ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ 'ಗಡಿರೇಖೆ' ಗೊಂದಲದ ಹಿಂದಿನ ಅಸಲಿ ಸತ್ಯ!

|
Google Oneindia Kannada News

ನವದೆಹಲಿ, ಜೂನ್.02: ನೊವೆಲ್ ಕೊರೊನಾ ವೈರಸ್ ವಿರುದ್ಧ ಜಗತ್ತಿಗೆ ಜಗತ್ತೇ ಹೋರಾಟ ನಡೆಸುತ್ತಿದೆ. ವಿಶ್ವದಾದ್ಯಂತ ಕೊವಿಡ್-19 ಸೋಂಕನ್ನು ಛೂ ಬಿಟ್ಟ ಚೀನಾ ಮಾತ್ರ ಭಾರತದ ಜೊತೆಗೆ ಕಾಲ್ಕೆರೆದು ನಿಲ್ಲುತ್ತಿದೆ.

ಭಾರತ-ಚೀನಾದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಎರಡೂ ರಾಷ್ಟ್ರಗಳ ಗಡಿಯಲ್ಲಿ ಸೇನಾ ಪಡೆಗಳು ಶಸ್ತ್ರಸಜ್ಜಿತವಾಗಿ ಅಣಿಯಾಗುತ್ತಿವೆ.

ಚೀನಾ-ಭಾರತ ನಡುವೆ ನಡೆಯುತ್ತಾ ಯುದ್ಧ: ಇಲ್ಲಿದೆ ಅಸಲಿ ಕಾರಣ!ಚೀನಾ-ಭಾರತ ನಡುವೆ ನಡೆಯುತ್ತಾ ಯುದ್ಧ: ಇಲ್ಲಿದೆ ಅಸಲಿ ಕಾರಣ!

ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯ ವೃದ್ಧಿಸಿರುವುದು ಚೀನಾದ ನಿದ್ದಿಗೆಡಿಸಿದಂತೆ ತೋರುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಶ್ವದ ದೊಡ್ಡಣ್ಣನಿಗೆ ಬೆಂಬಲವಾಗಿ ನಿಲ್ಲಕೂಡದು ಎಂದು ಭಾರತಕ್ಕೆ ಸ್ವತಃ ಚೀನಾ ಎಚ್ಚರಿಕೆ ನೀಡಿದೆ. ಹಾಗಾದರೆ ಎರಡು ರಾಷ್ಟ್ರಗಳ ಗಡಿಯಲ್ಲಿ ಸೃಷ್ಠಿಯಾಗಿರುವ ಗೊಂದಲ ಮತ್ತು ಸಂಘರ್ಷಕ್ಕೆ ಕಾರಣವೇನು. ಅಸಲಿಗೆ ಗಡಿ ನಿಯಂತ್ರಣ ರೇಖೆ ಎಂದರೇನು. ಚೀನಾ ಮತ್ತು ಭಾರತ ನಡುವಿನ ಗಡಿರೇಖೆಯ ಅಂತರ ಎಷ್ಟಿದೆ. ಇದೀಗ ಸೃಷ್ಟಿಯಾಗಿರುವ ಗೊಂದಲಕ್ಕೆ ಕಾರಣವೇನು ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚೀನಾ ಮತ್ತು ಭಾರತ ನಡುವಿನ ಗಡಿರೇಖೆ

ಚೀನಾ ಮತ್ತು ಭಾರತ ನಡುವಿನ ಗಡಿರೇಖೆ

ಭಾರತದ ನಿಯಂತ್ರಣದಲ್ಲಿರುವ ಪ್ರದೇಶ ಮತ್ತು ಚೀನಾ ನಿಯಂತ್ರಣದಲ್ಲಿರುವ ಪ್ರದೇಶವನ್ನು ಈ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯು ವಿಭಾಗಿಸುತ್ತದೆ. ಭಾರತವು ಚೀನಾದೊಂದಿಗೆ 3,488 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿರುವುದಾಗಿ ಪರಿಗಣಿಸುತ್ತದೆ. ಆದರೆ ಚೀನಾ ಮಾತ್ರ ಭಾರತದ ಜೊತೆಗೆ 2,000 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿರುವುದಾಗಿ ಪರಿಗಣಿಸಿದೆ.

