ್ ಡೌನ್, ಲಾಕ್ ಡೌನ್, ಈ ಲಾಕ್ ಡೌನ್ ನಿಂದ ಯಾವಾಗಪ್ಪಾ ಮುಕ್ತಿ ಸಿಗುತ್ತೆ ಅಂತಾ ಜನರು ಕ್ಷಣಕ್ಷಣವೂ ಎದುರು ನೋಡುತ್ತಿದ್ದಾರೆ. ಇದು ಕೇವಲ ಭಾರತ ಮತ್ತು ಭಾರತೀಯರ ಕಥೆಯಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ವೈರಸ್ ನಿಂದ ಪ್ರಜೆಗಳನ್ನು ರಕ್ಷಿಸಲು ಲಾಕ್ ಡೌನ್ ತಂತ್ರವನ್ನು ಅನುಸರಿಸುತ್ತಿದೆ.

Recommended Video

ಮಳೆಯಲ್ಲಿ ನೆನೆದುಕೊಂಡೇ ಹಸಿದವರಿಗೆ ಆಹಾರ ನೀಡ್ತಿದ್ದಾರೆ ಶಾಸಕಿ ಸೌಮ್ಯ ರೆಡ್ಡಿ | Oneindia Kannada

ಮಾರಕ ಕೊರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜನರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ ತಂತ್ರವನ್ನು ಅಸ್ತ್ರವಾಗಿ ಹಲವು ರಾಷ್ಟ್ರಗಳು ಬಳಸಿಕೊಳ್ಳುತ್ತಿವೆ.

ನ್ಯೂಜಿಲೆಂಡ್: ಕೊರೊನಾದಿಂದ ಇದುವರೆಗೆ ಒಂದೇ ಒಂದು ಸಾವು ಹೇಗೆ?ನ್ಯೂಜಿಲೆಂಡ್: ಕೊರೊನಾದಿಂದ ಇದುವರೆಗೆ ಒಂದೇ ಒಂದು ಸಾವು ಹೇಗೆ?

ವಿಶ್ವದಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಗೆ ಲಸಿಕೆ ಅಥವಾ ಔಷಧಿಯನ್ನು ಪತ್ತೆ ಮಾಡುವವರೆಗೂ ಹಲವು ರಾಷ್ಟ್ರಗಳಲ್ಲಿ ಲಾಕ್ ಡೌನ್ ಮುಂದುವರಿಸಲಾಗುತ್ತದೆ ಎಂದು ಚೀನಾದ ಲ್ಯಾನ್ಸೆಟ್ ಎಂಬ ಮೆಡಿಕಲ್ ಜರ್ನಲ್ ನಲ್ಲಿ ವರದಿ ಪ್ರಕಟಿಸಲಾಗಿದೆ.

ಚೀನಾದ ವುಹಾನ್ ನಲ್ಲಿ 76 ದಿನಗಳ ಲಾಕ್ ಡೌನ್ ಅಂತ್ಯ

ಚೀನಾದ ವುಹಾನ್ ನಲ್ಲಿ 76 ದಿನಗಳ ಲಾಕ್ ಡೌನ್ ಅಂತ್ಯ

ಹುಬೈ ಪ್ರದೇಶದ ವುಹಾನ್ ನಗರದಲ್ಲೇ ಮೊದಲು ಕೊರೊನಾ ವೈರಸ್ ಮಹಾಮಾರಿಯ ಕಾಣಿಸಿಕೊಂಡಿತು. ಅಲ್ಲಿಂದ ವಿಶ್ವಕ್ಕೆ ಸೋಂಕು ವ್ಯಾಪಿಸುತ್ತಿದ್ದಂತೆ ವುಹಾನ್ ನಗರಕ್ಕೆ ನಗರವನ್ನೇ ಲಾಕ್ ಡೌನ್ ಮಾಡಲಾಯಿತು. ಅದಾಗಿ 76 ದಿನಗಳ ನಂತರ ಬುಧವಾರ ಲಾಕ್ ಡೌನ್ ತೆರವುಗೊಳಿಸಲಾಗಿತ್ತು. ಆದರೆ ದೇಶದ ರೈಲು ಮತ್ತು ಪ್ರವಾಸಿ ತಾಣಗಳಲ್ಲಿ ಲಾಕ್ ಡೌನ್ ಮುಂದುವರಿಸಲಾಗಿದೆ.

