ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3rd World War Fix: ಸರ್ವಾಧಿಕಾರಿ ಕಿಮ್ ತಂದಿದ್ದಾನೆ ವಿನಾಶಕ ಅಸ್ತ್ರ..!

|
Google Oneindia Kannada News

ಶನಿವಾರ ಕಗ್ಗತ್ತಲಲ್ಲಿ (ಅ. 10) ಬಹುಶಃ ಜಗತ್ತಿನ ಬಹುಪಾಲು ದೇಶಗಳ ನಾಯಕರಿಗೆ ನಿದ್ದೆ ಬಂದಿರೋದೆ ಡೌಟ್. ಯಾಕೆ ಈ ಮಾತು ಅಂದ್ರೆ, ಅಮೆರಿಕದ ಮೇಲೆ ನ್ಯೂಕ್ಲಿಯರ್ ಬಾಂಬ್ ಹಾಕ್ತೀನಿ ಅಂತಾ ಗುಡುಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ತನ್ನ ಬಳಿ ಇರುವ ವಿನಾಶಕ ಅಸ್ತ್ರ ಪ್ರದರ್ಶಿಸಿದ್ದಾನೆ. ಈ ಅಸ್ತ್ರವನ್ನು ಜಗತ್ತಿಗೆ ತೋರಿಸಬೇಕು ಅಂತಾನೆ ದಿಢೀರ್ ಉತ್ತರ ಕೊರಿಯಾದ ರಾಜಧಾನಿ ಪಾಂಗಾಂಗ್‌ನಲ್ಲಿ ಪರೇಡ್ ಆಯೋಜಿಸಿದ್ದ ಕಿಮ್.

ಈ ಪರೇಡ್‌ನಲ್ಲಿ ಖಂಡಾಂತರ ಕ್ಷಿಪಣಿ ಅಂದರೆ ಇಂಟರ್ ಕಾಂಟಿನೆಂಟಲ್ ಬ್ಯಾಲಾಸ್ಟಿಕ್ ಮಿಸೈಲ್ (Iಅಃಒ) ಪ್ರದರ್ಶನ ಮಾಡಿದ್ದಾನೆ. ಈ ಹಿಂದೆ ತನ್ನ ಚಿಕ್ಕಪ್ಪನ ತಲೆಯನ್ನೇ ಕಡಿದಿದ್ದ ಈತ ಅದನ್ನೂ ಪ್ರದರ್ಶನಕ್ಕೆ ಇಟ್ಟಿದ್ದ. ಈಗ ತನ್ನ ಬಳಿ ಇರುವ ಸರ್ವ ವಿನಾಶಕ ಅಸ್ತ್ರವನ್ನು ಜಗತ್ತಿಗೆ ತೋರಿಸಿ ತಂಟೆಗೆ ಬಂದ್ರೆ ಹುಷಾರ್ ಎಂಬ ಸಂದೇಶ ಕೊಟ್ಟಿದ್ದಾನೆ. ಈ ಬಾರಿ ಕಿಮ್ ಪ್ರದರ್ಶನ ಮಾಡಿದ್ದು ಅಂತಿಂತಹ ಮಿಸೈಲ್ ಅಲ್ಲ, ಒಂದೇ ಬಾರಿ ಶತ್ರುಗಳ 3-4 ಪ್ರದೇಶಗಳನ್ನು ಉಡೀಸ್ ಮಾಡುವ ತಾಕತ್ತು ಈ ಕ್ಷಿಪಣಿಗೆ ಇದೆ. ಹಾಗೇ ಇದರ ವಿಶೇಷತೆಗಳು ಶತ್ರುಪಡೆಯನ್ನ ಕ್ಷಣಮಾತ್ರದಲ್ಲಿ ಛಿದ್ರ ಛಿದ್ರ ಮಾಡಬಲ್ಲವು.

ಕಿಮ್ ಮುಂದೆ ಮಂಡಿಯೂರಿದ ಅಮೆರಿಕ..?

ಕಿಮ್ ಮುಂದೆ ಮಂಡಿಯೂರಿದ ಅಮೆರಿಕ..?

