• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ವಾಧಿಕಾರಿ ಬಾಯಲ್ಲಿ ಒಂದೊಳ್ಳೆ ಮಾತು, ಟ್ರಂಪ್‌ಗಾಗಿ ಕಿಮ್ ಹಾರೈಕೆ..!

|

ಅಮೆರಿಕ ಅಧ್ಯಕ್ಷ ಟ್ರಂಪ್ ಆದಷ್ಟು ಬೇಗ ಕೊರೊನಾ ಸೋಂಕಿನಿಂದ ಗುಣಮುಖರಾಗಲಿ, ಅಷ್ಟಕ್ಕೂ ಹೀಗೆ ಟ್ರಂಪ್ ಬಗ್ಗೆ ಕಾಳಜಿ ವಹಿಸಿ ಶುಭಹಾರೈಸಿದ್ದು ಅಮೆರಿಕದ ಮಿತ್ರನಲ್ಲ. ಬದಲಾಗಿ ಅಮೆರಿಕದ ಪರಮ ಶತ್ರು ಅಂತಾ ಗುರುತಿಸಿಕೊಂಡಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ನೀಡಿದ ಹೇಳಿಕೆ ಇದು.

ಇಷ್ಟು ದಿನ ಬರೀ ಬಾಂಬ್, ಮಿಸೈಲ್, ಯುದ್ಧ, ಗಡಿ ಜಗಳದ ಬಗ್ಗೆ ಮಾತನಾಡುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಇತ್ತೀಚೆಗೆ ಕಂಪ್ಲೀಟ್ ಚೇಂಜ್ ಆಗಿ ಹೋಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೆಲದಿನದ ಹಿಂದೆ ದಕ್ಷಿಣ ಕೊರಿಯಾ ಅಧಿಕಾರಿ ಹತ್ಯೆ ಸಂದರ್ಭದಲ್ಲಿ ಕ್ಷಮೆ ಕೇಳಿದ್ದು. ಈಗ ಟ್ರಂಪ್ ಬೇಗ ಕೊರೊನಾ ಸೋಂಕಿನಿಂದ ಹುಷಾರಾಗಿ ಬರಲೆಂದು ಹಾರೈಸಿರುವುದು ಸರ್ವಾಧಿಕಾರಿ ಕಿಮ್ ಬದಲಾಗಿದ್ದಾರೆ ಎಂಬುದನ್ನು ಸೂಚಿಸುತ್ತಿದೆ.

ಟ್ರಂಪ್‌ಗೆ ಕೊರೊನಾ: ನಿಂತು ಹೋಗುತ್ತಾ ಅಮೆರಿಕ ಅಧ್ಯಕ್ಷೀಯ ಚುನಾವಣೆ..?

ಅಂದಹಾಗೆ ಒಂದಾನೊಂದು ಕಾಲದಲ್ಲಿ ಶತಮಾನಗಳ ಶತ್ರುಗಳಂತೆ ಕಿತ್ತಾಡಿದ್ದ ಕಿಮ್ ಮತ್ತು ಟ್ರಂಪ್ 2018ರಲ್ಲಿ ದಿಢೀರ್ ಜೀವದ ಗೆಳೆಯರಾಗಿ ಹೋಗಿದ್ದರು. ಮೊದಲ ಭೇಟಿಯಲ್ಲೇ ಟ್ರಂಪ್ ಕಿಮ್ ಬಗ್ಗೆ ಮಾರುದ್ದ ಭಾಷಣ ಮಾಡಿ ಹೊಗಳಿದ್ದರು. ಇದು ಜಾಗತಿಕ ಸಮುದಾಯಕ್ಕೆ ಅಚ್ಚರಿ ತಂದಿತ್ತು. ಈಗ ತನ್ನ ಜೀವದ ಗೆಳೆಯನ ಚೇತರಿಕೆಗೆ ಕಿಮ್ ಜಾಂಗ್ ಉನ್ ಕೂಡ ಪ್ರಾರ್ಥಿಸಿದ್ದಾನೆ.

