ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ-7 ದೇಶಗಳ ನಾಯಕರಿಂದ ಉಕ್ರೇನ್ ಅಧ್ಯಕ್ಷರ ಭೇಟಿ ಸಾಧ್ಯತೆ

|
Google Oneindia Kannada News

ವಾಷಿಂಗ್ಟನ್, ಮೇ 8: ರಷ್ಯಾದಿಂದ ಆಕ್ರಮಣಕ್ಕೊಳಗಾಗಿರುವ ಉಕ್ರೇನ್ ದೇಶಕ್ಕೆ ಬೆಂಬಲ ನೀಡುತ್ತಿರುವ ಜಿ-7 ದೇಶಗಳ ನಾಯಕರು ಇಂದು ಉಕ್ರೇನ್ ಅಧ್ಯಕ್ಷರೊಂದಿಗೆ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಏಳು ದೇಶಗಳ ಮುಖ್ಯಸ್ಥರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವೊಲೋದಿಮಿರ್ ಝೆಲೆನ್ಸ್ಕಿ ಅವರನ್ನ ಭೇಟಿಯಾಗಲಿದ್ದಾರೆ.

ಜಿ-7 ಗುಂಪಿನಲ್ಲಿ ವಿಶ್ವದ ಅಗ್ರಮಾನ್ಯ ಆರ್ಥಿಕಶಕ್ತ ದೇಶಗಳಿವೆ. ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಈ ಗುಂಪಿನಲ್ಲಿವೆ. ಈ ದೇಶಗಳ ಉಕ್ರೇನ್‌ಗೆ ವಿವಿಧ ರೀತಿಯಲ್ಲಿ ಬೆಂಬಲ ನೀಡಲು ಮುಂದಾಗಿವೆ.

ಬಾಡಿ ಡಬ್ಬಲ್ಲಾ, ಕಾಸ್ಮೆಟಿಕ್ ಸರ್ಜರಿಯಾ?- ರಹಸ್ಯವಾಗಿಯೇ ಉಳಿದ ಪುಟಿನ್ಬಾಡಿ ಡಬ್ಬಲ್ಲಾ, ಕಾಸ್ಮೆಟಿಕ್ ಸರ್ಜರಿಯಾ?- ರಹಸ್ಯವಾಗಿಯೇ ಉಳಿದ ಪುಟಿನ್

ಇಂದು ಉಕ್ರೇನ್ ಅಧ್ಯಕ್ಷರೊಂದಿಗೆ ಸಭೆ ನಡೆಯುವ ಮುನ್ನ ಬ್ರಿಟನ್ ಪ್ರಧಾನಿಗಳು ಉಕ್ರೇನ್‌ಗೆ 1.3 ಬಿಲಿಯನ್ ಡಾಲರ್ (ಸುಮಾರು 10 ಸಾವಿರ ಕೋಟಿ ರೂಪಾಯಿ) ಹಣದ ನೆರವು ಘೋಷಿಸಿದ್ದಾರೆ.

ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ

ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ

"ರಷ್ಯಾದ ನಿರ್ದಯ ದಾಳಿಯಿಂದ ಉಕ್ರೇನ್‌ಗೆ ಬಹಳ ಹಾನಿ ಮಾಡಿದೆ. ಈ ದಾಳಿಯಿಂದಾಗಿ ಯೂರೋಪ್‌ನ ಬೇರೆಡೆಯಲ್ಲೂ ಶಾಂತಿ ಮತ್ತು ಭದ್ರತೆಗೆ ಅಪಾಯದ ಪರಿಸ್ಥಿತಿ ತಂದೊಡ್ಡಿದೆ" ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಫೆಬ್ರವರಿ 24ರಿಂದ ನಡೆಯುತ್ತಿರುವ ಈ ಯುದ್ಧದಿಂದಾಗಿ ನೂರಾರು ಮಂದಿ ನಾಗರಿಕರು ಬಲಿಯಾಗಿದ್ಧಾರೆ. ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಉಕ್ರೇನ್-ರಷ್ಯಾ ಯುದ್ಧದಿಂದ ಆಂತರಿಕವಾಗಿ ಅತಂತ್ರವಾಗಿರುವ ಜನರು, ರೋಮಾ ಜನಾಂಗದವರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅಶಕ್ತ ಜನರಿಗೆ ಅತಿ ಹೆಚ್ಚು ತೊಂದರೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.

