ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ತಗುಲಿದಾಗ ಯುವತಿಯಲ್ಲಿ ಕಾಣಿಸಿಕೊಳ್ತು ವಿಚಿತ್ರ ಲಕ್ಷಣ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ಸೋಂಕು ತಗುಲಿದರೆ, ಜ್ವರ ಬರುವುದು, ಆಲಸ್ಯ, ಕೆಮ್ಮು ಕಾಡುವುದು ಸಹಜ ಲಕ್ಷಣಗಳು. ಜೊತೆಗೆ ನೆಗಡಿ, ಉಸಿರಾಟದ ಸಮಸ್ಯೆ ಕೂಡ ಬಾಧಿಸುವುದು ಸಾಮಾನ್ಯ.

Recommended Video

ಕೊರೊನಾಸುರ ಯಾರು ಗೊತ್ತಾ? ಈ ಹಾಸ್ಯಮಯ ವಿಡಿಯೋ ನೋಡಿ | Corona | Oneindia Kannada

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂದರೂ, ಹಲವರಲ್ಲಿ ರೋಗದ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಿರುವಾಗಲೇ, ಯು.ಕೆ ನಲ್ಲಿನ 24 ವರ್ಷ ವಯಸ್ಸಿನ ಪ್ಯಾರಾಮೆಡಿಕ್ ಕಿರ್ಸ್ಟೀನ್ ಅಡ್ಕಿನ್ ಗೆ ಕೊಂಚ ವಿಚಿತ್ರ ಲಕ್ಷಣಗಳು ಕಾಣಿಸಿಕೊಂಡಿದೆ.

ಅನೋಸ್ಮಿಯಾ ಕೋವಿಡ್-19 ಲಕ್ಷಣ? ಬೆಂಗಳೂರು ಮೂಲದ ಸಂಶೋಧಕರಿಂದ ಸರ್ವೇಅನೋಸ್ಮಿಯಾ ಕೋವಿಡ್-19 ಲಕ್ಷಣ? ಬೆಂಗಳೂರು ಮೂಲದ ಸಂಶೋಧಕರಿಂದ ಸರ್ವೇ

ಕೊರೊನಾ ವೈರಸ್ ಸೋಂಕು ತಗುಲಿದಾಗ ಆಕೆಗೆ ಜ್ವರ ಬರಲಿಲ್ಲ. ಬದಲಾಗಿ ಆಕೆಗೆ ಯಾವುದೇ ವಾಸನೆಯ ಗುರುತು ಸಿಗುತ್ತಿರಲಿಲ್ಲ. ಜೊತೆಗೆ ಏನು ತಿಂದರೂ ರುಚಿ ಸಿಗುತ್ತಿರಲಿಲ್ಲ. ಹಸಿ ಬೆಳ್ಳುಳ್ಳಿ, ಕಾಫಿ ಪುಡಿ, ಚಕ್ಕೆ, ಲವಂಗ ಬಾಯಿಗೆ ಹಾಕಿಕೊಂಡರೂ ಆಕೆಗೆ ಒಂಚೂರು ರುಚಿ ಗೊತ್ತಾಗುತ್ತಿರಲಿಲ್ಲ.

ಕೊರೊನಾ ಸೋಂಕು ತಗುಲಿದ್ದಾಗ, ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ತು ಎಂಬುದರ ಬಗ್ಗೆ ಕಿರ್ಸ್ಟೀನ್ ಅಡ್ಕಿನ್ ಡೈರಿಯಲ್ಲಿ ವಿವರಿಸಿದ್ದಾಳೆ. ಆ ಪಟ್ಟಿ ಇಲ್ಲಿದೆ, ಓದಿರಿ...

ಅಯ್ಯೋ ವಿಧಿಯೇ.. ಈಕ್ವೆಡಾರ್ ನಲ್ಲಿನ ವೈದ್ಯರ ಸ್ಥಿತಿ ಯಾರಿಗೂ ಬೇಡ!ಅಯ್ಯೋ ವಿಧಿಯೇ.. ಈಕ್ವೆಡಾರ್ ನಲ್ಲಿನ ವೈದ್ಯರ ಸ್ಥಿತಿ ಯಾರಿಗೂ ಬೇಡ!

ವಿಪರೀತ ತಲೆನೋವು

ವಿಪರೀತ ತಲೆನೋವು

ಯು.ಕೆನಲ್ಲಿ ಸೌತ್ ವೆಸ್ಟ್ ಆಂಬ್ಯುಲೆನ್ಸ್ ಸರ್ವೀಸ್ ನಲ್ಲಿ ಕಾರ್ಯ ನಿರ್ವಹಿಸುವ ಕಿರ್ಸ್ಟೀನ್ ಅಡ್ಕಿನ್ ಗೆ ಕೊರೊನಾ ವೈರಸ್ ಸೋಂಕು ತಗುಲಿದ ಮೊದಲ ದಿನ ಕಣ್ಣಿನ ಮೇಲ್ಭಾಗದಲ್ಲಿ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ''ದಿನಗಳು ಉರುಳಿದಂತೆ ತಲೆನೋವು ಜಾಸ್ತಿ ಆಯ್ತು. ಅಂತಹ ತಲೆನೋವನ್ನು ನಾನು ಇದುವರೆಗೂ ಅನುಭವಿಸಿಲ್ಲ'' ಎಂದು ಡೈರಿಯಲ್ಲಿ ಕಿರ್ಸ್ಟೀನ್ ಅಡ್ಕಿನ್ ಬರೆದುಕೊಂಡಿದ್ದಾಳೆ.