ಚೀನಾ-ಭಾರತದ 3 ಕಡೆಗಳಲ್ಲಿ ಗಡಿರೇಖೆ ಹಂಚಿಕೆ

ಚೀನಾ-ಭಾರತದ 3 ಕಡೆಗಳಲ್ಲಿ ಗಡಿರೇಖೆ ಹಂಚಿಕೆ

ಭಾರತ ಮತ್ತು ಚೀನಾ ರಾಷ್ಟ್ರಗಳು ಮೂರು ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿವೆ. ಪೂರ್ವ ವಲಯದಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಮಧ್ಯ ವಲಯದಲ್ಲಿ ಉತ್ತರಾಖಂಡ್ ಮತ್ತು ಹಿಮಾಚಲಪ್ರದೇಶ ಹಾಗೂ ಪಶ್ಚಿಮ ವಲಯದಲ್ಲಿ ಲಡಾಖ್ ಜೊತೆಗೆ ಗಡಿರೇಖೆಯನ್ನು ಹಂಚಿಕೊಳ್ಳಲಾಗಿದೆ.

ಭಾರತ-ಚೀನಾ ಗಡಿ ಉದ್ವಿಗ್ನತೆ: ಅಮೆರಿಕಕ್ಕೆ ಎಚ್ಚರಿಕೆ ಕೊಟ್ಟ ರಕ್ಷಣಾ ಸಚಿವ

ಗೊಂದಲಕ್ಕೆ ಕಾರಣವೇ ಮೆಕ್-ಮೆಹೋನ್ ಗಡಿ

ಗೊಂದಲಕ್ಕೆ ಕಾರಣವೇ ಮೆಕ್-ಮೆಹೋನ್ ಗಡಿ

1914ರಲ್ಲಿ ಆಗಿನ ಬ್ರಿಟಿಷ್ ಇಂಡಿಯನ್ ಆರ್ಮಿ ಆಫೀಸರ್ ಆಗಿದ್ದ ಮೆಕ್-ಮೆಹೋನ್ ಭಾರತ ಮತ್ತು ಚೀನಾದ ಪೂರ್ವ ವಲಯದಲ್ಲಿ ಗಡಿ ಪ್ರದೇಶವನ್ನು ವಿಭಾಗಿಸಿದ್ದರು. ಈ ಹಿನ್ನೆಲೆ ಅದನ್ನು ಮೆಕ್-ಮೆಹೋನ್ ಗಡಿ ಎಂದಲೇ ಕರೆಯಲಾಗುತ್ತಿದ್ದು, ಈ ವಲಯದ ಕೆಲವು ಪ್ರದೇಶಗಳ ಕುರಿತು ಗೊಂದಲ ಸೃಷ್ಟಿಯಾಗಿದೆ. ಭಾರತದ ಅಂತಾರಾಷ್ಟ್ರೀಯ ಗಡಿರೇಖೆಯು ಬಹಳ ಸ್ಪಷ್ಟವಾಗಿದ್ದು, ಲೋಂಗ್ಜು ಮತ್ತು ಅಸಫಿಲಾ ರೀತಿಯ ಕೆಲವೇ ಕೆಲವು ಪ್ರದೇಶಗಳು ಮಾತ್ರ ವಿವಾದಕ್ಕೆ ಎಡೆಮಾಡಿಕೊಡುವಂತಿವೆ. ಮಧ್ಯ ವಲಯದಲ್ಲಿ ಬರಹೋತಿ ಬಯಲು ಪ್ರದೇಶವು ಸಹ ವಿವಾದಕ್ಕೆ ಕಾರಣವಾಗಿದೆ.