 ರಷ್ಯಾದಿಂದ ಅಣ್ವಸ್ತ್ರ ದಾಳಿ ಅಭ್ಯಾಸ; ಭೂಮಿಗೆ ಕಾದಿದೆಯಾ ದೊಡ್ಡ ಕಂಟಕ? ರಷ್ಯಾದಿಂದ ಅಣ್ವಸ್ತ್ರ ದಾಳಿ ಅಭ್ಯಾಸ; ಭೂಮಿಗೆ ಕಾದಿದೆಯಾ ದೊಡ್ಡ ಕಂಟಕ?

ಆಹಾರ ಬೇಡಿಕೆ ಮತ್ತು ಪೂರೈಕೆ ಪರಿಸ್ಥಿತಿ

ಆಹಾರ ಬೇಡಿಕೆ ಮತ್ತು ಪೂರೈಕೆ ಪರಿಸ್ಥಿತಿ

ವಿಶ್ವಸಂಸ್ಥೆಯ ಆಹಾರ ಯೋಜನೆ ಅಂಗ ಇಂದು ವಿಶ್ವಾದ್ಯಂತ ಇರುವ ಆಹಾರ ಬೇಡಿಕೆ ಮತ್ತು ಪೂರೈಕೆ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದೆ. "ಸದ್ಯ ಒಂದೆಡೆ, ಉಕ್ರೇನ್‌ನಲ್ಲಿ ಬೇಳೆಕಾಳುಗಳ ಸಂಗ್ರಹ ಪೂರ್ಣ ಪ್ರಮಾಣದಲ್ಲಿದೆ. ಇನ್ನೊಂದೆಡೆ ವಿಶ್ವದಾದ್ಯಂತ 4.4 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಉಕ್ರೇನ್‌ನಲ್ಲಿರುವ ಬಂದರುಗಳನ್ನ ಚಾಲನೆಗೊಳಿಸಿದರೆ ಈ ಸರಕುಗಳನ್ನ ಹೊರಗೆ ಸಾಗಿಸಬಹುದು. ಜಾಗತಿಕವಾಗಿ ಈ ಬೇಳೆಕಾಳುಗಳ ಅಗತ್ಯ ಇದೆ" ಎಂದು ವಿಶ್ವಸಂಸ್ಥೆಯ ಡಬ್ಲ್ಯೂಎಫ್‌ಪಿ ಮೊನ್ನೆ ಶುಕ್ರವಾರ ಅಭಿಪ್ರಾಯಪಟ್ಟಿದೆ.

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೋ ಗುಟೆರೆಸ್ ಕೂಡ ಯುದ್ಧವನ್ನು ಬಲವಾಗಿ ಖಂಡಿಸಿದ್ಧಾರೆ. "ಈ ಸಾವು, ಹಾನಿಗಳ ಸರಪಳಿ ನಿಲ್ಲಬೇಕು" ಎಂದು ಯುಎನ್ ಭದ್ರತಾ ಮಂಡಳಿ ಸಭೆಯಲ್ಲಿ ಆಗ್ರಹಿಸಿದ್ದರು.
 ರಷ್ಯಾ ನೌಕೆ ನಾಶ:

ರಷ್ಯಾ ನೌಕೆ ನಾಶ:

