• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಮ್ ಜಾಂಗ್ ಉನ್ ಸಾವು ಬದುಕಿನ ಸುದ್ದಿ! ಆ ರೈಲು ಕೊಟ್ಟಿತಾ ಸುಳಿವು?

|

ಪ್ಯೊಂಗ್ಯಾಂಗ್, ಏಪ್ರಿಲ್.27: ಇಡೀ ಊರಿಗೆ ಒಂದು ದಾರಿಯಾದರೆ, ಊರಿನ ಐನೇರ್ ಮಗನಿಗೇ ಒಂದು ದಾರಿಯಂತೆ. ಇಂಥದೊಂದು ಮಾತಿಗೆ ಹೇಳಿ ಮಾಡಿಸಿದಂತಿರುವ ನಾಯಕನೇ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್.

ವಿಭಿನ್ನ, ವಿಚಿತ್ರ, ವಿಶಿಷ್ಟ ಹಾಗೂ ಆಕ್ರಮಣಕಾರಿ ಗುಣಗಳಿಂದಲೇ ವಿಶ್ವದಾದ್ಯಂತ ಪ್ರಖ್ಯಾತಿಗಿಂತಲೂ ಕುಖ್ಯಾತಿಯನ್ನೇ ಗಳಿಸಿರುವ ಕಿಮ್ ಜಾಂಗ್ ಉನ್ ರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಚ್ಚುದೊರೆ ಎಂತಲೇ ಹೆಚ್ಚಾಗಿ ಗುರುತಿಸಲಾಗುತ್ತಿದೆ. ಇಂಥ ನಾಯಕನ ಸಾವು ಮತ್ತು ಬದುಕಿನ ಕುರಿತ ವದಂತಿಗಳ ಮೇಲೆ ವದಂತಿಗಳು ಹರಡುತ್ತಿವೆ.

ಕೊರೊನಾ ಭೀತಿ ನಡುವೆ ಮತ್ತೊಂದು ನಡುಕ ಹುಟ್ಟಿಸಿದ ಉತ್ತರ ಕೊರಿಯಾ!

ವಿಶ್ವದ ದೈತ್ಯ ರಾಷ್ಟ್ರಗಳನ್ನೇ ಬೆಚ್ಚಿ ಬೀಳಿಸಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಇನ್ನಿಲ್ಲ. ಶಸ್ತ್ರ ಚಿಕಿತ್ಸೆ ಬಳಿ ಬ್ರೈಡ್ ಡೆತ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು, ವದಂತಿಗಳು ಹರಡುತ್ತಿವೆ. ಅಸಲಿಗೆ ಈ ಕಿಮ್ ಜಾಂಗ್ ಉನ್ ಬದುಕಿತ್ತಿದ್ದಾರೆಯೇ, ಬದುಕಿದ್ದರೆ ಎಲ್ಲಿದ್ದಾರೆ, ಅಥವಾ ಮೃತಪಟ್ಟಿದ್ದರೆ ಯಾಕೆ ಅದನ್ನು ಗೌಪ್ಯವಾಗಿ ಇರಿಸಲಾಗಿದೆ. ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಈ ವರದಿಯು ಉತ್ತರ ನೀಡುತ್ತದೆ.

ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ವದಂತಿ

ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ವದಂತಿ

ಕಳೆದ ಕೆಲವು ದಿನಗಳಿಂದ ಉತ್ತರ ಕೊರಿಯಾದ ಸಾರ್ವಜನಿಕ ಕಾರ್ಯಕ್ರಮ, ಸಭೆ, ಸಮಾರಂಭ ಭಾಗವಹಿಸುತ್ತಿದ್ದ ಹಾಗೂ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ತೆರೆ ಮರೆಗೆ ಸರಿದಂತೆ ಗೋಚರಿಸುತ್ತಿದೆ. ಅನುವಂಶೀಯ ಆಡಳಿತ ಇರುವ ದೇಶದಲ್ಲಿ ತಮ್ಮ ತಂದೆಯ ಮರಣಾನಂತರ ಮೂರನೇ ತಲೆಮಾರಿನ ನಾಯಕರಾಗಿ 2011ರಲ್ಲಿ ಕಿಮ್ ಜಾಂಗ್ ಉನ್ ಅಧಿಕಾರ ಸ್ವೀಕರಿಸಿದ್ದರು.

ಕೊವಿಡ್-19ಗೆ ಬೆದರಿ ಅವಿತುಕೊಂಡರಾ ಕಿಮ್ ಜಾಂಗ್ ಉನ್?

ಕೊವಿಡ್-19ಗೆ ಬೆದರಿ ಅವಿತುಕೊಂಡರಾ ಕಿಮ್ ಜಾಂಗ್ ಉನ್?

