ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪು ಗ್ರಹದ ಅಂಗಳದಲ್ಲಿದೆಯಂತೆ ತಂಪಾದ ನೀರಿನ ಕೆರೆ

|
Google Oneindia Kannada News

ಜೀವಿಗಳ ಆವಾಸವಿದೆ ಎಂದು ನಂಬಲಾಗಿರುವ ಮಂಗಳ ಗ್ರಹದಲ್ಲಿ ದ್ರವರೂಪದ ನೀರಿನ ಸೆಲೆಗಳು ಇರುವುದಕ್ಕೆ ಪುರಾವೆಗಳು ಪತ್ತೆಯಾಗಿವೆ.

ಮಂಗಳ ಗ್ರಹದ ದಕ್ಷಿಣ ಧ್ರುವದಲ್ಲಿ ಸುಮಾರು 20 ಕಿ.ಮೀ.ಯಷ್ಟು ವಿಸ್ತಾರವಾಗಿ ಹರಡಿರುವ ಹಿಮಹಾಸಿನ ಅಡಿಯಲ್ಲಿ ಕೆರೆಯ ನೆಲೆಗಳಿವೆ ಎಂದು ನಂಬಲಾಗಿದೆ.

ದೈತ್ಯ ಗುರುವಿಗೆ ಇದೆ ಇನ್ನೂ ಡಜನ್ ಹೊಸ ಚಂದ್ರರ ನಂಟುದೈತ್ಯ ಗುರುವಿಗೆ ಇದೆ ಇನ್ನೂ ಡಜನ್ ಹೊಸ ಚಂದ್ರರ ನಂಟು

ಈ ಹಿಂದಿನ ಸಂಶೋದನೆಗಳು ಮಂಗಳದ ಮೇಲ್ಮೈನಲ್ಲಿ ದ್ರವ ನೀರಿನ ಹರಿವು ಇರುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದವು. ಆದರೆ, ಈಗಲೂ ಅಲ್ಲಿ ನಿಂತ ನೀರಿನ ಸೆಲೆಗಳು ಇವೆ ಎನ್ನುವುದಕ್ಕೆ ಕೆಲವು ಸಂಕೇತಗಳು ದೊರೆತಿವೆ.

ಕ್ಯೂರಿಯಾಸಿಟಿ ರೋವರ್ ಸಂಶೋಧನೆ

ಕ್ಯೂರಿಯಾಸಿಟಿ ರೋವರ್ ಸಂಶೋಧನೆ

ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆಯು ಮಂಗಳದ ಮೇಲ್ಮೈನಲ್ಲಿ ಈ ಹಿಂದೆ ಕೆರೆಗಳಿದ್ದು, ಅದರಲ್ಲಿ ನೀರಿನ ಅಸ್ತಿತ್ವವಿತ್ತು ಎಂಬುದನ್ನು ಬಹಿರಂಗಪಡಿಸಿದೆ.

ಆದರೆ, ಗ್ರಹದ ತೆಳುವಾದ ವಾಯುಮಂಡಲದ ಕಾರಣ ಅಲ್ಲಿನ ವಾತಾವರಣ ಹೆಚ್ಚು ತಣ್ಣಗಿದ್ದು, ಅದರ ಹೆಚ್ಚಿನ ಪ್ರಮಾಣದ ನೀರು ಮಂಜುಗಡ್ಡೆಗಳಾಗಿ ಬದಲಾಗಿವೆ.

ಈ ಸಂಶೋಧನೆಯು ವಿಜ್ಞಾನಲೋಕದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ಏಕೆಂದರೆ ಮಂಗಳ ಗ್ರಹದಲ್ಲಿ ನೀರಿನ ಅಸ್ತಿತ್ವದ ಪತ್ತೆಗಾಗಿ ಹಲವು ರೀತಿಯ ಸಂಶೋಧನೆ ನಡೆಸಿದ್ದ ಅವರಿಗೆ ನಿರಾಸೆಯ ಫಲಿತಾಂಶ ದೊರೆತಿತ್ತು.

ಭೂಮಿಯಾಚೆಗೆ ಜೀವಿಗಳ ಅಸ್ತಿತ್ವದ ಕುರಿತ ಅಧ್ಯಯನಕ್ಕೆ ಸೂಕ್ತ ಜೀವವಿಜ್ಞಾನದ ಸಂಗತಿಗಳು ಇದುವರೆಗೂ ದೃಢಪಟ್ಟಿರಲಿಲ್ಲ.

ಚಿಕ್ಕ ಗಾತ್ರದ ಕೆರೆ

ಚಿಕ್ಕ ಗಾತ್ರದ ಕೆರೆ

ದಕ್ಷಿಣ ಧ್ರುವದಲ್ಲಿ ಇರುವುದು ತುಂಬಾ ದೊಡ್ಡ ಕೆರೆ ಆಗಿರಲಾರದು ಎಂದು ಅಧ್ಯಯನದ ನೇತೃತ್ವ ವಹಿಸಿರುವ ಇಟಾಲಿಯನ್ ನ್ಯಾಷನಲ್ ಆಸ್ಟ್ರೊಫಿಸಿಕ್ಸ್ ಸಂಸ್ಥೆಯ ಪ್ರೊಫೆಸರ್ ರಾಬರ್ಟೊ ಒರೊಸೀ ಹೇಳಿದ್ದಾರೆ.

ಇಲ್ಲಿರುವ ನೀರಿನ ಸಾಂದ್ರತೆ ಎಷ್ಟು ಎನ್ನುವುದನ್ನು ತಿಳಿಯಲು ಸಾಧ್ಯವಾಗಿಲ್ಲ. ಆದರೆ, ಕನಿಷ್ಠ ಒಂದು ಮೀಟರ್ ಆಳದವರೆಗೆ ನೀರು ಇರಬಹುದು ಎಂದು ಅಧ್ಯಯನ ತಂಡ ಅಂದಾಜಿಸಿದೆ.

