ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಉದ್ಯಮಿಗಳನ್ನು ಆಕರ್ಷಿಸುವ ರಾಜ್ಯ : ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಜುಲೈ 02 : ಅಮೆರಿಕ ಪ್ರವಾಸದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಯಮಿಗಳ ಜೊತೆ ಅನೌಪಚಾರಿಕ ಸಂವಾದ ನಡೆಸಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮಾಹಿತಿ ಹಂಚಿಕೊಂಡರು.

ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 2ರಂದು New Business Opportunities in Karnataka ಎಂಬ ಸೆಮಿನಾರ್‌ನಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ಹೇಗೆ ಉದ್ಯಮಿಗಳನ್ನು ಆಕರ್ಷಿಸುತ್ತಿದೆ ಎಂದು ವಿವರಣೆ ನೀಡಿದರು.

ಅತೃಪ್ತಿ ಶಮನಕ್ಕೆ ವಿದೇಶದಿಂದಲೇ ಸಿಎಂ ಕುಮಾರಸ್ವಾಮಿ ಸಾಹಸ ಅತೃಪ್ತಿ ಶಮನಕ್ಕೆ ವಿದೇಶದಿಂದಲೇ ಸಿಎಂ ಕುಮಾರಸ್ವಾಮಿ ಸಾಹಸ

'ಕೆಲವು ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರು ಮೋಸ್ಟ್ ಡೈನಮಿಕ್ ಸಿಟಿ ಎಂಬ ಪಟ್ಟ ಪಡೆದಿದೆ. ಕರ್ನಾಟಕ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ' ಎಂದು ಕುಮಾರಸ್ವಾಮಿ ಹೇಳಿದರು.

Kumaraswamy speech at New Business Opportunities in Karnataka seminar

ಭಾಷಣದ ಮುಖ್ಯಾಂಶಗಳು

* ಇಂದು ಕರ್ನಾಟಕ ದೇಶದಲ್ಲಿಯೇ ಅಭಿವೃದ್ಧಿ ಹೊಂದುತ್ತಿರುವ, ಉದ್ಯಮಗಳನ್ನು ಆಕರ್ಷಿಸುತ್ತಿರುವ ರಾಜ್ಯವಾಗಿದೆ. ದೇಶ ಮತ್ತು ವಿದೇಶದ ಹಲವು ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡುತ್ತಿದ್ದಾರೆ.

ಹೂಡಿಕೆದಾರರ ಜೊತೆ ಎಚ್.ಡಿ.ಕುಮಾರಸ್ವಾಮಿ ಸಂವಾದ ಹೂಡಿಕೆದಾರರ ಜೊತೆ ಎಚ್.ಡಿ.ಕುಮಾರಸ್ವಾಮಿ ಸಂವಾದ

* ಉದ್ಯಮ ಸ್ನೇಹಿಯಾದ ನೀತಿಗಳು, ಅಗತ್ಯ ಮೂಲ ಸೌಕರ್ಯಗಳು, ನುರಿತ ಕಾರ್ಮಿಕರಿಂದಾಗಿ ರಾಜ್ಯ ಉದ್ಯಮಿಗಳನ್ನು ಆಕರ್ಷಿಸುತ್ತಿದೆ. ಕರ್ನಾಟಕ ದೇಶದ ಶೇ 50ರಷ್ಟು ಮೆಷಿನ್ ಟೂಲ್ಸ್, 39 ಶೇ ಮಾಹಿತಿ ತಂತ್ರಜ್ಞಾನ 67 ರಷ್ಟು ಏರ್‌ ಕ್ರಾಫ್ಟ್‌, ರಕ್ಷಣಾ ಇಲಾಖೆಗೆ ಹೆಲಿಕಾಪ್ಟರ್ ಕೊಡುಗೆಯಾಗಿ ನೀಡುತ್ತಿದೆ.