ಉತ್ತರ ಕೊರಿಯಾದ ಅಪಾಯಕಾರಿ ನಾಯಕ ಕಿಮ್ ಜಾಂಗ್ ಉನ್ ಕೂಡಾ ಕೊರೊನಾ ವೈರಸ್ ಎಂಬ ಮಹಾಮಾರಿಗೆ ಬೆದರಿ ಅವಿತುಕೊಂಡರಾ ಅಥವಾ ನಿಜವಾಗಿಯೂ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿವೆ.

ವದಂತಿಗಳು ಹೆಚ್ಚಾದರೂ, ಉತ್ತರ ಕೊರಿಯಾದ ಮೀಡಿಯಾ ಮಾತ್ರ ಗಪ್ ಚುಪ್.!

ಉತ್ತರ ಕೊರಿಯಾ ನಾಯಕ ಸಾವಿನ ಬಗ್ಗೆ ನಿಖರ ಮಾಹಿತಿಯಿಲ್ಲ

ಉತ್ತರ ಕೊರಿಯಾ ನಾಯಕ ಸಾವಿನ ಬಗ್ಗೆ ನಿಖರ ಮಾಹಿತಿಯಿಲ್ಲ

ಸಾಮಾಜಿಕ ಜಾಲತಾಣದಲ್ಲಿ #KIMJONGUNDEAD ಹ್ಯಾಷ್ ಟ್ಯಾಗ್ ಸಖತ್ ಟ್ರೆಂಡಿಂಗ್ ನಲ್ಲಿದೆ. ಆದರೆ ಇದುವರೆಗೂ ಯಾವುದೇ ಮಾಧ್ಯಮವೂ ಕೂಡಾ ಕಿಮ್ ಜಾಂಗ್ ಉನ್ ಸಾವಿನ ಕುರಿತು ವಿಶ್ವಾಸಾರ್ಹ ವರದಿಯನ್ನು ಪ್ರಕಟಿಸಿಲ್ಲ. ಕಳೆದ 2014ರಲ್ಲಿ 36 ವರ್ಷದ ಕಿಮ್ ಜಾಂಗ್ ಉನ್ ಕೆಲವು ತಿಂಗಳುಗಳ ಕಾಲ ಮಾಧ್ಯಮಗಳಿಂದ ದೂರ ಉಳಿದಿದ್ದರು. ನಂತರದಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ಕೈಯಲ್ಲಿ ಊರುಗೋಲು ಹಿಡಿದುಕೊಂಡು ನಡೆದಾಡುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಅಂದು ಕಿಮ್ ಜಾಂಗ್ ಉನ್ ಅವರ ಆರೋಗ್ಯದಲ್ಲಿನ ಬದಲಾವಣೆಯ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಯಿತು.

ನಾಯಕ ಕಿಮ್ ಜಾಂಗ್ ಉನ್ ರೈಲಿನ ಚಿತ್ರವು ಪತ್ತೆ

ನಾಯಕ ಕಿಮ್ ಜಾಂಗ್ ಉನ್ ರೈಲಿನ ಚಿತ್ರವು ಪತ್ತೆ

ವಾಷಿಂಗ್ಟನ್, ಡಿಸಿ ಮೂಲದ ಉತ್ತರ ಕೊರಿಯಾ ಮಾನಿಟರಿಂಗ್ ಪ್ರಾಜೆಕ್ಟ್ ಪರಿಶೀಲಿಸಿದ ಉಪಗ್ರಹ ಚಿತ್ರಗಳ ಪ್ರಕಾರ, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರಿಗೆ ಸೇರಿದ ವಿಶೇಷ ರೈಲು ಈ ವಾರ ದೇಶದ ರೆಸಾರ್ಟ್ ಪಟ್ಟಣದ ಬಳಿಯಲ್ಲಿ ಕಂಡುಬಂದಿದೆ. ಏಪ್ರಿಲ್.21 ಮತ್ತು ಏಪ್ರಿಲ್.23ರಂದು ವೋಂಸನ್ ಪ್ರದೇಶದಲ್ಲಿ ಕಿಮ್ ಕುಟುಂಬಕ್ಕೆ ಮೀಸಲು ಇರಿಸಿದ ಲೀಡರ್ ಶಿಪ್ ಸ್ಟೇಷನ್ ನಲ್ಲಿಯೇ ಈ ರೈಲು ನಿಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ.

