ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯ ಮಾಜಿ ಪತ್ನಿಯನ್ನು ಕೊಂದ ಹಾಲಿ ಪತ್ನಿ

|
Google Oneindia Kannada News

ಮಸೇರು, ಫೆಬ್ರವರಿ 5: ಪ್ರಧಾನಿಯ ಮಾಜಿ ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಹಾಲಿ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ನಡೆದಿರುವುದು ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ಲೆಸೊಥೊ ಎಂಬ ದೇಶದಲ್ಲಿ.

2017ರಲ್ಲಿ ಕೊಲೆ ನಡೆದಿದ್ದು, ಪ್ರಧಾನಿ ಥಾಮಸ್ ಥಬಾನೆ ಅವರ ಮಾಜಿ ಪತ್ನಿ ಲಿಪೊಲೆಲೊ ಅವರ ಹತ್ಯೆ ಪ್ರಕರಣದಲ್ಲಿ ದೇಶದ ಪ್ರಥಮ ಮಹಿಳೆ ಮಾಯಿಸೈಹ್ ಥಬಾನೆ (42) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮುದ್ರದ ಉಷ್ಣತೆ ಹೆಚ್ಚಳ 3.6 ಬಿಲಿಯನ್ ಹಿರೋಶಿಮಾ ಬಾಂಬ್ ದಾಳಿಗೆ ಸಮಸಮುದ್ರದ ಉಷ್ಣತೆ ಹೆಚ್ಚಳ 3.6 ಬಿಲಿಯನ್ ಹಿರೋಶಿಮಾ ಬಾಂಬ್ ದಾಳಿಗೆ ಸಮ

ಪತಿಯಿಂದ ದೂರವಾಗಿದ್ದ ಲಿಪೊಲೆಲೊ ಥಬಾನೆ ಅವರನ್ನು 2017ರಲ್ಲಿ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಆ ವೇಳೆ ಇಬ್ಬರ ನಡುವೆ ವಿಚ್ಚೇದನ ಪ್ರಕ್ರಿಯೆ ನಡೆಯುತ್ತಿತ್ತು. ಈ ಘಟನೆ ಸಂಬಂಧ ಪ್ರಧಾನಿ ಥಾಮಸ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ತಾವೇ ಶರಣಾದ ಮಹಿಳೆ

ತಾವೇ ಶರಣಾದ ಮಹಿಳೆ

ಬಂಧನದಿಂದ ತಪ್ಪಿಸಿಕೊಳ್ಳಲು ಜ. 10ರಂದು ನೆರೆಯ ದಕ್ಷಿಣ ಆಫ್ರಿಕಾಕ್ಕೆ ಪರಾರಿಯಾಗಿದ್ದ ಮಾಯಿಸೈಹ್, ರಾಜಧಾನಿ ಮಸೇರುಗೆ ಮಂಗಳವಾರ ಮರಳಿದ್ದರು. ಬಳಿಕ ತಾವೇ ಪೊಲೀಸರಿಗೆ ಶರಣಾಗಿದ್ದರು. ಒತ್ತಡಕ್ಕೆ ಮಣಿದಿರುವ 80 ವರ್ಷದ ಪ್ರಧಾನಿ ಥಬಾನೆ, ಆಡಳಿತಾರೂಢ ಪಕ್ಷ ಬಯಸಿದರೆ ರಾಜೀನಾಮೆ ಸಲ್ಲಿಸುವುದಾಗಿ ಕಳೆದ ತಿಂಗಳು ತಿಳಿಸಿದ್ದರು. ಆದರೆ ರಾಜೀನಾಮೆ ದಿನಾಂಕವನ್ನು ಅವರು ಪ್ರಕಟಿಸಿಲ್ಲ.