ಭಾರತ-ಚೀನಾ ವಿವಾದಕ್ಕೆ ಕಾರಣವೇ ಪಶ್ಚಿಮ ವಲಯ

ಭಾರತ-ಚೀನಾ ವಿವಾದಕ್ಕೆ ಕಾರಣವೇ ಪಶ್ಚಿಮ ವಲಯ

ಎರಡು ರಾಷ್ಟ್ರಗಳ ನಡುವೆ ಗಡಿರೇಖೆ ವಿವಾದಕ್ಕೆ ಪಶ್ಚಿಮ ವಲಯದಲ್ಲಿ ಗುರುತಿಸಲಾಗಿರುವ ಮೆಕ್-ಮೆಹೋನ್ ಪ್ರದೇಶವೇ ಮೂಲ ಕಾರಣವಾಗಿದೆ. 1914ರಲ್ಲಿ ವಿಭಜಿಸಲ್ಪಟ್ಟ ಗಡಿಯ ಬಗ್ಗೆ 1959ರಲ್ಲಿ ಚೀನಾದ ಪ್ರಧಾನಮಂತ್ರಿ ಝುವ್ ಎನ್ಲೈ ಅವರು ಭಾರತದ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಪೂರ್ವ ವಲಯದ ಮೆಕ್-ಮೆಹೋನ್ ಗಡಿ ಪ್ರದೇಶದಿಂದ ಪಶ್ಚಿಮ ವಲಯದವರೆಗೂ ಗಡಿ ನಿಯಂತ್ರಣವನ್ನು ಹೊಂದಿದೆ ಎಂಬುದಾಗಿ ಉಲ್ಲೇಖಿಸಿದ್ದರು ಎಂದು ಶಿವಶಂಕರ್ ಮೆನನ್ ಎಂಬುವವರು ತಾವು ಬರೆದ ಪುಸ್ತಕದಲ್ಲಿ ಹೇಳಿದ್ದಾರೆ.

ಲಡಾಖ್‌ನಲ್ಲಿ ಭಾರತ-ಚೀನಾ ಉನ್ನತ ಮಟ್ಟದ ಮಾತುಕತೆಲಡಾಖ್‌ನಲ್ಲಿ ಭಾರತ-ಚೀನಾ ಉನ್ನತ ಮಟ್ಟದ ಮಾತುಕತೆ

1962ರ ಯುದ್ಧದ ನಂತರ 20 ಕಿ.ಮೀ ಆಕ್ರಮಣ

1962ರ ಯುದ್ಧದ ನಂತರ 20 ಕಿ.ಮೀ ಆಕ್ರಮಣ

ಅಂತಾರಾಷ್ಟ್ರೀಯ ಗಡಿ ವಿಚಾರದಲ್ಲಿಯೇ 1962ರಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆದಿತ್ತು. ಅನಂತರದಲ್ಲೂ ಡ್ರ್ಯಾಗನ್ ರಾಷ್ಟ್ರ 20 ಕಿಲೋ ಮೀಟರ್ ಗಡಿರೇಖೆಯನ್ನು ಆಕ್ರಮಿಸಿಕೊಂಡಿದ್ದು, ಆ ಪ್ರದೇಶವೆಲ್ಲ ತನಗೆ ಸೇರಿದ್ದು ಎಂಬ ಮೊಂಡತನ ಪ್ರದರ್ಶಿಸಿತ್ತು. ಈ ಸಂಬಂಧ ಯುದ್ಧದ ಬಳಿಕ ಚೀನಾ ಪ್ರಧಾನಮಂತ್ರಿ ಝುವ್ ಎನ್ಲೈ ಭಾರತದ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದರು. ಪೂರ್ವ ವಲಯದಲ್ಲಿ ಮೆಕ್-ಮೆಹೋನ್ ಗಡಿಯು ಕಾಕತಾಳೀಯವಾಗಿ ಚೀನಾಗೆ ಹೊಂದಾಣಿಕೆಯಾಗುತ್ತಿದೆ. ಪಶ್ಚಿಮ ಮತ್ತು ಮಧ್ಯ ವಲಯದ ಗಡಿಯಲ್ಲಿ ಸಾಂಪ್ರದಾಯಿಕ ಹೋಲಿಕೆಯು ಗೋಚರಿಸುತ್ತಿರುವುದನ್ನು ಚೀನಾ ಗುರುತಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

2017ರಲ್ಲಿ ಹೊತ್ತಿಕೊಂಡ ಡೋಕ್ಲಾಂ ಗಡಿ ಕಿಚ್ಚು

2017ರಲ್ಲಿ ಹೊತ್ತಿಕೊಂಡ ಡೋಕ್ಲಾಂ ಗಡಿ ಕಿಚ್ಚು

ಭಾರತದ ಜೊತೆಗೆ ಚೀನಾ ಆಗಾಗ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಅದಕ್ಕೆ 2017ರ ಘಟನೆಯೇ ಸಾಕ್ಷಿ. ಅಂದು ಡೋಕ್ಲಾಂ ಗಡಿಯ ವಿಚಾರಕ್ಕೆ ಕಾಲ್ಕೆರೆದು ನಿಂತಿದ್ದ ಚೀನಾ ಸರ್ಕಾರವು ಭಾರತಕ್ಕೆ ಎಚ್ಚರಿಕೆ ನೀಡುವ ಉದ್ಧಟತನವನ್ನು ತೋರಿತ್ತು. ಭಾರತವು 1959ರ ಒಪ್ಪಂದಕ್ಕೆ ಬದ್ಧವಾಗಿರಬೇಕು ಎನ್ನುವ ಮಾತನ್ನು ಹೇಳಿತ್ತು.

