ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಸರ್ವಾಧಿಕಾರಿ..!
ಚಿಕ್ಕಪ್ಪನ ತಲೆ ಕತ್ತರಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಅದನ್ನು ಪ್ರದರ್ಶನಕ್ಕೂ ಇಟ್ಟಿದ್ದ ಎಂಬ ಆಘಾತಕಾರಿ ಸಂಗತಿಯನ್ನ ಟ್ರಂಪ್ ಬಯಲು ಮಾಡಿದ್ದಾರೆ. ಕಿಮ್ ಜಾಂಗ್ ಉನ್ ಅದೆಷ್ಟು ಕ್ರೂರಿ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಪತ್ರಕರ್ತ ಬಾಬ್ ವುಡ್ವರ್ಡ್ ಅವರ 'ರೇಜ್' ಕೃತಿಯಲ್ಲೂ ಇಂತಹದ್ದೇ ಸಂಗತಿಗಳು ರಿವೀಲ್ ಆಗಿವೆ.
ಕಿಮ್ ಚಿಕ್ಕಪ್ಪ ಜಾಂಗ್ ಸಾಂಗ್-ಥೇಕ್ನ 2013ರಲ್ಲಿ ಭ್ರಷ್ಟಾಚಾರ ಹಾಗೂ ದೇಶ ವಿರೋಧಿ ಚಟುವಟಿಕೆ ಆರೋಪದಡಿ ಕೊಲೆ ಮಾಡಲಾಗಿತ್ತು. ಈ ವಿಚಾರವನ್ನು 2018ರಲ್ಲಿ ಮೊದಲಬಾರಿ ಟ್ರಂಪ್ ಭೇಟಿ ಮಾಡಿದ ಸಂದರ್ಭದಲ್ಲಿ ಕಿಮ್ ಜಾಂಗ್ ಉನ್ ಪ್ರಸ್ತಾಪಿಸಿದ್ದ ಎನ್ನಲಾಗಿದೆ. ಚಿಕ್ಕಪ್ಪನನ್ನು ಕೊಲೆ ಮಾಡಿದ ನಂತರ, ತಲೆ ಇಲ್ಲದ ದೇಹವನ್ನು ಅಧಿಕಾರಿಗಳಿಗೆ ಪ್ರದರ್ಶಿಸಿದ್ದನಂತೆ.
ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್
ಈ ವೇಳೆ ಕಿಮ್ ಚಿಕ್ಕಪ್ಪ ಜಾಂಗ್ ಸಾಂಗ್ ಥೇಕ್ನ ತಲೆಯನ್ನು ಆತನ ಎದೆಯ ಮೇಲೆ ಇಡಲಾಗಿತ್ತಂತೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಖುದ್ದಾಗಿ ಈ ವಿಚಾರವನ್ನು ಡೊನಾಲ್ಡ್ ಟ್ರಂಪ್ ಬಳಿ ಹೇಳಿಕೊಂಡಿದ್ದಾನೆ ಎಂದು 'ರೇಜ್' ಕೃತಿಯಲ್ಲಿ ತಿಳಿಸಲಾಗಿದೆ. ಬಾಬ್ ವುಡ್ವರ್ಡ್ ಟ್ರಂಪ್ ಜೊತೆ ನಡೆಸಿದ ಸಂದರ್ಶನದಲ್ಲಿ ಇಂತಹ ಹಲವು ಆಘಾತಕಾರಿ ವಿಚಾರಗಳನ್ನು ಅಮೆರಿಕ ಅಧಕ್ಷರು ಬಯಲು ಮಾಡಿದ್ದಾರೆ.
ಅಧಿಕಾರಿಗಳನ್ನು ಕೊಲೆ ಮಾಡುವುದು ಮಾಮೂಲು..!
ತನ್ನ ವಿರೋಧಿಗಳನ್ನು ಕೊಲೆ ಮಾಡಿಸುವುದು ಕಿಮ್ ಜಾಂಗ್ ಉನ್ಗೆ ನೀರು ಕುಡಿದಷ್ಟೇ ಸುಲಭ. ಏಕೆಂದರೆ ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಆಡಳಿತ ಇದೆ. ಹೀಗಾಗಿ ಕಿಮ್ ನಿರ್ಧಾರ ಪ್ರಶ್ನೆ ಮಾಡಲು ಯಾರೂ ಮುಂದಾಗುವುದಿಲ್ಲ. ಈ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕಿಮ್ ಜಾಂಗ್ ಉನ್ ಮತ್ತವನ ಪಟಾಲಂ ಕಂಡ ಕಂಡವರನ್ನು ಹತ್ಯೆ ಮಾಡುತ್ತದೆ. ಈ ಹಿಂದೆ ಸಭೆಯಲ್ಲಿ ನಿದ್ದೆ ಮಾಡಿದ್ದ ಎಂಬ ಕಾರಣಕ್ಕೆ ಅಧಿಕಾರಿಯೊಬ್ಬನನ್ನು ಕಿಮ್ ಬರ್ಬರವಾಗಿ ಕೊಲೆ ಮಾಡಿಸಿದ್ದ. ಅಲ್ಲದೆ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಕ್ವಾರಂಟೈನ್ನಲ್ಲಿದ್ದ ಅಧಿಕಾರಿ ಆದೇಶ ಮೀರಿ ಸ್ವಿಮ್ಮಿಂಗ್ ಮಾಡಿದ್ದಕ್ಕೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ಕಪ್ಪು-ಬಿಳುಪು ಟಿವಿಗಳಿಗೆ ಭಾರೀ ಬೇಡಿಕೆ ಹಿಂದಿನ ರಹಸ್ಯ ಬಯಲು!
'ಕೊರೊನಾ'ಗಿಂತಲೂ ಕಿಮ್ ಕ್ರೂರಿ..!
ಉತ್ತರ ಕೊರಿಯಾದಲ್ಲಿ ಕೊರೊನಾ ಸೋಂಕನ್ನು ಕಂಟ್ರೋಲ್ಗೆ ತರಲು ಕಿಮ್ ಜಾಂಗ್ ಉನ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಆದರೆ ಸರ್ವಾಧಿಕಾರಿ ವರ್ತನೆ ಪಶ್ನಿಸುವವರು ಇಲ್ಲದಿರುವುದೇ ದುರಂತದ ಸಂಗತಿ.