ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರದ ಕೊರತೆ: ಸಾಕು ನಾಯಿಗಳನ್ನು ರೆಸ್ಟೋರೆಂಟ್‌ಗೆ ನೀಡಲು ಉತ್ತರ ಕೊರಿಯಾದ ಕಿಮ್ ಆದೇಶ

|
Google Oneindia Kannada News

ಪಿಯಾಂಗ್‌ಯಾಂಗ್, ಆಗಸ್ಟ್ 19: ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಹಲವೆಡೆ ಆಹಾರದ ಕೊರತೆ ಎದುರಾಗಿದೆ. ಅದನ್ನು ನಿರ್ವಹಿಸಲು ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಉತ್ತರ ಕೊರಿಯಾ ಸರ್ಕಾರದ ಆದೇಶವೊಂದು ಆಘಾತ ಮೂಡಿಸುವಂತಿದೆ. ಆಹಾರ ಪೂರೈಕೆಯಲ್ಲಿನ ಕೊರತೆಯನ್ನು ತಗ್ಗಿಸುವ ಸಲುವಾಗಿ ಜನರು ತಮ್ಮ ಪ್ರೀತಿಯ ನಾಯಿಗಳನ್ನು ತ್ಯಜಿಸುವಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶಿಸಿರುವುದಾಗಿ ವರದಿಯಾಗಿದೆ.

ಜನರು ಸಾಕಿರುವ ನಾಯಿಗಳನ್ನು ತ್ಯಜಿಸಬೇಕಿದ್ದು, ಅವುಗಳನ್ನು ರೆಸ್ಟೋರೆಂಟ್‌ಗಳಲ್ಲಿ ಮಾಂಸ ಖಾದ್ಯವಾಗಿ ಬಳಸಬಹುದು ಎಂದು ಅವರು ಸೂಚಿಸಿದ್ದಾರೆ. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾದ ವಿವಿಧ ಭಾಗಗಳಲ್ಲಿ ನಾಯಿ ಮಾಂಸ ಜನಪ್ರಿಯ ಖಾದ್ಯವಾಗಿದೆ. ಆದರೆ ಮನೆಯಲ್ಲಿ ಸಾಕಿದ ಜನರ ಮುದ್ದಿನ ನಾಯಿಗಳನ್ನೂ ಆಹಾರ ತಯಾರಿಕೆಗೆ ಹಸ್ತಾಂತರ ಮಾಡಬೇಕೆಂಬ ಆದೇಶ ಜನರಲ್ಲಿ ನಡುಕ ಹುಟ್ಟಿಸಿದೆ.

ಉತ್ತರ ಕೊರಿಯಾ ಈಗಲೂ ಕೊರೊನಾ ಸೋಂಕು ಮುಕ್ತ ದೇಶಉತ್ತರ ಕೊರಿಯಾ ಈಗಲೂ ಕೊರೊನಾ ಸೋಂಕು ಮುಕ್ತ ದೇಶ

ಸಾಕು ನಾಯಿಗಳನ್ನು ಮಾಲೀಕತ್ವವನ್ನು ಕಿಮ್ ಜಾಂಗ್ ಉನ್ ನಿಷೇಧಿಸಿ ಆದೇಶಿಸಿದ್ದಾರೆ. ಅದು ಪಾಶ್ಚಾತ್ಯ ಸಂಸ್ಕೃತಿಯ ಸಂಕೇತ ಎಂದಿದ್ದಾರೆ. ದಕ್ಷಿಣ ಕೊರಿಯಾದ ಪತ್ರಿಕೆಯೊಂದರ ವರದಿ ಪ್ರಕಾರ, ನಾಯಿಗಳನ್ನು ಸಾಕುವ ಅಭ್ಯಾಸವು ಮಧ್ಯಮವರ್ಗದ ಸಿದ್ಧಾಂತದ ದೋಷಪೂರಿತ ಅಭ್ಯಾಸ ಎಂದು ಕಿಮ್ ಟೀಕಿಸಿದ್ದಾರೆ. ಮುಂದೆ ಓದಿ...