‘ನಾನು ಬಾಂಬ್ ಹಾಕ್ತೀನಿ’ ಅಂದಿದ್ದರು..!

‘ನಾನು ಬಾಂಬ್ ಹಾಕ್ತೀನಿ’ ಅಂದಿದ್ದರು..!

ಅದು 2017ರ ಸಮಯ, ಕಿಮ್ ಜಾಂಗ್ ಉನ್ ಹಾಗೂ ಡೊನಾಲ್ಡ್ ಟ್ರಂಪ್ ಮೊದಲ ಭೇಟಿಗೂ ಹಿಂದಿನ ವರ್ಷ. ಆಗ ಈ ಇಬ್ಬರೂ ನಾಯಕರು ಇಡೀ ಜಗತ್ತಿನ ಎದುರು ಸಣ್ಣವರಾಗಿ ಹೋಗಿದ್ದರು. ಅತ್ತ ಪದೇ ಪದೆ ಮಿಸೈಲ್ ಟೆಸ್ಟ್ ಮಾಡುತ್ತಿದ್ದ ಉತ್ತರ ಕೊರಿಯಾಗೆ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದರು. ಆದರೆ ಇದಕ್ಕೆ ಜಗ್ಗದೆ ಕಿಮ್ ನ್ಯೂಕ್ಲಿಯರ್ ಅಟ್ಯಾಕ್ ಬಗ್ಗೆ ಮಾತನಾಡಿದ್ದ. ಆಗ ಕಿಮ್ ಮಾತಿನಿಂದ ಕೆರಳಿ ಕೆಂಡವಾಗಿದ್ದ ಟ್ರಂಪ್, ನನ್ನ ಟೇಬಲ್ ಕೆಳಗಡೆ ನ್ಯೂಕ್ಲಿಯರ್ ಬಾಂಬ್‌ ಲಾಂಚರ್ ಬಟನ್ ಇದೆ. ಬಟನ್ ಒತ್ತಿದರೆ ಕೊರಿಯಾ ನಾಶ ಆಗೋದು ಪಕ್ಕಾ ಎಂದಿದ್ದರು. ಹೀಗೆ ಒಂದು ಕಾಲದಲ್ಲಿ ಟ್ರಂಪ್, ಕಿಮ್ ಕಚ್ಚಾಟ ಸಭ್ಯತೆಯ ಎಲ್ಲೆ ಮೀರಿತ್ತು.

ದಿಢೀರ್ ಸ್ನೇಹ ಬೆಳೆದಿದ್ದು ಹೇಗೆ..?

ದಿಢೀರ್ ಸ್ನೇಹ ಬೆಳೆದಿದ್ದು ಹೇಗೆ..?

ಹೌದು, ಇಂತಹ ಪ್ರಶ್ನೆ ಇಡೀ ಜಗತ್ತನ್ನೇ ಕಾಡುತ್ತಿದೆ. 2018ರವರೆಗೂ ಅಮೆರಿಕದ ಪಾಲಿಗೆ ವಿಲನ್ ಆಗಿದ್ದ ಕಿಮ್ ದಿಢೀರ್ ಅಮೆರಿಕದ ಅಧ್ಯಕ್ಷರಿಗೆ ಜೀವದ ಗೆಳೆಯನಾಗಿದ್ದು ಹೇಗೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. 2018ಕ್ಕೂ ಮುನ್ನ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನನ್ನು ವಿಲನ್ ರೀತಿ ಬಿಂಬಿಸಿದ್ದ ಅಮೆರಿಕ, ನಂತರದ ದಿನಗಳಲ್ಲಿ ಹೀರೋ ಮಾಡಲು ಹೋಗಿತ್ತು. ಅದರಲ್ಲೂ ಟ್ರಂಪ್, ಕಿಮ್ ಒಬ್ಬ ಒಳ್ಳೆಯ ವ್ಯಕ್ತಿ ಎಂದು ತುಂಬಾ ಹೊಗಳಿದ್ದರು. ಇದು ಸ್ವತಃ ಅಮೆರಿಕನ್ನರನ್ನೂ ಗೊಂದಲದ ಗೂಡಿಗೆ ತಳ್ಳಿತ್ತು.

