ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ, ಫೆಬ್ರವರಿಯಲ್ಲಿ ಮತ್ತೆ ವಿಚಾರಣೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 03 : ಕುಲಭೂಷಣ್ ಜಾಧವ್ ಅವರ ಅರ್ಜಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯ 2019ರ ಫೆಬ್ರವರಿ 18 ರಿಂದ 21ರ ತನಕ ನಡೆಸಲಿದೆ. ಪಾಕಿಸ್ತಾನ ಮಿಲಿಟರ್ ಕೋರ್ಟ್ ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ.

ಪಾಕ್ ಚೆನ್ನಾಗಿ ನೋಡಿಕೊಳ್ತಿದೆ ಎಂಬ ಜಾಧವ್ ರ ಮತ್ತೊಂದು ವಿಡಿಯೋ ಪಾಕ್ ಚೆನ್ನಾಗಿ ನೋಡಿಕೊಳ್ತಿದೆ ಎಂಬ ಜಾಧವ್ ರ ಮತ್ತೊಂದು ವಿಡಿಯೋ

ಕುಲಭೂಷಣ್ ಜಾಧವ್ (48) ಅವರಿಗೆ ಏಪ್ರಿಲ್‌ ತಿಂಗಳಿನಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಬಲೂಚಿಸ್ತಾನದಲ್ಲಿ ಮಾರ್ಚ್ 2016ರಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಜಾಧವ್ ತಾಯಿಗೆ ಅವಮಾನ : ಪಾಕ್ ವಿರುದ್ಧ ಸುಷ್ಮಾ ಕೆಂಡ ಜಾಧವ್ ತಾಯಿಗೆ ಅವಮಾನ : ಪಾಕ್ ವಿರುದ್ಧ ಸುಷ್ಮಾ ಕೆಂಡ

ಗಲ್ಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯ 2019ರ ಫೆಬ್ರವರಿ 18 ರಿಂದ 21ರ ತನಕ ನಡೆಸಲಿದೆ. ಜಾಧವ್ ಅವರನ್ನು ಇರಾನ್‌ನಿಂದ ಅಪಹರಿಸಲಾಗಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯ. ಆದ್ದರಿಂದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿ ಎಂದು ಭಾರತ ವಾದ ಮಂಡಿಸಿದೆ.

Kulbhushan Jadhav case to be heard by ICOJ in February

ಮೇ ತಿಂಗಳಿನಲ್ಲಿ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಹರೀಶ್ ಸಾಳ್ವೆ ಅವರು ಭಾರತದ ಪರವಾಗಿ ವಾದ ಮಂಡಿಸಿದ್ದರು.

ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಿದ ತಾಯಿ, ಪತ್ನಿ ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಿದ ತಾಯಿ, ಪತ್ನಿ

ಫೆಬ್ರವರಿಯಲ್ಲಿ 4 ದಿನಗಳ ಕಾಲ ಅಂತರರಾಷ್ಟ್ರೀಯ ನ್ಯಾಯಾಲಯ ಪುನಃ ಅರ್ಜಿಯ ವಿಚಾರಣೆ ನಡೆಸಲಿದೆ. ತಪ್ಪಾದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಗಲ್ಲುಶಿಕ್ಷೆ ವಿಧಿಸಲಾಗಿದೆ. ಆದ್ದರಿಂದ, ಅದನ್ನು ರದ್ದು ಮಾಡಬೇಕು ಎಂದು ಕೋರಲಾಗಿದೆ.

English summary
The petition of Kulbhushan Jadhav who was sentenced to death by a Pakistani military court will be heard by the International Court of Justice from February 18 to 21 next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X