ಲಾಕ್ ಡೌನ್ ಕ್ರಮದಿಂದ ಕೊರೊನಾ ವೈರಸ್ ಗೆ ಕಡಿವಾಣ

ಲಾಕ್ ಡೌನ್ ಕ್ರಮದಿಂದ ಕೊರೊನಾ ವೈರಸ್ ಗೆ ಕಡಿವಾಣ

ಪ್ರಾಥಮಿಕ ಹಂತದಲ್ಲಿ ಇರುವಾಗಲೇ ಚೀನಾದ ವುಹಾನ್ ವನ್ನು ಲಾಕ್ ಡೌನ್ ಮಾಡಿದ್ದರಿಂದ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ಒಂದು ಹಂತದವರೆಗೂ ನಿಯಂತ್ರಿಸಲು ಸಾಧ್ಯವಾಯಿತು. ಇದೀಗ ನಗರದಲ್ಲಿ ಎಂದಿನಂತೆ ಕಾರ್ಖಾನೆ, ಶಾಲಾ-ಕಾಲೇಜು ಆರಂಭವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಸಮೀಕ್ಷೆಯ ನೇತೃತ್ವ ವಹಿಸಿದ್ದ ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಜೋಸೆಫ್ ವೂ ತಿಳಿಸಿದ್ದಾರೆ.

ಕೊರೊನಾ ಚಿಂತೆ ಬಿಡಿ ವಿಟಮಿನ್ ಡಿ ವೃದ್ಧಿಸಿ; ಇದು ಹೃದಯದ ವಿಷಯಕೊರೊನಾ ಚಿಂತೆ ಬಿಡಿ ವಿಟಮಿನ್ ಡಿ ವೃದ್ಧಿಸಿ; ಇದು ಹೃದಯದ ವಿಷಯ

ಕೊವಿಡ್19 ಹರಡುವಿಕೆ ಮೇದೆ ಸರ್ಕಾರದ ನಿಗಾ

ಕೊವಿಡ್19 ಹರಡುವಿಕೆ ಮೇದೆ ಸರ್ಕಾರದ ನಿಗಾ

ಮಾರಕ ಕೊರೊನಾ ವೈರಸ್ ಸೋಂಕು ಕ್ಷಿಪ್ರಗತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಇದರ ಸೂಕ್ಷ್ಮತೆಯನ್ನು ಸರ್ಕಾರವು ಹತ್ತಿರದಿಂದ ಅರಿತುಕೊಂಡಿತು. ನಂತರ ಸೋಂಕು ಹರಡದಂತೆ ಜನರಿಗೆ ಕಲವು ನಿರ್ಬಂಧಗಳನ್ನು ವಿಧಿಸುವುದರ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಚುರುಕುಗೊಳಿಸಲಾಯಿತು.

ಕೊರೊನಾ ವೈರಸ್ ಗೆ ಮದ್ದು ಸಿಕ್ಕಾಗಲೇ ಲಾಕ್ ಡೌನ್ ತೆರವು

ಕೊರೊನಾ ವೈರಸ್ ಗೆ ಮದ್ದು ಸಿಕ್ಕಾಗಲೇ ಲಾಕ್ ಡೌನ್ ತೆರವು

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ವುಹಾನ್ ನಗರದಲ್ಲಿನ ಲೌಕ್ ಡೌನ್ ತೆರವುಗೊಳಿಸಲಾಗಿದೆ. ಇದರ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರವು ಮೊದಲೇ ಘೋಷಿಸಿದ್ದ ನಿರ್ಬಂಧಗಳನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ದೈಹಿಕ ಅಂತರ, ಸಾಮಾಜಿಕ ವರ್ತನೆಯಲ್ಲಿ ಜನರು ಸರ್ಕಾರಗಳ ನಿಯಮಗಳನ್ನು ಇನ್ನೂ ಕೆಲವು ದಿನಗಳ ಕಾಲ ಪಾಲಿಸಲೇಬೇಕು. ಕನಿಷ್ಠ ಕೊರೊನಾ ವೈರಸ್ ಗೆ ಪರಿಣಾಮಕಾರಿಯಾದಔಷಧಿ ಸಿಗುವವರೆಗೂ ಈ ನಿಯಮಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲಾಕ್ ಡೌನ್ ತೆರವಿನ ಬಗ್ಗೆ ಪ್ರಧಾನಿ ಮನಸ್ಸಲ್ಲಿ ಏನಿದೆ? ರಾಜ್ಯಗಳ ನಿಲುವೇನು?