ತಪ್ಪಾಯ್ತು ಕ್ಷಮಿಸಿ ಎಂದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್..!

 ಚಿಕ್ಕಪ್ಪನ ತಲೆ ಕಡಿದಿದ್ದನ್ನು ಹೇಳಿದ್ದ..!

ಚಿಕ್ಕಪ್ಪನ ತಲೆ ಕಡಿದಿದ್ದನ್ನು ಹೇಳಿದ್ದ..!

ಟ್ರಂಪ್ ಹಾಗೂ ಕಿಮ್ ಈವರೆಗೂ 2 ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಪೈಕಿ ಟ್ರಂಪ್ ಜೊತೆ ಮೊದಲ ಭೇಟಿಯಲ್ಲೇ ಕಿಮ್ ಜಾಂಗ್ ಉನ್ ತನ್ನ ಕ್ರೂರತೆ ಬಗ್ಗೆ ಹೇಳಿಕೊಂಡಿದ್ದನಂತೆ. ತನ್ನ ಚಿಕ್ಕಪ್ಪನ ಹತ್ಯೆ ಬಗ್ಗೆ ಟ್ರಂಪ್‌ಗೆ ಆಘಾತಕಾರಿ ಮಾಹಿತಿ ನೀಡಿದ್ದ ಕಿಮ್, ಚಿಕ್ಕಪ್ಪನ ತಲೆಯನ್ನೇ ಕತ್ತರಿಸಿ ಆತನ ದೇಹವನ್ನು ತನ್ನ ಅಧಿಕಾರಿಗಳ ಎದುರು ಪ್ರದರ್ಶನಕ್ಕೆ ಇಟ್ಟಿದ್ದೆ ಎಂಬುದನ್ನ ಒಪ್ಪಿಕೊಂಡಿದ್ದನಂತೆ. 2018ರ ಮೊದಲ ಭೇಟಿಯಲ್ಲಿ ಕಿಮ್ ತನ್ನ ಬಳಿ ಈ ಶಾಕಿಂಗ್ ಸತ್ಯ ಹೇಳಿಕೊಂಡಿದ್ದ ಎಂದು ಸ್ವತಃ ಟ್ರಂಪ್ ಹೇಳಿದ್ದರು. ಪತ್ರಕರ್ತ ಬಾಬ್‌ ವುಡ್ವರ್ಡ್‌ರ ‘ರೇಜ್‌' ಕೃತಿಯಲ್ಲಿ ಇಂತಹದ್ದೇ ಹಲವು ಸಂಗತಿಗಳು ರಿವೀಲ್ ಆಗಿದ್ದವು.

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಸರ್ವಾಧಿಕಾರಿ..!

‘ಕೊರೊನಾ’ಗಿಂತಲೂ ಕಿಮ್ ಕ್ರೂರಿ..!

‘ಕೊರೊನಾ’ಗಿಂತಲೂ ಕಿಮ್ ಕ್ರೂರಿ..!

ಉತ್ತರ ಕೊರಿಯಾದಲ್ಲಿ ಕೊರೊನಾ ಸೋಂಕನ್ನು ಕಂಟ್ರೋಲ್‌ಗೆ ತರಲು ಕಿಮ್ ಜಾಂಗ್ ಉನ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಆದರೆ ಇಂತಹ ಸರ್ವಾಧಿಕಾರಿ, ಟ್ರಂಪ್ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದು, ಇದೆಲ್ಲಾ ಜಗತ್ತಿನ ಎದುರು ಕಿಮ್ ಆಡುತ್ತಿರುವ ನಾಟಕ ಎಂಬುದು ಕಿಮ್ ವಿರೋಧಿಗಳ ಆರೋಪ.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

English summary
Talking about Trump, North Korean dictator Kim Jong Un said he hoped Trump would recover as soon as possible. Kim made the statement after Trump tested positive for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X