• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಗಲ್ಲುಶಿಕ್ಷೆ ಅಮಾನತು

|

ಹೇಗ್, ಜುಲೈ 17: ಪಾಕಿಸ್ತಾನದಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ನಡೆಸಿದ ಆರೋಪದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣದ ಕುರಿತು ನೆದರ್‌ಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

ಇಂದು (ಜುಲೈ 17) ಸಂಜೆ 6.30ರ ವೇಳೆಗೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಇದರಿಂದ ಕುಲಭೂಷಣ್ ಜಾಧವ್ ಅವರ ಬಂಧನ, ವಿಚಾರಣೆ, ಶಿಕ್ಷೆಗೆ ಸಂಬಂಧಿಸಿದಂತೆ ಸುಮಾರು ಮೂರು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ನಡೆಯುತ್ತಿರುವ ಸಂಘರ್ಷ ಅಂತ್ಯ ಕಾಣುವ ನಿರೀಕ್ಷೆಯಿದೆ. ಆದರೆ, ತೀರ್ಪಿನ ಪರಿಣಾಮದಿಂದ ಈ ಎರಡೂ ದೇಶಗಳ ನಡುವೆ ಇರುವ ರಾಜಕೀಯ ತಿಕ್ಕಾಟ ಹೆಚ್ಚಾಗುವ ಸಂಭವವನ್ನೂ ಅಲ್ಲಗಳೆಯುವಂತಿಲ್ಲ.

ಪಾಕ್‌ನಲ್ಲಿರುವ ಜಾಧವ್‌ಗೆ ಗಲ್ಲುಶಿಕ್ಷೆಯೇ? ಬಿಡುಗಡೆಯೇ?: ಬುಧವಾರ ನಿರ್ಧಾರ

2016ರ ಮಾರ್ಚ್ 3ರಂದು ಪಾಕಿಸ್ತಾನದಲ್ಲಿ ಬಂಧಿತರಾದ ಕುಲಭೂಷಣ್ ಜಾಧವ್ ಅವರನ್ನು ಭಾರತದ ಬೇಹುಗಾರಿಕಾ ಸಂಸ್ಥೆ 'ರಾ'ದ ಏಜೆಂಟ್ ಎಂದು ಆರೋಪಿಸಲಾಗಿದೆ. ಕುಲಭೂಷಣ್ ಜಾಧವ್ ಅವರು ತಮ್ಮ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದೂ ಪಾಕ್ ಹೇಳಿದೆ. ಜತೆಗೆ ಅವರಿಗೆ ಅಲ್ಲಿನ ಮಿಲಿಟರಿ ನ್ಯಾಯಾಲಯ ಗಲ್ಲುಶಿಕ್ಷೆ ವಿದಿಸಿತ್ತು. ಇದಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾದ ಭಾರತ, ಜಾಧವ್ ಪರ ಪ್ರಬಲ ವಾದ ಮಂಡನೆ ನಡೆಸಿತ್ತು.

live updates kulbhushan jadhav india pakistan international court verdict

ಜಾಧವ್ ಅವರು ಗಲ್ಲುಶಿಕ್ಷೆಯಿಂದ ಪಾರಾಗಲಿದ್ದಾರೆಯೇ? ಅಥವಾ ಅವರ ಶಿಕ್ಷೆ ಕಾಯಂ ಆಗಲಿದ್ದಾರೆಯೇ? ಗಲ್ಲು ಶಿಕ್ಷೆಯಿಮದ ಪಾರಾದರೂ ಬಿಡುಗಡೆಯ ಭಾಗ್ಯ ಪಡೆದುಕೊಳ್ಳುತ್ತಾರೆಯೇ? ಎಂಬ ಕುತೂಹಲದ ಪ್ರಶ್ನೆಗಳು ಮೂಡಿವೆ.

