ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀಸ್ ದೇಶದಲ್ಲಿ ಎಲ್ಲಾ ಸರಿಹೋಯ್ತಾ? ನಿಜ ಸ್ವರೂಪ ಇಲ್ಲಿದೆ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಗ್ರೀಕ್ ಯೂರೋಪಿಯನ್ ಯೂನಿಯನ್ ನಿಂದ ಹೊರ ಹೋಗದಂತೆ ತಡೆಯುವಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಕೊನೆಗೂ ಯಶಸ್ವಿಯಾಗಿವೆ.

'ಯುರೋ' ಒಕ್ಕೂಟದ ಸಿಂಗಲ್ ಕರೆನ್ಸಿ ಆಗಿ ಮುಂದುವರಿದಿದೆ, ಬ್ಯಾಂಕುಗಳು ರಿಓಪನ್ ಆಗಿವೆ, ಹಾಗಾದ್ರೆ ಗ್ರೀಸ್ ದೇಶದಲ್ಲಿ ಎಲ್ಲಾ ಸರಿಹೋಯಿತಾ? ಹೇಗೆ ಸಾಧ್ಯ ? ಹೊರಜಗತ್ತಿಗೆ ಗ್ರೀಸ್ ದೇಶದ ನಿಜ ಸ್ವರೂಪ , ಇಂದಿನ ಸ್ಥಿತಿ ತಿಳಿಸುವ ಸಣ್ಣ ಪ್ರಯತ್ನವಿದು.

ಇಡೀ ಗ್ರೀಸ್ ದೇಶದಲ್ಲಿ ಎಲ್ಲಿ ನೋಡಿದರೂ ಪುರಾತನ ಮೂರ್ತಿಗಳು, ಶಿಲೆಗಳು ಸಿಗುವುದು ತೀರ ಸಹಜ, ಹಣಕಾಸು ಬಿಕ್ಕಟಿಗೆ ಮುಂಚೆ ನಮ್ಮ ದೇಶ, ನಮ್ಮ ಹೆರಿಟೇಜ್ ಎಂದು ಎದೆ ಉಬ್ಬಿಸಿ ನಡೆಯುತಿದ್ದ ಸಾಮಾನ್ಯ ಗ್ರೀಕ್ ನಾಗರಿಕ ಇಂದು ಅದೇ ಶಿಲೆಗಳ ಕಳ್ಳತನಕ್ಕೆ ಇಳಿದಿದ್ದಾನೆ. (ಗ್ರೀಸ್ ದೇಶದ ಗತಕಾಲದ ಇತಿಹಾಸ)

ಇದನ್ನು ನಂಬಲು ಕಷ್ಟ ಆದರೆ ಇದು ಸತ್ಯ, ಸುಲುಭವಾಗಿ ಸಿಗುವ ಮೂರ್ತಿಗಳ ಕದಿಯುವುದು ಅದನ್ನು ಅಂತರರಾಷ್ಟ್ರೀಯ ಕಳ್ಳಸಾಗಣಿಕೆದಾರರಿಗೆ ಮಾರುವುದು ಅಲ್ಲಿ ಮಾಮೂಲಾಗಿದೆ, ಎಲ್ಲಕ್ಕೂ ಹೆಚ್ಚು ಆಘಾತ ನೀಡುವ ವಿಷಯವೇನೆಂದರೆ ಹೀಗೆ ಸಿಕ್ಕಿಹಾಕಿಕೊಂಡ ಪ್ರಜೆಗಳು ಪ್ರಥಮ ಬಾರಿ ಕಳ್ಳತನದ ಅರೋಪ ಹೊತ್ತವರು (ಫಸ್ಟ್ ಟೈಮ್ ಆಫೇನ್ಡರ್ಸ್ )

ಗ್ರೀಸ್ ದೇಶಕ್ಕೆ ತನ್ನ ಕಲ್ಚರಲ್ ಹೆರಿಟೇಜ್ ಉಳಿಸಿಕೊಳ್ಳುವ ದೊಡ್ಡ ಸಮಸ್ಯೆ ಎದುರಾಗಿದೆ, ಹಣಕಾಸಿನ ಬಿಕ್ಕಟಿನಿಂದ ಹೊರಬರುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತನ್ನ ಹೆರಿಟೇಜ್ ಉಳಿಸಿಕೊಳ್ಳುವುದು ಕೂಡ.