ಗಡಿ ವಿಚಾರದಲ್ಲಿ ಚೀನಾಗೆ ಭಾರತದ ಉತ್ತರ

ಗಡಿ ವಿಚಾರದಲ್ಲಿ ಚೀನಾಗೆ ಭಾರತದ ಉತ್ತರ

ಗಡಿ ನಿಯಂತ್ರಣ ರೇಖೆ ವಿಚಾರದಲ್ಲಿ ಚೀನಾ 1959 ಮತ್ತು 1962ರಲ್ಲಿ ಮಂಡಿಸಿದ ವಾದವನ್ನು ಭಾರತವು ಸ್ಪಷ್ಟವಾಗಿ ನಿರಾಕರಿಸಿತ್ತು. ಅಂತಾರಾಷ್ಟ್ರೀಯ ಗಡಿಯಿಂದ ಭಾರತವು 20 ಕಿಲೋ ಮೀಟರ್ ಹಿಂದೆ ಸರಿಯಬೇಕು ಎಂಬ ಚೀನಾ ವಾದದಲ್ಲಿ ಕಿಂಚಿತ್ತೂ ಅರ್ಥವಿಲ್ಲ ಎಂದು ಪ್ರಧಾನಿ ಜವಾಹರಲಾಲ್ ನೆಹರೂ ವಾದಿಸಿದ್ದರು. ಅಸಲಿಗೆ ಗಡಿ ನಿಯಂತ್ರಣ ರೇಖೆ ಎಂದರೇನು, ಆಕ್ರಮಣಕಾರಿ ನಿಲುವಿನಿಂದ ಸಪ್ಟೆಂಬರ್ ನಲ್ಲಿ ಚೀನಾ ಸೃಷ್ಟಿಸಿಕೊಂಡಿರುವ ಗಡಿ ನಿಯಂತ್ರಣ ರೇಖೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು.

ಚೀನಾದ ಆಕ್ರಮಣಕಾರಿ ನಿಲುವನ್ನು ಒಪ್ಪುವುದಕ್ಕೆ ಸಾಧ್ಯವೇ?

ಚೀನಾದ ಆಕ್ರಮಣಕಾರಿ ನಿಲುವನ್ನು ಒಪ್ಪುವುದಕ್ಕೆ ಸಾಧ್ಯವೇ?

ಅಂತಾರಾಷ್ಟ್ರೀಯ ಗಡಿ ವಿಚಾರದಲ್ಲಿ ಚೀನಾ ಈ ಹಿಂದೆಯೂ ಕೂಡಾ ಆಕ್ರಮಣಕಾರಿ ನಿಲುವು ಪ್ರದರ್ಶಿಸಿತ್ತು. 1962ರ ಸೆಪ್ಟೆಂಬರ್.8ರ ಯುದ್ಧಕ್ಕೂ ಮೊದಲು ಭಾರತ ಮತ್ತು ಚೀನಾ ನಡುವಿನ ಗಡಿಯನ್ನಷ್ಟೇ ಒಪ್ಪಿಕೊಳ್ಳುವುದಕ್ಕೆ ಸಾಧ್ಯ. ಅನಂತರದಲ್ಲಿ ಚೀನಾ ಆಕ್ರಮಿಸಿಕೊಂಡ ಗಡಿರೇಖೆಯನ್ನು ಬಿಟ್ಟು ವಾಪಸ್ ತೆರಳುವಂತೆ ಎಚ್ಚರಿಕೆಯನ್ನು ನೀಡಲಾಗಿತ್ತು.

ಭಾರತವು ಗಡಿರೇಖೆಯ ಬಗ್ಗೆ ಸಮ್ಮತಿ ಸೂಚಿಸಿದ್ದು ಯಾವಾಗ?

ಭಾರತವು ಗಡಿರೇಖೆಯ ಬಗ್ಗೆ ಸಮ್ಮತಿ ಸೂಚಿಸಿದ್ದು ಯಾವಾಗ?