ದೇಶದ ಆರ್ಥಕತೆ ಮೇಲೆ ಲೌಕ್ ಡೌನ್ ಅವಧಿ ತೀರ್ಮಾನ

ದೇಶದ ಆರ್ಥಕತೆ ಮೇಲೆ ಲೌಕ್ ಡೌನ್ ಅವಧಿ ತೀರ್ಮಾನ

ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಲಾಕ್ ಡೌನ್ ಘೋಷಿಸಿದ್ದು ಆಗಿದೆ. ಪರಿಣಾಮಕಾರಿ ಔಷಧಿ ಸಿಗುವವರೆಗೂ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೋ ಎಂಬುದು ಆಯಾ ರಾಷ್ಟ್ರಗಳ ಆರ್ಥಕತೆ ಮತ್ತು ಕಾರ್ಖಾನೆಗಳ ಪುನರುತ್ಥಾನದ ಸಾಮರ್ಥ್ಯದ ಮೇಲೆ ತೀರ್ಮಾನವಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಲಾಕ್ ಡಾನ್ ತೀರ್ಮಾನ ಸಡಿಲ

ಆಸ್ಟ್ರೇಲಿಯಾದಲ್ಲಿ ಲಾಕ್ ಡಾನ್ ತೀರ್ಮಾನ ಸಡಿಲ

ಕೊರೊನಾ ವೈರಸ್ ಹಾವಳಿ ನಡುವೆಯೂ ಆಸ್ಟ್ರೇಲಿಯಾದಲ್ಲಿ ಲಾಕ್ ಡೌನ್ ತೀರ್ಮಾನವನ್ನು ಸಡಿಲಿಸಲಾಗಿದೆ. ದೇಶದ ಪೂರ್ವ ಭಾಗದಲ್ಲಿರುವ ಕೆಲವು ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಜರ್ಮನಿಯ ಕೆಲವು ಆರ್ಥಿಕ ತಜ್ಞರು ಮತ್ತು ವಕೀಲರು ಆರ್ಥಕತೆಗೆ ಎದುರಾಗುವ ಹೊಡೆತವನ್ನು ಎದುರಿಸಲು ಕೆಲವು ಕಾರ್ಖಾನೆಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಶಿಫಾರುಸ್ಸು ಮಾಡಿದ್ದಾರೆ.

ಕೊರೊನಾ ವೈರಸ್ ಗೆ 2021ರವರೆಗೂ ಮದ್ದು ಸಿಗಲ್ಲ

ಕೊರೊನಾ ವೈರಸ್ ಗೆ 2021ರವರೆಗೂ ಮದ್ದು ಸಿಗಲ್ಲ

ಇನ್ಸ್ ಟಿಟ್ಯೂಟ್ ಆಫ್ ಎಕನಾಮಿಕ್ ರಿಸರ್ಜ್ ವರದಿಯಲ್ಲಿ ಕೆಲವು ಶಿಕ್ಷಣ ತಜ್ಞರು ಕೊರೊನಾ ವೈರಸ್ ಸೋಂಕಿನ ಲಸಿಕೆ ಬಗ್ಗೆ ವರದಿಯಲ್ಲಿ ಬರೆದುಕೊಂಡಿದ್ದಾರೆ. 2021ರವರೆಗೂ ಕೊವಿಡ್19ಗೆ ಪರಿಣಾಮಕಾರಿ ಔಷಧಿ ಅಥವಾ ಲಸಿಕೆಯನ್ನು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ.

