ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ 'ವಸ್ತ್ರ ಸಂಹಿತೆ' ಬಿಸಿ, ಟಿವಿ ನಿರೂಪಕಿ ಅಮಾನತು!

By Mahesh
|
Google Oneindia Kannada News

ಕುವೈಟ್, ಜೂನ್ 15: ಮುಸ್ಲಿಮರ ಪವಿತ್ರ ಹಬ್ಬ ಈದ್ ಉತ್ ಫಿತ್ರ್ ಎಲ್ಲೆಡೆ ಆಚರಿಸಲಾಗುತ್ತಿದೆ. ಆದರೆ, ಕುವೈಟ್ ಟೆಲಿವಿಷನ್ ನ ನಿರೂಪಕಿ ಅಮಲ್ ಅಲ್ ಅವಧಿ ಅವರ ಹಬ್ಬದ ಸಂಭ್ರಮಕ್ಕೆ ಮಂಕು ಕವಿದಿದೆ. ಟಿವಿ ಲೈವ್ ಶೋ ನಿರೂಪಣೆ ಮಾಡುತ್ತಿದ್ದ ಸಂದರ್ಭದಲ್ಲೇ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದಕ್ಕೆ ಕಾರಣ, ಇಸ್ಲಾಂ ಮೂಲಭೂತವಾದಿಗಳ ವಸ್ತ್ರ ಸಂಹಿತೆ ನೀತಿ.

ಈದ್ 2018: ಕೇರಳದಲ್ಲಿ ಶುಕ್ರವಾರ, ಇತರೆಡೆ ಶನಿವಾರ ಆಚರಣೆ ಈದ್ 2018: ಕೇರಳದಲ್ಲಿ ಶುಕ್ರವಾರ, ಇತರೆಡೆ ಶನಿವಾರ ಆಚರಣೆ

ರಂಜಾನ್ ಮಾಸಾಚಾರಣೆ ಸಂದರ್ಭದಲ್ಲಿ ಧರಿಸಬೇಕಿದ್ದ ವಸ್ತ್ರಗಳನ್ನು ಬಿಟ್ಟು, ಪಾಶ್ಚಾತ್ಯ ಶೈಲಿಯ ವಿನ್ಯಾಸ ಉಡುಪನ್ನು ಧರಿಸಿ ನಿರೂಪಣೆ ಮಾಡಲು ಮುಂದಾಗಿದ್ದು ಅಮಲ್ ಅವರ ಕೆಲಸಕ್ಕೆ ಕುತ್ತು ತಂದಿದೆ.

ಸರ್ಕಾರಿ ಸ್ವಾಮ್ಯದ ಕುವೈಟ್ ಟೆಲಿವಿಶನ್ (ಕೆಟಿವಿ1)ನಲ್ಲಿ ನಿರೂಪಕಿಯನ್ನು ಕಂಡ ಅನೇಕರು ಆಕೆಯ ದಿರಿಸಿನ ಬಗ್ಗೆ ದೂರು ನೀಡಿದ್ದಾರೆ. ತಕ್ಷಣವೆ ಆಕೆಯನ್ನು ಅಮಾನತು ಮಾಡಲಾಗಿದೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಮಲ್, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ನ್ಯಾಯ ಕೇಳಿದ್ದಾರೆ. ಕುವೈಟ್ ನ ಮಾಹಿತಿ ಸಚಿವಾಲಯಕ್ಕೆ ಈ ಬಗ್ಗ ಪ್ರಶ್ನೆ ಮಾಡಿ, ಸ್ಪಷ್ಟನೆ ಕೋರಿದ್ದಾರೆ.

Kuwaiti TV Host Fired On Air After Complaints Over Her Clothes: Report

ದಿ ವಿನ್ನಿಂಗ್ ಟಚ್ ಎಂಬ ಕಾರ್ಯಕ್ರಮದ ಸಹ ನಿರೂಪಣೆ ಮಾಡುತ್ತಿದ್ದ ಅಮಲ್ ಅವರು, ತಮ್ಮ ಹೊಸ ಉಡುಪಿನೊಂದಿಗೆ ಸೆಲ್ಫಿ ತೆಗೆದುಕೊಂಡು ಇನ್ಸ್ಟಾಗ್ರಾಮ್ ಗೆ ಹಾಕಿದ್ದರು. ಇದು ರಂಜಾನ್ ತಿಂಗಳಲ್ಲಿ ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಈ ಶೋ ಈಗಲೇ ಬಂದ್ ಮಾಡಿ, ಇಲ್ಲವೇ ಚಾನೆಲ್ ಸಂಪೂರ್ಣ ಬಂದ್ ಆಗಲಿದೆ ಎಂಬ ಬೆದರಿಕೆ ಗಳು ಬಂದ ಮೇಲೆ, ಚಾನೆಲ್ ಮುಖ್ಯಸ್ಥರು ಈ ಕ್ರಮ ಜರುಗಿಸಿದ್ದಾರೆ.

English summary
A television presenter in Kuwait was reportedly fired on air, minutes before the live show she was hosting was to end. According to some reports, Amal Al Awadhi may have been let go after state-run Kuwait Television (KTV1) received angry complaints over the clothes she was wearing onair. Ms Al Awadhi took to social media to ask Kuwait's Ministry of Information for a clarification over what has officially been termed a "suspension".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X