• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹವಾಯಿ ಜ್ವಾಲಾಮುಖಿ ಚಾಚಿದ ಕೆನ್ನಾಲಿಗೆ! ಚಿತ್ರಗಳಲ್ಲಿ ನೋಡಿ

By Nayana
|

ಬೆಂಗಳೂರು, ಜೂನ್ 12: ಹವಾಯಿಯಲ್ಲಿ ಕಳೆದ 15 ದಿನಗಳಿಂದ ಜ್ವಾಲಾಮುಖಿ ಉದ್ಭವವಾಗಿದ್ದು ಅಲ್ಲಿನ ಆಸ್ತಿ ಪಾಸ್ತಿ ನಷ್ಟವಾಗಿದೆ ಜತೆಗೆ ಸ್ಥಳೀಯರು ತಮ್ಮ ನಿವಾಸಸ್ಥಾನವನ್ನು ಬಿಟ್ಟು ಬೇರೆಡೆಗೆ ತೆರಳಿದ್ದಾರೆ.

ಕಿಲುವಾ ಜ್ವಾಲಾಮುಖಿಯ ಲಾವಾ ರಸ ಕಾಲುವೆಗಳ ಮೂಲಕ ಹರಿಯುತ್ತಿದ್ದು, ಹವಾಯಿ ದ್ವೀಪದ ಕಪೊಹೊ ಬೇ ತಲುಪಿದೆ. ಈ ದೃಶ್ಯವನ್ನು ಯುಎಸ್ ಜಿಯಾಲಾಜಿಕಲ್ ಸರ್ವೆ ಸೆರೆ ಹಿಡಿದಿದೆ. ಲಾವಾ ರಸ ಸರಿಸುಮಾರು 100ರಿಂದ 300 ಮೀಟರ್‌ಗಳಷ್ಟು ಅಗಲ ಹರಿಯುತ್ತಿದ್ದು, ಇಡೀ ಜ್ವಾಲಾಮುಖಿಯ ಲಾವಾರಸದ ಹರಿವನ್ನು ಈ ದೃಶ್ಯ ಕಟ್ಟಿಕೊಡುತ್ತದೆ.

ಸುರಿಯುತ್ತಿರುವ ಮಹಾಮಳೆಯ ನಡುವೆಯೇ ಮಕ್ಕಳು ಜಡಿಮಳೆಯಲ್ಲಿ ಮಿಂದು ಮಜಾ ಅನುಭವಿಸುತ್ತಿದ್ದಾರೆ. ದಾದರ್, ಪರೇಲ್, ಕ್ ಪರೇಡ್, ಬಾಂದ್ರಾ, ಬೋರಿವಿಲಿ, ಅಂಧೇರಿ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸಮುದ್ರದಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.

ಇಡೀ ವಿಶ್ವದ ಗಮನ ಸೆಳೆದಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೋರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿ ವೇಳೆ ಕರಣದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪರಸ್ಪರ ಹಸ್ತಲಾಘವ ಮಾಡುತ್ತಿರುವ ದೃಶ್ಯಾವಳಿಯನ್ನು ಅಧಿಕೃತ ಪ್ರಸಾರದ ಹಕ್ಕು ಹೊಂದಿದ ಮೀಡಿಯಾ ಕಾರ್ಪ್ ಪಿಟಿಇ ಲಿಮಿಟೆಡ್ ಬಿಡುಗಡೆ ಮಾಡಿದೆ ಇನ್ನು ಪ್ರಮುಖ ಘಟನೆಗಳನ್ನು ಚಿತ್ರದ ಮೂಲಕ ವೀಕ್ಷಿಸಬಹುದು.

ಕಪೊಹೊದಲ್ಲಿ ಜ್ವಾಲಾಮುಖಿ ಚಾಚಿದ ಬೆಂಕಿಯ ಕೆನ್ನಾಲಿಗೆ

ಕಪೊಹೊದಲ್ಲಿ ಜ್ವಾಲಾಮುಖಿ ಚಾಚಿದ ಬೆಂಕಿಯ ಕೆನ್ನಾಲಿಗೆ

ಕಪೊಹೊದಲ್ಲಿ ಕಳೆದ 15 ದಿನಗಳಿಂದ ಜ್ವಾಲಾಮುಖಿ ಉದ್ಭವವಾಗಿದ್ದು ಅಲ್ಲಿನ ಆಸ್ತಿ ಪಾಸ್ತಿ ನಷ್ಟವಾಗಿದೆ ಜತೆಗೆ ಸ್ಥಳೀಯರು ತಮ್ಮ ನಿವಾಸಸ್ಥಾನವನ್ನು ಬಿಟ್ಟು ಬೇರೆಡೆಗೆ ತೆರಳಿದ್ದಾರೆ.