3 ವಾರಗಳ ಕಾಲ ಇಂಗ್ಲೆಂಡ್ ಕಂಪ್ಲೀಟ್ ಲಾಕ್ ಡೌನ್

3 ವಾರಗಳ ಕಾಲ ಇಂಗ್ಲೆಂಡ್ ಕಂಪ್ಲೀಟ್ ಲಾಕ್ ಡೌನ್

ಕೊರೊನಾ ವೈರಸ್ ಹಾವಳಿಗೆ ಇಂಗ್ಲೆಂಡ್ ಕೂಡಾ ನಲುಗಿ ಹೋಗಿದ್ದು ದೇಶಾದ್ಯಂತ ಮೂರು ವಾರಗಳಿಂದ ಲಾಕ್ ಡೌನ್ ಮಾಡಲಾಗಿದೆ. ಜನ ಜೀವನ ಮತ್ತು ಪರಿಸ್ಥಿತಿ ಮೇಲೆ ಸರ್ಕಾರವು ನಿಗಾ ವಹಿಸಿದ್ದು, ಪೀಕ್ ಅವರ್ ನ್ನು ಹೊರತುಪಡಿಸಿದ್ದಲ್ಲಿ ಉಳಿದ ಸಮಯದಲ್ಲಿ ಜನರನ್ನು ನಿಯಂತ್ರಿಸುವುದು ಅಷ್ಟೇನೂ ಕಷ್ಟವಲ್ಲ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ತಿಳಿಸಿದ್ದಾರೆ. ದೇಶದಲ್ಲಿ 40 ಲಕ್ಷ 20 ಸಾವಿರ ಮಂದಿ 20 ರಿಂದ 30 ವರ್ಷದೊಳಗಿನವರು ಇದ್ದಾರೆ. ಈ ಪೈಕಿ ತಂದೆ-ತಾಯಿ ಜೊತೆಗೆ ವಾಸವಿರದ ಯುವಕರು ಎಂದಿನಂತೆ ತಮ್ಮ ಕೆಲಸಗಳಿಗೆ ಹಾಜರಾಗುವಂತೆ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ. ಇದರಿಂದ ದೇಶದ ಆರ್ಥಿಕತೆಗೆ ಎದುರಾಗುವ ಕಂಟಕದಿಂದ ಕೊಂಚ ಮಟ್ಟಿಗೆ ಪಾರಾಗಬಹುದು ಎಂದು ವಾರ್ ವಿಕ್ ಯೂನಿವರ್ಸಿಟಿಯ ಆಂಡ್ರೋ ಓಸ್ವಾದ್ ಅಭಿಪ್ರಾಯ ಪಟ್ಟಿದ್ದಾರೆ.

ಆರ್ಥಕತೆ ಮತ್ತು ಸಾಂಕ್ರಾಮಿಕ ರೋಗದ ಎರಡು ಬಗ್ಗಲು

ಆರ್ಥಕತೆ ಮತ್ತು ಸಾಂಕ್ರಾಮಿಕ ರೋಗದ ಎರಡು ಬಗ್ಗಲು

ಪ್ರಪಂಚದ ಬಹುತೇಕ ರಾಷ್ಟ್ರಗಳು ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗ ಮತ್ತು ದೇಶದ ಆರ್ಥಿಕತೆ ಎಂಬ ಎರಡು ಬಗ್ಗಲಿನಲ್ಲಿ ಯೋಚಿಸುತ್ತಿವೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸವಾಲು ಆಡಳಿತ ವರ್ಗ, ರಾಜಕಾರಣಗಿಳು ಮತ್ತು ಸಾರ್ವಜನಿಕರ ಮುಂದಿದೆ. ಒಂದನ್ನು ಆಯ್ದುಕೊಂಡಲ್ಲಿ ಮತ್ತೊಂದು ಬಗ್ಗಲಿಗೆ ಹೊಡೆತ ಬೀಳುವ ಅಪಾಯವಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಆಲೋಚಿಸಬೇಕಿದೆ.

