ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್ 1: ನಿಕೋ- ಲೂಯಿಸ್ ಸ್ನೇಹಿತರಾಗಿ ಉಳಿದಿಲ್ಲ

By * ಚಿನ್ನಯ್ಯ ಮಠ
|
Google Oneindia Kannada News

ಬೆಂಗಳೂರು, ಮೇ.27: ಮೊನಾಕೋ ಎಫ್ 1 ರೇಸ್ ನಲ್ಲಿ ಮೆರ್ಸಿಡೀಸ್ ತಂಡದ ನಿಕೋ ಗೆದ್ದು ಈ ಸಾಲಿನ ಚಾಲಕರ ಅಂಕಗಳ ಪಟ್ಟಿಯಲ್ಲಿ ಮತ್ತೇ ಮೊದಲಿಗರಾದರು. ರೇಸ್ ನ ಉದ್ದಕ್ಕೂ ಮೆರ್ಸಿಡೀಸ್ ತಂಡದ ಇನ್ನೊಬ್ಬ ಚಾಲಕ ಲೂಯಿಸ್ ಎರಡನೇ ಸ್ಥಾನವನ್ನು ಕಾಯ್ದು ಕೊಂಡು ಬಂದರು. ಇಬ್ಬರ ನಡುವಿನ ವೈಮನಸ್ಯ ಈ ರೇಸಿನ ನಂತರ ಜಗಜ್ಜಾಹೀರಾಯಿತು.

ಮೊನಾಕೋ ರೇಸಿನಲ್ಲಿ ಚಾಲಕರಿಗೆ ಮುಂದೆ ಇರುವ ಕಾರನ್ನು ಹಿಂದೆ ಹಾಕುವ ಅವಕಾಶಗಳ ಸಾಧ್ಯತೆ ತುಂಬಾ ಕಡಿಮೆ. ಇದು ಮೊನಾಕೋ ನಗರದ ರಸ್ತೆ ಮೇಲೆ ನಡೆಯುವ ರೇಸ್ ಆಗಿದ್ದು ಇಲ್ಲಿರುವ ರಸ್ತೆಗಳು ಕಿರಿದಾಗಿದಾಗಿವೆ. ಆದ್ದರಿಂದ ಇಲ್ಲಿ ಕ್ವಾಲಿಫಾಯ ತುಂಬಾ ಮಹತ್ವ ಪಡೆದು ಕೊಳ್ಳುತ್ತದೆ.

ಕ್ವಾಲಿಫಾಯ್ ತುಂಬಾ ಉದ್ವಿಗ್ನವಾಗಿತ್ತು. ನಿಕೋ ತಮ್ಮ ಕ್ವಾಲಿಫಾಯನ ಕೊನೆಯ ಸುತ್ತಿನಲ್ಲಿ ತಮ್ಮ ಕಾರಿನ ಸಮತೋಲನ ಕಳೆದುಕೊಂಡು ಕಾರನ್ನು ಹಾಗೆಯೇ ಮಧ್ಯದಲ್ಲಿ ನಿಲ್ಲಿಸಿದ್ದರಿಂದ ಬೇರೆ ಚಾಲಕರಿಗೆ ತಮ್ಮ ಕ್ವಾಲಿಫಾಯ್ ಸುತ್ತುಗಳನ್ನು ಪೂರ್ತಿ ಮಾಡಲಾಗಲಿಲ್ಲ. ಹೀಗೆ ಅವಕಾಶ ವಂಚಿತರಾದವರಲ್ಲಿ ಲುಯಿಸ್ ಕೂಡ ಒಬ್ಬರು.

ನಿಕೋ ಅವರು ಬಹುಶ ಇದು ಉದ್ದೇಶ ಪೂರ್ವಕವಾಗಿ ಮಾಡಿರಬಹುದು ಅಂತ ಮೇಲುನೋಟಕ್ಕೆ ಕಂಡು ಬಂದರೂ, ಆಮೇಲೆ ರೇಸ್ ಮೇಲ್ವಿಚಾರಕರ ತನಿಖೆಯ ನಂತರ ಅವರನ್ನು ಆರೋಪದಿಂದ ಮುಕ್ತ ಮಾಡಲಾಯಿತು. ಆದರೂ ಲುಯಿಸ್ ಮತ್ತು ಇತರೇ ಚಾಲಕರು ಇದು ಉದ್ದೇಶ ಪೂರ್ವ ನಡೆ ಎಂದು ತಮ್ಮ ಅಭಿಪ್ರಾಯ ಹೇಳಿದರು. ಈ ಘಟನೆಯಿಂದ ಮೆರ್ಸೆಡೆಸ್ ತಂಡದ ಚಾಲಕರ ನಡುವಿನ ಪ್ರತಿಸ್ಪರ್ಧೆ ತಾರಕಕ್ಕೆರಿದೆ. ಸ್ನೇಹಿತರಾಗಿದ್ದ ನಿಕೋ ಮತ್ತು ಲೂಯಿಸ್ ಇಂದು ಸ್ನೇಹಿತರಾಗಿ ಉಳಿದಿಲ್ಲ.