Newest First Oldest First
7:23 PM, 17 Jul
ತೀರ್ಪು ಹೊರಬಿದ್ದ ಬಳಿಕ ಮುಂಬೈನಲ್ಲಿ ಕುಲಭೂಷಣ್ ಜಾಧವ್ ಅವರ ಸ್ನೇಹಿತರು ಸಿಹಿ ಹಂಚಿ ಸಂಭ್ರಮಿಸಿದರು.
7:21 PM, 17 Jul
ಅನುಮಾನವೇ ಇಲ್ಲ. ಇದು ಭಾರತಕ್ಕೆ ಬಹುದೊಡ್ಡ ಜಯ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ.
7:12 PM, 17 Jul
ಕುಲಭೂಷಣ್ ಸುಧೀರ್ ಜಾಧವ್ ಅವರ ಶಿಕ್ಷೆ ಮತ್ತು ಮರಣದಂಡನೆಯನ್ನು ಪರಿಣಾಮಕಾರಿಯಾಗಿ ಮರುಪರಿಗಣಿಸಲು ಹಾಗೂ ಮರುಪರಿಶೀಲಿಸಲು ಶಿಕ್ಷೆ ಜಾರಿ ಮೇಲಿನ ತಡೆಯನ್ನು ಮುಂದುವರಿಸುವುದು ಅಗತ್ಯವಾಗಿದೆ ಎಂದ ಅಂತಾರಾಷ್ಟ್ರೀಯ ನ್ಯಾಯಾಲಯ.
7:09 PM, 17 Jul
ಬೇಹುಗಾರಿಕೆಯ ಪ್ರಕರಣಗಳಲ್ಲಿ ವಿಯೆನ್ನಾ ಒಪ್ಪಂದದ ಆರ್ಟಿಕಲ್ 36 ಅನ್ವಯವಾಗುವುದಿಲ್ಲ ಎಂದು ವಾದಿಸಿದ ಪಾಕಿಸ್ತಾನ. 2008ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಾಡಿಕೊಂಡ ಒಪ್ಪಂದ ಈ ಪ್ರಕರಣದಲ್ಲಿ ಮುಖ್ಯವಾಗುತ್ತದೆ ಎಂದು ವಾದ.
7:00 PM, 17 Jul
ಪದಗಳಲ್ಲಿ ಹೇಳುವುದಾದರೆ ಐಸಿಜೆ ನಿಜವಾದ 'ನ್ಯಾಯ' ಪ್ರಕಟಿಸಿದೆ. ಮಾನವ ಹಕ್ಕನ್ನು, ಸೂಕ್ತ ವಿಚಾರಣೆಯನ್ನು ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿದಿದೆ ಎಂದು ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.
6:55 PM, 17 Jul
ಜಾಧವ್ ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಸಂಪರ್ಕಿಸಲು ಭಾರತದ ಹಕ್ಕನ್ನು ಪಾಕಿಸ್ತಾನ ತಪ್ಪಿಸಿರುವುದು ಕಂಡುಬಂದಿದೆ. ಅಲ್ಲದೆ, ಬಂಧನದಲ್ಲಿರುವ ಅವರನ್ನು ಭೇಟಿಯಾಗಿ ಅವರ ಕಾನೂನು ಪರ ಹೋರಾಟಕ್ಕೆ ವ್ಯವಸ್ಥೆ ಮಾಡಲು ಅಡ್ಡಿಪಡಿಸಿದೆ ಎಂದ ನ್ಯಾಯಾಲಯ.
6:52 PM, 17 Jul
ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಭಾರತಕ್ಕೆ ಇದು ದಿಗ್ವಿಜಯ ಎಂದು ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
6:50 PM, 17 Jul
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ 16 ನ್ಯಾಯಾಧೀಶರ ಪೈಕಿ ಭಾರತದ ಪರ 15 ನ್ಯಾಯಾಧೀಶರು ಮತ ಚಲಾಯಿಸಿದರೆ, ಭಾರತದ ವಿರುದ್ಧ ಒಬ್ಬ ನ್ಯಾಯಾಧೀಶರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
6:48 PM, 17 Jul
ಅರ್ಹತೆ ಆಧಾರದಲ್ಲಿ ಐಸಿಜೆ ಭಾರತದ ಪರವಾಗಿ ತೀರ್ಪು ನೀಡಿದೆ. ಜಾಧವ್ ಅವರಿಗೆ ರಾಜತಾಂತ್ರಿಕ ಭೇಟಿ ಮತ್ತು ಸೂಚನೆಯ ಹಕ್ಕನ್ನು ಅದು ಎತ್ತಿಹಿಡಿದಿದೆ ಎಂದು ದಕ್ಷಿಣ ಏಷ್ಯಾದ ಅಂತಾರಾಷ್ಟ್ರೀಯ ಕಾನೂನು ಸಲಹೆಗಾರ್ತಿ ರೀಮಾ ಒಮರ್ ಟ್ವೀಟ್ ಮಾಡಿದ್ದಾರೆ.
