ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುವೈತ್ ಬಸ್ ಅಪಘಾತ: ಮೃತ 15 ಜನರಲ್ಲಿ 7 ಭಾರತೀಯರು
ಕುವೈತ್, ಏಪ್ರಿಲ್ 02: ಕುವೈತ್ ನಲ್ಲಿ ನಿನ್ನೆ(ಏ.1) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15ಜನ ಮೃತರಾಗಿದ್ದು, ಅವರಲ್ಲಿ 7 ಜನ ಭಾರತೀಯರು ಎಂದು ಗುರುತಿಸಲಾಗಿದೆ. ವೇಗವಾಗಿ ಸಾಗುತ್ತಿದ್ದ ಎರಡು ಬಸ್ ಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ.
ನಜ್ಜುಗುಜ್ಜಾಸ ಬಸ್ಸಿನ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ನಡೆದಿದೆ. ಮೃತರೆಲ್ಲರೂ ಕುವೈತ್ ತೈಲ ಕಂಪೆನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಇಲ್ಲಿನ ಬರ್ಗನ್ ತೈಲ ಘಟಕದ ಬಳಿ ಅಪಘಾತ ಸಂಭವಿಸಿದೆ.
15 died due to major accident in khabad
— Shaheen Sayyed (@nihahs24) April 1, 2018
Kuwait who should be blame the drivers or the vehicle used for the blue collars@Kuwaithr
Most of them were Indian @SushmaSwaraj pic.twitter.com/ObqMK0lLPH
15 ಜನರಲ್ಲಿ 7 ಜನ ಭಾರತ, 5 ಜನ ಈಜಿಪ್ತ್, 3 ಜನ ಪಾಕಿಸ್ತಅನಿ ದೇಶದವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಭಾರತೀಯ ಮತ್ತು ಓರ್ವ ಈಜಿಪ್ತ ಪ್ರಜೆ ಗಾಯಗೊಂಡಿದ್ದಾರೆ.