ಹಣವುಳ್ಳವರು ಮಾತ್ರವೇ ನಾಯಿ ಸಾಕೋದು

ಹಣವುಳ್ಳವರು ಮಾತ್ರವೇ ನಾಯಿ ಸಾಕೋದು

ಉತ್ತರ ಕೊರಿಯಾದಲ್ಲಿ ಪ್ರಸ್ತುತ ಅತೀವ ಆಹಾರ ಪೂರೈಕೆಯ ಕೊರತೆ ಉದ್ಭವಿಸಿದೆ. ಆಹಾರದ ಕೊರತೆಯಿಂದಾಗಿ ಜನರಲ್ಲಿ ಉಂಟಾಗಿರುವ ಅಸಮಾಧಾನ ತಗ್ಗಿಸಲು ಜನರ ಮುದ್ದಿನ ನಾಯಿಗಳಿಗೆ ಕೈಹಾಕಿದ್ದಾರೆ. ಈ ನಡೆಯನ್ನು ಸಮರ್ಥಿಸಿಕೊಳ್ಳಲು ಅವರು ವರ್ಗೀಯ ವ್ಯತ್ಯಾಸಗಳನ್ನು ಬಳಸಿಕೊಂಡಿದ್ದಾರೆ. ಜನಸಾಮಾನ್ಯರು ಹಸು ಮತ್ತು ಜಾನುವಾರುಗಳನ್ನು ಸಾಕುತ್ತಾರೆ. ಆದರೆ ಧನವಂತರು ಮಾತ್ರವೇ ನಾಯಿಗಳನ್ನು ಸಾಕುತ್ತಾರೆ. ನಾಯಿಗಳನ್ನು ಸಾಕುವುದು ಬಂಡವಾಳಶಾಹಿ ಮತ್ತು ಮಧ್ಯಮವರ್ಗದ ಸಿದ್ಧಾಂತಗಳಾಗಿವೆ ಎಂದು ಕಿಮ್ ವ್ಯಾಖ್ಯಾನಿಸಿದ್ದಾರೆ.

ನಾಯಿ ಸಾಕುವುದಕ್ಕೆ ನಿಷೇಧ

ನಾಯಿ ಸಾಕುವುದಕ್ಕೆ ನಿಷೇಧ

ಉತ್ತರ ಕೊರಿಯಾದಲ್ಲಿ ನಾಯಿಗಳನ್ನು ಸಾಕುವ ವಿಚಾರ ಹಿಂದಿನಿಂದಲೂ ವಿವಾದದಲ್ಲಿದೆ. 1980ರಿಂದಲೂ ಸಾಕು ನಾಯಿಗಳ ಮೇಲಿನ ನಿಷೇಧ ಜಾರಿಯಲ್ಲಿದೆ. ಉತ್ತರ ಕೊರಿಯಾದ ಅತಿ ಮಹತ್ವದ ದಿನಗಳಲ್ಲಿ ಒಂದಾದ ಪಾರ್ಟಿ ಫೌಂಡೇಷನ್ ಡೇ ದಿನಕ್ಕೂ ಮುನ್ನ ಸಾಕು ನಾಯಿಗಳನ್ನು ತ್ಯಜಿಸಬೇಕು ಎಂದು 2018ರಲ್ಲಿ ಜನರಿಗೆ ಸೂಚನೆ ನೀಡಲಾಗಿತ್ತು. ಇದಕ್ಕೆ ತಪ್ಪಿದಲ್ಲಿ 148 ಅಮೆರಿಕನ್ ಡಾಲರ್ ಮೊತ್ತದ ಅಕ್ಕಿಯನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿತ್ತು.

ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್

60ಕ್ಕೂ ಅಧಿಕ ಜನರಲ್ಲಿ ಹಸಿವು

60ಕ್ಕೂ ಅಧಿಕ ಜನರಲ್ಲಿ ಹಸಿವು

ನಾಯಿಗಳನ್ನು ಸಾಕುವುದು ಬಂಡವಾಳಶಾಹಿತನದ ಸಂಕೇತ ಎಂದೇ ಕಿಮ್ ಜಾಂಗ್ ಉನ್ ಪರಿಗಣಿಸಿದ್ದಾರೆ. ಕೊರೊನಾ ವೈರಸ್ ಕಾರಣದಿಂದ ಉತ್ತರ ಕೊರಿಯಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಚೀನಾದೊಂದಿಗಿನ ಶೇ 90ರಷ್ಟು ವ್ಯಾಪಾರ ವಹಿವಾಟು ಬಿದ್ದುಹೋಗಿದೆ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಅಲ್ಲಿನ ಅನೇಕ ಕುಟುಂಬಗಳು ಹಸಿವಿನಿಂದ ನರಳುತ್ತಿವೆ ಎಂದು ವಿಶ್ವಸಂಸ್ಥೆ ಕೆಲವು ದಿನಗಳ ಹಿಂದೆ ಹೇಳಿತ್ತು. ಅಲ್ಲಿನ 25.5 ಮಿಲಿಯನ್ ಜನಸಂಖ್ಯೆಯಲ್ಲಿ ಶೇ 60ರಷ್ಟು ಮಂದಿ ಆಹಾರದ ಕೊರತೆ ಎದುರಿಸುತ್ತಿದ್ದಾರೆ ಎಂದು ತಿಳಿಸಿತ್ತು.

