• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯಾ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾದ ವ್ಲಾದಿಮಿರ್ ಪುಟಿನ್ ?

|

ಮಾಸ್ಕೋ, ನ. 6: ರಷ್ಯಾದ ಅಧ್ಯಕ್ಷ, ವಿಶ್ವದ ಪ್ರಭಾವಿ ನಾಯಕ ವ್ಲಾದಿಮಿರ್ ಪುಟಿನ್ ಅವರು ಶೀಘ್ರದಲ್ಲೇ ತಮ್ಮ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮೇಲೆ ಎಲ್ಲರ ಗಮನ ಇರುವಾಗ ಶುಕ್ರವಾರ ಬೆಳಗ್ಗೆ ಈ ಆಘಾತಕಾರಿ ಸುದ್ದಿ ಬಂದಿದೆ.

ರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆ

ದಿ ಸನ್, ನ್ಯೂಯಾರ್ಕ್ ಪೋಸ್ಟ್ ಹಲವು ಪ್ರಮುಖ ಸುದ್ದಿ ಸಂಸ್ಥೆಗಳು ಪುಟಿನ್ ಅವರ ಬಗ್ಗೆ ಬರೆದು, ಪುಟಿನ್ ಅವರು ಪಾರ್ಕಿಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜನವರಿ ತಿಂಗಳ ನಂತರ ತಮ್ಮ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದು ವರದಿ ಮಾಡಿವೆ.

ಪುಟಿನ್ ಅವರ ಗೆಳತಿ(37 ವರ್ಷ) ಅಲಿನಾ ಕಬಿವಾ ಹಾಗೂ ಇಬ್ಬರು ಹೆಣ್ಣು ಮಕ್ಕಳು ಪುಟಿನ್ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಕೋರಿದ್ದಾರೆ. ಕುಟುಂಬದ ಜೊತೆ ಕಾಲಕಳೆಯಲು ಪುಟಿನ್ ನಿರ್ಧರಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

   Corona ಬಂದ್ರೆ ನೋ Tension | Corona Vaccine | Oneindia Kannada

   ರಷ್ಯಾದ ರಾಜಕೀಯ ತಜ್ಞ ವಲೆರಿ ಸೊಲೊವೈ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದ್ದು, ಇತ್ತೀಚೆಗೆ ಪಾರ್ಕಿಸನ್ ಕಾಯಿಲೆ ತೀವ್ರವಾಗಿ ಅವರನ್ನು ಕಾಡುತ್ತಿದೆ. ಮಾತ್ರೆಗಳನ್ನು ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿರುವ ಪುಟಿನ್ ಅವರು ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದು, ಅವರನ್ನು ಮುಂದಿನ ಉತ್ತರಾಧಿಕಾರಿಯಾಗಿ ನೇಮಿಸಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ ಹಾಗೂ ಪುಟಿನ್ ಆರೋಗ್ಯದಿಂದ ಇದ್ದಾರೆ ಎಂದು ಅಧ್ಯಕ್ಷರ ಕಚೇರಿ ಸ್ಪಷ್ಟಪಡಿಸಿದೆ. ಆದರೆ, ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ.

   English summary
   Vladimir Putin likely likely to Step down as Russia's president amid fears he has Parkinson's disease, sources claim.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X