ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಧವ್ ಕೇಸ್: ಪಾಕ್ ಹೈಕೋರ್ಟ್‌ನಿಂದ ಮಹತ್ವದ ಆದೇಶ!

By ಅನಿಕೇತ್
|
Google Oneindia Kannada News

ಇಸ್ಲಾಮಾಬಾದ್, ಆ.4: ಕುಲಭೂಷಣ್ ಜಾಧವ್ ಕೇಸ್‌ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಭಾರತೀಯ ನೌಕಾಸೇನೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ ಪ್ರಕರಣದಲ್ಲಿ ವಾದಿಸಲು ಮೂವರು ವಕೀಲರನ್ನ ಇಸ್ಲಾಮಾಬಾದ್ ಹೈಕೋರ್ಟ್ ನೇಮಿಸಿದೆ. ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನಿ ಮಿಲಿಟರಿ ಕೋರ್ಟ್‌ನಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಜಾಧವ್ ಅವರು, ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದಾರೆ.

Recommended Video

DK Shivakumar : ಫೀಲ್ಡಿಗಿಳಿದು ಗೆದ್ದರಷ್ಟೇ ಪದಾಧಿಕಾರಿ ಹುದ್ದೆ | Oneindia Kannada

ಪಾಕ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಈ ದ್ವಿಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಅಖ್ತರ್ ಮಿನಾಲ್ಹಾ, ನ್ಯಾಯಮೂರ್ತಿ ಮಿಯಾಗುಲ್ ಹಸನ್ ಔರಂಗಜೇಬ್ ಇದ್ದರು.

ಜಾಧವ್ ಪ್ರಕರಣ: ವಿಯೆನ್ನಾ ರಾಜತಾಂತ್ರಿಕ ಒಪ್ಪಂದ ಎಂದರೇನು?ಜಾಧವ್ ಪ್ರಕರಣ: ವಿಯೆನ್ನಾ ರಾಜತಾಂತ್ರಿಕ ಒಪ್ಪಂದ ಎಂದರೇನು?

ಜಾಧವ್ ಪ್ರಕರಣದಲ್ಲಿ ವಾದ ಮಾಡಲು ಪಾಕ್ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಬಿದ್ ಹಸನ್ ಮಾಂಟೊ, ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಹಮೀದ್ ಖಾನ್ ಮತ್ತು ಪಾಕಿಸ್ತಾನದ ಮಾಜಿ ಅಟಾರ್ನಿ ಜನರಲ್ ಮಖ್ದೂಮ್ ಅಲಿ ಖಾನ್ ನೇಮಕಗೊಂಡಿದ್ದಾರೆ. ಈ ಮೂವರು ಹಿರಿಯ ವಕೀಲರು ಆ್ಯಮಿಕಸ್ ಕ್ಯೂರಿಯಾಗಿ ನೇಮಕವಾಗಿರೋದು, ಜಾಧವ್‌ ಪ್ರಕರಣದಲ್ಲಿ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ.

 ಮುಕ್ತ ರಾಜತಾಂತ್ರಿಕ ಭೇಟಿಗೆ ಸಮ್ಮತಿ..!

ಮುಕ್ತ ರಾಜತಾಂತ್ರಿಕ ಭೇಟಿಗೆ ಸಮ್ಮತಿ..!

ಕಳೆದ ಬಾರಿ ಭಾರತದ ಅಧಿಕಾರಿಗಳು ಜಾಧವ್ ಭೇಟಿಗಾಗಿ ಪಾಕ್ ಜೈಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಾಕ್ ಜೈಲಿನ ಅಧಿಕಾರಿಗಳು ಕಿರಿಕಿರಿ ಉಂಟುಮಾಡಿದ್ದರು. ಜಾಧವ್ ಜೊತೆ ಭಾರತದ ಅಧಿಕಾರಿಗಳಿಗೆ ಮುಕ್ತವಾಗಿ ಮಾತನಾಡಲು ಬಿಟ್ಟಿರಲಿಲ್ಲ. ಇದರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದ ಭಾರತೀಯ ಅಧಿಕಾರಿಗಳು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಬಣ್ಣ ಬಯಲುಮಾಡಿದ್ದರು. ಆದರೆ ಘಟನೆ ನಂತರ ಪಾಕ್ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಜಾಗತಿಕಮಟ್ಟದಲ್ಲಿ ಮಾನ ಉಳಿಸಿಕೊಳ್ಳಲು ಪಾಕ್ ಮುಂದಾಗಿದ್ದು, ಈ ಮೂಲಕ ಭಾರತದ ಅಧಿಕಾರಿಗಳು ಹಾಗೂ ಮೋದಿ ಸರ್ಕಾರದ ಶ್ರಮಕ್ಕೆ ಫಲ ಸಿಕ್ಕಿದೆ. ಪಾಕ್ ಹೈಕೋರ್ಟ್ ಈಗ ನೀಡಿರುವ ಆದೇಶದಲ್ಲಿ ಜಾಧವ್‌ರ ಭೇಟಿಗೆ ಮುಕ್ತ ರಾಜತಾಂತ್ರಿಕ ಅವಕಾಶ ಕಲ್ಪಿಸಲಾಗಿದೆ.

