ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಇತಿಹಾಸದಲ್ಲೇ ಭೀಕರ ಶೂಟೌಟ್, ನರಮೇಧಕ್ಕೆ 59 ಬಲಿ, 500 ಜನರಿಗೆ ಗಾಯ

By Sachhidananda Acharya
|
Google Oneindia Kannada News

ಲಾಸ್ ವೇಗಾಸ್, ಅಕ್ಟೋಬರ್ 2: 1949ರ ನಂತರ ಇದೇ ಮೊದಲ ಬಾರಿಗೆ ಭೀಕರ ನರಮೇಧಕ್ಕೆ ಅಮೆರಿಕಾ ಸಾಕ್ಷಿಯಾಗಿದೆ. ಜೂಜು ಅಡ್ಡೆಗೆ ಖ್ಯಾತವಾಗಿರುವ ಅಮೆರಿಕಾದ ಲಾಸ್ ವೇಗಾಸ್ ಜೂಜು ಅಡ್ಡೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 59 ಜನ ಸಾವನ್ನಪ್ಪಿದ್ದು 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಇದೊಂದು 'ಒಂಟಿ ತೋಳ' (ಸಿಂಗಲ್ ವೂಲ್ಫ್) ಮಾದರಿಯ ದಾಳಿ ಎಂದು ಲಾಸ್ ವೇಗಾಸ್ ಮೆಟ್ರೋ ಪೊಲೀಸರು ಹೇಳಿದ್ದಾರೆ. ಈ ದಾಳಿ ನಡೆಸದಿ ಬಂದೂಕುಧಾರಿ ಸ್ಟೀಫನ್ ಪ್ಯಾಡ್ಡಾಕ್ ನನ್ನು ಹೊಡೆದುರುಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Las Vegas shooting: 20 killed, over 100 injured in Mandalay Bay casino attack

ಮ್ಯಾಂಡಲಾಯ್ ಬೇ ರೆಸಾರ್ಟ್ ಮತ್ತು ಕ್ಯಾಸಿನೋದಲ್ಲಿ ಈ ಶೂಟೌಟ್ ನಡೆದಿದೆ. ಗುಂಡಿನ ದಾಳಿ ನಡೆಯುವ ವೇಳೆ ಅಲ್ಲಿ ಸ್ಟೇಜ್ ಮೇಲೆ ಸಂಗೀತ ಪ್ರದರ್ಶನ ನಡೆಯುತ್ತಿತ್ತು. ಇದನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಸಣ್ಣ ಪ್ರದೇಶದಲ್ಲಿ ಸುಮಾರು 30,000ಕ್ಕೂ ಹೆಚ್ಚು ಜನ ನೆರೆದಿದ್ದರು.

ಇದೇ ಸಮಯಕ್ಕೆ ಸರಿಯಾಗಿ 32ನೇ ಮಹಡಿಯಿಂದ ಬಂದೂಕುಧಾರಿ ಯದ್ವಾತದ್ವಾ ಗುಂಡಿನ ಮಳೆಗರೆದ ಎಂದು ಪ್ರತ್ಯಕ್ಷದರ್ಶಿಗಳು 'ಸಿಎನ್ಎನ್' ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Las Vegas shooting: 20 killed, over 100 injured in Mandalay Bay casino attack

ಮರಿಲೋ ಡ್ಯಾನ್ಲೇ ಸಾವಿಗೀಡಾದ ಬಂಧೂಕುದಾರಿಯ ರೂಮ್ ಮೇಟ್ ಎಂದು ಪೊಲೀಸರು ಶಂಕಿಸಿದ್ದು ಆಕೆಗಾಗಿ ಹುಡುಕಾಡುತ್ತಿದ್ದಾರೆ. ಆಕೆ ಏಷ್ಯಾ ಮೂಲದವಳು ಎನ್ನಲಾಗಿದೆ.

1949ರ ನಂತರ ಅಮೆರಿಕಾದಲ್ಲಿ ನಡೆದ ಭೀಕರ ನರಮೇಧ ಇದಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸರೂ ಸಾವನ್ನಪ್ಪಿದ್ದಾರೆ.

English summary
At least 20 people, including two police officers, were killed and over 100 others wounded in an incident of shootout at the Mandalay Bay Resort and Hotel in Las Vegas. The Las Vegas Police in its media briefing confirmed the death of 20 people and said "the shooter was local."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X