ಉತ್ತರ ಕೊರಿಯಾ ಸಂಸ್ಥಾಪಕರ ಜನ್ಮ ವಾರ್ಷಿಕೋತ್ಸವಕ್ಕೆ ಗೈರು

ಉತ್ತರ ಕೊರಿಯಾ ಸಂಸ್ಥಾಪಕರ ಜನ್ಮ ವಾರ್ಷಿಕೋತ್ಸವಕ್ಕೆ ಗೈರು

ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಮಾಧ್ಯಮಗಳ ಎದುರಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದು ಏಪ್ರಿಲ್.11. ಅದಾಗಿ ನಾಲ್ಕೇ ದಿನಕ್ಕೆ ಕಿಮ್ ಜಾಂಗ್ ಉನ್ ಅಜ್ಜ ಹಾಗೂ ಉತ್ತರ ಕೊರಿಯಾ ಸಂಸ್ಥಾಪಕರು ಆಗಿರುವ ಕಿಮ್ ಇಲ್ ಸಂಗ್ ಜನ್ಮ ವಾರ್ಷಿಕೋತ್ಸವವಿದ್ದರೂ ಈ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಗೈರು ಹಾಜರಾಗಿದ್ದರು.

ಉತ್ತರ ಕೊರಿಯಾ ಅಧ್ಯಯನ ಕೇಂದ್ರವಾಗಿರುವ ದಕ್ಷಿಣ ಕೊರಿಯಾದ ಸೆಜಾಂಗ್ ಇನ್ಸ್ ಟಿಟ್ಯೂಟ್ ನಿರ್ದೇಶಕ ಚೆಯಾಂಗ್-ಸಿಯಾಂಗ್-ಚಾಂಗ್ ಈ ಕುರಿತು ನ್ಯೂಯಾರ್ಕ್ ಟೈಮ್ಸ್ ಗೆ ಮಾತನಾಡಿದ್ದಾರೆ. ತಮ್ಮ ತಾತನ ಜನ್ಮ ವಾರ್ಷಿಕೋತ್ಸವದ ದಿನ ಸ್ವತಃ ಕಿಮ್ ಜಾಂಗ್ ಉನ್ ಗೈರು ಆಗಿರುವುದನ್ನು ಆಲೋಚಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇದನ್ನು ಉತ್ತರ ಕೊರಿಯಾದಲ್ಲಿ ದೇವನಿಂದನೆ ಎಂದೇ ಭಾವಿಸಲಾಗುತ್ತದೆ ಎಂದು ಚೆಯಾಂಗ್-ಸಿಯಾಂಗ್-ಚಾಂಗ್ ತಿಳಿಸಿದ್ದಾರೆ.

ಉತ್ತರ ಕೊರಿಯಾ ನಾಯಕನ ಫೋಟೋ ಹಿಂದಿನ ಅಸಲಿ ಸತ್ಯ ನಿಗೂಢ!

ಉತ್ತರ ಕೊರಿಯಾ ನಾಯಕನ ಫೋಟೋ ಹಿಂದಿನ ಅಸಲಿ ಸತ್ಯ ನಿಗೂಢ!

ಕಳೆದ ಏಪ್ರಿಲ್.15ರಂದು ಕಿಮ್ ಜಾಂಗ್ ಉನ್ ಅಜ್ಜ ಕಿಮ್ ಇಲ್ ಸಂಗ್ ಜನ್ಮ ವಾರ್ಷಿಕೋತ್ಸವ ಹಿನ್ನೆಲೆ ಅದರ ಮುನ್ನ ದಿನ ಏಪ್ರಿಲ್.14ರಂದು ಮಿಸೈಲ್ ಪರೀಕ್ಷಾರ್ಥ ಉಡಾವಣೆಯನ್ನು ಮಾಡಲಾಗಿತ್ತು. ಈ ವೇಳೆ ಕಿಮ್ ಜಾಂಗ್ ಉನ್ ಮಿಸೈಲ್ ವೀಕ್ಷಣೆ ಮಾಡುತ್ತಿರುವ ಫೋಟೋವನ್ನು ಮಾಧ್ಯಮಗಳು ಬಿಡುಗಡೆ ಮಾಡಿದ್ದವು. ಆದರೆ ಅದೊಂದು ಹಳೆಯ ಫೋಟೋ ಎಂದು ಹೇಳಲಾಗುತ್ತಿದೆ.