* ನಮ್ಮ ರಾಜ್ಯ ಬ್ಲಾಕ್ ಚೈನ್, 3ಡಿ ಪ್ರಿಟಿಂಗ್, ರೋಬೋಟಿಕ್ಸ್, ನ್ಯಾನೋ ಟೆಕ್ನಾಲಜಿ, ಮೆಡಿಕಲ್ ಟೆಕ್ನಾಲಜಿ, ಜಿನಟೆಕ್ ಇಂಜಿನಿಯರಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಕಾಂಗ್ರೆಸ್ ಶಾಸಕರಿಗೆ ಎಚ್.ಡಿ.ಕುಮಾರಸ್ವಾಮಿ ಫೋನ್ ಕರೆ! ಕಾಂಗ್ರೆಸ್ ಶಾಸಕರಿಗೆ ಎಚ್.ಡಿ.ಕುಮಾರಸ್ವಾಮಿ ಫೋನ್ ಕರೆ!

* ಪಾರದರ್ಶಕವಾದ ನೀತಿಯ ಮೂಲಕ ನಾವು ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಕೆಲವು ದಿನಗಳ ಹಿಂದೆ ಎಲೆಕ್ಟ್ರಿಕ್ ವಾಹನ ಮತ್ತು Energy Storage Policy 2017 ಅನ್ನು ನಾವು ಘೋಷಣೆ ಮಾಡಿದ್ದೇವೆ.

* 2019-24 ನೇ ಸಾಲಿಗೆ ಅನ್ವಯವಾಗುವಂತೆ ಹೊಸ ಉದ್ಯಮ ನೀತಿಯನ್ನು ನಾವು ತಯಾರು ಮಾಡುತ್ತಿದ್ದೇವೆ. ಎರಡು ಮತ್ತು 3ನೇ ಹಂತದ ನಗರಗಳಿಗೆ ಉದ್ಯಮಗಳನ್ನು ವಿಸ್ತರಣೆ ಮಾಡುವ ಚಿಂತನೆಯನ್ನು ನಾವು ನಡೆಸುತ್ತಿದ್ದೇವೆ.

* 9 ಇಂಡಸ್ಟ್ರಿಯಲ್ ಕ್ಲಸ್ಟರ್ ಅಭಿವೃದ್ಧಿ ಮಾಡಲಿದ್ದೇವೆ. ಮುಂದಿನ ನಾಲ್ಕು ವರ್ಷಗಳಲ್ಲಿ 9 ಲಕ್ಷ ಉದ್ಯೋಗಳನ್ನು ಸೃಷ್ಠಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಕೊಪ್ಫಳದಲ್ಲಿ ಆಟಿಕೆ, ಬಳ್ಳಾರಿಯಲ್ಲಿ ಜವಳಿ, ಹಾಸನದಲ್ಲಿ ಟೈಲ್ಸ್, ಕಲಬುರಗಿಯಲ್ಲಿ ಸೌರ ಶಕ್ತಿಯಂತ್ರಗಳು, ಚಿತ್ರದುರ್ಗದಲ್ಲಿ ಎಲ್‌ಇಡಿ ಬಲ್ಪ್, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿ ಭಾಗಗಳು, ಬೀದರ್‌ನಲ್ಲಿ ಕೃಷಿ ಸಂಬಂಧಿತ ಉಪಕರಣ ತಯಾರು ಮಾಡುವ ಗುರಿ ಇದೆ.

* ವಿಶ್ವದ ಬೇರೆ-ಬೇರೆ ಉದ್ಯಮಿಗಳನ್ನು ಆಕರ್ಷಿಸಲು 2020ರ ಜನವರಿಯಲ್ಲಿ ನಾವು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲಿದ್ದೇವೆ.

English summary
Karnataka Chief Minister H.D.Kumaraswamy in America tour. Here are the Chief Minister's speech at the New Business Opportunities in Karnataka seminar at Jewel of India, Silver Spring, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X