ಹೌದು, ಕಿಮ್ ಜಾಂಗ್ ಉನ್ ಕ್ಷಿಪಣಿ ಮೆರವಣಿಗೆ ಮಾಡಿದ ವಿಷಯ ಕೆಲವೇ ಗಂಟೆಗಳಲ್ಲಿ ಇಡೀ ಜಗತ್ತನ್ನು ಆವರಿಸಿತು. ಕಿಮ್ ಜಾಂಗ್ ಉನ್ ಪ್ರದರ್ಶಿಸಿದ ಖಂಡಾಂತರ ಕ್ಷಿಪಣಿ ದ್ರವ ರೂಪದ ಅನಿಲವನ್ನು ಅಂದರೆ ಲಿಕ್ವಿಡ್ ಫ್ಯೂಲ್ ತುಂಬಿಸುವ ವಿಶೇಷತೆ ಹೊಂದಿದೆ. ಈ ಮಿಸೈಲ್ ಜಗತ್ತಿನಲ್ಲಿ ಇರುವುದು ಬೆರಳೆಣಿಕೆಯಷ್ಟು ದೇಶಗಳ ಬಳಿ ಮಾತ್ರ. ಇದೇ ಕ್ಷಿಪಣಿಯನ್ನು ಅಮೆರಿಕದಲ್ಲಿ ತಯಾರಿಸಿದ್ದರೆ ಸುಮಾರು 7 ಸಾವಿರ ಕೋಟಿಗೂ ಹೆಚ್ಚು ಅಂದರೆ ಬರೋಬ್ಬರಿ 1 ಬಿಲಿಯನ್ ಡಾಲರ್ ವೆಚ್ಚವಾಗುತ್ತಿತ್ತು. ಆದರೆ ಕಿಮ್ ನಾಡಿನಲ್ಲಿ ತಯಾರಾದ ಕ್ಷಿಪಣಿ ವೆಚ್ಚ ಸಾವಿರ ಕೋಟಿಗೂ ಕಡಿಮೆ ಎನ್ನಲಾಗಿದೆ.

ತಪ್ಪಾಯ್ತು ಕ್ಷಮಿಸಿ ಎಂದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್..!ತಪ್ಪಾಯ್ತು ಕ್ಷಮಿಸಿ ಎಂದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್..!

ಅಮೆರಿಕದ ಕ್ಷಿಪಣಿ ಕೇಂದ್ರವೇ ಟಾರ್ಗೆಟ್..?

ಅಮೆರಿಕದ ಕ್ಷಿಪಣಿ ಕೇಂದ್ರವೇ ಟಾರ್ಗೆಟ್..?

ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನ ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಈ ಕ್ಷಿಪಣಿ ಸಿದ್ಧಗೊಳಿಸಿರುವುದೇ ಅಮೆರಿಕದ ಅಲಾಸ್ಕಾ ಪ್ರಾಂತ್ಯವನ್ನು ಉಡಾಯಿಸಲು. ಈ ಜಾಗದಲ್ಲಿ ಅಮೆರಿಕದ ಕ್ಷಿಪಣಿ ನಿರ್ವಹಣಾ ಕೇಂದ್ರವಿದೆ. ಇದನ್ನು ಹೊಡೆದು ಉರುಳಿಸುವುದು ಕಿಮ್‌ನ ಪ್ಲ್ಯಾನ್. ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ.