ಭಾರತ ಮತ್ತು ಚೀನಾ ನಡುವಿನ ಗಡಿರೇಖೆ ಸಂಧಾನದ ಬಗ್ಗೆ ಶ್ಯಾಂ ಸರನ್ ಎಂಬುವವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. 1991ರಲ್ಲಿ ಚೀನಾದ ಪ್ರೀಮಿಯರ್ ಲೀ ಭಾರತಕ್ಕೆ ಭೇಟಿ ನೀಡುತ್ತಾರೆ. ಅಂದು ಭಾರತದ ಪ್ರಧಾನಮಂತ್ರಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರ ಜೊತೆಗೆ ಎರಡು ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಗಡಿ ನಿಯಂತ್ರಣ ರೇಖೆ ಕುರಿತು ಪರಿಕಲ್ಪನೆಯನ್ನು ಪ್ರಧಾನಿ ಪಿ.ವಿ.ನರಸಿಂಹರಾವ್ ಒಪ್ಪಿಕೊಳ್ಳುತ್ತಾರೆ.

ಚೀನಾ ಜೊತೆಗೆ ಭಾರತ ಶಾಂತಿ ಒಪ್ಪಂದಕ್ಕೆ ಅಂಕಿತ

ಚೀನಾ ಜೊತೆಗೆ ಭಾರತ ಶಾಂತಿ ಒಪ್ಪಂದಕ್ಕೆ ಅಂಕಿತ

1993ರಲ್ಲಿ ಭಾರತದ ಪ್ರಧಾನಿ ಪಿ.ವಿ.ನರಸಿಂಹರಾವ್ ಚೀನಾದ ಬೀಜಿಂಗ್ ಗೆ ಭೇಟಿ ನೀಡುತ್ತಾರೆ. ಈ ವೇಳೆ ಎರಡು ರಾಷ್ಟ್ರಗಳ ನಡುವೆ ಶಾಂತಿ ಸಂಧಾನದ ಒಪ್ಪಂದಕ್ಕೆ ಅಂಕಿತ ಹಾಕುತ್ತಾರೆ. 1959 ಹಾಗೂ 1962ರ ನಿಬಂಧನೆಗೆ ಸಂಬಂಧಿಸಿದಂತೆ ಕೆಲವು ಪ್ರದೇಶಗಳಲ್ಲಿನ ಗಡಿ ವಿವಾದಗಳ ಬಗ್ಗೆ ರಾಜಿ ಮಾಡಿಕೊಳ್ಳುವಂತಾ ಒಪ್ಪಂದಕ್ಕೆ ಎರಡೂ ರಾಷ್ಟ್ರದ ನಾಯಕರು ಅಂಕಿತ ಹಾಕಿದರು.

ಭಾರತ ಗಡಿ ನಿಯಂತ್ರಣ ರೇಖೆ ವಿಚಾರದಲ್ಲಿ ನಿಲುವು ಬದಲಿಸಿದ್ದೇಕೆ?

ಭಾರತ ಗಡಿ ನಿಯಂತ್ರಣ ರೇಖೆ ವಿಚಾರದಲ್ಲಿ ನಿಲುವು ಬದಲಿಸಿದ್ದೇಕೆ?

ಮೆನನ್ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಪ್ರಕಾರ 1980ರ ಆಸುಪಾಸಿನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಗಸ್ತು ತಿರುಗುವುದು ಹೆಚ್ಚಾಯಿತು. ಇದಕ್ಕೂ ಮೊದಲು ಅಂದರೆ 1976ರಲ್ಲೇ ಚೀನಾದ ಸ್ಟಡಿ ಗ್ರೂಪ್ ಭಾರತೀಯ ಗಡಿ ನಿಯಮದ ಮಾದರಿಯಲ್ಲಿ ಬದಲಾವಣೆಗಳನ್ನು ಮಾಡಿತು. ಗಡಿಯಲ್ಲಿ ಗಸ್ತು ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿತ್ತು. ಇದಾದ ಬಳಿಕ 1988ರಲ್ಲಿ ಭಾರತದ ಪ್ರಧಾನಮಂತ್ರಿ ರಾಜೀವ್ ಗಾಂಧಿ ಶಾಂತಿ ಮಾತುಕತೆ ನಡೆಸಲೆಂದು ಬೀಜಿಂಗ್ ಗೆ ಭೇಟಿ ನೀಡಿದ್ದರು. ಆದರೆ ಈ ಪ್ರಯತ್ನವು ಯಶಸ್ವಿಯಾಗಿರಲಿಲ್ಲ.

ಭಾರತ-ಚೀನಾ ಗಡಿರೇಖೆಯ ನಕ್ಷೆ ಹಂಚಿಕೊಂಡಿವೆಯೇ?