ನಾಯಿಗಳ ವಶ ಕಾರ್ಯ ಆರಂಭ

ನಾಯಿಗಳ ವಶ ಕಾರ್ಯ ಆರಂಭ

ರಾಜಧಾನಿ ಪಿಯಾಂಗ್‌ಯಾಂಗ್‌ನಲ್ಲಿ ನಾಯಿಗಳನ್ನು ಮಾಲೀಕರಿಂದ ವಶಪಡಿಸಿಕೊಳ್ಳುವ ಕಾರ್ಯ ಆರಂಭವಾಗಿದೆ. ಕೆಲವು ನಾಯಿಗಳನ್ನು ಸರ್ಕಾರ ಸ್ವಾಮ್ಯದ ಝೂಗಳಿಗೆ ರವಾನಿಸಲಾಗಿದೆ. ಇನ್ನು ಉಳಿದವುಗಳನ್ನು ಮಾಂಸಕ್ಕಾಗಿ ರೆಸ್ಟೋರೆಂಟ್‌ಗಳಿಗೆ ಕೊಡಲಾಗಿದೆ. ಉತ್ತರ ಕೊರಿಯಾದಲ್ಲಿ ನಾಯಿ ಮಾಂಸವನ್ನು ರುಚಿಕರ ಖಾದ್ಯ ಎಂದು ಪರಿಗಣಿಸಲಾಗಿದೆ.

ಉತ್ತರ ಕೊರಿಯಾದ ಗಡಿಯಲ್ಲಿ ಕಾಣಿಸಿಕೊಂಡ ಸೋಂಕು, ಲಾಕ್ಡೌನ್ ಜಾರಿಉತ್ತರ ಕೊರಿಯಾದ ಗಡಿಯಲ್ಲಿ ಕಾಣಿಸಿಕೊಂಡ ಸೋಂಕು, ಲಾಕ್ಡೌನ್ ಜಾರಿ

ಚೀನಾದಲ್ಲಿ ನೀಡಿರುವ ಎಚ್ಚರಿಕೆ

ಚೀನಾದಲ್ಲಿ ನೀಡಿರುವ ಎಚ್ಚರಿಕೆ

ಉತ್ತರ ಕೊರಿಯಾದಲ್ಲಿ ನಾಯಿಗಳನ್ನು ಸಾಕುತ್ತಿರುವ ಮನೆಗಳನ್ನು ಗುರುತಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ನಾಯಿ ಸಾಕಿರುವ ಮನೆಯವರು ಅವುಗಳನ್ನು ಹೊರಗೆ ಬಿಡಬೇಕು ಅಥವಾ ಝೂ ಮತ್ತು ರೆಸ್ಟೋರೆಂಟ್‌ಗಳಿಗೆ ನೀಡಬೇಕು ಎಂದು ಬಲವಂತಪಡಿಸಲಾಗುತ್ತಿದೆ. ಉತ್ತರ ಕೊರಿಯಾದ ಆಪ್ತ ಚೀನಾದಲ್ಲಿಯೂ ಆಹಾರದ ಕೊರತೆ ಉದ್ಭವಿಸಿದೆ. ಚೀನಾ ಉಪಾಧ್ಯಕ್ಷ ಹು ಚುನ್‌ಹುವಾ ಇತ್ತೀಚೆಗೆ ಎಲ್ಲ ಪ್ರಾಂತ್ಯಗಳ ಗವರ್ನರ್‌ಗಳಿಗೆ ಸೂಚನೆ ನೀಡಿದ್ದು, ಈ ವರ್ಷದ ಬೆಳೆ ಉತ್ಪಾದನೆಯಲ್ಲಿ ಇಳಿಕೆಯಾಗುವಂತಿಲ್ಲ. ಹಾಗಾದರೆ ಅವರಿಗೆ ಶಿಕ್ಷೆ ನೀಡಲಾಗುವುದು ಇಲ್ಲವೇ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

English summary
Kim Jong-un orders North Korea citizens to hand over their Pet Dogs to save country from meat Shortage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X