ಹಿತೈಷಿಯ ಕೊಲೆಗೂ ಯತ್ನ

ಹಿತೈಷಿಯ ಕೊಲೆಗೂ ಯತ್ನ

ಮಾಯಿಸೈಹ್ ಅವರೊಂದಿಗೆ ಇನ್ನೂ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರು ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಲಿಪೊಲೆಲೆ ಅವರೊಂದಿಗೆ ಪ್ರಯಾಣಿಸುತ್ತಿದ್ದ ಅವರ ಕುಟುಂಬದ ಸ್ನೇಹಿತರಾದ ಥಾಟೊ ಸಿಬೊಲಾ ಅವರನ್ನೂ ಹತ್ಯೆ ಮಾಡಲು ಪ್ರಯತ್ನಿಸಿದ ಪ್ರಕರಣ ಕೂಡ ಅವರ ಮೇಲೆ ಇದೆ.

ಪ್ರವಾಹ ಆಯ್ತು, ಮುಂದೆ ಕಾದಿದೆ ಬಿಸಿ ಗಾಳಿಯ ಅಪಾಯ: ಜಾಗತಿಕ ತಾಪಮಾನ ವರದಿಪ್ರವಾಹ ಆಯ್ತು, ಮುಂದೆ ಕಾದಿದೆ ಬಿಸಿ ಗಾಳಿಯ ಅಪಾಯ: ಜಾಗತಿಕ ತಾಪಮಾನ ವರದಿ

ಎರಡು ತಿಂಗಳಲ್ಲೇ ಮದುವೆ

ಎರಡು ತಿಂಗಳಲ್ಲೇ ಮದುವೆ

2012ರಲ್ಲಿ ಪತಿಯಿಂದ ದೂರವಾಗಿದ್ದ 58 ವರ್ಷದ ಲಿಪೊಲೆಲೊ ಅವರು 2017ರ ಜೂನ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಗುಂಡಿನ ದಾಳಿಗೆ ಒಳಗಾಗಿದ್ದರು. ಅವರ ಮೇಲೆ ಹಲವು ಸುತ್ತಿನ ಗುಂಡುಹಾರಿಸಿದ್ದರಿಂದ ರಸ್ತೆ ಬದಿಯಲ್ಲಿಯೇ ಮೃತಪಟ್ಟಿದ್ದರು. ಥಾಮಸ್ ಥಬಾನೆ ಅವರು 2017ರಲ್ಲಿ ಎರಡನೆಯ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಎರಡು ದಿನಗಳ ಮುಂಚೆಯಷ್ಟೇ ಈ ಹತ್ಯೆ ನಡೆದಿತ್ತು. ಕೊಲೆ ನಡೆದು ಎರಡು ತಿಂಗಳ ನಂತರ ಥಾಮಸ್ ಮತ್ತು ಮಾಯಿಸೈಹ್ ಮದುವೆ ನಡೆದಿತ್ತು.

ಎರಡು ಲಕ್ಷ ಜನಸಂಖ್ಯೆ

ಎರಡು ಲಕ್ಷ ಜನಸಂಖ್ಯೆ

ಕಿಂಗ್‌ಡಮ್ ಆಫ್ ಲೆಸೊಥೊ ಎಂದು ಗುರುತಿಸಿಕೊಂಡಿರುವ ಆಫ್ರಿಕಾದ ಈ ಪುಟ್ಟ ದೇಶ ದಕ್ಷಿಣ ಆಫ್ರಿಕಾದ ಗಡಿಯೊಳಗೇ ಇದೆ. ಕೇವಲ 30,000 ಕಿ.ಮೀ. ಯಷ್ಟು ದೊಡ್ಡದಿರುವ ದೇಶದಲ್ಲಿ ಸುಮಾರು 20 ಲಕ್ಷ ಜನಸಂಖ್ಯೆ ಇದೆ. 1996ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಿಂದ ಸ್ವತಂತ್ರಗೊಂಡ ಈ ದೇಶ, ತನ್ನದೇ ಆತ ನಿರ್ದಿಷ್ಟ ಕಾನೂನು ವ್ಯವಸ್ಥೆ ಹೊಂದಿಲ್ಲ.

English summary
First lady of Lesotho, Maesaiah has been charged with the killing of PM Thomas Thabane's former wife Lipolelo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X