ವುಹಾನ್ ನಲ್ಲಿಯೇ ಅತಿಹೆಚ್ಚು ಮಂದಿ ಕೊರೊನಾಗೆ ಬಲಿ

ವುಹಾನ್ ನಲ್ಲಿಯೇ ಅತಿಹೆಚ್ಚು ಮಂದಿ ಕೊರೊನಾಗೆ ಬಲಿ

ಕೊರೊನಾ ವೈರಸ್ ಮಹಾಮಾರಿಯಿಂದ ಚೀನಾದ ವುಹಾನ್ ನಗರದಲ್ಲಿ ಅತಿಹೆಚ್ಚು ಎಂದರೆ ಶೇ.5.91ರಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ದೇಶದ ಆರೋಗ್ಯ ಇಲಾಖೆ ನೀಡಿದ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ. ಇದು ಚೀನಾದ ಬೇರೆ ನಗರಗಳಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೀಜಿಂಗ್ ಮತ್ತು ಶಾಂಘೈ ನಗರಗಳಲ್ಲಿ ಸೀಮಿತವಾಗಿದ್ದ ವೈದ್ಯಕೀಯ ಸರಕುಗಳಿಗೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಯಿತು ಎಂದು ಹಿರಿಯ ಬರಹಗಾರ ಮತ್ತು ಪ್ರೊಫೆಸರ್ ಗಾಬ್ರಿಯಲ್ ಲಿಯಾಂಗ್ ತಿಳಿಸಿದ್ದಾರೆ.

ಕಟ್ಟುನಿಟ್ಟಿನ ನಿರ್ಬಂಧವನ್ನು ಜಾರಿಗೊಳಿಸಿದ್ದ ಚೀನಾ

ಕಟ್ಟುನಿಟ್ಟಿನ ನಿರ್ಬಂಧವನ್ನು ಜಾರಿಗೊಳಿಸಿದ್ದ ಚೀನಾ

ಚೀನಾದಲ್ಲಿ ಡಿಸೆಂಬರ್ ನಲ್ಲಿ ಕಾಣಿಸಿಕೊಂಡು ಮಾರಕ ಕೊರೊನಾ ವೈರಸ್ ಸೋಂಕು ಕ್ಷಿಪ್ರಗತಿಯಲ್ಲಿ ಇಡೀ ದೇಶವನ್ನು ವ್ಯಾಪಿಸ ತೊಡಗಿತು. ಇದರ ಗಾಂಭೀರ್ಯತೆ ಅರಿತ ಚೀನಾ ವುಹಾನ್ ನಗರದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿತು. ಜನವರಿ.23ರಂದು ವುಹಾನ್ ನಗರದಲ್ಲಿ ಜನರ ಸಂಪರ್ಕ ಸಾರಿಗೆ ಮತ್ತು ಸರಕು ಸೇವೆಗಳನ್ನೆಲ್ಲ ಬಂದ್ ಮಾಡಲಾಯಿತು.

ಚೀನಾದಲ್ಲಿ ಲಾಕ್ ಡೌನ್ ತೆರವಿನಿಂದ ಮತ್ತೊಂದು ಅಪಾಯ

ಚೀನಾದಲ್ಲಿ ಲಾಕ್ ಡೌನ್ ತೆರವಿನಿಂದ ಮತ್ತೊಂದು ಅಪಾಯ

ಕೊರೊನಾ ವೈರಸ್ ಜನ್ಮಸ್ಥಾನವಾಗಿರುವ ವುಹಾನ್ ನಗರದಲ್ಲಿ 76 ದಿನಗಳ ನಂತರ ಲಾಕ್ ಡೌನ್ ತೆರವುಗೊಳಿಸಲಾಗಿದೆ. ಇದರಿಂದ ಸಾರ್ವಜನಿಕ ಸಾರಿಗೆ ಹಾಗೂ ಚಲನವಲನ ಯಥಾಸ್ಥಿತಿಗೆ ಮರಳಿದೆ. ಇದರ ಮಧ್ಯೆ ಆಮದು ರಫ್ತು ಪ್ರಕ್ರಿಯೆಗಳು ನಡೆದಿದ್ದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯು ಮತ್ತೊಮ್ಮೆ ಚೀನಾದಿಂದಲೇ ಪ್ರಪಂಚಕ್ಕೆ ಅಪ್ಪಳಿಸುತ್ತದೆಯಾ ಎಂಬ ಆತಂಕವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

English summary
Lockdown Lifted After Coronavirus Vaccine Found: Study Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X