ರಷ್ಯಾಗೆ ಸೇರಿದ್ದ ಜಾಗ ಕೊಂಡುಕೊಂಡಿತ್ತು ಅಮೆರಿಕ

ರಷ್ಯಾಗೆ ಸೇರಿದ್ದ ಜಾಗ ಕೊಂಡುಕೊಂಡಿತ್ತು ಅಮೆರಿಕ

1867ಕ್ಕೂ ಮೊದಲು ಅಲಾಸ್ಕಾ ಪ್ರದೇಶ ರಷ್ಯಾ ರಾಜವಂಶಕ್ಕೆ ಸೇರಿತ್ತು. ಹೀಗೆ ರಷ್ಯನ್ ಸಾಮ್ರಾಜ್ಯದಿಂದ ಈ ಪ್ರದೇಶವನ್ನು ಅಮೆರಿಕ ಕೊಂಡುಕೊಂಡಿತ್ತು. ಅಂದಿನ ಕಾಲದಲ್ಲೇ ಈ ಪ್ರದೇಶಕ್ಕೆ ಅಮೆರಿಕ 7.2 ಮಿಲಿಯನ್ ಡಾಲರ್ ನೀಡಿತ್ತು (ಈಗಿನ ಲೆಕ್ಕದಲ್ಲಿ ಸುಮಾರು 132 ಮಿಲಿನ್ ಡಾಲರ್). ಹೀಗೆ ರಷ್ಯಾದಿಂದ ಈ ಭೂಮಿ ಕೊಂಡುಕೊಂಡ ಅಮೆರಿಕ ಅದನ್ನ ತನ್ನ ಜಲಗಡಿ ರಕ್ಷಣೆ ಹಾಗೂ ವಾಯುಗಡಿ ರಕ್ಷಣೆಗಾಗಿ ಬಳಸಿಕೊಂಡು ಬಂದಿದೆ. ಆದರೆ ಈಗ ಕಿಮ್ ಅದೇ ಜಾಗದ ಮೇಲೆ ಕಣ್ಣಿಟ್ಟು ಕೂತಿದ್ದಾನೆ.

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಸರ್ವಾಧಿಕಾರಿ..!ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಸರ್ವಾಧಿಕಾರಿ..!

ಹತ್ತಾರು ಪೆಟ್ರೋಲ್ ಬಂಕ್ ಬೇಕು..!

ಹತ್ತಾರು ಪೆಟ್ರೋಲ್ ಬಂಕ್ ಬೇಕು..!

ಮೊದಲೇ ಹೇಳಿದಂತೆ ಕಿಮ್ ಈಗ ಶೋ ಕೊಟ್ಟಿರೋ ಇಂಟರ್ ಕಾಂಟಿನೆಂಟಲ್ ಬ್ಯಾಲಾಸ್ಟಿಕ್ ಮಿಸೈಲ್ (ICBM)ಗೆ ಹೈಡ್ರಾಜಿನ್ ಎಂಬ ದ್ರವ ರೂಪದ ಇಂಧನ ತುಂಬಿಸಬಹುದು. ಹೀಗೆ ಕಿಮ್ ಜಾಂಗ್ ಉನ್ ಈಗ ಪ್ರದರ್ಶನ ಮಾಡಿರುವ ಕ್ಷಿಪಣಿಗೆ 100 ಟನ್‌ನಷ್ಟು ಇಂಧನ ತುಂಬಿಸಬೇಕು. ಹೀಗೆ ದ್ರವ ರೂಪದ ಇಂಧನ ತುಂಬಿಸಲು ಪೆಟ್ರೋಲ್ ಬಂಕ್ ಲೆಕ್ಕದಲ್ಲಿ ಹೇಳುವುದಾದರೆ ಹತ್ತಾರು ಬಂಕ್‌ಗಳೇ ಬೇಕಾಗುತ್ತದೆ. ಹಾಗೇ ಲಾಂಚಿಂಗ್ ಪ್ಯಾಡ್ ಇರುವೆಡೆ ಈ ಕ್ಷಿಪಣಿಗೆ ಇಂಧನ ತುಂಬಿಸಲು ಆಗುವುದಿಲ್ಲ. ಏಕೆಂದರೆ ಆನೆ ಗಾತ್ರದ ಈ ಕ್ಷಿಪಣಿಗೆ ಟ್ರಕ್‌ಗಟ್ಟಲೇ ಇಂಧನ ತುಂಬಿಸಬೇಕಾಗುತ್ತದೆ. ಈ ಮಿಸೈಲ್‌ಗಳನ್ನು ಬೇರೆಡೆ ಇಂಧನ ತುಂಬಿಸಿ ಶತ್ರುಗಳ ಪ್ರದೇಶದ ಮೇಲೆ ಗುರಿಯಿಟ್ಟು ಲಾಂಚ್ ಮಾಡಲಾಗುತ್ತದೆ.

