ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪ್ಪೀನ್ಸ್‌ನಲ್ಲಿ ಸಂತ್ರಸ್ತರಿಗೆ ನಾವೆಲ್ಲರೂ ನೆರವಾಗುವಾ

By ಶ್ರೀವತ್ಸ ಜೋಶಿ
|
Google Oneindia Kannada News

ಭೀಕರ ಟೈಫೂನ್ 'ಹೈಯಾನ್' ಫಿಲಿಪ್ಪೀನ್ಸ್ ಕರಾವಳಿಯನ್ನು ಅಪ್ಪಳಿಸಿ ಅಪಾರ ಹಾನಿ ತಂದೊಡ್ದಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ, ಓದಿದ್ದೇವೆ. ಅಗಲೇ 10,000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆಂದು ಸುದ್ದಿಯಿದೆ. ಲಕ್ಷಾಂತರ ಜನ ಮನೆಮಠ ಕಳೆದುಕೊಂಡಿದ್ದಾರೆ.

ಈಗಷ್ಟೇ ಟಿವಿಯಲ್ಲಿ ನ್ಯೂಸ್ ನೋಡ್ತಾ ಇದ್ದೆ. ಮಗುವನ್ನು ಕಂಕುಳಲ್ಲಿಟ್ಟುಕೊಂಡ ಒಬ್ಬ ತಾಯಿಯನ್ನು ರಿಪೋರ್ಟರ್ ಪ್ರಶ್ನಿಸುತ್ತಿದ್ದ. ಆಕೆ ತನ್ನ ಆಸ್ತಿಪಾಸ್ತಿಯನ್ನಷ್ಟೇ ಅಲ್ಲ ಕುಟುಂಬದವರನ್ನೆಲ್ಲ ಕಳೆದುಕೊಂಡಿದ್ದಾಳಂತೆ. ಮಾತಾಡುತ್ತಿರುವಾಗಲೇ ಗಳಗಳನೆ ಅತ್ತಳು. ಅಮ್ಮ ಏಕೆ ಅಳುತ್ತಿದ್ದಾಳೆಂದು ಆ ಮಗು ದಿಗಿಲುಗೊಂಡ ದೃಶ್ಯ ನೋಡಿದಾಗಂತೂ ನನಗೆ ತುಂಬಾ ದುಃಖವಾಯಿತು.

ಅಂಥ ಹೃದಯವಿದ್ರಾವಕ ದೃಶ್ಯಗಳು ಅದೆಷ್ಟೋ. ಜತೆಯಲ್ಲೇ, ಪರಿಹಾರ ಸಾಮಗ್ರಿಗಳಿಗಾಗಿ ಪೈಪೋಟಿ, ದಂಗೆ ಲೂಟಿ ಸ್ವೇಚ್ಛಾಚಾರವೂ ನಡೀತಿದೆಯಂತೆ. ಅಲ್ಲಿ ಪರಿಸ್ಥಿತಿ ಕರಾಳ ಇದೆ. ಫಿಲಿಪ್ಫಿನ್ಸ್ ಏನೂ ಶ್ರೀಮಂತ ದೇಶವಲ್ಲ. ಅವರಿಗೀಗ ನೆರವು ಬೇಕು. ಎಲ್ಲಬಗೆಯ ನೆರವೂ ಬೇಕು. ದೂರದೇಶಗಳಲ್ಲಿರುವ ನಾವು ಅಂತಾರಾಷ್ಟ್ರೀಯ ಸಹಾಯಸಂಸ್ಥೆಗಳ ಮೂಲಕ ಹಣ ಸಲ್ಲಿಸಿ ನೆರವಾಗಬಹುದು.

Let's help Philippines typhoon victims

ನಾನು Unicefನ ಈ ಕೆಳಗಿನ ಲಿಂಕ್‌ನ ಮೂಲಕ ಆಗಲೇ ಒಂದಿಷ್ಟು ಹಣವನ್ನು ಫಿಲಿಪ್ಪೀನ್ಸ್ ಸಂತ್ರಸ್ತರ ನೆರವುನಿಧಿಗೆ ಸಲ್ಲಿಸಿದೆ. ನಾವು ಸಲ್ಲಿಸುವ ನೆರವು ಸದ್ವಿನಿಯೋಗವಾಗಬೇಕಾದರೆ ಇಂಥ ಸಂಸ್ಥೆಗಳ ಮೂಲಕ ಪಾವತಿ ಮಾಡುವುದೇ ಒಳ್ಳೆಯದು. ನೀವೂ ನಿಮ್ಮ ಕೈಲಾದಷ್ಟು ನೆರವನ್ನು ನೀಡುತ್ತೀರಾ? "ವಸುಧೈವ ಕುಟುಂಬಕಮ್" ಎಂಬಂಥ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಚಿಂತನೆಗಳು ಅರ್ಥಪಡೆದುಕೊಳ್ಳುವುದು ಇಂಥ ಸಂದರ್ಭಗಳಲ್ಲೇ. [ಕೃಪೆ : ಶ್ರೀವತ್ಸ ಜೋಶಿ ಫೇಸ್ ಬುಕ್]

Unicef:
http://fieldnotes.unicefusa.org/2013/11/super-typhoon-haiyan-strikes-philippines.html

Redcross:
http://www.redcross.org/news/article/Typhoon-Haiyan-Disaster-Alert

Care:
http://www.care.org/emergencies/typhoon-haiyan

Worldvision:
http://www.worldvision.org/news-stories-videos/typhoon-haiyan-philippines

Save the children:
http://www.savethechildren.org/site/c.8rKLIXMGIpI4E/b.6115947/k.8D6E/Official_Site.htm

English summary
In one of the worst typhoons which hit Philippines more than 10,000 people have lost lives and lakhs have lost shelter and belongings. Typhoon Haiyan has devastated Philippines. The survivors are begging for help. Can't we extend helping hand to the needy?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X