ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಕಳಕಳಿ ಮೂಲಕ 'ಸರ್' ಪದವಿಗೇರಿದ್ದ ಜೇಮ್ಸ್ ಬಾಂಡ್

ಸಾಮಾಜಿಕ ಕಳಕಳಿ, ಪ್ರಾಣಿ ಪ್ರಿಯನಾಗಿ ಹೋರಾಟ ನಡೆಸಿ ದಾನ ಧರ್ಮದ ಮೂಲಕವೇ 'ಸರ್' ಪದವಿಗೇರಿದ್ದ 'ಜೇಮ್ಸ್ ಬಾಂಡ್' ರೋಜರ್ ಮೂರ್ ನಿಧನರಾಗಿದ್ದಾರೆ.

By Mahesh
|
Google Oneindia Kannada News

ಲಂಡನ್, ಮೇ 23: ಸಾಮಾಜಿಕ ಕಳಕಳಿ, ಪ್ರಾಣಿ ಪ್ರಿಯನಾಗಿ ಹೋರಾಟ ನಡೆಸಿ ದಾನ ಧರ್ಮದ ಮೂಲಕವೇ 'ಸರ್' ಪದವಿಗೇರಿದ್ದ ಜೇಮ್ಸ್ ಬಾಂಡ್ ರೋಜರ್ ಮೂರ್ ನಿಧನರಾಗಿರುವ ಸುದ್ದಿ ಫಿಲ್ಮಿಬೀಟ್ ನಲ್ಲಿ ಓದಿರುತ್ತೀರಿ. ಮಧುಮೇಹ, ಕ್ಯಾನ್ಸರ್ ಮಾರಿಗೆ ರೋಜರ್ ಬಲಿಯಾಗಿದ್ದಾರೆ.

ಸ್ವಿಟ್ಜರ್ಲೆಂಡ್ ನಲ್ಲಿ ನಿಧನರಾದ ಮೂರ್ ಅವರ ಅಂತಿಮ ಸಂಸ್ಕಾರವನ್ನು ಅವರ ಇಚ್ಛೆಯಂತೆ ಮೊನಾಕೋದಲ್ಲಿ ನೆರವೇರಿಸಲಾಗುತ್ತದೆ. ಲಿವ್ ಲೆಟ್ ಡೈ, ದ ಸ್ಪೈ ವೂ ಲವ್ಡ್ ಮಿ ಸೇರಿದಂತೆ 1973 ರಿಂದ 1985 ರ ಅವಧಿಯಲ್ಲಿ ಬ್ರಿಟಿಷ್ ಸಿಕ್ರೇಟ್ ಏಜೆಂಟ್ 'ಜೇಮ್ಸ್ ಬಾಂಡ್' ಆಗಿ ಕಾಣಿಸಿಕೊಂಡ ರೋಜರ್ ಮೂರ್ ಅವರು ಜನಪ್ರಿಯ 'ಜೇಮ್ಸ್ ಬಾಂಡ್' ಎನಿಸಿಕೊಂಡಿದ್ದವರು.

ಲಂಡನ್ನಿನ ಸ್ಕಾಟ್ ವೆಲ್ ನಲ್ಲಿ ಜನಿಸಿದ ಮೂರ್ ಅವರು Royal Academy of Dramatic Arts ಯಲ್ಲಿ ನಟನೆಯ ಎಬಿಸಿಡಿ ಕಲಿತವರು. 1966ರಲ್ಲಿ ಸೀನ್ ಕಾನರಿ ಅವರು ಜೇಮ್ಸ್ ಬಾಂಡ್ ಪಾತ್ರಕ್ಕೆ ಗುಡ್ ಬೈ ಹೇಳಿದ ಮೇಲೆ '007' ಏಜೆಂಟ್ ದಿರಿಸಿನಲ್ಲಿ ಮೂರ್ ಮಿಂಚಿದರು.

Legendary actor, 'James Bond' Sir Roger Moore and his charity works

ಭಾರತದ ಲಿಂಕ್: ಇಂಗ್ಲೀಷ್ ಮೂಲದ ದಂಪತಿಗೆ ಕಲ್ಕತ್ತಾ(ಇಂದಿನ ಕೋಲ್ಕತ್ತಾ)ದಲ್ಲಿ ಜನಿಸಿದ ಲಿಲ್ಲಿ ಹಾಗೂ ಜಾರ್ಜ್ ಮೂರ್ ಅವರ ಮಗನಾಗಿ 1927, ಅಕ್ಟೋಬರ್ 14ರಂದು ಲಂಡನ್ನಿನ ಸ್ಕಾಟ್ ವೆಲ್ ನಲ್ಲಿ ರೋಜರ್ ಮೂರ್ ಜನಿಸಿದರು.