ಒಂದೇ ಏಟಿಗೆ ಎಲ್ಲವೂ ಉಡೀಸ್..!

ಒಂದೇ ಏಟಿಗೆ ಎಲ್ಲವೂ ಉಡೀಸ್..!

ಇಂಟರ್ ಕಾಂಟಿನೆಂಟಲ್ ಬ್ಯಾಲಾಸ್ಟಿಕ್ ಮಿಸೈಲ್ (ICBM) ಅಥವಾ ಖಂಡಾಂತರ ಕ್ಷಿಪಣಿಗಳಲ್ಲಿ ಹಲವು ವಿಧ. ಸಾಮಾನ್ಯವಾಗಿ ಒಂದೇ ಸ್ಫೋಟಕ ಅಥವಾ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯವಿರುವ ಕ್ಷಿಪಣಿಗಳು ಸಾಕಷ್ಟು ದೇಶಗಳ ಬಳಿ ಇವೆ. ಆದರೆ ಕಿಮ್ ಬಳಿ ಇರುವ ಕ್ಷಿಪಣಿ ಒಂದೇ ಬಾರಿಗೆ 3-4 ಬಾಂಬ್‌ಗಳನ್ನು ಹೊತ್ತೊಯ್ಯುವ ತಾಕತ್ತು ಹೊಂದಿದೆ. ಹೀಗೆ 3-4 ಪ್ರದೇಶಗಳ ಮೇಲೆ ಏಕಕಾಲದಲ್ಲೇ ದಾಳಿ ನಡೆಸಿ ಛಿದ್ರ ಛಿದ್ರ ಮಾಡಬಲ್ಲ ತಾಕತ್ತು ಕಿಮ್ ಪಡೆ ಸಂಶೋಧಿಸಿರುವ ಖಂಡಾಂತರ ಕ್ಷಿಪಣಿಗಳಿಗೆ ಇದೆ.

ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ

ಕಿಮ್ ಒಬ್ಬ ಕಿರಾತಕ. ಆತ ಬರೀ ಮಿಸೈಲ್, ಮಿಲಿಟರಿ ಸಾಧನಗಳನ್ನಷ್ಟೇ ಪ್ರದರ್ಶನಕ್ಕೆ ಇಡೋನಲ್ಲ. ಈತ ಈ ಹಿಂದೆ ತನ್ನ ಚಿಕ್ಕಪ್ಪನ ತಲೆಯನ್ನೇ ಕತ್ತರಿಸಿ, ಉತ್ತರ ಕೊರಿಯಾ ಅಧಿಕಾರಿಗಳ ಮುಂದೆ ಪ್ರದರ್ಶನಕ್ಕಿಟ್ಟಿದ್ದ. ಅಲ್ಲದೆ ಉತ್ತರ ಕೊರಿಯಾದಲ್ಲಿ ಕೊರೊನಾ ಕಂಟ್ರೋಲ್‌ಗೆ ತರಲು ಕಿಮ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಜೊತೆಗೆ ಜಗತ್ತಿನ ಬಲಾಢ್ಯ ರಾಷ್ಟ್ರಗಳನ್ನು ಕಾಡುತ್ತಿದ್ದಾನೆ. ಅಕಸ್ಮಾತ್ ಕಿಮ್ ಹೀಗೆ ವರ್ತಿಸುತ್ತಿರುವುದಕ್ಕೆ ಅಮೆರಿಕದಿಂದ ಪ್ರತಿಕ್ರಿಯೆ ಬಂದರೆ ಇಲ್ಲವೇ ಮರುದಾಳಿ ನಡೆಸಿದರೆ 3ನೇ ಮಹಾಯುದ್ಧ ಫಿಕ್ಸ್ ಆದಂತೆ.

English summary
North Korean dictator Kim Jong Un marches an intercontinental ballistic missile. By This, Kim Jong Un has issued a warning to US leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X