ಉತ್ತರ ಕೊರಿಯಾ ನಾಯಕನಿಗೆ ಹೃದಯರಕ್ತನಾಳ ಚಿಕಿತ್ಸೆ

ಉತ್ತರ ಕೊರಿಯಾ ನಾಯಕನಿಗೆ ಹೃದಯರಕ್ತನಾಳ ಚಿಕಿತ್ಸೆ

ಸಿಯೋಲ್ ಮೂಲದ Daily NK ವೆಬ್ ಸೈಟ್ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿಯ ಬಗ್ಗೆ ಕಳೆದ ಸೋಮವಾರವೇ ವರದಿ ಮಾಡಿತ್ತು. ಅನಾಮಿಕ ಮೂಲಗಳ ಪ್ರಕಾರ ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ನ ಹ್ಯಾಂಗ್ ಸನ್ ಪ್ರದೇಶದಲ್ಲಿ ಇರುವ ರೆಸಾರ್ಟ್ ಕೌಂಟಿಯಲ್ಲಿ ಕಿಮ್ ಜಾಂಗ್ ಉನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೊಜ್ಜು, ಆಯಾಸ ಹಾಗೂ ಅತಿಯಾದ ಧೂಮಪಾನದಿಂದ ಅನಾರೋಗ್ಯಕ್ಕೆ ತುತ್ತಾದ ಕಿಮ್ ಜಾಂಗ್ ಉನ್ ರಿಗೆ ಹೃದಯರಕ್ತನಾಳ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಏಪ್ರಿಲ್.12ರ ವೇಳೆಗೆ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.

ಉತ್ತರ ಕೊರಿಯಾಗೆ ಚೀನಾ ಕಳುಹಿಸಿಕೊಟ್ಟಿತಾ ವೈದ್ಯರ ತಂಡ?

ಉತ್ತರ ಕೊರಿಯಾಗೆ ಚೀನಾ ಕಳುಹಿಸಿಕೊಟ್ಟಿತಾ ವೈದ್ಯರ ತಂಡ?

ದಕ್ಷಿಣ ಕೊರಿಯಾ ಮೂಲಗಳ ಪ್ರಕಾರ ಕಿಮ್ ಜಾಂಗ್ ಉನ್ ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಬಗ್ಗೆ ರಾಯಟರ್ಸ್ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಇದಲ್ಲದೇ ಕಿಮ್ ಜಾಂಗ್ ಉನ್ ಸಲಹೆ ಮೇರೆಗೆ ಚೀನಾ ಸರ್ಕಾರವು ವೈದ್ಯಕೀಯ ಸರಕುಗಳ ಜೊತೆಗೆ ತಜ್ಞವೈದ್ಯರ ತಂಡವನ್ನು ಉತ್ತರ ಕೊರಿಯಾಗೆ ಕಳುಹಿಸಿ ಕೊಟ್ಟಿದೆ ಎಂದು ರಾಯಟರ್ಸ್ ತಿಳಿಸಿದೆ. NK Daily ವೆಬ್ ಸೈಟ್ ಪ್ರಕಾರ ಕಿಮ್ ಜಾಂಗ್ ಉನ್ ವೊಂಸನ್ ಪ್ರದೇಶದಲ್ಲಿಯೇ ವಾಸವಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಕೊರಿಯಾ ನಾಯಕನಿಗೂ ಕೊರೊನಾ ಕಾಟ?

ಉತ್ತರ ಕೊರಿಯಾ ನಾಯಕನಿಗೂ ಕೊರೊನಾ ಕಾಟ?

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ರಿಗೆ ಕೊರೊನಾ ವೈರಸ್ ಅಂಟಿಕೊಂಡಿದ್ದು ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯು ಮಾಹಿತಿ ನೀಡಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆ Newsis ವರದಿ ಮಾಡಿದೆ. ಪ್ಯೊಂಗ್ಯಾಂಗ್ ಪ್ರದೇಶದಲ್ಲಿಯೇ ಕಿಮ್ ಜಾಂಗ್ ಉನ್ ಅವರ ಖಾಸಗಿ ವಿಮಾನವನ್ನು ನಿಲ್ಲಿಸಿದ್ದು, ಅವರು ಬಳಸುತ್ತಿದ್ದ ವಿಶೇಷ ರೈಲು ವೊಂಸನ್ ಪ್ರದೇಶದಲ್ಲಿ ಕಂಡು ಬಂದಿದೆ ಎಂದು Newsis ತಿಳಿಸಿದೆ.

ವಿದೇಶಗಳು ಕಿಮ್ ಜಾಂಗ್ ಉನ್ ಬಗ್ಗೆ ಹೇಳುವುದೇನು?

ವಿದೇಶಗಳು ಕಿಮ್ ಜಾಂಗ್ ಉನ್ ಬಗ್ಗೆ ಹೇಳುವುದೇನು?

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಓಡಾಡುತ್ತಿರುವ ವರದಿಗಳು ಸುಳ್ಳು ಎಂದು ಅನಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉತ್ತರ ಕೊರಿಯಾ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಸಂಪರ್ಕದಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ. ಅಣ್ವಸ್ತ್ರ ಪ್ರಯೋಗ ಭೀತಿ ಎದುರಾದ ಹಿನ್ನೆಲೆ ಈ ಹಿಂದೆ ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

English summary
North Korea President Kim Jong Un Dead Or Alive: Special Train Give A Clue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X