ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಸಂಸತ್ ಚುನಾವಣೆ: ಪುಟಿನ್ ಪಕ್ಷಕ್ಕೆ ಭಾರಿ ಬಹುಮತ

|
Google Oneindia Kannada News

ಮಾಸ್ಕೋ, ಸೆಪ್ಟೆಂಬರ್ 22: ಇತ್ತೀಚೆಗೆ ನಡೆದ ರಷ್ಯಾ ಸಂಸತ್ ಚುನಾವಣೆಯಲ್ಲಿ ರಷ್ಯಾದ ಆಡಳಿತಾರೂಢ ಪಕ್ಷ 450ರಲ್ಲಿ 324 ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.
ಈ ಸಂಖ್ಯೆ ಕಳೆದ ಬಾರಿಯ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಕಡಿಮೆ. ಆದರೂ ಸರ್ಕಾರ ರಚಿಸಲು ಆ ಸಂಖ್ಯೆ ಸಾಕಾಗುತ್ತದೆ.

ಇತ್ತೀಚಿಗಷ್ಟೆ ಕೆಳಮನೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿ ಪುಟಿನ್ ರ ಪಕ್ಷ ಮತ್ತೆ ಜಯಶಾಲಿಯಾಗಿ ಹೊಮ್ಮಿತ್ತು. 2024ರಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಅವಧಿ ಕೊನೆಗೊಳ್ಳುತ್ತದೆ.

ಆ ಸಮಯಕ್ಕೆ ಪುಟಿನ್ 12 ವರ್ಷಗಳ ಕಾಲ ರಷ್ಯಾ ಆಳಿದಂತಾಗುತ್ತದೆ. ಒಂದು ವೇಳೆ ಪುಟಿನ್ ಮತ್ತೆ ಅಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟರೆ, ಆತ ಮರು ಚುನಾವಣೆಗೆ ಸಿದ್ಧವಾಗಬಹುದು ಇಲ್ಲವೇ ಅಧಿಕಾರದಲ್ಲಿರಲು ಮತ್ತೇನಾದರೂ ತಂತ್ರ ಹೂಡಬಹುದು ಎಂಡು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

Kremlin’s Party Gets 324 Of 450 Seats In Russian Parliament

ಭಾನುವಾರ ಕೊನೆಗೊಂಡ ಕೆಳಮನೆ ಸಂಸದೀಯ ಚುನಾವಣೆಯಲ್ಲಿ ಪುಟಿನ್ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ವಿರೋಧ ಪಕ್ಷದ ಮುಖಂಡರನ್ನು ಚುನಾವಣೆಗೂ ಮುನ್ನ ಬಂಧಿಸಲಾಗಿತ್ತು. ಪುಟಿನ್ ಅವರ ಪ್ರತೀಕಾರದ ಭಯದಿಂದ ಹಲವು ಮಂದಿ ವಿರೋಧ ಪಕ್ಷ ಮುಖಂಡರು ವಿದೇಶಕ್ಕೆ ಪಲಾಯನ ಮಾಡಿದ್ದರು.

ಇನ್ನು ಹಲವಾರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ವಿರೋಧ ಪಕ್ಷದ ಹೆಚ್ಚಿನ ರಾಜಕಾರಣಿಗಳನ್ನು ಸಂಸತ್ ಚುನಾವಣೆಯಿಂದ ಹೊರಗಿಡಲಾಗಿತ್ತು.

ಯುನೈಟೆಡ್ ರಷ್ಯಾ ಪಕ್ಷಕ್ಕೆ ಚುನಾವಣೆಯಲ್ಲಿ ಶೇ. 49.8 ಮತಗಳು ಬಂದಿದೆ. ಡುಮಾದ 225 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ 198 ರಷ್ಯಾ ಯುನೈಟೆಡ್​ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.

ಯುನೈಟೆಡ್​ ರಷ್ಯಾ ಪಕ್ಷಕ್ಕೆ 324 ಸ್ಥಾನಗಳು ಲಭಿಸಿವೆ ಎಂದು ರಷ್ಯಾದ ಕೇಂದ್ರ ಚುನಾವಣಾ ಆಯೋಗವು ಹೇಳಿದೆ. ಆದರೆ, 2016ರ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ 19 ಸ್ಥಾನಗಳು ಕಡಿಮೆ ಎಂದು ತಿಳಿದು ಬಂದಿದೆ.

ಡುಮಾದಲ್ಲಿ ಕ್ರೆಮ್ಲಿನ್​ ಪಕ್ಷ 2024ರ ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಮತ್ತೆ ಬಹುಮತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು 2024ಕ್ಕೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕಾರದ ಅವಧಿ ಮುಕ್ತಾಯವಾಗುತ್ತದೆ.

ಈ ಹಿನ್ನೆಲೆಯಲ್ಲಿ ಅಧಿಕಾರದಲ್ಲಿ ಮತ್ತೆ ಮುಂದುವರಿಯಲು ಅವರು ಮರು ಚುನಾವಣೆಯನ್ನು ಮಾಡಬಹುದು ಅಥವಾ ಬೇರೊಂದು ತಂತ್ರವನ್ನು ಸಹ ಆಯ್ಕೆ ಮಾಡಬಹುದು ಎಂದು ಮೂಲಗಳು ತಿಳಿಸಿದೆ.

ನವಾಲ್ನಿ ಅವರ ಸಂಘಟನೆಗಳು, ರಾಜಕೀಯ ಕಚೇರಿಗಳನ್ನು ಪುಟಿನ್ ಸರ್ಕಾರ ತೀವ್ರವಾದಿ ಆರೋಪದ ಮೇಲೆ ಮುಚ್ಚಿಸಿತ್ತು. ನವಾಲ್ನಿ ಪರ ಪ್ರತಿಭಟನೆ ಮಾಡುವವರನ್ನು ತೀವ್ರಗಾಮಿಗಳೆಂದು ಬಂಧಿಸಿತ್ತು.

ಮತದಾನ ನಡೆಯುವುದಕ್ಕೂ ಮುನ್ನ ದೇಶದಲ್ಲಿ ಉಳಿದಿದ್ದ ತನ್ನ ವಿರೋಧಿಗಳನ್ನು ಪುತಿನ್ ಬಂಧಿಸಿ ಜೈಲಿಗಟ್ಟಿದ್ದರು, ಅವರಲ್ಲಿ ಅನೇಕರು ಪುಟಿನ್ ಪ್ರತೀಕಾರಕ್ಕೆ ಬೆದರಿ ದೇಶದಿಂದ ಪಲಾಯನಗೈದವರೂ ಇದ್ದಾರೆ. ಈ ನಡುವೆ ಪುತಿನ್ ಚುನಾವಣಾ ಅಕ್ರಮ ಎಸಗಿದ್ದಾರೆ ಎನ್ನುವ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.

ವಿರೋಧ ಪಕ್ಷದ ಬೆಂಬಲಿಗರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವುದು ಸೇರಿದಂತೆ ಹಲವು ಅನಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

English summary
Russia’s ruling party will get 324 of the 450 seats in the next national parliament, election authorities announced Tuesday. The number is less than the pro-Kremlin party, United Russia, won in the previous election but still an overwhelming majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X