6:43 PM, 17 Jul
ಪಾಕಿಸ್ತಾನವು ಕಾನ್ಸುಲರ್ ಭೇಟಿ ನಿರಾಕರಿಸುವ ಮೂಲಕ ಆರ್ಟಿಕಲ್ 36 (i)ಅನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಜಾಧವ್ ಅವರ ಗಲ್ಲುಶಿಕ್ಷೆಯ ತೀರ್ಪನ್ನು ಪರಿಣಾಮಕಾರಿಯಾಗಿ ಮರುಪರಿಶೀಲನೆ ಮತ್ತು ಮರುಪರಿಗಣನೆಗೆ ಒಳಪಡಿಸಬೇಕು ಎಂದು ಹೇಳಿದೆ.
6:40 PM, 17 Jul
ಜಾಧವ್ ಅವರಿಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕು, ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸಬೇಕು ಎಂಬುದು ಸೇರಿದಂತೆ ಭಾರತದ ಬಹುತೇಕ ಬೇಡಿಕೆಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
6:35 PM, 17 Jul
ಪಾಕಿಸ್ತಾನವು ವಿಯೆನ್ನಾ ಒಪ್ಪಂದ ಉಲ್ಲಂಘನೆ ಮಾಡಿದೆ ಎಂದು ಹೇಳಿದ ಐಸಿಜೆ
6:33 PM, 17 Jul
ಪಾಕಿಸ್ತಾನ ವಿಧಿಸಿರುವ ಶಿಕ್ಷೆಯನ್ನು ಮರುಪರಿಶೀಲಿಸಲು ಆದೇಶಿಸಿದ ಐಸಿಜೆ. ಪ್ರಕರಣ ಮರುಪರಿಶೀಲಿಸಲು ಸೂಚನೆ
6:30 PM, 17 Jul
ಜಾಧವ್‌ಗೆ ವಿಧಿಸಿರುವ ಗಲ್ಲುಶಿಕ್ಷೆ ತೀರ್ಪನ್ನು ಅಮಾನತು ಮಾಡಿದ ಅಂತಾರಾಷ್ಟ್ರೀಯ ನ್ಯಾಯಾಲಯ. ಜಾಧವ್ ಅವರನ್ನು ಭೇಟಿ ಮಾಡಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ನೀಡಲು ಆದೇಶ
6:25 PM, 17 Jul
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳು
6:22 PM, 17 Jul
'ಜಾಧವ್ ಭಾರತಕ್ಕೆ ಶೀಘ್ರವೇ ಮರಳಲಿದ್ದಾರೆ ಎಂಬ ಭರವಸೆ ಇದೆ. ಐಸಿಜೆಯಲ್ಲಿ ನಮ್ಮ ದೇಶ ತುಂಬಾ ಚೆನ್ನಾಗಿ ವಾಸ್ತವಗಳನ್ನು ಮುಂದಿಟ್ಟು ವಾದ ಮಂಡಿಸಿದ್ದು ಖುಷಿ ನೀಡಿದೆ. ವಕೀಲ ಹರೀಶ್ ಸಾಳ್ವೆ ಅವರು ಅದ್ಭುತ ಕೆಲಸ ಮಾಡಿದ್ದಾರೆ' ಜಾಧವ್ ಅವರ ಸ್ನೇಹಿತರ ಹೇಳಿಕೆ.
6:16 PM, 17 Jul
ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಆಗಮಿಸಿದ ಭಾರತದ ರಾಯಭಾರ ಅಧಿಕಾರಿಗಳ ತಂಡ
5:37 PM, 17 Jul
ಐಸಿಜೆ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಬಹುದು ಎಂದು ಭಾರತ ಭರವಸೆ ಹೊಂದಿದೆ. ಆದರೆ, ಅದ ಬಳಿಕ ಜಾಧವ್ ಅವರು ಭಾರತಕ್ಕೆ ಮರಳಲಿದ್ದಾರೆಯೇ? ಗಲ್ಲುಶಿಕ್ಷೆ ರದ್ದಾದರೆ ಪಾಕಿಸ್ತಾನವು ಅವರನ್ನು ಬಂಧಮುಕ್ತಗೊಳಿಸಲಿದೆಯೇ? ಅದಕ್ಕೆ ಇನ್ನೂ ಸಮಯ ತಗುಲಬಹುದು.
5:34 PM, 17 Jul
ಕುಲಭೂಷಣ್ ಜಾಧವ್ ಅವರು ಪಾಕಿಸ್ತಾನದಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳುವಂತಾಗಲಿ.
5:13 PM, 17 Jul
