ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ಭಾರತ-ಚೀನಾದ 12ನೇ ಸುತ್ತಿನ ಕಮಾಂಡರ್ ಹಂತದ ಸಭೆ

|
Google Oneindia Kannada News

ನವದೆಹಲಿ, ಜುಲೈ 30: ಲಡಾಖ್ ಪೂರ್ವದಲ್ಲಿರುವ ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ 12 ಬಾರಿ ಉಭಯ ರಾಷ್ಟ್ರಗಳ ಲೆಫ್ಟಿನೆಂಟ್ ಜನರಲ್ ಹಂತದ ಸಭೆಯು ಶನಿವಾರ ನಡೆಯಲಿದೆ.

ಚೀನಾದ ಗಡಿರೇಖೆಗೆ ಹೊಂದಿಕೊಂಡಂತೆ ಮಾಲ್ಡೋ ಪ್ರದೇಶದಲ್ಲಿ ಬೆಳಗ್ಗೆ 10.30ಕ್ಕೆ ಭಾರತ ಮತ್ತು ಚೀನಾದ ಹಿರಿಯ ಕಮಾಂಡರ್ ಹಂತದ ಸಭೆಯು ನಡೆಯಲಿದೆ. ಈ ವೇಳೆ ಹಿರಿಯ ಅಧಿಕಾರಿಗಳು ಪೂರ್ವ ಲಡಾಖ್ ಭಾಗದ ವಿವಾದಿತ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಹೈಟ್ಸ್ ಪ್ರದೇಶಗಳಲ್ಲಿ ಸೇನಾ ನಿಷ್ಕ್ರಿಯಗೊಳಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಭಾರತೀಯ ಸೇನಾ ಮೂಲಗಳಿಂದ ತಿಳಿದು ಬಂದಿದೆ.

ಚೀನಾ ವಿರುದ್ಧ ಯುದ್ಧಕ್ಕೆ ಸಿದ್ಧವಾಯಿತಾ ಭಾರತ: ಇಲ್ಲಿದೆ ಕಾರಣ!ಚೀನಾ ವಿರುದ್ಧ ಯುದ್ಧಕ್ಕೆ ಸಿದ್ಧವಾಯಿತಾ ಭಾರತ: ಇಲ್ಲಿದೆ ಕಾರಣ!

ಉಭಯ ರಾಷ್ಟ್ರಗಳು ಪರಸ್ಪರ ಭದ್ರತಾ ಕಾಳಜಿಯಿಂದಾಗಿ ಎರಡೂ ಕಡೆಗಳ ಸೇನೆಗಳು ಸರಿಸಮನಾಗಿ ವಾಪಸ್ ತೆಗೆದುಕೊಳ್ಳುವ ಬಗ್ಗೆ ಭಾರತೀಯ ಸೇನೆ ಉಲ್ಲೇಖಿಸಿದೆ. ಗಡಿ ಪ್ರದೇಶದ ಎತ್ತರದ ಸ್ಥಳಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಭಾರತ ಸಿದ್ಧವಿದೆ, ಆದರೆ ಚೀನಾ ಕೂಡ ಅಷ್ಟೇ ಸಂಖ್ಯೆಯ ಸೇನೆಯನ್ನು ಅಲ್ಲಿಂದ ವಾಪಸ್ ತೆಗೆದುಕೊಳ್ಳಬೇಕು ಎಂದು ಭಾರತೀಯ ಸೇನೆಯು ಷರತ್ತು ವಿಧಿಸುವ ಬಗ್ಗೆ ತಿಳಿದು ಬಂದಿದೆ.

 Ladakh Conflict: 12th Round Of Corps Commander-Level Talks Scheduled July 31

ಮಿಲಿಟರಿ ಸಭೆ ಸೇರುವ ಬಗ್ಗೆ ಚೀನಾ ಪ್ರಸ್ತಾಪ:

ಕಳೆದ ಜುಲೈ 22ರಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮತ್ತು ಭಾರತೀಯ ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ಸಭೆ ನಡೆಸಿದ್ದರು. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಸಾಧ್ಯವಾದಷ್ಟು ಬೇಗನೇ ಕಮಾಂಡರ್ ಹಂತದ ಸಭೆಯನ್ನು ಕರೆಯಬೇಕೆಂದು ಚೀನಾದ ವಕ್ತಾರರು ಪ್ರಸ್ತಾಪಿಸಿದ್ದರು. ಎರಡು ರಾಷ್ಟ್ರಗಳು ಪರಸ್ಪರ ಒಪ್ಪಿಕೊಳ್ಳುವಿಕೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಉಲ್ಲೇಖಿಸಿದ್ದರು.

