ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿ ಮಾಸ್ಟರ್ ಮೈಂಡ್ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ

|
Google Oneindia Kannada News

ಇಸ್ಲಾಮಾಬಾದ್,ಜನವರಿ 8: ಮುಂಬೈ 26/11 ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಕಾರ್ಯಾಚರಣ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಇಲ್ಲಿನ ನ್ಯಾಯಾಲಯವೊಂದು 15 ವರ್ಷಗಳ ಶಿಕ್ಷೆ ವಿಧಿಸಿದೆ.

ಉಗ್ರ ಝಕಿ ಉರ್ ರೆಹಮಾನ್ ಲಖ್ವಿಗೆ ಜೈಲುಶಿಕ್ಷೆ, ದಂಡ ವಿಧಿಸಿರುವುದನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಗತಿಸಿದೆ. ಮುಂಬೈ ದಾಳಿ ಅಷ್ಟೇ ಅಲ್ಲದೆ ಅನೇಕ ಉಗ್ರ ಚಟುವಟಿಕೆಗಳಿಗೆ ಹಣ ಒದಗಿಸುತ್ತಿದ್ದ ಆರೋಪ ಲಖ್ವಿ ಮೇಲಿದೆ.

ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್

ಭಯೋತ್ಪಾದನೆ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ 61 ವರ್ಷದ ಲಖ್ವಿಯನ್ನು ಲಾಹೋರ್ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸರು ಜನವರಿ 2 ರಂದು ಬಂಧಿಸಿದ್ದರು.

Lashkar-e-Tayiba operational commander Lakhvi sentenced to 15 years in jail

ನವೆಂಬರ್ 26, 2008ರಂದು ಮುಂಬೈನ 12 ಪ್ರದೇಶಗಳಲ್ಲಿ ದಾಳಿ ಮಾಡಿದ ಪಾಕಿಸ್ತಾನ ಮೂಲದ 10 ಉಗ್ರರು ಹತ್ಯಾಕಾಂಡವನ್ನು ಸೃಷ್ಟಿಸಿದ್ದರು. ತಾಜ್ ಮಹಲ್ ಹೋಟೆಲ್, ಒಬೆರಾಯ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ (ಚಾಬಾದ್) ಮನೆ, ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ಮೇಲೆ ನಡೆದ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಈ ದುಷ್ಕೃತ್ಯದ ಪ್ರಮುಖ ರೂವಾರಿಗಳಲ್ಲಿ ಲಖ್ವಿ ಕೂಡಾ ಒಬ್ಬ. ಐದು ವರ್ಷಗಳ ಹಿಂದೆ ಬಂಧಿತನಾಗಿದ್ದ ಲಖ್ವಿ ಜಾಮೀನಿನ ಮೇಲೆ ಹೊರ ಬಂದಿದ್ದ. ಆದರೆ, ಎಂದಿನ ದುಷ್ಕೃತ್ಯಗಳನ್ನು ಮುಂದುವರೆಸಿದ್ದ ಎಂದು ತಿಳಿದು ಬಂದಿದೆ.

ಮುಂಬೈ ದಾಳಿಗೆ 12 ವರ್ಷ: ರತನ್ ಟಾಟಾ ಭಾವುಕ ಬರಹಮುಂಬೈ ದಾಳಿಗೆ 12 ವರ್ಷ: ರತನ್ ಟಾಟಾ ಭಾವುಕ ಬರಹ

ಪ್ಯಾರೀಸ್ ಮೂಲದ ಆರ್ಥಿಕ ಭಯೋತ್ಪಾದಕರ ನಿಗ್ರಹ ದಳದ ಕಪ್ಪುಪಟ್ಟಿಯಲ್ಲಿ ಹಫೀಜ್ ಸಯೀದ್, ಮಸೂದ್ ಅಜರ್ ಜೊತೆಗೆ ಲಖ್ವಿ ಹೆಸರು ಇತ್ತು. 2020ರಲ್ಲಿ ಸಯೀದ್ ನಾಲ್ಕು ಪ್ರಕರಣಗಳಲ್ಲಿ 36 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಲಖ್ವಿಗೆ ಅಧಿಕ ಅವಧಿ ಜೈಲುಶಿಕ್ಷೆ ಸಿಕ್ಕಿದೆ.

English summary
A Pakistan court has sentenced Zaki-ur-Rehman Lakhvi, the operational commander of the Lashkar-e-Tayiba to 15 years in jail and also ordered him to pay a fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X