ಭಾರತ-ಚೀನಾ ಗಡಿರೇಖೆಯ ನಕ್ಷೆ ಹಂಚಿಕೊಂಡಿವೆಯೇ?

ಭಾರತ ಮತ್ತು ಚೀನಾ ರಾಷ್ಟ್ರಗಳು ಗಡಿರೇಖೆಗೆ ಸಂಬಂಧಿಸಿದ ಮಧ್ಯ ವಲಯದ ನಕ್ಷೆಯನ್ನು ಮಾತ್ರ ಹಂಚಿಕೊಂಡಿವೆ. ಆದರೆ ಅಧಿಕೃತವಾಗಿ ಪಶ್ಚಿಮ ವಲಯದ ಗಡಿಗೆ ಸಂಬಂಧಿಸಿದ ನಕ್ಷೆ ಹಂಚಿಕೊಂಡಿಲ್ಲ. 2002ರಿಂದ ಈಚೆಗೆ ಭಾರತದ ಗಡಿ ಪ್ರದೇಶವನ್ನು ಗುರುತಿಸುವ ಯಾವುದೇ ಸಾರ್ವಜನಿಕವಾದ ನಕ್ಷೆಯು ಇಲ್ಲ. 2015ರ ಮೇ ತಿಂಗಳಿನಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಗಡಿರೇಖೆಯ ನಕ್ಷೆ ಬಗ್ಗೆ ಇಟ್ಟಿದ್ದ ಪ್ರಸ್ತಾವನೆಯನ್ನು ಚೀನಾ ನಿರಾಕರಿಸಿತ್ತು.

ಹಕ್ಕು ಮಂಡಿಸುತ್ತಿರುವ ಚೀನಾ ಮತ್ತು ಭಾರತ

ಹಕ್ಕು ಮಂಡಿಸುತ್ತಿರುವ ಚೀನಾ ಮತ್ತು ಭಾರತ

ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ರಾಷ್ಟ್ರಗಳು ಹಕ್ಕು ಮಂಡಿಸುತ್ತಿವೆ. ಭಾರತದ ಅಧಿಕೃತ ಗಡಿಯಲ್ಲಿ ಅಕಸೈ ಚಿನ್ ಮತ್ತು ಗಿಲ್ಗಿಟ್ ಬಲ್ತಿಸ್ತಾನ್ ಪ್ರದೇಶಗಳನ್ನು ಒಳಗೊಂಡಿದೆ ಎನ್ನುವುದು ಭಾರತದ ವಾದ. ಇನ್ನೊಂದು ಕಡೆಯಲ್ಲಿ ಪೂರ್ವ ವಲಯದ ಗಡಿಯಲ್ಲಿರುವ ಅರುಣಾಚಲ ಪ್ರದೇಶವು ದಕ್ಷಿಣದ ಟಿಬೆಟ್ ಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ.

ಲಡಾಖ್ ನಲ್ಲಿ ವಿವಾದ ಸೃಷ್ಟಿಯಾಗಲು ಅಸಲಿ ಕಾರಣವೇನು?

ಲಡಾಖ್ ನಲ್ಲಿ ವಿವಾದ ಸೃಷ್ಟಿಯಾಗಲು ಅಸಲಿ ಕಾರಣವೇನು?

ಸ್ವಾತಂತ್ರ್ಯ ಭಾರತವು ಬ್ರಿಟಿಷ್ ಕಾಲದಲ್ಲಿ ನಡೆದ ಒಪ್ಪಂದಗಳನ್ನು ವರ್ಗಾವಣೆಗೊಳಿಸಿತು. ಮೆಕ್-ಮೆಹೋನ್ ಗಡಿಗೆ ಸಂಬಂಧಿಸಿದಂತೆ ಶಿಮ್ಲಾ ಒಪ್ಪಂದಕ್ಕೆ ಈ ಮೊದಲು ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರು ಅಂಕಿತ ಹಾಕಿದ್ದರು. ಈ ಹಿಂದೆ ಲಡಾಖ್ ನ ಅಕಸಾಯಿ ಚಿನ್ ಪ್ರದೇಶವು ಜಮ್ಮು-ಕಾಶ್ಮೀರದ ವ್ಯಾಪ್ತಿಯಲ್ಲಿ ಇರದೇ ರಾಜಪ್ರಭುತ್ವದ ಅಡಿಯಲ್ಲಿತ್ತು. ಅಂದು ಈ ಪ್ರದೇಶವು ಬ್ರಿಟಿಷ್ ಆಡಳಿತ ನಡೆಸುತ್ತಿದ್ದ ಭಾರತದ ಒಂದು ಅಂಗವಾಗಿರಲಿಲ್ಲ. ಹೀಗಾಗಿ ಪೂರ್ವ ವಲಯದಲ್ಲಿ ಗಡಿರೇಖೆಯಲ್ಲಿ ಯಾವುದೇ ಗೊಂದಲಗಳೆಲ್ಲ 1914ರ ಒಪ್ಪಂದದಲ್ಲೇ ಬಹುತೇಕ ಇತ್ಯರ್ಥಗೊಂಡಿತ್ತು. ಆದರೆ ಪಶ್ಚಿಮ ವಲಯದ ಲಡಾಖ್ ಪ್ರದೇಶದಲ್ಲಿ ಹಾಗೆ ಆಗಿರಲಿಲ್ಲ.