 ಮುಂಬೈನಲ್ಲಿ ಸಮುದ್ರದ ಅಲೆಯೊಂದಿಗೆ ಮಕ್ಕಳ ಆಟ

ಮುಂಬೈನಲ್ಲಿ ಸಮುದ್ರದ ಅಲೆಯೊಂದಿಗೆ ಮಕ್ಕಳ ಆಟ

ಮುಂಬೈನಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಭಾರಿ ಮಳೆಯಾಗುತ್ತಿದೆ. ಆದರೆ ಆ ಮಳೆಯನ್ನೂ ಲೆಕ್ಕಿಸದೆ ಸಮುದ್ರದ ಬಳಿ ತೆರಳಿ ಅಲೆಯೊಂದಿಗೆ ಮಕ್ಕಳು ಕುಣಿದಾಡಿ ಸಂತಸ ಪಡುತ್ತಿರುವ ದೃಶ್ಯ.

 ಅಮೇರಿಕಾ ಅಧ್ಯಕ್ಷ ಟ್ರಂಪ್ ಹಾಗೂ ದಕ್ಷಿಣ ಕೊರಿಯಾ ಕಿಮ್ ಜಾಂಗ್ ಉನ್ ಭೇಟಿ

ಅಮೇರಿಕಾ ಅಧ್ಯಕ್ಷ ಟ್ರಂಪ್ ಹಾಗೂ ದಕ್ಷಿಣ ಕೊರಿಯಾ ಕಿಮ್ ಜಾಂಗ್ ಉನ್ ಭೇಟಿ

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ ಹಾಗೂ ದಕ್ಷಿಣ ಕೊರಿಯಾ ಕಿಂಗ್ ಜಾಂಗ್ ಉನ್ ಸಿಂಗಾಪುರದಲ್ಲಿ ಭೇಟಿ ಮಾಡಿದರು.

 ತುಂಬಿ ತುಳುಕುತ್ತಿರುವ ಭದ್ರಾ ನದಿ: ಸಂಚಾರ ಅಸ್ತವ್ಯಸ್ತ

ತುಂಬಿ ತುಳುಕುತ್ತಿರುವ ಭದ್ರಾ ನದಿ: ಸಂಚಾರ ಅಸ್ತವ್ಯಸ್ತ

ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು, ಹಾಸನದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಭದ್ರಾ ನದಿ ತುಂಬಿದ್ದು, ಬ್ರಿಡ್ಜ್ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

 ಸೇನೆಯ ಮಡಿಲಲ್ಲಿ ಉಚಿತ ತರಬೇತಿ ಶಿಬಿರ

ಸೇನೆಯ ಮಡಿಲಲ್ಲಿ ಉಚಿತ ತರಬೇತಿ ಶಿಬಿರ

ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಂಗಳವಾರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ಗಾಗಿ ಉಚಿತ ತರಬೇತ ನೀಡುವ ಶಿಬಿರಕ್ಕೆ 15 ಕಾರ್‌ಪ್ಸ್‌ನ ಕಮಾಂಡರ್ ಲೆಫ್ಟಿನಂಟ್ ಜನರಲ್ ಎ.ಕೆ.ಭಟ್ ಚಾಲನೆ ನೀಡಿದರು. ಕಾಶ್ಮೀರ್ ಸೂಪರ್ 30 ಎಂಬ ರೆಸಿಡೆನ್ಶಿಯಲ್ ತರಬೇತಿ ವರ್ಗದಲ್ಲಿ ಕಣಿವೆ ರಾಜ್ಯದ ಪ್ರತಿಭಾವಂತ ಮಕ್ಕಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ.

 ಕೊಲ್ಕತ್ತಾದಲ್ಲಿ ಚೀನೀಯರ ನೃತ್ಯ ವೈಭವ

ಕೊಲ್ಕತ್ತಾದಲ್ಲಿ ಚೀನೀಯರ ನೃತ್ಯ ವೈಭವ

ಕೊಲ್ಕತ್ತದಲ್ಲಿ ನಡೆದ ಇಂಡೋ-ಚೀನಾ ಸಂಸ್ಕೃತಿ ವಿನಿಯಮದ ಕಾರ್ಯಕ್ರಮದಲ್ಲಿ ಚೀನೀಯರು ತಮ್ಮ ನೃತ್ಯವನ್ನು ಪ್ರದರ್ಶಿಸಿದ್ದು ಹೀಗೆ

 ಕೋರ್ಟ್ ಎದುರು ರಾಹುಲ್ ಗಾಂಧಿ ಹಾಜರು

ಕೋರ್ಟ್ ಎದುರು ರಾಹುಲ್ ಗಾಂಧಿ ಹಾಜರು

ಠಾಣೆಯ ಭಿವಂಡಿ ಕೋರ್ಟ್‌ಗೆ ಮಂಗಳವಾರ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಜರಾಗಿ ಹೊರ ಬಂದ ದೃಶ್ಯ. 2014ರಲ್ಲಿ ಲೋಕಸಭೆ ಚುನಾವಣೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿ ಕೊಲೆಯ ಹಿಂದೆ ಆರ್‌ಎಸ್‌ಎಸ್ ಕೈವಾಡ ಇದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ರಾಹುಲ್ ಇಂದು ನ್ಯಾಯಾಲಯಕ್ಕೆ ಹಾಜರಾದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A slow-moving flood of lava destroyed hundreds of homes in the southeast area of Big Island, turning what had been a scenic bay dotted with beach homes, lush greens and turquoise waters, into a dark slab of steam and lava.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more