ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ವಿವಾದ: ಭಾರತ-ಚೀನಾ ನಡುವೆ ರಾಜತಾಂತ್ರಿಕ ಸಭೆ

|
Google Oneindia Kannada News

ನವದೆಹಲಿ, ಜೂನ್ 23: ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿ ಜನರು ಅಭಿವೃದ್ಧಿ ಬಯಸುತ್ತಿದ್ದು ವಿವಾದಿತ ಪ್ರದೇಶದಲ್ಲಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರೀಯಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಮತ್ತು ಭಾರತದ ನಡುವೆ ಇದೇ ವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಸಭೆ ನಡೆಯಲಿದೆ.

ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯ ಕಾರ್ಯ ವಿಧಾನ(WMCC)ದ ಚೌಕಟ್ಟಿನ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಪೂರ್ವ ಲಡಾಕ್‌ನಲ್ಲಿ ಉಭಯ ದೇಶಗಳ ಉದ್ವಿಗ್ನತೆಯನ್ನು ಬಗೆಹರಿಸುವ ವಿಶಾಲ ತತ್ವಗಳತ್ತ ಗಮನ ಹರಿಸುವ ನಿರೀಕ್ಷೆಯಿದೆ.

ದೀರ್ಘಾವಧಿಯ ಸಂಬಂಧಗಳತ್ತ ಗಮನಹರಿಸಲು ಭಾರತಕ್ಕೆ ಚೀನಾ ಸೂಚನೆ ದೀರ್ಘಾವಧಿಯ ಸಂಬಂಧಗಳತ್ತ ಗಮನಹರಿಸಲು ಭಾರತಕ್ಕೆ ಚೀನಾ ಸೂಚನೆ

ಜೂನ್ 24ರಂದು ಭಾರತ ಮತ್ತು ಚೀನಾ ನಡುವಿನ WMCC ಸಭೆ ನಡೆಯಲಿದೆ. ಇದಕ್ಕೂ ಮೊದಲು ಕಳೆದ ಮಾರ್ಚ್ 12ರಂದು WMCC ಸಭೆ ನಡೆಸಲಾಗಿತ್ತು. ಗುರುವಾರ ನಡೆಯಲಿರುವ ರಾಜತಾಂತ್ರಿಕ ಮಾತುಕತೆ ಬಳಿಕ ಮತ್ತೊಂದು ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

Ladakh Standoff: Diplomatic Talks Between India And China On This Week

ಉಭಯ ಸೇನಾ ಪಡೆಗಳು ಹಿಂದಕ್ಕೆ:

ಭಾರತ ಮತ್ತು ಚೀನಾದ ನಡುವಿನ ಸೇನಾ ಹಾಗೂ ರಾಜತಾಂತ್ರಿಕ ಸಭೆಗಳ ನಂತರ ಫೆಬ್ರವರಿ ತಿಂಗಳಿನಲ್ಲಿ ವಿವಾದಿತ ಪ್ಯಾಂಗಾಂಗ್ ಲೇಕ್ ಪ್ರದೇಶದ ಉತ್ತರ ಮತ್ತು ದಕ್ಷಿಣ ಪ್ರದೇಶದಲ್ಲಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಿದ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ಇದೀಗ ವಿವಾದಿತ ಕೇಂದ್ರಗಳಲ್ಲಿ ಎರಡೂ ಕಡೆಯ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಭಾರತವು ವಿಶೇಷವಾಗಿ ಹಾಟ್ ಸ್ಪ್ರಿಂಗ್, ಗೊಗ್ರಾ ಮತ್ತು ದಪ್ಸಾಂಗ್ ಪ್ರದೇಶಗಳಲ್ಲಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ಹೆಚ್ಚಿನ ಒತ್ತಡ ಹೇರಲಿದೆ.

ಗಡಿಯಲ್ಲಿ 50,000 ದಿಂದ 60,000 ಸೇನೆ:

ಮಿಲಿಟರಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಭಾರತ ಮತ್ತು ಚೀನಾದ ಗಡಿ ನಿಯಂತ್ರಣ ರೇಖೆಯ ಸೂಕ್ಷ್ಮ ಪ್ರದೇಶಗಳಲ್ಲಿ 50,000 ದಿಂದ 60,000 ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳೆದ 11ನೇ ಸುತ್ತಿನ ಮಿಲಿಟರಿ ಮಾತುಕತೆಗಳಲ್ಲಿ ವಿವಾದಿತ ಪ್ರದೇಶಗಳಲ್ಲಿ ಸೇನೆ ನಿಷ್ಕ್ರಿಯಗೊಳಿಸುವುದರ ಕುರಿತು ಚೀನಾ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ ಎಂದು ಹೇಳಲಾಗಿದೆ.

ಎಲ್ಲದಕ್ಕೂ ಸಿದ್ಧ ಎಂದ ಭಾರತ:

"ಪೂರ್ವ ಲಡಾಖ್‌ನ ವಿವಾದಿತ ಪ್ರದೇಶಗಳಲ್ಲಿ ಸೇನೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸದೇ ಯಾವುದೇ ಸಂಬಂಧ ಬಲವರ್ಧನೆ ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ ಎಲ್ಲ ರೀತಿಯ ಸವಾಲುಗಳನ್ನು ಎದುರಿಸುವುದಕ್ಕೆ ಭಾರತ ಸಿದ್ಧವಾಗಿದೆ," ಎಂದು ಭಾರತದ ಸೇನಾ ಮುಖ್ಯಸ್ಥ ಎಂ ಎಂ ನಾರವಾನೆ ಹೇಳಿದ್ದರು.

English summary
Ladakh Standoff: Diplomatic Talks Between India And China On This Week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X