• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿರತೆ ಮಾಂಸವನ್ನು ಅಸ್ತಮಾಗೆ ರಾಮಬಾಣ ಎಂದು ಮಾರುತ್ತಿದ್ದ ಮೂವರ ಸೆರೆ

|

ಕೊಲಂಬೋ, ಸೆಪ್ಟೆಂಬರ್ 25: ಅಸ್ತಮಾ ಚಿಕಿತ್ಸೆಗೆ ಚಿರತೆ ಮಾಂಸ ರಾಮಬಾಣ ಎಂದು ಸುಳ್ಳು ಹೇಳಿ ಚಿರತೆಯನ್ನು ಕೊಂದು ಮಾರುತ್ತಿದ್ದ ಮೂವರನ್ನು ಶ್ರೀಲಂಕಾದಲ್ಲಿ ಬಂಧಿಸಲಾಗಿದೆ.

ಎತ್ತರದ ಪ್ರದೇಶಗಳಲ್ಲಿ ಚಿರತೆಯನ್ನು ಹಿಡಿಯಲು ಬಲೆಯನ್ನು ಬಳಸುತ್ತಿದ್ದರು. ಆರೋಪಿಗಳ ಸುಳಿವು ಸಿಕ್ಕ ಬೆನ್ನಲ್ಲೇ ಆರೋಪಿಗಳ ಮನೆಯ ಮೇಲೆ ಶ್ರೀಲಂಕಾ ಪೊಲೀಸರು ದಾಳಿ ನಡೆಸಿದ್ದರು.

ಶಿವಮೊಗ್ಗದ ಗ್ರಾಮಕ್ಕೆ ಬಂದ ಚಿರತೆ: ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ

ಬಳಿಕ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮುಖ್ಯ ಇನ್‌ಸ್ಪೆಕ್ಟರ್ ಸುಶ್ಯಂತ ಕಂಗಾರ ಮಾಹಿತಿ ನೀಡಿದ್ದು, ಆರೋಪಿಗಳು ಚಿರತೆಯನ್ನು ಕೊಂದು ಬಳಿಕ ತಲೆಯನ್ನು ಕತ್ತರಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಚಿರತೆಯ ತಲೆಯನ್ನು ಕಾಡಿನಲ್ಲಿ ಬಿಸಾಡುತ್ತಿದ್ದರು. ಬಳಿಕ ಮಾಂಸ ಹಾಗೂ ಇತರೆ ಭಾಗಗಳನ್ನು ಮಾರಾಟ ಮಾಡುತ್ತಿದ್ದರು.ಕೊಲೊಂಬೊದಿಂದ 175 ಕಿ.ಮೀ ದೂರದಲ್ಲಿ ಸಾಕಷ್ಟು ಚಿರತೆಗಳನ್ನು ಹತ್ಯೆ ಮಾಡಿದ್ದಾರೆ.

ಚಿರತೆ ಮಾಂಸವು ಅಸ್ತಮಾವನ್ನು ಕಡಿಮೆ ಮಾಡುತ್ತದೆ ಎನ್ನುವ ಮೂಢನಂಬಿಕೆ ಆ ಪ್ರದೇಶದಲ್ಲಿದೆ. ಪೊಲೀಸರು ಮೂವರಿಂದ 17 ಕೆಜಿಯಷ್ಟು ಮಾಂಶವನ್ನು ವಶಪಡಿಸಿಕೊಂಡಿದ್ದಾರೆ.

   North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada

   ಶ್ರೀಲಂಕಾದಲ್ಲಿ 1 ಸಾವಿರ ಚಿರತೆಗಳಿವೆ, ಅವುಗಳನ್ನು ಕೊಂದವರಿಗೆ 5 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ.

   English summary
   Sri Lankan police on Friday arrested three people suspected of trapping and killing an endangered leopard and trying to sell its meat as a cure for asthma.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X