ಭಾರತ ಚೀನಾ ಯೋಧರ ನಡುವೆ ಸಂಘರ್ಷ

2020ರ ಜೂನ್.06ರಂದು ಲಡಾಖ್ ಗಡಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಶಾಂತಿಸಭೆ ನಡೆಸಲಾಗಿತ್ತು. ಈ ಸಭೆಯು ವಿಫಲವಾದ ಬೆನ್ನಲ್ಲೇ 2020ರ ಜೂನ್ 15 ಮತ್ತು 16ರ ರಾತ್ರಿ ಲಡಾಖ್ ಪೂರ್ವ ಗಡಿ ಪ್ರದೇಶದ ಗಾಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ರೌಡಿಗಳಂತೆ ವರ್ತಿಸಿದ ಚೀನಾ ಯೋಧರು ಮಾರಕಾಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, 70 ಯೋಧರು ಗಾಯಗೊಂಡಿದ್ದರು.

ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ವಿರುದ್ಧ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡರು. ಭಾರತ ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚೀನಾ ಮಾತ್ರ ಸೈನಿಕರ ಸಾವು-ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ವಾದಿಸಿತು.

ಲಡಾಖ್ ಗಡಿ ವಿವಾದಕ್ಕೆ ಕಾರಣವಾಗಿರುವುದು ಏನು?

ಭಾರತ ಮತ್ತು ಚೀನಾ ಗಡಿಯ ಪಂಗೊಂಗ್ ಸೋ, ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ 2,500 ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದಾರೆ. ಪಂಗೊಂಗ್ ಸೋ ಸುತ್ತಮುತ್ತಲು 180 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮೂಲಸೌಕರ್ಯಗಳ ಕಾಮಗಾರಿ ಚಟುವಟಿಕೆ ನಡೆಸುತ್ತಿರುವುದು ಉಪಗ್ರಹ ಸೆರೆ ಹಿಡಿದ ಫೋಟೋಗಳಲ್ಲಿ ಸಾಬೀತಾಗಿದೆ. ಇದಕ್ಕೂ ಮೊದಲು ದರ್ಬಕ್-ಶಯೊಕ್ ನಿಂದ ದೌಲತ್ ಬೆಗ್ ಒಲ್ಡಿಯೆಗೆ ಗಾಲ್ವಾನ್ ವ್ಯಾಲಿಯಲ್ಲಿ ರಸ್ತೆ ನಿರ್ಮಿಸುವುದಕ್ಕೆ ಭಾರತವು ಮುಂದಾಗಿತ್ತು. ಪಂಗೊಂಗ್ ಸೋ ತುದಿಯಲ್ಲಿರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಚೀನಾ ವಿರೋಧಿಸಿತ್ತು. ಪಂಗೊಂಗ್ ಸೋ ಪ್ರದೇಶ ತೀರಾ ಮಹತ್ವವಾಗಿದ್ದು ಎಂದು ಭಾರತ ಕೂಡಾ ಪರಿಗಣಿಸಿತ್ತು. ಆದರೆ ಚೀನಾ ವಿರೋಧದ ಹಿನ್ನೆಲೆ ಗಡಿಯಲ್ಲಿ ಯಾವುದೇ ರೀತಿ ಸೇನೆ ನಿಯೋಜಿಸದಿರಲು ಭಾರತವು ತೀರ್ಮಾನಿಸಿತು.

Recommended Video

ಸಂತ್ರಸ್ಥರು ಪೋನ್ ಮಾಡಿದ್ರೆ , ಮಹೇಶ್ ಕುಮುಟಲ್ಲಿಗೆ ತಲೆನೋವಂತೆ | Oneindia Kannada

English summary
Ladakh Conflict: 12th Round Of Corps Commander-Level Talks Scheduled July 31 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X