ಪೊಲೀಸ್ ವೃತ್ತಿಯಲ್ಲಿದ್ದ ತಂದೆ ಜಾರ್ಜ್ ಮೂರ್ ಅವರ ಹಾದಿಯಲ್ಲಿ ಸಾಗಿದ್ದ ರೋಜರ್ ಅವರು 1946ರಲ್ಲಿ ಎರಡನೇ ವಿಶ್ವ ಸಮರದಲ್ಲಿ ಇಂಗ್ಲೆಂಡ್ ಸೇನೆ ಪರ ಕಾದಾಟ ನಡೆಸಿದರು. ಕ್ಯಾಪ್ಟನ್ ಪದವಿಗೇರಿದವರು. ಸೇನೆಯಲ್ಲಿ ಮುಂದುವರೆಯದೆ ಅತ್ತ ಗ್ರಾಜುಯೇಷನ್ ಕೂಡಾ ಪೂರ್ಣಗೊಳಿಸದ ರೋಜರ್ ಕೈ ಹಿಡಿದಿದ್ದು ಕಲೆ. ಪ್ರದರ್ಶನ ಕಲೆ ವಿಷಯದಲ್ಲಿ ರಾಯಲ್ ಅಕಾಡೆಮಿಯಲ್ಲಿ ಕಲಿತ್ತಿದ್ದು ಅವರನ್ನು ಮುಂದೆ ಜೇಮ್ಸ್ ಬಾಂಡ್ ಪಾತ್ರದ ತನಕ ಕೊಂಡೊಯ್ತು.

ಗುಡ್ ವಿಲ್ ರಾಯಭಾರಿ: ಯೂನಿಸೆಫ್ ನ ಗುಡ್ ವಿಲ್ ರಾಯಭಾರಿಯಾಗಿ 1991ರಲ್ಲಿ ನೇಮಕಗೊಂಡ ಮೂರ್ ಅವರ ಸಾಮಾಜಿಕ ಕಳಕಳಿಯನ್ನು ಕಂಡು ಕ್ವೀನ್ ಎಲಿಜಬೆತ್ ಅವರು 2003ರಲ್ಲಿ ನೈಟ್ ವುಡ್ (ಸರ್ ಪದವಿ) ನೀಡಿ ಗೌರವಿಸಿದರು.

ರೋಜರ್ ಮೂರ್ ಅವರು ಪೆಟಾ ಜತೆ ಕೈಜೋಡಿಸಿ ಬಾತುಕೋಳಿಗಳಿಗೆ ನೀಡುತ್ತಿದ್ದ ಕೃತಕ ಉತ್ತೇಜಕ ಆಹಾರ foie gras ವಿರುದ್ಧ ಸಮರ ಸಾರಿದರು. ಮಳಿಗೆಗಳಿಗೆ ತೆರಳಿ ಈ ಆಹಾರ ಬಳಸದಂತೆ ಜನಜಾಗೃತಿ ಮೂಡಿಸಿದರು. ತಮ್ಮ ಹೋರಾಟದಲ್ಲಿ ಯಶಸ್ಸು ಕಂಡರು.

ಇವರ ಸಾಮಾಜಿಕ ಕಳಕಳಿಯನ್ನು ಮೆಚ್ಚು 2008ರಲ್ಲಿ ವಿಶ್ವಸಂಸ್ಥೆಯಿಂದ ಪ್ರತಿಷ್ಠಿತ Dag Hammarskjöld ಪ್ರಶಸ್ತಿ ನೀಡಲಾಯಿತು. 2005ರಲ್ಲಿ ಯೂನಿಸೆಫ್ ನ ಮಾನವೀಯತೆ ಪ್ರಶಸ್ತಿ, ಮಕ್ಕಳ ಕಳ್ಳಸಾಗಣೆ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಜರ್ಮನಿಯ ಫೆಡರಲ್ ಕ್ರಾಸ್ ಆಫ್ ಮೆರಿಟ್ ಪ್ರಶಸ್ತಿ ಗಳಿಸಿದರು. ಬ್ರಿಟಿಷ್ ಸಾಮ್ರಾಜ್ಯದಿಂದ ಸರ್ ಪದವಿಯಲ್ಲದೆ ಕಮಾಂಡರ್ ಆಫ್ ದಿ ಅರ್ಡರ್ ಪದವಿ ಕೂಡಾ ಪಡೆದುಕೊಂಡಿದ್ದರು.

English summary
Legendary actor, Roger Moore who played James Bond has died at 89. His family announced that the actor passed away after a brief battle with cancer. Moore was awarded a CBE which then became a knighthood in 2003, given to him for his charity work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X