Lewis Hamilton denies being friends with Nico Rosberg as gloves come off at Mercedes

ಫೋರ್ಸ್ ಇಂಡಿಯಾ ತಂಡದ ಸ್ಥಿತಿ: ರೇಸ್ ನ ಮೊದಲ ಸುತ್ತಿನಲ್ಲೇ ಫೋರ್ಸ್ ಇಂಡಿಯಾದ ಪೆರೆಜ್ ಆದ ಆಕ್ಸಿಡೆಂಟ್ ನಿಂದ ರೇಸ್ ನಿಂದ ಹೊರಬಿದ್ದರು. ನಂತರ ಯಾವುದೇ ಹೇಳಿಕೊಳ್ಳುವ ಘಟನೆ ನಡೆಯಲಿಲ್ಲ. ಸುಟಿಲ್ ಕೂಡ ಆಕ್ಸಿಡೆಂಟ್ ನಿಂದ ಹೊರಬಿದ್ದರು. ಮೂರನೇ ಸ್ಥಾನವನ್ನು ರೆಡ್ ಬುಲ್ ನ ಡೇನಿಯಲ್ ಪಡೆದುಕೊಂಡರು ಮತ್ತು ವೆಟ್ಟೆಲ್ ಇಂಜಿನ್ ಸಮಸ್ಯೆನಿಂದ ರೇಸ್ ನಿಂದ ಹೊರಬಿದ್ದರು.

ಫೆರಾರಿಯ ಅಲಾನ್ಸೋ ನಾಲ್ಕನೆಯವರಾಗಿ ಹಾಗು ಫೋರ್ಸ್ ಇಂಡಿಯಾ ತಂಡದ ನಿಕೋ ಹಲ್ಕನ್ ಬರ್ಗ್ ಐದನೆಯವರಾಗಿ ರೇಸ್ ಮುಗಿಸಿದರು. ಜೆನ್ಸನ್, ಫಿಲೆಪೆ ಮತ್ತು ಗ್ರೋಜೆಸನ್ ಕ್ರಮವಾಗಿ ಆರು, ಏಳನೇ ಮತ್ತು ಎಂಟನೇ ಸ್ಥಾನಗಳಲ್ಲಿ ರೇಸ್ ಮುಗಿಸಿದರು. ಮರುಸಿಯಾ ತಂಡದ ಬಿಯಾಂಚಿ ಒಂಬತ್ತನೇ ಸ್ಥಾನದಲ್ಲಿ ರೇಸ್ ಮುಗಿಸಿದರು. ಇದು ಮರುಸಿಯಾ ತಂಡದ ಐದು ವರ್ಷಗಳಲ್ಲಿ ಮೊದಲನೇ ಬಾರಿ ಅಂಕಗಳನ್ನು ಪಡೆಯಿತು. ಹತ್ತನೆಯವರಾಗಿ ಕೆವಿನ ರೇಸ್ ಮುಗಿಸಿದರು.

ಮೊದಲ ಹತ್ತು ಫಲಿತಾಂಶಗಳು - 78 ಲ್ಯಾಪ್ಸ್ ನಂತರ :

1. ನಿಕೊ ರೋಸ್ಬರ್ಗ್
2. ಲೆವಿಸ್ ಹ್ಯಾಮಿಲ್ಟನ್
3. ಡೇನಿಯಲ್
4. ಫರ್ನಾಂಡೊ ಅಲೊನ್ಸೊ
5. ನಿಕೊ ಹುಲ್ಕನಬೆರ್ಗ
6. ಜೆನ್ಸನ್ ಬಟನ್
7. ಫೆಲಿಪ್ ಮಸ್ಸಾ
8. ರೊಮೈನ್
9. ಜೂಲ್ಸ್ ಬಿಯಾಂಚಿ
10. ಕೆವಿನ್

ಪ್ರಸಕ್ತ ಋತುವಿನ ಮೊದಲ ಐದು ಚಾಲಕರು ಹಾಗು ಅಂಕಗಳು
1ನಿಕೋ ರೋಸೆಬರ್ಗ - 122
2. ಲುಯಿಸ ಹ್ಯಾಮಿಲ್ಟನ್ - 118
3 ಫೆರ್ನಾಂಡೊ ಅಲನ್ಸೊ - 61
4 ಡೇನಿಯಲ್ ರಿಕ್ಯಾರ್ಡೊ - 54
5. ನಿಕೊ ಹುಲ್ಕನಬೆರ್ಗ - 47

ಪ್ರಸಕ್ತ ಋತುವಿನ ಮೊದಲ ಐದು ತಂಡಗಳು ಹಾಗು ಅಂಕಗಳು
1.ಮೆರ್ಸಿಡೀಸ್ - 240
2. ರೆಡ್ದಬುಲ್ - 99
3. ಫೆರಾರಿ - 78
4. ಫೋರ್ಸ್ ಇಂಡಿಯಾ - 67
5. ವಿಲಿಯಂಸ/ಮೆಕ್ಲರೆನ್ - 52

English summary
Lewis Hamilton denies being friends with Nico Rosberg as gloves come off at Mercedes.Rosberg retakes lead of championship with victory in Monte Carlo; Hamilton angered by Mercedes' pit strategy during Sunday's race
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X