ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭದ್ರ ದೇಶ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ಕಷ್ಟ: ಮಾಜಿ ಕ್ರಿಕೆಟಿಗ

|
Google Oneindia Kannada News

ಹರಾರೆ, ಆಗಸ್ಟ್ 17: ಅಲ್ಪ ಸ್ವಾತಂತ್ರ್ಯ, ಭದ್ರತೆ ಕೊರತೆ ಇರುವ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ಕಷ್ಟದ ಕೆಲಸ ಎಂದು ಮಾಜಿ ಕ್ರಿಕೆಟಿಗ ಗ್ರಾಂಟ್ ಫ್ಲವರ್ ಹೇಳಿದ್ದಾರೆ. ಆದರೆ ಅಲ್ಲಿನ ಜನ ಸ್ನೇಹಪರರು ಎಂದು ಹೊಗಳಿದ್ದಾರೆ.

ಕಲಹ ತುಂಬಿರುವ, ಹರಿದು ಹಂಚಿರುವ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ದುಸ್ಥರ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಅವರು ಐದು ವರ್ಷ ಪಾಕಿಸ್ತಾನದಲ್ಲಿಯೇ ನೆಲೆಸಿದ್ದರು. ಆಗಿನ ಪರಿಸ್ಥಿತಿಯನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

'ಅಕ್ಬರ್' ದಿ ಗ್ರೇಟ್: ಸೈಯದ್ ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಗಪ್‌ಚುಪ್!'ಅಕ್ಬರ್' ದಿ ಗ್ರೇಟ್: ಸೈಯದ್ ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಗಪ್‌ಚುಪ್!

ಐದು ವರ್ಷ ಬ್ಯಾಟಿಂಗ್ ಕೋಚ್ ಆಗಿದ್ದ ಅವರ ಸೇವೆಯನ್ನು ಮುಂದುವರೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿತ್ತು, ಆದರೆ ಅದನ್ನು ನಿರಾಕರಿಸಿ ಗ್ರಾಂಟ್ ಫ್ಲವರ್ ಹಿಂದುರಿಗಿದರು. ಇದರ ಬಗ್ಗೆ ಇಎಸ್‌ಪಿಎನ್ ಕ್ರಿಕ್ ಇನ್ಫೋ ನಡೆಸಿದ ಸಂದರ್ಶನದಲ್ಲಿ ಅವರು ಪಾಕಿಸ್ತಾನದ ಆಂತರಿಕ ಸ್ಥಿತಿಯನ್ನು ಬಿಚ್ಚಿಟ್ಟರು.

lack of freedom and the security aspect is frustrating to live in Pakistan: Grant Flower

ಪಿಸಿಬಿ ಬಗ್ಗೆ ಮತ್ತೆ ಕೆಲವು ಮಾಜಿ ಆಟಗಾರರ ಬಗ್ಗೆಯೂ ಮಾತನಾಡಿರುವ ಗ್ರಾಂಟ್ ಫ್ಲಾವರ್, 'ಕೆಲವು ಮಾಜಿ ಆಟಗಾರರು ಬೆನ್ನಿಗೆ ಚೂರಿ ಹಾಕಿದ್ದನ್ನು, ಟಿವಿ ಚಾನೆಲ್‌ಗಳ ರಾಜಕೀಯ, ಪತ್ರಕರ್ತರ ರಾಜಕೀಯ ಮತ್ತು ಪಿಸಿಬಿ ಒಳಗೇ ನಡೆದ ರಾಜಕೀಯವನ್ನು ನಾನು ಮತ್ತೆ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ' ಎಂದು ಗ್ರಾಂಟ್ ಫ್ಲವರ್ ಹೇಳಿದ್ದಾರೆ.

ವಿಡಿಯೋ: ಪಾಕಿಸ್ತಾನಿ ಪತ್ರಕರ್ತರಿಗೆ 'ಸ್ನೇಹ ಹಸ್ತ' ನೀಡಿದ ಭಾರತ ರಾಯಭಾರಿ ವಿಡಿಯೋ: ಪಾಕಿಸ್ತಾನಿ ಪತ್ರಕರ್ತರಿಗೆ 'ಸ್ನೇಹ ಹಸ್ತ' ನೀಡಿದ ಭಾರತ ರಾಯಭಾರಿ

ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಬಾಬರ್ ಆಜಾಮ್, ತಾವು ತರಬೇತಿ ನೀಡಿದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದ ಗ್ರಾಂಟ್ ಫ್ಲವರ್, ಹ್ಯಾರಿಸ್ ಸೋಹೆಲ್ ಕಳಪೆ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.

48 ವರ್ಷದಲ್ಲಿ ಇದೇ ಮೊದಲು: ಮೋದಿಗೆ ರಾಜತಾಂತ್ರಿಕ ಸೋಲು?48 ವರ್ಷದಲ್ಲಿ ಇದೇ ಮೊದಲು: ಮೋದಿಗೆ ರಾಜತಾಂತ್ರಿಕ ಸೋಲು?

ಜಿಂಬಾಬ್ವೆ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಗ್ರಾಂಟ್ ಫ್ಲಾವರ್ ಐದು ವರ್ಷಗಳಿಂದ ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

English summary
Former cricketer and Pakistan teams former batting coach Grant Flower said that, it is frustrating to live in Pakistan. He said lack of freedom and the security aspect is the main issue in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X