ವಾಸನೆ ಗೊತ್ತಾಗುತ್ತಿರಲಿಲ್ಲ

ವಾಸನೆ ಗೊತ್ತಾಗುತ್ತಿರಲಿಲ್ಲ

ಎರಡನೇ ದಿನ ಕಿರ್ಸ್ಟೀನ್ ಅಡ್ಕಿನ್ ಗೆ ತಲೆನೋವಿನ ಜೊತೆಗೆ ಬೆನ್ನು ನೋವು ಕೂಡ ಕಾಡಿದೆ. ರಾತ್ರಿಹೊತ್ತು ಆಕೆಗೆ ಬೆನ್ನು ನೋವು ಜಾಸ್ತಿಯಾಗುತ್ತಿತ್ತಂತೆ. ಮೂರನೇ ದಿನ ಆಕೆಗೆ ಕೈ, ಕಾಲು, ಬೆನ್ನು ನೋವು ಹೆಚ್ಚಾಗಿದೆ. ವಾಸನೆ ಕಂಡುಹಿಡಿಯಲು ಆಕೆ ಅಸಾಧ್ಯವೆನಿಸಿದ್ದು ಇಲ್ಲಿಂದಲೇ. ಬೆಡ್ ರೂಮ್ ಗೆ ಡಿಸ್ ಇನ್ಫೆಕ್ಟೆಂಟ್ ಹಾಕಲು ಹೋದಾಗ, ಅದರ ವಾಸನೆ ಆಕೆಗೆ ಸ್ವಲ್ಪವೂ ಗೊತ್ತಾಗಲೇ ಇಲ್ಲ.

ರುಚಿ ಸಿಗುತ್ತಿರಲಿಲ್ಲ

ರುಚಿ ಸಿಗುತ್ತಿರಲಿಲ್ಲ

ನಾಲ್ಕನೇ ದಿನ ಮೈ-ಕೈ ನೋವಿನ ಜೊತೆಗೆ ಒಣ ಕೆಮ್ಮು ಕಾಣಿಸಿಕೊಂಡಿದೆ. ಎರಡು ಗಂಟೆಗಳ ಕಾಲ ಸತತವಾಗಿ ಆಕೆ ಕೆಮ್ಮಿದ್ದಾಳೆ. ಐದನೇ ದಿನ ರುಚಿ ಗುರುತಿಸುವ ಶಕ್ತಿಯನ್ನು ಆಕೆ ಕಳೆದುಕೊಂಡಿದ್ದಾಳೆ. ಚಕ್ಕೆ, ಲವಂಗ, ಏಲಕ್ಕಿ, ಕಾಫಿ ಪುಡಿ, ಹಸಿ ಬೆಳ್ಳುಳ್ಳಿ.. ಹೀಗೆ ಏನೇ ತಿಂದರೂ ಆಕೆಗೆ ಸ್ವಲ್ಪವೂ ರುಚಿ ಗೊತ್ತಾಗಲಿಲ್ಲ. ಅವುಗಳ ವಾಸನೆಯೂ ತಿಳಿಯಲಿಲ್ಲ.

ಗುಣಮುಖಳಾಗಿರುವ ಕಿರ್ಸ್ಟೀನ್ ಅಡ್ಕಿನ್

ಗುಣಮುಖಳಾಗಿರುವ ಕಿರ್ಸ್ಟೀನ್ ಅಡ್ಕಿನ್

ಸೋಂಕು ಇದ್ದಷ್ಟು ದಿನವೂ ಆಕೆಗೆ ತಲೆನೋವು, ಮೈ-ಕೈ ನೋವು, ಒಣ ಕೆಮ್ಮು ಇತ್ತು. ಜೊತೆಗೆ ರುಚಿ ಮತ್ತು ವಾಸನೆ ಕಂಡು ಹಿಡಿಯುವ ಶಕ್ತಿಯನ್ನು ಕಳೆದುಕೊಂಡಿದ್ದ ಆಕೆ ಇದೀಗ ಕೋವಿಡ್-19 ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ. ಸೋಂಕು ಇದ್ದರೂ, ಆಕೆಗೆ ಜ್ವರ ಕಾಣಿಸಿಕೊಳ್ಳದಿರುವುದು ವಿಚಿತ್ರ. ಸೋಂಕು ಇದ್ದಾಗ, ಸಂಪೂರ್ಣವಾಗಿ ಐಸೋಲೇಟ್ ಆಗಿದ್ದ ಆಕೆ ಇದೀಗ ಫಿಟ್ ಅಂಡ್ ಫೈನ್ ಆಗಿ ಕೆಲಸಕ್ಕೆ ವಾಪಸ್ ಆಗಿದ್ದಾಳೆ. ''ಎಲ್ಲರೂ ಮನೆಯಲ್ಲೇ ಇರಿ, ಜೋಪಾನವಾಗಿರಿ'' ಎಂಬುದು ಕಿರ್ಸ್ಟೀನ್ ಅಡ್ಕಿನ್ ಕೊಟ್ಟಿರುವ ಸಂದೇಶ.

ಅನೋಸ್ಮಿಯಾ ಮತ್ತು ಕೋವಿಡ್-19

ಅನೋಸ್ಮಿಯಾ ಮತ್ತು ಕೋವಿಡ್-19

ಅನೋಸ್ಮಿಯಾ (ವಾಸನೆ ಮತ್ತು ರುಚಿಯನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು) ಕೂಡ ಕೋವಿಡ್-19 ರೋಗದ ಒಂದು ಲಕ್ಷಣ ಎಂದು ಪರಿಗಣಿಸಲಾಗುತ್ತಿದೆ. ಕೋವಿಡ್-19 ಮತ್ತು ಅನೋಸ್ಮಿಯಾ ನಡುವಿನ ನಂಟು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸದ್ಯ ಅಧ್ಯಯನ ನಡೆಯುತ್ತಿದೆ.

English summary
Kirstine Adkin - A 24 year old revealed her Covid 19 symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X