ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ತಡೆಗೆ ಪ್ರಯಾಣ ನಿಷೇಧ ಪರಿಹಾರವಲ್ಲವೇ? ತಜ್ಞರು ಸಲಹೆ

|
Google Oneindia Kannada News

ನವದೆಹಲಿ ನವೆಂಬರ್ 28: ವಿಶ್ವ ಆರೋಗ್ಯ ಸಂಸ್ಥೆ B.1.1.529 ಎನ್ನುವ ಕೊರೊನಾ ರೂಪಾಂತರಕ್ಕೆ ಓಮಿಕ್ರಾನ್ (Omicron) ಎಂದು ಹೆಸರಿಸಿದೆ. ಓಮಿಕ್ರಾನ್ ಸೋಂಕು ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದ್ದು, ಈಗ ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಬ್ರಿಟನ್‌ನಲ್ಲಿ ವರದಿಯಾಗಿದೆ.

ಕೊರೊನಾ ರೂಪಾಂತರಿ ಓಮಿಕ್ರಾನ್ ಕೂಡ ವಿಶ್ವವ್ಯಾಪಿ ಹರಡುವ ಭೀತಿ ಹೆಚ್ಚಾಗಿದೆ. ಹೀಗಾಗಿ ಹೊಸ ರೂಪಾಂತರದ ಪ್ರಕರಣಗಳು ಪತ್ತೆಯಾದ ರಾಷ್ಟ್ರಗಳ ಪ್ರಯಾಣ ನಿಷೇಧವನ್ನು ಹೇರಲು ಜಗತ್ತಿನಾದ್ಯಂತ ದೇಶಗಳು ಧಾವಿಸಿವೆ. ಆದರೆ ಓಮಿಕ್ರಾನ್ ತಡೆಗೆ ಪ್ರಯಾಣ ನಿಷೇಧ ಪರಿಹಾರವಲ್ಲ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ದೇಶದಿಂದ ದೇಶಕ್ಕೆ ಓಮಿಕ್ರಾನ್ ಹರಡದಂತೆ ತಡೆಯಲು ಹಲವಾರು ಸಲಹೆಯನ್ನೂ ಕೂಡ ತಜ್ಞರು ನೀಡಿದ್ದಾರೆ.

B.1.1.529 ಹರಡುವ ಭೀತಿ: ದಕ್ಷಿಣ ಆಫ್ರಿಕಾದಿಂದ ವಿಮಾನ ಪ್ರಯಾಣಕ್ಕೆ ತುರ್ತು ತಡೆB.1.1.529 ಹರಡುವ ಭೀತಿ: ದಕ್ಷಿಣ ಆಫ್ರಿಕಾದಿಂದ ವಿಮಾನ ಪ್ರಯಾಣಕ್ಕೆ ತುರ್ತು ತಡೆ

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್‌ನ ನಿರ್ದೇಶಕ ಹಾಗೂ ವೈದ್ಯರಾದ ಸೌಮಿತ್ರ ದಾಸ್ ಅವರು, 'ಓಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ನಿರ್ಬಂಧಿಸಲು ಭಾರತ ಸರ್ಕಾರವು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆದರೆ ಗಡಿಗಳನ್ನು ಮುಚ್ಚುವುದು ಪರಿಹಾರವಲ್ಲ' ಎಂದಿದ್ದಾರೆ.

Travel ban not a solution to curb Omicron variant spread?: expert advice

ಅದೇ ರೀತಿ, ದಕ್ಷಿಣ ಆಫ್ರಿಕಾದ ವಿಟ್ವಾಟರ್‌ರಾಂಡ್ ವಿಶ್ವವಿದ್ಯಾಲಯದ ವ್ಯಾಕ್ಸಿನಾಲಜಿ ಪ್ರಾಧ್ಯಾಪಕ ಶಬೀರ್ ಎ ಮಾಧಿ, ''ಪ್ರಯಾಣ ನಿಷೇಧವನ್ನು ವಿಧಿಸುವುದು 'ನಿಷ್ಕಪಟ' ಪರಿಹಾರವಾಗಿದೆ ಎಂದು ಹೇಳಿದರು. ಬದಲಾಗಿ, ಹೊಸ ರೂಪಾಂತರದೊಂದಿಗೆ ವ್ಯವಹರಿಸುವಾಗ ದೇಶಗಳು ಹತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಐದು ಕ್ರಮಗಳನ್ನು ತಪ್ಪಿಸಬೇಕು" ಎಂದು ಅವರು ಸಲಹೆ ನೀಡಿದರು.

