ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೈತ್ ಆಡಳಿತಗಾರ ಶೇಖ್ ಸಬಾಹ್ ಅಲ್ ಅಹ್ಮದ್ ನಿಧನ

|
Google Oneindia Kannada News

ದುಬೈ, ಸೆಪ್ಟೆಂಬರ್ 29: ಕುವೈತ್‌ನ ಆಡಳಿತಗಾರ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಮಂಗಳವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. 1990ರ ಗಲ್ಫ್ ಯುದ್ಧದ ಬಳಿಕ ಅವರು ಇರಾಕ್ ಜತೆಗಿನ ಸಂಬಂಧ ವೃದ್ಧಿಸುವುದರಲ್ಲಿ ಮತ್ತು ಇತರೆ ಪ್ರಾದೇಶಿಕ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಪ್ರಮುಖ ರಾಜತಾಂತ್ರಿಕ ಕಾರ್ಯ ನಿರ್ವಹಿಸಿದ್ದರು. ದಶಕಗಳ ಆಡಳಿತದಲ್ಲಿ ಅವರು ಮಧ್ಯಪ್ರಾಚ್ಯ ಭಾಗದಲ್ಲಿ ಅನೇಕ ಮಹತ್ವದ ಕಾರ್ಯಗಳ ನೇತೃತ್ವ ವಹಿಸಿದ್ದರು.

ಹಿರಿಯ ಆಡಳಿತಗಾರರೇ ತುಂಬಿರುವ ಮಧ್ಯಪ್ರಾಚ್ಯದಲ್ಲಿ ಕತಾರ್ ಹಾಗೂ ಇತರೆ ಅರಬ್ ದೇಶಗಳ ನಡುವೆ ಮುಂದುವರಿದಿರುವ ವಿವಾದಗಳನ್ನು ಪರಿಹರಿಸಲು ರಾಜತಾಂತ್ರಿಕ ನೀತಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.

ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಅವರ ಪೂರ್ವಾಧಿಕಾರಿ ಶೇಖ್ ಸಾದ್ ಅಲ್ ಅಬ್ದುಲ್ಲಾ ಅಲ್ ಸಬಾಹ್ ಅವರನ್ನು ಕೇವಲ ಒಂಬತ್ತು ದಿನಗಳ ಅಡಳಿತದ ಬಳಿಕ ಸಂಸತ್ತು ಸರ್ವಾನುಮತದಿಂದ ಕೆಳಕ್ಕಿಳಿಸಿತ್ತು. 2006ರಲ್ಲಿ ಶೇಖ್ ಸಬಾಹ್ ಅಧಿಕಾರಕ್ಕೆ ಬಂದಿದ್ದರು.

Kuwaits Emir Sheikh Sabah Al Ahmad Al Sabah Passes Away

ಕುವೈತ್‌ನ ಆಡಳಿತಾರೂಢ ಎಮಿರ್ ಆಗಿ ಅವರು ಅನೇಕ ಆಂತರಿಕ ರಾಜಕೀಯ ವಿವಾದಗಳನ್ನು ಎದುರಿಸಬೇಕಾಗಿತ್ತು. 2011ರಲ್ಲಿ ಅರಬ್ ಸ್ಪ್ರಿಂಗ್ ಪ್ರತಿಭಟನೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತದಿಂದ ರಾಷ್ಟ್ರೀಯ ಬಜೆಟ್ ಮೇಲೆ ಉಂಟಾದ ಒತ್ತಡದಂತಹ ಸನ್ನಿವೇಶಗಳು ಅವರಿಗೆ ಸವಾಲೊಡ್ಡಿದ್ದವು.

English summary
Kuwait's emir Sheikh Sabah Al Ahmad Al Sabah Passes Away at 91 on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X