ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮಾಕ್ಕೆ ಜಾರಿರುವ ಕಿಮ್ ಜೊಂಗ್ ಉನ್, ಶತ್ರುಪಡೆಯಿಂದ ಸತ್ಯ ಬಹಿರಂಗ

|
Google Oneindia Kannada News

ಉತ್ತರ ಕೊರಿಯಾದ ಸರ್ವಾಧಿಕಾರಿ, ಅಮೆರಿಕದ ಪರಮ ಶತ್ರು ಕಿಮ್ ಜೊಂಗ್ ಉನ್ ಮತ್ತೊಮ್ಮೆ ಯುದ್ಧದ ಬಗ್ಗೆ ಮಾತನಾಡಿದ್ದು ನೆನಪಿರಬೇಕಲ್ಲ, ಭೂಮಿ ಮೇಲೆ ಇನ್ನು ಮುಂದೆ ಯುದ್ಧಗಳು ನಡೆಯೋದಿಲ್ಲ ಅಂತಾ ಸ್ವತಃ ಕಿಮ್ ಹೇಳಿದ್ದಾರೆ ಎಂಬ ಇತ್ತೀಚಿನ ಸುದ್ದಿಯ ಬೆನ್ನಲ್ಲೇ ಶತ್ರುಪಡೆಯ ಮಾಜಿ ಅಧಿಕಾರಿಯೊಬ್ಬರು ಕಿಮ್ ಬಗ್ಗೆ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಕಿಮ್ ಅಸಲಿಗೆ ಕೋಮಾಕ್ಕೆ ಜಾರಿ ಬಹಳ ದಿನಗಳಾಗಿವೆ. ಈಗ ಅಧಿಕಾರವು ಕಿಮ್ ಸೋದರಿ ಯೊ ಜೊಂಗ್ ಕೈಲಿದೆ ಎಂದಿದ್ದಾರೆ.

'ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಬ್ರೇನ್ ಡೆಡ್ ಆಗಿದೆ. ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆ'' ಎಂಬ ಸುದ್ದಿ ಹಬ್ಬಿದ್ದು ನೆನಪಿರಬಹುದು.

ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!

ಏಪ್ರಿಲ್ 15 ರಂದು ಕಿಮ್ ಜಾಂಗ್ ಉನ್ ಅವರ ತಾತ ದಿವಂಗತ ಕಿಮ್ ಇಲ್ ಸುಂಗ್ ಅವರ 108ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಿಮ್ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದವು.

2014ರಲ್ಲಿ ಕೂಡಾ ಕಣ್ಮರೆಯಾಗಿದ್ದ ಕಿಮ್

2014ರಲ್ಲಿ ಕೂಡಾ ಕಣ್ಮರೆಯಾಗಿದ್ದ ಕಿಮ್

ಕಿಮ್ ಜಾಂಗ್ ಉನ್ ಸಾರ್ವಜನಿಕ ಜೀವನದಿಂದ ನಾಪತ್ತೆಯಾಗಿರುವುದು ಇದೇ ಮೊದಲನೇನಲ್ಲ. 2014 ಸೆಪ್ಟೆಂಬರ್ ನಲ್ಲೂ 40 ದಿನಗಳ ಕಾಲ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿ ಮತ್ತೆ ಕಾಣಿಸಿಕೊಂಡಿದ್ದರು. ದಕ್ಷಿಣ ಕೊರಿಯಾದ ದಿವಂಗತ ಅಧ್ಯಕ್ಷ ಕಿಮ್ ಡಿಯೊ ಜುಂಗ್ ಅವರ ಆಪ್ತ ಅಧಿಕಾರಿಯು, ಕಿಮ್ ಜೊನ್ ಉನ್ ಕೋಮಾದಲ್ಲಿದ್ದಾರೆ. ಕಿಮ್ ಯೋ ಜೊಂಗ್ ಸದ್ಯ ಉತ್ತರ ಕೊರಿಯಾವನ್ನು ಆಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ

ದಕ್ಷಿಣ ಕೊರಿಯಾದ ಅಧಿಕಾರಿ ಚಾಂಗ್ ಸಾಂಗ್ ಮಿನ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಿಮ್ ಜೊಂಗ್ ಉನ್ ಹಾಸಿಗೆ ಹಿಡಿದು ಬಹಳ ಕಾಲ ಆಗಿದೆ. ಆಡಳಿತ ನಡೆಸಲು ಕಷ್ಟವಾಗಿದೆ ಎಂದು ಈ ಹಿಂದೆ ಕೂಡಾ ಹೇಳಿದ್ದೆ. ಈಗ ಅದಕ್ಕೆ ಪುರಾವೆಗಳು ಸಿಕ್ಕಿವೆ. ಕಿಮ್ ಸೋದರಿಯಿಂದ ಆದೇಶಗಳು ಬರುತ್ತಿವೆ ಎಂದಿದ್ದಾರೆ.

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲುಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲು

ನಕಲಿ ಸುದ್ದಿಗಳನ್ನು ಸೃಷ್ಟಿಸಲಾಗಿದೆ

ನಕಲಿ ಸುದ್ದಿಗಳನ್ನು ಸೃಷ್ಟಿಸಲಾಗಿದೆ

ಕಿಮ್ ಆರೋಗ್ಯವಾಗಿದ್ದಾರೆ ಎಂದು ತೋರಿಸಲಾದ ಚಿತ್ರಗಳು, ವಿಡಿಯೋ ಕ್ಲಿಪ್ಪಿಂಗ್ ಎಲ್ಲವೂ ಶುದ್ಧ ಸುಳ್ಳು. ಈ ಬಗ್ಗೆ ಘೋಷಣೆ ಮಾಡಿದರೆ ಉತ್ತರ ಕೊರಿಯಾದ ಆಡಳಿತ ಯಂತ್ರ ಕುಸಿಯುವ ಭೀತಿ ಎದುರಾಗಿರುವುದರಿಂದ ಎಲ್ಲವೂ ಸಮರ್ಪಕವಾಗಿ ವ್ಯವಸ್ಥೆ ರೂಪುಗೊಂಡು ಯೊ ಜೊಂಗ್ ಸಂಪೂರ್ಣ ಅಧಿಕಾರವಹಿಸಿಕೊಳ್ಳಲು ಸಿದ್ಧ ಎನಿಸಿದಾಗ ಕಿಮ್ ಜೊಂಗ್ ಉನ್ ಬಗ್ಗೆ ಘೋಷಣೆ ಹೊರಬರಲಿದೆ.

ಸಾಕು ಪ್ರಾಣಿಗಳನ್ನು ನೀಡಲು ಕರೆ

ಸಾಕು ಪ್ರಾಣಿಗಳನ್ನು ನೀಡಲು ಕರೆ

ಕೊವಿಡ್ 19 ನಿಂದ ಉತ್ತರ ಕೊರಿಯಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೆ, ಹುಂಬತನದಿಂದ ಆಡಳಿತ ನಡೆಸುವ ಕಿಮ್ ಗೆ ಇತರೆ ರಾಷ್ಟ್ರಗಳ ನೆರವು ಕೋರುವುದು ಬೇಕಿಲ್ಲ. ಹೀಗಾಗಿ, ಸಾಕುಪ್ರಾಣಿಗಳನ್ನು ರೆಸ್ಟೋರೆಂಟ್ ಗೆ ಕೊಡಿ, ಆಹಾರ ಕ್ಷಾಮ ಉಂಟಾಗದಂತೆ ನೋಡಿಕೊಳ್ಳಿ ಎಂಬ ವಿಚಿತ್ರ ಆದೇಶಗಳು ಬರುತ್ತಿವೆ ಎಂದಿದ್ದಾರೆ.

English summary
A former aide to South Korea’s late president Kim Dae-Jung, has said that Kim Jon Un is in a coma and that’s why his sister Kim Yo-jong has been given powers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X