 ಸತತ 3 ವರ್ಷಗಳ ಹೋರಾಟ

ಸತತ 3 ವರ್ಷಗಳ ಹೋರಾಟ

ಜಾಧವ್ ವಿರುದ್ಧ ಭಾರತದ ಪರ ಗೂಢಚಾರಿಕೆ ಹಾಗೂ ಪಾಕ್‌ನಲ್ಲಿ ಭಯೋತ್ಪಾದನೆ ಸಂಚು ನಡೆಸಿದ ಆರೋಪ ಹೊರಿಸಿದ್ದ ಪಾಪಿ ಪಾಕಿಸ್ತಾನ, ಜಾಧವ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪಾಕಿಸ್ತಾನದ ಮಿಲಿಟರಿ ಕೋರ್ಟ್ 2017ರ ಏಪ್ರಿಲ್‌ನಲ್ಲಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಅಂದಿನಿಂದಲೂ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಾ ಬಂದಿದೆ. ಸತತ 3 ವರ್ಷಗಳಿಂದಲೂ ಈ ಹೋರಾಟ ನಡೆಯುತ್ತಿದೆ.

ಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಗಲ್ಲುಶಿಕ್ಷೆ ಅಮಾನತುಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಗಲ್ಲುಶಿಕ್ಷೆ ಅಮಾನತು

 ಐಸಿಜೆಯಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ

ಐಸಿಜೆಯಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ

ದಿಢೀರ್ ಶಿಕ್ಷೆ ವಿಧಿಸಿ ಭಾರತದ ವಿರುದ್ಧ ಪರೋಕ್ಷವಾಗಿ ದ್ವೇಷ ಹೊರಹಾಕಿದ್ದ ಪಾಕ್‌ಗೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರ ಮುಖಭಂಗವಾಗಿತ್ತು. ಜಾಧವ್ ವಿರುದ್ಧ ಪಾಕಿಸ್ತಾನಿ ಮಿಲಿಟರಿ ಕೋರ್ಟ್ ವಿಧಿಸಿದ್ದ ಮರಣದಂಡನೆ ತೀರ್ಪಿಗೆ ಐಸಿಜೆ ಆದೇಶ ತಾತ್ಕಾಲಿಕ ಬ್ರೇಕ್ ಹಾಕಿತ್ತು.

ಕುಲಭೂಷಣ್ ಜಾಧವ್ ಪ್ರಕರಣ: ಯಾವಾಗ ಏನೇನಾಯ್ತು? Timelineಕುಲಭೂಷಣ್ ಜಾಧವ್ ಪ್ರಕರಣ: ಯಾವಾಗ ಏನೇನಾಯ್ತು? Timeline

 ಮುಕ್ತ ವಿಚಾರಣೆಗೆ ಅವಕಾಶ ನೀಡುತ್ತಿಲ್ಲ

ಮುಕ್ತ ವಿಚಾರಣೆಗೆ ಅವಕಾಶ ನೀಡುತ್ತಿಲ್ಲ

ಆದರೆ ಮತ್ತೆ ತನ್ನ ನರಿಬುದ್ಧಿ ತೋರಿಸುತ್ತಿರುವ ಪಾಕಿಸ್ತಾನ, ಜಾಧವ್ ಪ್ರಕರಣದಲ್ಲಿ ಮುಕ್ತ ವಿಚಾರಣೆಗೆ ಅವಕಾಶ ನೀಡುತ್ತಿಲ್ಲ. ಪಾಕ್ ಹೈಕೋರ್ಟ್ ಇದೀಗ ಪರೋಕ್ಷವಾಗಿ ಪಾಕ್ ಸರ್ಕಾರಕ್ಕೆ ತನ್ನ ಆದೇಶದ ಮೂಲಕ ಚಾಟಿ ಬೀಸಿದೆ. ಇನ್ನು ಈ ಪ್ರಕರಣದಲ್ಲಿ ಜಾಧವ್ ಗೆದ್ದು ಭಾರತಕ್ಕೆ ಸುರಕ್ಷಿತವಾಗಿ ಮರಳಲಿ ಎಂಬುದು ಕೋಟ್ಯಂತರ ಭಾರತೀಯರ ಆಶಯವಾಗಿದೆ.

ಕುಲಭೂಷಣ್ ಜಾಧವ್ ತೀರ್ಪು ಏನೇನೋ ಅಂದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿಕುಲಭೂಷಣ್ ಜಾಧವ್ ತೀರ್ಪು ಏನೇನೋ ಅಂದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿ

English summary
Pakistani court named 3 senior lawyers in the case of Kulbhushan Jadhav. A 2 member bench of the Islamabad High Court appointed the 3 lawyers for Jadhav Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X