ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್‌ ಅಂತಿಮ ಯಾತ್ರೆ ರಹಸ್ಯ ಬಹಿರಂಗ

|
Google Oneindia Kannada News

ವಾಷಿಂಗ್ಟನ್, ಅ. 7 : ಒಸಮಾ ಬಿನ್‌ ಲಾಡನ್ ಶವ ಏನು ಮಾಡಲಾಯಿತು? ಎಂಬ ಪ್ರಶ್ನೆಗೆ ಅಮೆರಿಕದ ಸೈನ್ಯದಿಂದಲೇ ಉತ್ತರ ಬಂದಿದೆ. ಲಾಡೆನ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಅಮೆರಿಕ ಸೈನ್ಯ ಆತನ ದೇಹವನ್ನು ಏನು ಮಾಡಿತ್ತು ಎಂಬುದರ ಬಗ್ಗೆ ಇಲ್ಲಿಯವರೆಗೆ ಸ್ಪಷ್ಟ ಉತ್ತರ ನೀಡಿರಲಿಲ್ಲ. ಕೇವಲ ಸಮುದ್ರದಲ್ಲಿ ಎಸೆಯಲಾಗಿದೆ ಎಂದಷ್ಟೇ ಹೇಳಿತ್ತು.

ಪಾಕಿಸ್ತಾನದ ಮೂಲೆಯೊಂದರಲ್ಲಿ ಅಲ್‌ ಖಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದ ಮೇಲೆ ಆತನ ಶವವನ್ನು ಕಪ್ಪು ಚೀಲದಲ್ಲಿ ತುಂಬಿ ಮೂರು ನೂರು ಪೌಂಡ್‌ ತೂಗುವ ಕಬ್ಬಿಣದ ಚೈನುಗಳಲ್ಲಿ ಬಂಧಿಸಿ ಸಮುದ್ರಕ್ಕೆ ಎಸೆಯಲಾಯಿತು ಎಂದು ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ ಮಾಜಿ ನಿರ್ದೇಶಕ ಅಮೆರಿಕ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಿಯೋನ್ ಎಡ್ವರ್ಡ್‌ ಪನೆಟ್ಟಾ ಸ್ಪಷ್ಟಪಡಿಸಿದ್ದಾರೆ.[ಲಾಡೆನ್ ಅಳಿಯನ ಬಂಧನ, ಅಮೆರಿಕಕ್ಕೆ ಭಾರಿ ಯಶಸ್ಸು]

laden

ಯೋಜನೆಯಂತೆ ವಿಶ್ವವನ್ನೇ ನಡುಗಿಸಿದ್ದ ಕುಖ್ಯಾತ ಭಯೋತ್ಪಾದಕನ ದೇಹವನ್ನು ವಿಶೇಷ ವಿಮಾನವೊಂದರಲ್ಲಿ ಸಾಗಿಸಲಾಯಿತು ಎಂದು ಹೇಳಿದ್ದಾರೆ.

ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಯಿತು. ಬಿಳಿ ಬಣ್ಣದ ಬಟ್ಟೆಯೊಂದನ್ನು ಆತನ ದೇಹಕ್ಕೆ ಸುತ್ತಿ ಅರೇಬಿಕ್‌ನ ಪ್ರಾರ್ತನೆಗಳನ್ನು ಸಲ್ಲಿಸಲಾಯಿತು. ನಂತರ ಕಪ್ಪು ಚೀಲದಲ್ಲಿ ಶವ ಇರಿಸಲಾಯಿತು ಎಂದು ಪನೆಟ್ಟಾ ತಮ್ಮ ಪುಸ್ತಕ 'ವರ್ಥಿ ಫೈಟ್ಸ್' (ಯುದ್ಧ ಮತ್ತು ಶಾಂತಿ ಕಾಲದ ನಾಯಕತ್ವದ ಅನುಭವ) ದಲ್ಲಿ ಬರೆದುಕೊಂಡಿದ್ದಾರೆ. [ಬ್ರಿಟನ್ ಪ್ರಜೆ ಕತ್ತು ಕತ್ತರಿಸಿದ ಇರಾಕಿ ಉಗ್ರರು]

ಮೂರು ನೂರು ಪೌಂಡ್‌ ತೂಕದ ಕಬ್ಬಿಣದ ಚೈನುಗಳಿಂದ ಚೀಲವನ್ನು ಸುತ್ತಲಾಯಿತು. ಯಾವ ಕಾರಣಕ್ಕೂ ಸಮುದ್ರದಿಂದ ಶವ ಮೇಲೆ ಬರಬಾರದು ಎಂಬುದೇ ಇದರ ಉದ್ದೇಶವಾಗಿತ್ತು. ಹಡಗಿನ ತುದಿಯಲ್ಲಿ ಟೆಬಲ್‌ವೊಂದನ್ನು ಇರಿಸಿ ದೇಹವನ್ನು ನೀರಿಗೆ ದೂಡಲಾಯಿತು. ಶವ ನೀರಿಗೆ ಹಾಕಿದ ಜಾಗದ ಸ್ಷಷ್ಟ ಚಿತ್ರಣವಿಲ್ಲ. ನೀರಿಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಲಾಡೆನ್ ದೇಹ ಕಣ್ಮರೆಯಾಯಿತು ಎಂದು ಪನೆಟ್ಟಾ ಪುಸ್ತಕದಲ್ಲಿ ತಿಳಿಸಿದ್ದಾರೆ.

English summary
After al-Qaeda chief Osama bin Laden was killed by US special forces in Pakistan's garrison town of Abbottabad, his body was kept in a heavy black bag of 300 pounds of iron chain and dropped into the sea, former CIA Director and Defense Secretary Leon Panetta has said. After Osama was shot dead, Panetta said, as planned the body of the world's most wanted terrorist was transported by marines flying an Osprey to waiting aircraft carrier USS Carl Vinson for his burial by sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X