ಗಡಿರೇಖೆ ನಕ್ಷೆಯಲ್ಲಿ ಗೊಂದಲ ಇಂದು ನಿನ್ನೆಯದ್ದಲ್ಲ!

ಗಡಿರೇಖೆ ನಕ್ಷೆಯಲ್ಲಿ ಗೊಂದಲ ಇಂದು ನಿನ್ನೆಯದ್ದಲ್ಲ!

"ಭಾರತ-ಚೀನಾ ಗಡಿ ಸಮಸ್ಯೆ-1846-1947" ಎಂಬ ಪುಸ್ತಕದಲ್ಲಿ ಲೇಖಕರಾದ ಎ.ಜಿ.ನೂರಾನಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಎರಡು ರಾಷ್ಟ್ರಗಳ ಗಡಿಗೆ ಸಂಬಂಧಿಸಿದಂತೆ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರಾಜ್ಯ ಸಚಿವಾಲಯವು ಎರಡು ಬಾರಿ ಎರಡು ಬಿಳಿ ಹಾಳೆಗಳ ಮೇಲೆ ನಕ್ಷೆಯನ್ನು ಬಿಡುಗಡೆ ಮಾಡಿತು. 1948ರ ಜುಲೈನಲ್ಲಿ ಮೊದಲ ಬಾರಿಗೆ ಎರಡು ನಕ್ಷೆಗಳನ್ನು ಬಿಡುಗಡೆ ಮಾಡಲಾಗಿದ್ದು, ಒಂದರಲ್ಲಿ ಪಶ್ಚಿಮ ವಲಯದಲ್ಲಿ ಗಡಿರೇಖೆಯನ್ನೇ ಗುರುತಿಸಿರಲಿಲ್ಲ. ಇನ್ನೊಂದು ನಕ್ಷೆಯು ಸಂಪೂರ್ಣ ಹಳದಿಮಯವಾಗಿದ್ದು ಗಡಿಯನ್ನು ಗುರುತಿಸಲಾಗದಷ್ಟು ಅಸ್ಪಷ್ಟವಾಗಿತ್ತು. ಇನ್ನು, ಭಾರತವು ಸ್ವಾತಂತ್ರ್ಯವಾದ ನಂತರ 1950 ಫೆಬ್ರವರಿಯಲ್ಲಿ ಎರಡನೇ ಬಾರಿ ನಕ್ಷೆಯನ್ನು ಬಿಡುಗಡೆ ಮಾಡಿದ್ದರೂ ಅಂದು ಕೂಡಾ ಅಸ್ಪಷ್ಟ ಮತ್ತು ಗೊಂದಲಕಾರಿಯಾಗಿದ್ದವು.