ದೇಶಗಳು ಮಾಡಬಾರದ ಐದು ವಿಷಯಗಳು

1. ನಿರ್ದಾಕ್ಷಿಣ್ಯವಾಗಿ ಹೆಚ್ಚಿನ ನಿರ್ಬಂಧಗಳನ್ನು ಹೇರಬೇಡಿ

ಒಳಾಂಗಣ ಕೂಟಗಳನ್ನು ಹೊರತುಪಡಿಸಿ ನಿರ್ಬಂಧಗಳನ್ನು 'ವಿವೇಚನೆಯಿಲ್ಲದೆ' ಹೇರಬಾರದು ಎಂದು ಪ್ರೊಫೆಸರ್ ಶಬೀರ್ ಎ ಮಾಧಿ ಹೇಳಿದ್ದಾರೆ. "ದಕ್ಷಿಣ ಆಫ್ರಿಕಾ ಕಳೆದ ಮೂರು ಅಲೆಗಳಲ್ಲಿ ಸೋಂಕನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ. 60-80 ಪ್ರತಿಶತದಷ್ಟು ಜನರು ಸೆರೋ-ಸರ್ವೆಗಳು ಮತ್ತು ಮಾಡೆಲಿಂಗ್ ಡೇಟಾದ ಆಧಾರದ ಮೇಲೆ ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಪರಿಗಣಿಸಲಾಗಿದೆ. ಮುಖ್ಯವಾಗಿ, ಆರ್ಥಿಕವಾಗಿ ಹಾನಿಕಾರಕ ನಿರ್ಬಂಧಗಳು ಅವಧಿಯನ್ನು ಮಾತ್ರ ಮುಂದೂಡುತ್ತವೆ. ಸುಮಾರು 2-3 ವಾರಗಳವರೆಗೆ ಸೋಂಕು ಹರಡದಂತೆ ತಡೆಯಲು ನಿರ್ಬಂಧಗಳನ್ನು ಹೇರಬಹುದು. ಇದನ್ನು ಹೀಗೇ ಮುಂದೂಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

Travel ban not a solution to curb Omicron variant spread?: expert advice

2. ದೇಶೀಯ/ಅಂತರರಾಷ್ಟ್ರೀಯ ಪ್ರಯಾಣ ನಿಷೇಧಗಳನ್ನು ಹೇರಬೇಡಿ

"ಪ್ರಯಾಣ ನಿಷೇಧದಿಂದಾಗಿ ಮಾತ್ರ ವೈರಸ್ ಹರಡದಂತೆ ತಡೆಯಲು ಸಾಧ್ಯವಿಲ್ಲ. ಬೆರಳೆಣಿಕೆಯಷ್ಟು ದೇಶಗಳ ಮೇಲೆ ಪ್ರಯಾಣ ನಿಷೇಧವನ್ನು ವಿಧಿಸುವುದರಿಂದ ರೂಪಾಂತರ ವೈರಸ್ ಹರಡುವುದು ನಿಲ್ಲುತ್ತದೆ ಎಂದು ನಂಬುವುದು ನಿಷ್ಕಪಟವಾಗಿದೆ. ಈ ವೈರಸ್ ಪ್ರಪಂಚದಾದ್ಯಂತ ಹರಡುತ್ತದೆ. ನೀವು ಪ್ರಪಂಚದ ಇತರ ಭಾಗಗಳನ್ನು ಮುಚ್ಚುವ ದ್ವೀಪ ರಾಷ್ಟ್ರವಾಗಿಬಿಡಬಹುದು" ಎಂದು ಪ್ರೊಫೆಸರ್ ಶಬೀರ್ ಎ ಮಾಧಿ ಹೇಳಿದರು.