ರಷ್ಯಾದ ಮತ್ತೊಂದು ಯುದ್ಧನೌಕೆಯನ್ನ ನಾಶ ಮಾಡಿರುವುದಾಗ ಉಕ್ರೇನ್ ಹೇಳಿಕೊಂಡಿದೆ. ಬ್ಲ್ಯಾಕ್ ಸೀ ಸಮುದ್ರದಲ್ಲಿರುವ ಸ್ನೇಕ್ ದ್ವೀಪದಲ್ಲಿ ರಷ್ಯಾದ ಹಡಗೊಂದನ್ನು ಉಕ್ರೇನ್ ದೇಶದ ಬಯ್ರಾಕ್ತರ್ ಟಿಬಿ2 (Bayraktar TB2 Drone) ಎಂಬ ಡ್ರೋನ್ ನಾಶ ಮಾಡಿರುವುದು ತಿಳಿದುಬಂದಿದೆ. ರಷ್ಯಾದ ಈ ಹಡಗು ಸೆರ್ನಾ-ಶ್ರೇಣಿಯ ಲ್ಯಾಂಡಿಂಗ್ ಕ್ರಾಫ್ಟ್ (Serna-class landing craft) ಆಗಿತ್ತು. ಮಿಸೈಲ್ ಡಿಫೆನ್ಸ್ ಸಿಸ್ಟಂ ಅನ್ನು ಹೊಂದಿದ್ದ ಈ ಹಡಗನ್ನು ಹೊಡೆದುಹಾಕಿದ್ದು ರಷ್ಯಾಗೆ ಇನ್ನೊಂದು ಶಾಕ್ ಕೊಟ್ಟಿದೆ.

ಅತ್ತ, ರಷ್ಯಾ ಕೂಡ ಉಕ್ರೇನ್‌ನ ಹಲವೆಡೆ ಎಡಬಿಡದೆ ಶೆಲ್ ದಾಳಿಗಳನ್ನ ಮಾಡುತ್ತಿರುವುದು ವರದಿಯಾಗಿದೆ. ಮರಿಯೂಪೋಲ್ ಪೋರ್ಟ್ ನಗರದಲ್ಲಿರುವ ಅಜೋವಸ್ತಲ್ ಉಕ್ಕು ಕಾರ್ಖಾನೆಯಿಂದ ಎಲ್ಲಾ ಮಹಿಳೆಯರು ಮತ್ತು ಮಕ್ಕಳನ್ನು ಹೊರಗೆ ಸ್ಥಳಾಂತರ ಮಾಡಲಾಗಿದೆ ಎಂದು ಉಕ್ರೇನ್ ಸ್ಪಷ್ಟಪಡಿಸಿದೆ.
 ರಷ್ಯಾಗೆ ಈಗ ಹಿಂದಿರುಗಿ ಹೋಗಲಾಗದ ಪರಿಸ್ಥಿತಿ:

ರಷ್ಯಾಗೆ ಈಗ ಹಿಂದಿರುಗಿ ಹೋಗಲಾಗದ ಪರಿಸ್ಥಿತಿ:

ರಷ್ಯಾ ದೇಶ ಈ ಯುದ್ಧದಲ್ಲಿ ಸೋಲೊಪ್ಪಿಕೊಳ್ಳುವ ಪರಿಸ್ಥಿತಿಯಲ್ಲೇ ಇಲ್ಲ. ದಾಳಿಯನ್ನ ಇನ್ನಷ್ಟು ತೀವ್ರಗೊಳಿಸಿದರೆ ಯುದ್ಧದಲ್ಲಿ ಪ್ರಗತಿ ಸಾಧಿಸಬಹುದು ಎಂಬ ನಂಬಿಕೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ ಪುಟಿನ್ ಇದ್ದಾರೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮುಖ್ಯಸ್ಥ ಬಿಲ್ ಬರ್ನ್ಸ್ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
US president Joe Biden, UK PM Boris Johnson and other G-7 leaders are set to meet Ukrainian president Volodymyr Zelensky via a video call on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X