ವೆಚ್ಚ ಕಡಿತ ಮಾಡುವ ಉದ್ದೇಶದಿಂದ ಪೋಲೀಸರ ಸಂಖ್ಯೆ ಕಡಿಮೆಯಾಗಿದೆ, ಪುರಾತನ ಶಿಲೆಗಳ ಕದಿಯುವರ ಸಂಖ್ಯೆ ಹೆಚ್ಚಿದೆ. ಸಾಮಾಜಿಕ ಭದ್ರತೆ ಗ್ರೀಕ್ ನ ಇಂದಿನ ಅತಿ ದೊಡ್ಡ ಸಮಸ್ಯೆ.

ವಲಸಿಗರ ಮೇಲೆ ಆಕ್ರಮ

ವಲಸಿಗರ ಮೇಲೆ ಆಕ್ರಮ

ವಲಸಿಗರ ಮೇಲೆ ಆಕ್ರಮಣ ಹೆಚ್ಚಾಗಿದೆ, ನಮಗೆ ಕೆಲಸವಿಲ್ಲದೇ ಇರುವಾಗ ಹೊರಗಿನಿಂದ ಬಂದ ಇವರು ನಮ್ಮ ಅನ್ನವನ್ನು ಕಸಿಯುತ್ತಿದಾರೆ ಎನ್ನುವ ಭಾವನೆ ಸ್ಥಳೀಯರಲ್ಲಿ ಹೆಚ್ಚಿದೆ, ಪರಿಣಾಮ ಎಷ್ಟೋ ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದ ವಲಸಿಗರಲ್ಲಿ ಆತಂಕ ಮನೆ ಮಾಡಿದೆ.

ಹಣವಿಲ್ಲದೆ ಪರದಾಡುವ ಸ್ಥಿತಿ ಇನ್ನೂ ತಪ್ಪಿಲ್ಲ

ಹಣವಿಲ್ಲದೆ ಪರದಾಡುವ ಸ್ಥಿತಿ ಇನ್ನೂ ತಪ್ಪಿಲ್ಲ

ಬ್ಯಾಂಕ್ ಏನೋ ತೆಗೆಯಿತು ಎಟಿಎಂ ಗಳಲ್ಲಿ ಹಣವಿಲ್ಲದೆ ಪರದಾಡುವ ಸ್ಥಿತಿ ಇನ್ನೂ ತಪ್ಪಿಲ್ಲ , ಎಟಿಎಂ ಗಳಲ್ಲಿ ಮಲಗುವ ಜನರ ಸಂಖ್ಯೆ ಕೂಡ ಹೆಚ್ಚಿದೆ , ಮನೆ ಕಳೆದುಕೊಂಡ ಎಷ್ಟೋ ಜನ ಬೀದಿಯಲ್ಲಿ , ಪಾರ್ಕಿನಲ್ಲಿ , ಎಟಿಎಂ ನಲ್ಲಿ ಹೀಗೆ ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಮಲಗಿ ದಿನದೂಡುವ ಪರಿಸ್ಥಿತಿ ! ನೆನಪಿಡಿ ಇದು ಚಳಿ ದೇಶ , ರಾತ್ರಿ ಬೀದಿಯಲ್ಲಿ ಕಳೆಯುವುದು ಸುಲಭವಲ್ಲ