ಪ್ರಯಾಣ ನಿಷೇಧವು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಬಹುದು. ಹೆಚ್ಚು ಪ್ರಕರಣಗಳನ್ನು ಗುರುತಿಸುವುದು ಮತ್ತು ಲಸಿಕೆಯನ್ನು ಕಡ್ಡಾಯಗೊಳಿಸಲು ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಪ್ರವೇಶ ಸ್ಕ್ರೀನಿಂಗ್ ಕಾರ್ಯಕ್ರಮಗಳ ಮೂಲಕ ಹರಡುವಿಕೆಯನ್ನು ತಡೆಯಬಹುದು ಎಂದು ಶಬೀರ್ ಎ ಮಾಧಿ ಹೇಳಿದ್ದಾರೆ.

3. ಜಾರಿಗೊಳಿಸಲಾಗದ ನಿಯಮಾವಳಿಗಳನ್ನು(ಪ್ರಯಾಣ ನಿಷೇಧ) ಪ್ರಕಟಿಸಬೇಡಿ

4. ಹೆಚ್ಚಿನ ಅಪಾಯದ ವ್ಯಕ್ತಿಗಳಿಗೆ ವ್ಯಾಕ್ಸಿನೇಷನ್/ಬೂಸ್ಟರ್ ಡೋಸ್‌ಗಳನ್ನು ವಿಳಂಬ ಮಾಡಬೇಡಿ

5. ಹರ್ಡ್ ಇಮ್ಯುನಿಟಿ ಪರಿಕಲ್ಪನೆಯನ್ನು ಮಾರಾಟ ಮಾಡುವುದನ್ನು ನಿಲ್ಲಿಸಿ

Travel ban not a solution to curb Omicron variant spread?: expert advice

ದೇಶಗಳು ಮಾಡಬೇಕಾದ ಹತ್ತು ವಿಷಯಗಳು

1. ಆರೋಗ್ಯ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ

2. ಎಲ್ಲರಿಗೂ ಲಸಿಕೆಗಳನ್ನು ಒದಗಿಸಿ

3. ಎಲ್ಲಾ ಸ್ಥಳಳಲ್ಲಿ ಲಸಿಕೆ ಕಡ್ಡಾಯವಾಗಿ ಪಡೆಯುವಂತೆ ಪೋಸ್ಟರ್‌ ಗಳನ್ನು ಅಳವಡಿಸಿ

4. ಲಸಿಕೆ ಹಾಕಿಸಿಕೊಳ್ಳದ ಜನರನ್ನು ತಲುಪಲು ಪ್ರಯತ್ನಗಳನ್ನು ಮುಂದುವರಿಸಿ

5. ಹೆಚ್ಚಿನ ಅಪಾಯದ ಗುಂಪುಗಳಿಗೆ ಬೂಸ್ಟರ್ ಡೋಸ್‌ಗಳನ್ನು ನೀಡಿ

6. ಜವಾಬ್ದಾರಿಯುತ ನಡವಳಿಕೆಯನ್ನು ಪ್ರೋತ್ಸಾಹಿಸಿ

7. ಪ್ರಾದೇಶಿಕ ಮಟ್ಟದಲ್ಲಿ ಮಾನಿಟರ್ ಬೆಡ್ ಲಭ್ಯತೆ ಇರಲಿ

8. ವೈರಸ್‌ನೊಂದಿಗೆ ಬದುಕಲು ಕಲಿಯಿರಿ

9. ವಿಜ್ಞಾನವನ್ನು ಅನುಸರಿಸಿ, ರಾಜಕೀಯಕ್ಕಾಗಿ ಅದನ್ನು ವಿರೂಪಗೊಳಿಸಬೇಡಿ

10. ಹಿಂದಿನ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಿ

English summary
The World Health Organization has named the corona version B.1.1.529 as Omicron. Omicron infection is said to be more dangerous and is now reported in South Africa, Belgium and Britain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X