ಇದು ಬಂಡೆಗಳು ಮತ್ತು ಹಿಮದ ನಡುವಣ ಜಾಗವನ್ನು ತುಂಬಿಕೊಂಡ ಕರಗಿದ ನೀರಲ್ಲ. ಇದು ನಿಶ್ಚಿತವಾಗಿಯೂ ನೀರಿನ ಸೆಲೆ ಎಂದು ಅವರು ತಿಳಿಸಿದ್ದಾರೆ.

ವಸುಂಧರೆಯ ಹತ್ತಿರ ಬರಲಿದ್ದಾಳೆ ಮಂಗಳೆ

ನೆರೆಹೊರೆಯವರಾದ ಭೂಮಿ ಮತ್ತು ಮಂಗಳ ಗ್ರಹಗಳು ಮುಂದಿನ ವಾರ ಹತ್ತಿರ ಬರಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಂಜೆ ವೇಳೆ ಆಕಾಶ ವೀಕ್ಷಿಸಿದಾಗ ಕಿತ್ತಳೆ-ಕೆಂಪು ನಕ್ಷತ್ರವೊಂದು ಹೊಳೆಯುವುದು ಕಾಣಿಸಬಹುದು. ಆದರೆ ಅದು ತಾರೆಯಲ್ಲ, ಮಂಗಳ ಗ್ರಹ.

ವಾಯುಮಂಡಲದಲ್ಲಿ ಸುತ್ತಾಡುವ ಈ ಗ್ರಹಗಳು ಮುಂದಿನ ಮಂಗಳವಾರ (ಜುಲೈ 31) ಅತಿ ಸಮೀಪಕ್ಕೆ ಬರಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರಾತ್ರಿ ಹೆಚ್ಚು ಪ್ರಕಾಶಮಾನ

2003ರಲ್ಲಿ ಈ ಎರಡೂ ಗ್ರಹಗಳು ಹತ್ತಿರವಾಗಿದ್ದು 60 ಸಾವಿರ ವರ್ಷದಲ್ಲೇ ಅತಿ ಹತ್ತಿರದ ಸಾಮೀಪ್ಯವಾಗಿತ್ತು. ಈಗ ಅದಕ್ಕಿಂತಲೂ ಹೆಚ್ಚು ಸಮೀಪಕ್ಕೆ ಬರಲಿವೆ.

ಅಂದು ಭೂಮಿಯ ರಾತ್ರಿಯ ಆಕಾಶ ಪ್ರಕಾಶಮಾನವಾಗಲಿದೆ ಎಂದು ಬಾಹ್ಯಾಕಾಶ ಬ್ಲಾಗರ್ ಜೇಸನ್ ಮೇಜರ್ ಹೇಳಿದ್ದಾರೆ.

ದೂಳಿನ ಕಣಗಳು ಹೆಚ್ಚಿರುವುದರಿಂದ ಮಂಗಳ ಗ್ರಹವು ಗುರುಗ್ರಹಕ್ಕಿಂತಲೂ ಹೆಚ್ಚು ಪ್ರಕಾಶಮಾನವಾಗಿ ಕಾಣಲಿದೆ.

ಆಗ್ನೇಯ ದಿಕ್ಕಿನಲ್ಲಿ ರಾತ್ರಿ 8.30ರ ಬಳಿಕ ಇದು ಕಂಡುಬರಲಿದೆ. ಮಧ್ಯರಾತ್ರಿ ದಕ್ಷಿಣ ಆಕಾಶದಲ್ಲಿ ಹೆಚ್ಚು ಪ್ರಕಾಶಿಸಲಿದೆ.

35.8 ಮಿಲಿಯನ್ ಮೈಲು ದೂರ

ಎರಡೂ ಗ್ರಹಗಳು ಸಮೀಪ ಎಂದರೂ ಮಿಲಿಯನ್‌ಗಟ್ಟಲೆ ಮೈಲು ದೂರದಲ್ಲಿ ಇರಲಿವೆ. ಅಂದು ಈ ಗ್ರಹಗಳ ಅಂತರ 35.8 ಮಿಲಿಯನ್ ಮೈಲುಗಳಷ್ಟು ಇರಲಿದೆ ಎಂದು ಮೇಜರ್ ತಿಳಿಸಿದ್ದಾರೆ.

ಸಾಮಾನ್ಯ ಲೆಕ್ಕಾಚಾರದಲ್ಲಿ ಈ ಅಂತರ ಬಲು ದೂರ ಎನಿಸಿದರೂ ಈ ಅಂತರ ಚಂದ್ರನಿಗೆ 75 ಬಾರಿ ಪ್ರಯಾಣಿಸಿ ಬಂದಷ್ಟು ಇರಲಿದೆ.

ಸಣ್ಣ ಟೆಲಿಸ್ಕೋಪ್ ಬಳಸಿಯೂ ಕೆಂಪು ಗ್ರಹದ ಕೆಲವು ಭಾಗಗಳನ್ನು ಮುಂದಿನ ಕೆಲವು ವಾರಗಳವರೆಗೆ ವೀಕ್ಷಿಸಬಹುದು. ಗ್ರಹದ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿನ ಹಿಮದ ಭಾಗಗಳಲ್ಲಿನ ಹೆಚ್ಚು ಹೊಳೆಯುವ ಭಾಗ ಕಾಣಬಹುದು ಎಂದು ವಿವರಿಸಿದ್ದಾರೆ.

English summary
Curiosity rover radar has found the signs of water lake in the south polar of Mars. Mars will come close to earth on July 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X