ಜರ್ಮನಿ ಕಂಪನಿಯ ಪಾಲು

ಜರ್ಮನಿ ಕಂಪನಿಯ ಪಾಲು

ಇದೆಲ್ಲದಕ್ಕೂ ಮುಖ್ಯವಾಗಿದ್ದು ಗ್ರೀಕ್ ಸರಕಾರ ತನ್ನ ದೇಶದ ಪ್ರಮುಖ ಬಂದರು , ಪಾರ್ಕುಗಳು , ವಿಮಾನ ನಿಲ್ದಾಣ ಹೀಗೆ ಎಲ್ಲವ ಖಾಸಗೀಕರಣ ಮಾಡುವ ಹುನ್ನಾರದಲ್ಲಿದೆ , ಇದರ ಮೊದಲ ಬಲಿ ಗ್ರೀಸ್ ದೇಶದ ಹದಿನಾಲ್ಕು ವಿಮಾನ ನಿಲ್ದಾಣಗಳು , ಫ್ರಾಪೋರ್ಟ್ (Fraport) ಎನ್ನವ ಜರ್ಮನಿ ಕಂಪನಿಯ ಪಾಲಾಗಿದೆ. ನಿನ್ನೆಯಷ್ಟೇ ಇದರ ಬಗ್ಗೆ ಗ್ರೀಸ್ ಸರಕಾರದ ವೆಬ್ಸೈಟ್ ನಲ್ಲಿ ಹೇಳಿಕೆ ನೀಡಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಗ್ರೀಸ್ ಬಳಿ ಮುಂಬರುವ ದಿನಗಳಲ್ಲಿ ನನ್ನದು ಎಂದು ಹೇಳಿಕೊಳ್ಳಲು ಏನೂ ಉಳಿಯುವುದಿಲ್ಲ.

ಖಾಸಗೀಕರಣದಿಂದ ಬಂದ ಹಣ

ಖಾಸಗೀಕರಣದಿಂದ ಬಂದ ಹಣ

ಖಾಸಗೀಕರಣದಿಂದ ಬಂದ ಹಣವನ್ನು ತನ್ನ ಸಾಲ ಕಟ್ಟಲು ಉಪಯೋಗಿಸಲಾಗುವುದು ಎಂದು ಸರಕಾರ ಹೇಳಿದೆ. ಐವತ್ತು ಸಾವಿರ ಮಿಲಿಯನ್ ಯುರೋ ಹಣ ಸಂಗ್ರಹಣೆ ಮಾಡುವುದು ಗ್ರೀಸ್ ದೇಶದ ಉದ್ದೇಶ, ಗ್ರೀಸ್ ಯುರೋ ಜೋನ್ ನಿಂದ ಹೊರ ಹೋಗದೆ ಇರಲು ಮಾಡಿಕೊಂಡ ಒಪ್ಪಂದಗಳಲ್ಲಿ ಇದು ಕೂಡಾ ಒಂದು, ಮಾತಿನಂತೆ ಗ್ರೀಸ್ ತನ್ನ ಒಟ್ಟು ಸಾಲದ ಒಂದಷ್ಟು ಭಾಗ ತೀರಿಸುವ ಸಲುವಾಗಿ ತನ್ನ ಬಂದರು, ವಿಮಾನ ನಿಲ್ದಾಣ ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಬಂದಿದೆ.

ಬೆಂಕಿಯಿಂದ ಬಾಣಲೆಗೆ

ಬೆಂಕಿಯಿಂದ ಬಾಣಲೆಗೆ

ಒಟ್ಟಿನಲ್ಲಿ ಗ್ರೀಸ್ ದೇಶ ನಡೆಯುವ ಹಾದಿ ಹಸನಾಗಿಲ್ಲ , ಅವರ ಸ್ಥಿತಿ 'ಬೆಂಕಿಯಿಂದ ಬಾಣಲೆಗೆ 'ಎನ್ನುವಂತಾಗಿದೆ ಅಷ್ಟೇ . ಸದ್ಯಕ್ಕೆ ಯುರೋ ಜೋನ್ ನಿಂದ ಹೊರಹೋಗುವುದು ತಪ್ಪಿಸಿಕೊಂಡು ಬೀಸುವ ದೊಣ್ಣೆ ಯಿಂದ ಬಚಾವಾಗಿದೆ ಅಷ್ಟೇ..

English summary
Latest updates on debt crisis Greece: Euro currency will continue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X