ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ನಲ್ಲಿ ಉದ್ವಿಗ್ನತೆ: ಮುಖಾಮುಖಿಯಾದ ಭಾರತ-ಚೀನಾ ಸೇನೆ

|
Google Oneindia Kannada News

ಲಡಾಖ್, ಸೆಪ್ಟೆಂಬರ್ 12: ಲಡಾಖ್ ನಲ್ಲಿ ಚೀನಾ ಮತ್ತು ಭಾರತೀಯ ಸೇನೆ ಮತ್ತೊಮ್ಮೆ ಮುಖಾಮುಖಿಯಾದ ಕಾರಣ ಉದ್ವಿಗ್ನತೆ ತಲೆದೋರಿದ ಘಟನೆ ಬುಧವಾರ ನಡೆದಿದೆ.

ಲಡಾಖ್ ನ ಪಾಂಗೋಂಗ್ ತ್ಸೋ ಸರೋವರದ ಉತ್ತರ ದಡದ ಬಳಿ ಉಭಯ ಸೇನೆಯ ಸಿಬ್ಬಂದಿ ಮುಖಾಮುಖಿಯಾಗುವ ಸಂದರ್ಭ ಎದುರಾಯಿತು. ಭಾರತ ತನ್ನ ಗಡಿಯಲ್ಲಿ ಸಮರಾಭ್ಯಾಸ ನಡೆಸುತ್ತಿದ್ದು, ಅದರಿಂದ ಆತಂಕಕ್ಕೊಳಗಾದ ಚೀನಾ ಪ್ರತ್ಯತ್ತರ ನೀಡಲು ತನ್ನ ಸಿಬ್ಬಂದಿಯನ್ನು ಗಡಿಯ ಬಳಿ ಕಳಿಸಿತ್ತು. ಈ ಸಂದರ್ಭದಲ್ಲಿ ಉಭಯ ಸೇನಾ ಸಿಬ್ಬಂದಿಯ ನಡುವೆ ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು.

ಚೀನಾ ಒಳನುಗ್ಗುವಿಕೆ: ಬಿಜೆಪಿ ಸಂಸದನ ಹೇಳಿಕೆ ತಿರಸ್ಕರಿಸಿದ ಭಾರತೀಯ ಸೇನೆಚೀನಾ ಒಳನುಗ್ಗುವಿಕೆ: ಬಿಜೆಪಿ ಸಂಸದನ ಹೇಳಿಕೆ ತಿರಸ್ಕರಿಸಿದ ಭಾರತೀಯ ಸೇನೆ

ಭಾರತೀಯ ಸೇನೆಯ ಮೌಂಟನ್ ಸ್ಟ್ರೈಕ್ ಕಾರ್ಪ್ಸ್ ಮತ್ತು ಭಾರತೀಯ ವಾಯುಸೇನೆ ಈ ಸ್ಥಳದಲ್ಲಿ ಜಂಟಿ ತರಬೇತಿ ನಡೆಸುಹತ್ತಿತ್ತು. ಭಾರತದ ಪೂರ್ವ ಭಾಗದಲ್ಲಿ ಯುದ್ಧ ಎದುರಿಸಲು ಸೈನಿಕರನ್ನು ಸಿದ್ಧಗೊಳಿಸಲಾಗುತ್ತಿದ್ದು, ಅಕ್ಟೋಬರ್ ನಂತರ ಅರುಣಾಚಲ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಿ ತರಬೇತಿ ನಡೆಸಲಾಗುತ್ತದೆ. ಅದರ ಪೂರ್ವ ತಯಾರಿ ಎಂಬಂತೆ ಗಡಿಯಲ್ಲಿ ಸೈನಿಕರು ತರಬೇತಿ ನಡೆಸುತ್ತಿದ್ದ ವೇಳೆ ಚೀನಾ ಸೈನಿಕರು ಮುಖಾಮುಖಿಯಾದರು.

Ladakh: Face-off Between India And China De-escalated Later

ಭಾರತದ ನೌಕಾ ನೆಲೆಗಳ ಮೇಲೆ ಚೀನಾ ಕಣ್ಗಾವಲುಭಾರತದ ನೌಕಾ ನೆಲೆಗಳ ಮೇಲೆ ಚೀನಾ ಕಣ್ಗಾವಲು

ಆದರೆ ತಪ್ಪುತಿಳಿವಳಿಕೆಯಿಂದ ಈ ಘಟನೆ ನಡೆದಿದ್ದು, ನಂತರ ನಡೆದ ನಿಯೋಗ ಮಟ್ಟದ ಮಾತುಕತೆಯಿಂದ ಪರಿಸ್ಥಿತಿ ತಣ್ಣಗಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ.

English summary
Tension between India and China took place when there was a face-off between Soldiers of Indian army and Chines army in Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X