ಜಾಧವ್ ಅವರು ಗೂಢಚಾರಿ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿಹಾಕಿದೆ. ಜಾಧವ್ ಅವರ ಬಂಧನದ ಬಗ್ಗೆ ತನಗೆ ಮಾಹಿತಿಯನ್ನೇ ನೀಡಿರಲಿಲ್ಲ. ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಏಕಪಕ್ಷೀಯವಾಗಿ ಅವರನ್ನು ಅಪರಾಧಿ ಎಂದು ತೀರ್ಮಾನಿಸಲಾಗಿದೆ ಎಂದು ಭಾರತ ಆರೋಪಿಸಿದೆ.
4:55 PM, 17 Jul
ಐಸಿಜೆ ಅಧ್ಯಕ್ಷ ಅಬ್ದುಲ್ ಖಾವಿ ಅಹ್ಮದ್ ಯೂಸುಫ್ ಅವರು ನ್ಯಾಯಾಲಯದ ತೀರ್ಪನ್ನು ಓದಲಿದ್ದಾರೆ.
4:38 PM, 17 Jul
ಕುಲಭೂಷಣ್ ಜಾಧವ್ ಅವರ ಬಿಡುಗಡೆಯಾಗುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಿರುವ ಜನರು.
4:34 PM, 17 Jul
ವಿದೇಶಿ ಪ್ರಜೆಗಳನ್ನು ಅಪಹರಿಸುವುದರಲ್ಲಿ ಪರಿಣತರಾದ ಲಷ್ಕರ್ ಇ ಖೊರಸಾನ್, ಜಾಧವ್ ಅವರನ್ನು ಜಮರಾನ್‌ನ ರಹಸ್ಯ ಸ್ಥಳದಲ್ಲಿ ಮೂರು ವಾರ ಇರಿಸಿದ್ದರು. ಬಳಿಕ ಐಎಸ್‌ಐ ಜತೆ ಡೀಲ್ ನಡೆಸಿ ಅವರಿಗೆ ಮಾರಾಟ ಮಾಡಿದ್ದರು ಎಂದು ಮೆಹರಮ್ ಸರ್ಜೋವ್ ಹೇಳಿದ್ದಾರೆ.
4:32 PM, 17 Jul
ಜಾಧವ್ ಅವರು ತಾವಾಗಿಯೇ ಪಾಕಿಸ್ತಾನಕ್ಕೆ ಬಂದಿರಲಿಲ್ಲ ಎಂದು ಪ್ರತ್ಯೇಕ ಬಲೂಚಿಸ್ತಾನ ಹೋರಾಟಗಾರ ಮೆಹರಮ್ ಸರ್ಜೋವ್ ಹೇಳಿದ್ದರು. ವ್ಯವಹಾರಕ್ಕಾಗಿ ತಮ್ಮನ್ನು ಸಂಪರ್ಕಿಸಿದ್ದ ವ್ಯಕ್ತಿಗಳಿಗಾಗಿ ಅವರು ಇರಾನ್‌ನ ಸರವಣ್ ಎಂಬಲ್ಲಿಗೆ ಬಾಡಿಗೆ ಕಾರ್‌ನಲ್ಲಿ ತೆರಳಿದ್ದರು. ಅಲ್ಲಿ ಅವರನ್ನು ಬಂಧಿಸಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು ಎಂದಿದ್ದಾರೆ.
4:14 PM, 17 Jul
ಎರಡೂ ದೇಶಗಳು ಈ ತೀರ್ಪಿಗೆ ಬದ್ಧರಾಗಿರುತ್ತಾರೆಯೇ ಎಂಬ ಕುತೂಹಲ ಉಂಟಾಗಿದೆ. ವಿಶ್ವಸಂಸ್ಥೆಯ ನಿಯಮಾವಳಿಯಲ್ಲಿನ ಆರ್ಟಿಕಲ್ 94ರ ಪ್ರಕಾರ ವಿಶ್ವಸಂಸ್ಥೆಯ ಎಲ್ಲ ಸದಸ್ಯ ದೇಶಗಳೂ ಐಸಿಜೆಯ ತೀರ್ಪಿಗೆ ಬದ್ಧರಾಗಿರಬೇಕು. ಈ ಪ್ರಕರಣದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಅದಕ್ಕೆ ಒಪ್ಪಿಕೊಂಡು ಸಹಿ ಹಾಕಿವೆ.
4:13 PM, 17 Jul
ನೆದರ್‌ಲೆಂಡ್‌ನ ದಿ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ್ ಜಾಧವ್ ಅವರ ಪ್ರಕರಣದ ಕುರಿತ ತೀರ್ಪನ್ನು ಇಂದು ಸಂಜೆ 6.30ಕ್ಕೆ ಪ್ರಕಟಿಸಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kulbhushan Jadhav case verdict live updates in Kannada: International Court of Justice will pronounce its verdict on Indian former Navy officer Kulbhushan Jadhav who is facing a death sentence in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more