• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಲಾರಸ್ ಅಧ್ಯಕ್ಷನ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಜನರ ಪ್ರತಿಭಟನೆ

|

ಬೆಲಾರಸ್, ಆಗಸ್ಟ್ 24: ಬೆಲಾರಸ್ ಅಧ್ಯಕ್ಷನ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಯುರೋಪ್‌ನಲ್ಲಿರುವ ಒಂದು ದೇಶ ಬೆಲಾರಸ್‌, ಇಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿತ್ತು, ಅದರಲ್ಲಿ ಶೇ.80ರಷ್ಟು ಮತ ಪಡೆದಿದ್ದೇನೆ ಎಂದು ಹೇಳಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೋ ಮತ್ತೆ ಅಧಿಕಾರದ ಗದ್ದುಗೆ ಏರಿದ್ದರು.

ಇದಾದ ಬಳಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. 7 ಸಾವಿರ ಮಂದಿಯನ್ನು ಬಂಧಿಸಲಾಗಿತ್ತು.

ಯುರೋಪಿಯನ್ ಒಕ್ಕೂಟ ಕೂಡ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿತ್ತು. ಇದೀಗ ಅಧ್ಯಕ್ಷ ಅಲೆಕ್ಸಾಂಡರ್ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಅವರ ನಿವಾಸದ ಸುತ್ತಮುತ್ತ ಪ್ರತಿಭಟನಾಕಾರರು ಇದ್ದ ಕಾರಣ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದರು.15 ದಿನಗಳಿಂದ ಹಿಂದೆಂದೂ ನಡೆದಿರದ ರೀತಿಯ ಪ್ರತಿಭಟನೆ ನಡೆಯುತ್ತಿದೆ. ಸುಮಾರು 2 ಲಕ್ಷ ಮಂದಿ ಪ್ರತಿಭಟನಾಕಾರರಿದ್ದಾರೆ.

ಇಂಡಿಪೆಂಡೆನ್ಸ್ ಸ್ಕ್ವೇರ್ ಸಮೀಪ ಬಿಳಿ ಹಾಗೂ ಕೆಂಪು ಬಾವುಟವನ್ನು ಹಿಡಿದು ಪ್ರತಿಭಟಿಸುತ್ತಿದ್ದಾರೆ. ಲುಕಶೆಂಕೋ 1994ರಿಂದ ಅಧಿಕಾರದಲ್ಲಿದ್ದಾರೆ. ಆಗಸ್ಟ್ 9 ರಂದು ಚುನಾವಣೆ ನಡೆದಿತ್ತು.

ಈ ಪ್ರತಿಭಟನೆಯನ್ನು ಕಡಿಮೆ ಮಾಡಲು ಪೊಲೀಸರಿಂದ ಸಾಧ್ಯವಾಗದೆ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.

English summary
Belarusian President Alexander Lukashenko has made a show of defiance against the massive protests demanding his resignation, toting a rifle and wearing a bulletproof vest as he strode off a helicopter that landed at his residence while demonstrators massed nearby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X