• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಟಾಕಿ ತುಂಬಿದ ಹಡಗು ಲೆಬನಾನ್ ಸ್ಫೋಟಕ್ಕೆ ಕಾರಣವೇ?

By ಅನಿಕೇತ್
|

ಬೈರುತ್, ಆಗಸ್ಟ್ 5: ಭೀಕರ ಸ್ಫೋಟದ ಸದ್ದಿಗೆ ಲೆಬನಾನ್ ರಾಜಧಾನಿ ಬೈರುತ್ ಸಿಟಿ ನಡುಗಿಹೋಗಿದೆ. ಬೈರುತ್ ನಗರದ ಬಂದರು ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಫೋಟ ಇಡೀ ನಗರವನ್ನು ನಲುಗಿಸಿದೆ.

   ರಸಗೊಬ್ಬರ ಮತ್ತು ಬಾಂಬ್ ಬಳಕೆಯಲ್ಲಿ ಬಳಸುವ ಅಮೋನಿಯಂ ನೈಟ್ರೇಟ್ ಸ್ಪೋ | Oneindia Kannada

   ಇತ್ತೀಚಿನ ವರದಿಗಳ ಪ್ರಕಾರ 78ಕ್ಕೂ ಹೆಚ್ಚು ಜನ ಬಲಿಯಾಗಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸ್ಫೋಟದಿಂದಾಗಿ 4ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಲೆಬನಾನ್ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

   ಕಳೆದ ಹಲವು ವರ್ಷಗಳಿಂದಲೂ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕೆಲ ದಿನಗಳಿಂದ ಗುಂಡುಗಳು ಹೂಂಕರಿಸುತ್ತಿದ್ದವು. ಆದರೆ ಇದೀಗ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರಿ ಸ್ಪೋಟ ಲೆಬನಾನ್‌ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಜೀವ ಉಳಿಸಿಕೊಂಡರೆ ಸಾಕಪ್ಪ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

   ಇಷ್ಟೆಲ್ಲಾ ನಡೆದಿದ್ದರೂ ಸ್ಫೋಟಕ್ಕೆ ಹೊಣೆ ಯಾರು ಹಾಗೂ ಕಾರಣ ಏನು ಅನ್ನೋದು ಸ್ಫಷ್ಟವಾಗಿ ತಿಳಿದುಬಂದಿಲ್ಲ. ಈ ಸ್ಫೋಟದ ದೃಶ್ಯಗಳು ಸ್ಥಳೀಯರ ಮೊಬೈಲ್ ಹಾಗೂ ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿದ್ದು ಬೆಚ್ಚಿಬೀಳುವಂತಿದೆ. ಬೈರುತ್ ಬ್ಲಾಸ್ಟ್ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 2005ರಲ್ಲಿ ಹತ್ಯೆಯಾಗಿದ್ದ ಲೆಬನಾನ್

   ಮಾಜಿ ಪ್ರಧಾನಿ ರಫಿಕ್ ಹರಿರಿ ಕುರಿತಾದ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಮಹತ್ವದ ತೀರ್ಪಿಗೂ ಮುನ್ನಾ ಲೆಬನಾನ್ ನಡುಗಿಹೋಗಿದೆ.

   ಬೀರತ್ ನಲ್ಲಿ ಭಾರೀ ಸ್ಫೋಟದಿಂದ 100ಕ್ಕೂ ಹೆಚ್ಚು ಮಂದಿಗೆ ಗಾಯ

   ಒಂದೇ ಏಟಿಗೆ ಅಕ್ಕಪಕ್ಕದ ಕಟ್ಟಡಗಳು ಧೂಳ್ ಧೂಳ್..!

   ಸ್ಥಳೀಯರು ತೆಗೆದಿರುವ ವೀಡಿಯೋಗಳಲ್ಲಿ ಕಾಣಿಸುವಂತೆ ಸ್ಫೋಟ ಸಂಭವಿಸಿದ ತಕ್ಷಣ ಕಿತ್ತಳೆ ಬಣ್ಣದಲ್ಲಿ ಗೋಪುರ ಆಕಾರದಲ್ಲಿ ಹೊಗೆ ಆಕಾಶದ ಎತ್ತರಕ್ಕೆ ಹಾರಿದೆ. ಶಬ್ಧದ ತೀವ್ರತೆ ಹಾಗೂ ಶಬ್ಧ ಸೃಷ್ಟಿಸಿರುವ ದೊಡ್ಡ ದೊಡ್ಡ ತರಂಗಗಳು ಅಕ್ಕಪಕ್ಕದ ಕಟ್ಟಡಗಳನ್ನು ಧೂಳೆಬ್ಬಿಸಿವೆ. ಬಂದರು ಪ್ರದೇಶದಲ್ಲಿದ್ದ ಗೋಡೌನ್ನ ಕಿಟಕಿ ಗಾಜು ಹಾಗೂ ಬಾಗಿಲುಗಳು ಪೀಸ್ ಪೀಸ್ ಆಗಿವೆ.

   ಪಟಾಕಿ ತುಂಬಿದ ಹಡಗಿನಿಂದ ಸ್ಫೋಟ..?

   ಸ್ಥಳೀಯ ಅಧಿಕಾರಿಗಳ ಪ್ರಾಥಮಿಕ ವರದಿಗಳ ಪ್ರಕಾರ ಪಟಾಕಿ ತುಂಬಿದ್ದ ಹಡಗು ಸ್ಫೋಟಗೊಂಡ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ ಸ್ಫೋಟದ ತೀವ್ರತೆ ಪಟಾಕಿಗಿಂತಲೂ ತೀವ್ರವಾಗಿರುವುದು ಘಟನೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

   ಲೆಬನಾನ್ ನಲ್ಲಿರುವ ಭಾರತೀಯರ ನೆರವಿಗೆ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ.

   English summary
   Horrible blast in the Lebanon's capital city Beirut has killed more than 78people and injured around 4,000 others.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X