ಹೊಸ ನಕ್ಷೆ ರಚನೆಗೆ ನಿರ್ದೇಶಿಸಿದ ಜವಾಹರಲಾಲ್ ನೆಹರೂ

ಹೊಸ ನಕ್ಷೆ ರಚನೆಗೆ ನಿರ್ದೇಶಿಸಿದ ಜವಾಹರಲಾಲ್ ನೆಹರೂ

1954ರ ಜುಲೈನಲ್ಲಿ ಅಂತಾರಾಷ್ಟ್ರೀಯ ಗಡಿಗೆ ಸಂಬಂಧಿಸಿದಂತೆ ಹೊಸ ನಕ್ಷೆಗಳನ್ನು ಎರಡೆರೆಡು ಬಾರಿ ಪರಿಶೀಲಿಸಿ ಜಾಗರೂಕತೆಯಿಂದ ಪುನಃ ರಚಿಸುವಂತೆ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ನಿರ್ದೇಶನ ನೀಡಿದರು. ಹೊಸ ನಕ್ಷೆಗಳಲ್ಲಿ ಉತ್ತರ ವಲಯ ಈಶಾನ್ಯ ವಲಯದಲ್ಲಿ ನಮ್ಮ ಗಡಿಯನ್ನು ಗುರುತಿಸುವಂತೆ ಇರಬೇಕು. ಈ ನಕ್ಷೆಗಳು ವಿದೇಶಗಳಲ್ಲಿರುವ ನಮ್ಮ ರಾಯಭಾರಿಗಳಿಗೆ ರವಾನೆಯಾಗಬೇಕು. ಸಾರ್ವಜನಿಕವಾಗಿ ಎಲ್ಲರೂ ಬಳಸುವಂತೆ ಆಗಬೇಕು. ನಮ್ಮ ಗಡಿ ಪ್ರದೇಶವನ್ನು ಗುರುತಿಸುವಾಗ ಶಾಲೆಗಳಲ್ಲೂ ಇದೇ ನಕ್ಷೆಗಳು ಬಳಕೆಯಾಗಬೇಕು ಎಂದು ಜವಾಹರಲಾಲ್ ನೆಹರೂ ನಿರ್ದೇಶಿಸಿದ್ದರು. ಇಂದಿಗೂ ಕೂಡಾ ಭಾರತದಲ್ಲಿ ಅಧಿಕೃತವಾಗಿ ಅದೇ ನಕ್ಷೆಗಳು ಬಳಕೆಯಾಗುತ್ತಿವೆ.

ಚೀನಾ ಮತ್ತು ಪಾಕ್ ಗಡಿ ವಿಚಾರದಲ್ಲಿನ ಭಿನ್ನತೆ

ಚೀನಾ ಮತ್ತು ಪಾಕ್ ಗಡಿ ವಿಚಾರದಲ್ಲಿನ ಭಿನ್ನತೆ

ಭಾರತ ಮತ್ತು ಪಾಕಿಸ್ತಾನ ಹಾಗೂ ಭಾರತ ಮತ್ತು ಚೀನಾ ನಡುವಿನ ಗಡಿ ಗೊಂದಲವು ಭಿನ್ನವಾಗಿದೆ. 1948ರಲ್ಲಿ ಗಡಿರೇಖೆ ಉಲ್ಲಂಘಿಸಿ ಪಾಕಿಸ್ತಾನವು ಗುಂಡಿನ ದಾಳಿ ನಡೆಸಿತ್ತು. ಕಾಶ್ಮೀರ ಯುದ್ಧದ ನಂತರದಲ್ಲಿ ವಿಶ್ವಸಂಸ್ಥೆಯು ಎರಡು ರಾಷ್ಟ್ರಗಳ ನಡುವೆ ಮಾತುಕತೆ ನಡೆಸಿತು. 1972ರಲ್ಲಿ ಎರಡು ರಾಷ್ಟ್ರಗಳ ನಡುವಿನ ಗಡಿರೇಖೆಯ ನಕ್ಷೆಯನ್ನು ಶಿಮ್ಲಾ ಒಪ್ಪಂದದ ಪ್ರಕಾರ ಸ್ಪಷ್ಟವಾಗಿ ರಚಿಸಲಾಯಿತು. ಈ ನಕ್ಷೆಗೆ ಎರಡು ರಾಷ್ಟ್ರಗಳ ಸೇನಾ ಮುಖ್ಯಸ್ಥರಾಗಿರುವ ಡಿಜಿಎಂಓಗಳು ಅಂಕಿತ ಹಾಕಿದರು. ಆದರೆ ಎರಡು ರಾಷ್ಟ್ರಗಳ ನಡುವಿನ ಗಡಿ ಎನ್ನುವುದು ಪರಸ್ಪರ ರಾಷ್ಟ್ರಗಳು ಒಪ್ಪಿಕೊಂಡಿರುವ ಪರಿಕಲ್ಪನೆಯ ವಿಚಾರವಾಗಿದೆಯೇ ವಿನಃ ಇದೊಂದು ಒಪ್ಪಂದಕ್ಕೆ ಸಂಬಂಧಿಸಿದ ವಿಚಾರವಲ್ಲ ಎಂದು ಹೇಳಲಾಗುತ್ತದೆ.

English summary
Read on to know here what is Line of actual control, where is it located on Map, what is issue between India & China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X